ಅವನ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...

By Suchethana D  |  First Published Jun 6, 2024, 11:26 AM IST

ಚಿಕ್ಕ ವಯಸ್ಸಿನವನ ಜೊತೆ ಡೇಟಿಂಗ್​ ಮಾಡ್ತಿರೋ ಕುರಿತು ಸದಾ ಮಾತನಾಡುವ ಜನರನ್ನು ಹಾಸ್ಯದ ಧಾಟಿಯಲ್ಲಿಯೇ ಬಾಯಿ ಮುಚ್ಚಿಸಿದ್ದಾರೆ. ಬಾಲಿವುಡ್​ ಹಾಟ್​ ತಾರೆ ಮಲೈಕಾ ಅರೋರಾ. ಇಲ್ಲಿದೆ ವೈರಲ್​ ವಿಡಿಯೋ 
 


ಬಾಲಿವುಡ್​ ಹಸಿಬಿಸಿ ಲೇಡಿ ಮಲೈಕಾ ಅರೋರಾ ಮತ್ತು ಅವರಿಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್​ ಕಪೂರ್​ ಡೇಟಿಂಗ್​ ವಿಷ್ಯ ಸಿನಿ ಪ್ರಿಯರಿಗೆ ತಿಳಿದಿರುವುದೇ. ಇವರಿಬ್ಬರೂ ಸದ್ಯ ಬ್ರೇಕಪ್​ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿಂದೆಯೂ ಈ ವಿಷಯ ಸಾಕಷ್ಟು ಸದ್ದು ಮಾಡಿತ್ತು. ನಂತರ ಇಬ್ಬರೂ ಒಟ್ಟಾಗಿ ಓಡಾಡಿದ್ದರು. ಇದೀಗ ಬ್ರೇಕಪ್​ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ನಾನು ನನ್ನ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ ಎಂದು ಮಲೈಕಾ ಸುದ್ದಿ ಹರಡುವವರ ವಿರುದ್ಧ ಗರಂ ಆಗಿಯೇ ಉತ್ತರಿಸಿದ್ದಾರೆ. ಅದೇನೇ ಇದ್ದರೂ, 50 ವರ್ಷದ ಮಲೈಕಾ ಮತ್ತು ಅರ್ಜುನ್​ ಕಪೂರ್​ ಸುದ್ದಿ ಸಿನಿ ಪ್ರಿಯರ ಬಾಯಲ್ಲಿ ಎಂದಿಗೂ ಹಾಟ್​ ಟಾಪಿಕ್ಕೇ. ವಯಸ್ಸು 50 ಆದರೂ  ಇಂದಿಗೂ ಮಲೈಕಾ ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ವಯಸ್ಸು 50 ಆದರೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್​ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್​ ಸೆನ್ಸ್​ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ.  

  ತಮ್ಮ ಮತ್ತು ಅರ್ಜುನ್​ ಕಪೂರ್​ ವಯಸ್ಸು, ಸಂಬಂಧದ ಕುರಿತು ನಡೆಯುತ್ತಿರುವ ಟ್ರೋಲಿಂಗ್​ ಬಗ್ಗೆ ಗರಂ ಆಗಿರುವ ಮಲೈಕಾ, ಅದರ ವಿರುದ್ಧ ಹಾಸ್ಯದ ರೂಪದಲ್ಲಿ ಟಾಂಗ್​ ಕೊಟ್ಟಿದ್ದಾರೆ. ಇಡೀ ಜಗತ್ತಿನಲ್ಲಿ ನಾನೊಬ್ಬಳೇ ಚಿಕ್ಕ ವಯಸ್ಸಿನವನ ಜೊತೆ ಡೇಟಿಂಗ್​ ಮಾಡೋದಾ ಎಂದು ಪ್ರಶ್ನಿಸಿದ್ದಾರೆ. ನಾನೇನು ಅವನ ಜೀವನ ಹಾಳು ಮಾಡಿದ್ನಾ? ಇಲ್ವಲ್ಲಾ? ಜನರ ಸಮಸ್ಯೆ ಏನೂ ಅಂತನೇ ಅರ್ಥ ಆಗ್ತಿಲ್ಲ. ನಾನೇನು ಅರ್ಜುನನ್ನು ಶಾಲೆಗೆ ಹೋಗ್ತಿರುವಾಗ ಎಳೆದುಕೊಂಡು ಬಂದು ಡೇಟಿಂಗ್​ ಮಾಡಿದ್ನಾ ಅಥವಾ ರಸ್ತೆಯಲ್ಲಿ ಹೋಗ್ತಿರೋನನ್ನು ಎಳೆದುಕೊಂಡು ಬಂದು ಇಟ್ಟುಕೊಂಡಿರುವೆನಾ ಎಂದು ಹಾಸ್ಯದ ರೂಪದಲ್ಲಿಯೇ ಪ್ರಶ್ನಿಸಿರುವ ನಟಿ, ಅವನು ದೊಡ್ಡವನಾಗಿದ್ದಾನೆ, ಅವನು ಗಂಡಸು ಗಂಡಸು ಗೊತ್ತಾಯ್ತಾ ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಇವರ ಹಾಸ್ಯದ ಮಾತಿಗೆ ಅಲ್ಲಿದ್ದವರು ಬಿದ್ದೂ ಬಿದ್ದೂ ನಕ್ಕಿದ್ದು ಅದರ ವಿಡಿಯೋ ವೈರಲ್​ ಆಗುತ್ತಿದೆ. 

