ಟೆನ್ನಿಸ್ ಬಾಲ್ ಹಿಡ್ಕೊಂಡಕ್ಕೆ ಜಾಹ್ನವಿ ಕಪೂರ್ಗೆ ಈ ಪರಿ ಗಾಯವಾಯ್ತಾ? ವೈರಲ್ ಫೋಟೋದಲ್ಲಿನ ಬ್ಯಾಂಡೇಜ್ ಹಿಂದಿನ ರಹಸ್ಯವೇನು?
ಶ್ರೀದೇವಿ- ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಒಂದೆರಡು ತಿಂಗಳುಗಳಿಂದ ಮೈತುಂಬಾ ಬಾಲ್ ಹಾಕಿಕೊಂಡು, ಕೈಯಲ್ಲಿ ಬಾಲ್ ಪರ್ಸ್ ಹಿಡಿದುಕೊಂಡು, ತಲೆಗೆ ಬಾಲ್ ಧರಿಸಿಕೊಂಡು... ಹೀಗೆ ಬಾಲ್ಗಳಿಂದಲೇ ಮುಳುಗಿ ಹೋಗಿದ್ದರು. ಹೋದಲ್ಲಿ, ಬಂದಲ್ಲಿ ಜಾಹ್ನವಿ ಕಪೂರ್ ಜೊತೆ ಬಾಲ್ ಕಾಣಿಸಿಕೊಂಡಿದ್ದವು. ಇದಕ್ಕೆ ಕಾರಣ ಇವರ ಚಿತ್ರ ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’. ಈ ಚಿತ್ರದ ಪ್ರಮೋಷನ್ಗಾಗಿ ನಟಿ ಈ ಪರಿ ಕಸರತ್ತು ಮಾಡಿದ್ದರು. ಚಿತ್ರವು ಕ್ರಿಕೆಟ್‌ಗಾಗಿ ಹಂಚಿಕೊಂಡ ಪ್ರೀತಿಯೊಂದಿಗೆ ದಂಪತಿಯ ನಡುವಿನ ಅಪೂರ್ಣ ಪರಿಪೂರ್ಣ ಪಾಲುದಾರಿಕೆಯ ಕಥೆಯನ್ನು ವಿವರಿಸುತ್ತದೆ. ಶರಣ್ ಶರ್ಮಾ ಇದನ್ನು ನಿರ್ದೇಶಿಸಿದ್ದಾರೆ. ನಿನ್ನೆ ಅಂದರೆ ಮೇ 31 ರಂದು ಚಿತ್ರ ಬಿಡುಗಡೆಯಾಗಲಿದೆ. ಅದರ ಸಲುವಾಗಿ ನಟಿ ಕ್ರಿಕೆಟ್ ಬಾಲ್ದ್ದೇ ಕಾರುಬಾರಾಗಿತ್ತು.
ಇಷ್ಟೆಲ್ಲಾ ಪ್ರಚಾರ ಕೊಟ್ಟ ಬಳಿಕವೂ ಮೊದಲ ದಿನ ಈ ಚಿತ್ರ ಅಷ್ಟೆಲ್ಲಾ ಕಮಾಯಿ ಮಾಡಲಿಲ್ಲ. ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 6.75 ಕೋಟಿ ರೂಪಾಯಿ. ಈ ನಡುವೆಯೇ ಜಾಹ್ನವಿ ಕಪೂರ್ ಚಿತ್ರದ ಪ್ರೊಮೋ ಸಂದರ್ಭದಲ್ಲಿ ತಾವು ಕ್ರಿಕೆಟ್ ಆಟವಾಡುತ್ತಿದ್ದರ ಫೋಟೋ ಶೇರ್ ಮಾಡಿದ್ದರು. ಅದರಲ್ಲಿ ನಟಿಗೆ ಬಲಭುಜ ಫ್ರಾಕ್ಚರ್ ಆಗಿದ್ದನ್ನು ನೋಡಬಹುದು. ಕೈಯಲ್ಲಿ ಟೆನ್ನಿಸ್ ಬಾಲ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದ ನಟಿಗೆ ಭುಜದಲ್ಲಿ ಗಾಯ ಆಗಿದ್ದನ್ನು ನೋಡಿದವರು ಇನ್ನಿಲ್ಲದ ಟ್ರೋಲ್ ಮಾಡಿದ್ದರು. ಅಷ್ಟಕ್ಕೂ ನಟಿ ಬಾಲ್ ಡ್ರೆಸ್ ಹಾಕಿಕೊಂಡು, ಕೈಯಲ್ಲಿ ಬಾಲ್ ಹಿಡಿದು ಹೋದಾಗಲೂ ಬೇರೆ ಬೇರೆ ಅರ್ಥದಲ್ಲಿ ಕಮೆಂಟ್ ಮಾಡುತ್ತಲೇ ಇದ್ದಾರೆ. ಇದೀಗ ನಟಿಗೆ ಗಾಯ ಆಗಿರುವಾಗಲೂ ಇದೇ ರೀತಿ ಟ್ರೋಲ್ ಮಾಡಿದ್ದರಿಂದ, ಇದನ್ನು ನೋಡಿದ ನಟಿ ಗರಂ ಆಗಿದ್ದಾರೆ.