Tap to resize

Latest Videos

ನನ್ನ ಹಿಂಬದಿ ಊಟದ ಟೇಬಲ್​ನಂತೆ ಕಂಡುಬಂದ್ರೆ ಏಳು ಮಂದಿಗೆ ಆಹಾರ ನೀಡ್ತೇನೆ... ನಿಮಗೇನ್ರೀ ಸಮಸ್ಯೆ?

ಈ ಹಿಂದೆ ತಮ್ಮ ಹಿಂಬದಿಯನ್ನು ಟ್ರೋಲ್​ ಮಾಡುವವರ ವಿರುದ್ಧ ನಟಿ  ರೊಚ್ಚಿಗೆದ್ದಿದ್ದರು.  ನಮ್ಮ ದೇಶದ ಜನರಿಗೆ ಮೂರು ವಿಷಯಗಳ ಬಗ್ಗೆಯಷ್ಟೇ ಚಿಂತೆ. ಒಂದು ಕ್ರಿಕೆಟ್​, ಇನ್ನೊಂದು (ವಿವಾದಿತ ಷೋ) ಕಾಫಿ ವಿತ್​ ಕರಣ್ ಯಾವಾಗ ಬರುತ್ತದೆ ಎನ್ನುವುದು ಹಾಗೂ ಮೂರನೆಯದ್ದು ನನ್ನ ವಯಸ್ಸಿನ ಬಗ್ಗೆ ಎಂದಿದ್ದಾರೆ. ನಿಮಗೆ ಗೊತ್ತಾ? ನನ್ನನ್ನು ಬುಡ್ಡಿ, ಬುಡಿಯಾ, ಆಂಟಿ ಎಂದೆಲ್ಲಾ ಕರೆಯುತ್ತಾರೆ. ಅವರಿಗೆ ನನ್ನ ವಯಸ್ಸಿನ ಬಗ್ಗೆ ಚಿಂತೆ ಇಲ್ಲ, ಆದರೆ ಈ ವಯಸ್ಸಿನಲ್ಲಿ ಹೀಗೆ ಕಾಣಿಸುತ್ತೇನಲ್ಲಾ ಎನ್ನುವುದೇ ಸಮಸ್ಯೆಯಾಗಿ ಬಿಟ್ಟಿದೆ ಎಂದಿದ್ದರು. ನಾನು ಹಂಸದಂತೆ ನಡೆಯುತ್ತೇನೆ ಎಂದು ಕೆಲವರು ಹೇಳುತ್ತಾರೆ. ನನ್ನ ಹಿಂಬದಿ ಬಫೆಟ್​ ಟೇಬಲ್​ನಂತೆ ಇದೆ ಅಂತಾರೆ. ಹೌದುರಿ. ಅದರಿಂದ ಯಾರಿಗೆ ಏನು ಸಮಸ್ಯೆ? ಬಫೆಟ್​ ಟೇಬಲ್​ನಂತೆ ಇದ್ದರೆ  ಏಳು ಮಂದಿಗೆ ಊಟ ಬಡಿಸ್ತೇನೆ ಅಷ್ಟೇ ಎಂದು ಟ್ರೋಲಿಗರಿಗೆ ಟಾಂಗ್​ ಕೊಟ್ಟಿದ್ದಾರೆ. ನಾನು ಹಂಸದಂತೆಯೂ ನಡೆಯಬಲ್ಲೆ, ಕ್ಯಾಟ್​ ವಾಕ್​ ಮಾಡಬಲ್ಲೆ, ಚಿರತೆಯಂತೆಯೂ ನಡೆಯಬಲ್ಲೆ. ಸಮಸ್ಯೆ ಏನೀಗ ಎಂದು ಪ್ರಶ್ನಿಸಿದ್ದರು. 

ಅಂದಹಾಗೆ,  ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್​ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.

ಮದ್ವೆ ಯಾವಾಗ, ಹುಡುಗ ಯಾರೆಂದು ಅಮ್ಮನನ್ನೇ ಪ್ರಶ್ನಿಸಿದ ಅರ್ಹಾನ್‌: ಮಲೈಕಾ ಅರೋರಾ ಹೇಳಿದ್ದೇನು?

click me!