ಒಹೊ... ಮೂರೂ ಬಿಟ್ಟವರಿಗೆ ಇದು ಬೇರೆ ಗೊತ್ತಾಗತ್ತಾ? ಜಾಹ್ನವಿ ಕಪೂರ್ ಮಾತಿಗೆ ಇನ್ನಿಲ್ಲದ ಟ್ರೋಲ್
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿ ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ಈ ಚಿತ್ರಕ್ಕಾಗಿ ನಾನು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಕ್ರಿಕೆಟ್ ತರಬೇತಿಯನ್ನೂ ಪಡೆದಿದ್ದಾರೆ. ನಾನು ಮಹಿಮಾ ಮಾಹಿ ಅಗರ್ವಾಲ್ ಹೆಸರಿನ ಪಾತ್ರ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ವೈದ್ಯೆ ಆಗಿರುವ ಈ ಮಹಿಮಾ ಪತಿಯ ಸಹಾಯದೊಂದಿಗೆ ಕ್ರಿಕೆಟ್ ಆಡುತ್ತಾರೆ. ಈ ಸಿನಿಮಾಗೆ ತರಬೇತಿ ಪಡೆಯುವಾಗ ಎದುರಾದ ಚಾಲೆಂಜ್ಗಳು ಸಿಕ್ಕಾಪಟ್ಟೆ ಇವೆ. ಇದನ್ನು ಟ್ರೋಲಿಗರು ನೆಗೆಟಿವ್ ಆಗಿ ಬಳಸಿಕೊಂಡಿದ್ದು ತುಂಬಾ ವಿಷಾದಕರ ಎಂದು ನಟಿ ಹೇಳಿದ್ದಾರೆ.
‘ನಾನು 150 ದಿನಗಳ ಕಾಲ ತರಬೇತಿ ಪಡೆದೆ. ಈ ವೇಳೆ ಎರಡು ಬಾರಿ ಭುಜಕ್ಕೆ ಗಾಯ ಆಗಿತ್ತು’ ಎಂದು ಅವರು ಹೇಳಿದ್ದಾರೆ. ನನ್ನ ಕೈಯಲ್ಲಿ ಟೆನ್ನಿಸ್ ಬಾಲ್ ಇದ್ದ ಫೋಟೋ ನೋಡಿ ನೀವು ಟ್ರೋಲ್ ಮಾಡಿದ್ದೀರಿ. ಆದರೆ ಟೆನ್ನಿಸ್ ಬಾಲ್ನಲ್ಲಿ ಆಟವಾಡಿ ಗಾಯ ಮಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ್ದೀರಿ. ಆದರೆ ಅಸಲಿಯತ್ತು ಬೇರೆ ಇದೆ. ಲೆದರ್ ಬಾಲ್ನಲ್ಲೇ ಇಂಜುರಿ ಆಗಿದೆ. ಆಗ ಫ್ರಾಕ್ಚರ್ ಆಗಿ ಬ್ಯಾಂಡೇಜ್ ಹಾಕಿಕೊಂಡಿದ್ದೇನೆ. ಇದಾದ ಬಳಿಕ ಟೆನ್ನಿಸ್ ಬಾಲ್ನಲ್ಲಿ ಆಟ ಆಡಲು ಆರಂಭಿಸಿದೆ. ಇವೆಲ್ಲವೂ ನಾನು ಗಾಯಕ್ಕೆ ಒಳಗಾದ ನಂತರದ ವಿಡಿಯೋ ಅನ್ನೋದು ಈ ಬ್ಯಾಂಡೇಜ್ಗಳನ್ನು ನೋಡಿದರೆ ನಿಮಗೆ ಗೊತ್ತಾಗಬಹುದು. ಈ ರೀತಿ ಅಪಹಾಸ್ಯ ಮಾಡುವುದಕ್ಕೂ ಮೊದಲು ಸಂಪೂರ್ಣ ವಿಡಿಯೋ ನೋಡಿದ್ದರೆ ನಿಮ್ಮ ಜೋಕ್ಗೆ ನಾನೂ ನಗುತ್ತಿದ್ದೆ. ಆದರೆ ಕಷ್ಟ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.
ಪಂಕಜ್ ತ್ರಿಪಾಠಿ ಅಪ್ಪ ಎಂದು ಒಪ್ಪಿಕೊಳ್ಳುವವರೆಗೂ ಮಾಂಸಾಹಾರವನ್ನೇ ತ್ಯಜ್ಯಸಿದ್ದ ಜಾಹ್ನವಿ ಕಪೂರ್!