ನಿರ್ಮಾಪಕರಿಗೆ 2.55 ಕೋಟಿ ರೂಪಾಯಿ ಪಂಗನಾಮ ಹಾಕಿದ್ರಾ ಸನ್ನಿ ಡಿಯೋಲ್? ಏನಿದು ಆರೋಪ?
‘ಗದರ್ 2’ ಸಿನಿಮಾ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿರುವ ಸನ್ನಿ ಡಿಯೋಲ್ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ನಟನ ವಿರುದ್ಧ 2.55 ಕೋಟಿ ರೂಪಾಯಿಗಳ ವಂಚನೆ ಮತ್ತು ಬೆದರಿಕೆ ಆರೋಪ ಕೇಳಿಬಂದಿದ್ದು, ಇವರ ವಿರುದ್ಧ ಇಂಥ ಆರೋಪ ಮಾಡಿರುವವರು ಚಿತ್ರ ನಿರ್ಮಾಪಕ ಸೌರವ್ ಗುಪ್ತಾ. ಸೌರವ್ ಅವರ ಜೊತೆ ಸನ್ನಿ ಸಿನಿಮಾವೊಂದನ್ನು ಮಾಡಬೇಕಿತ್ತು. ಅದಕ್ಕಾಗಿ ಹಣ ಕೂಡ ಸನ್ನಿ ಪಡೆದುಕೊಂಡಿದ್ದರಂತೆ. ಆದರೆ, ಆ ಸಿನಿಮಾ ಮಾಡಲಿಲ್ಲ. ಕೊಡಬೇಕಾದ ಹಣವನ್ನೂ ಈವರೆಗೂ ಹಿಂದಿರುಗಿಸಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಂದಹಾಗೆ ಸೌರವ್ ಅವರು, ಚಲನಚಿತ್ರ ನಿರ್ಮಾಪಕ ಜೊತೆಗೆ ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಸಂಡಾನ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಕೂಡ ಹೌದು.
ಅಂದಹಾಗೆ ಈ ಘಟನೆ ನಡೆದಿದ್ದು, 2014ರಲ್ಲಿ. ಗದರ್ ಭಾರಿ ಯಶಸ್ಸು ಪಡೆಯುತ್ತಲೇ ಇದೀಗ ಅವರ ವಿರುದ್ಧ ಆರೋಪ ಮಾಡಲಾಗಿದೆ. ಸನ್ನಿ ಡಿಯೋಲ್ ತಾವು ಪಡೆದುಕೊಂಡಿದ್ದ ಹಣವನ್ನು ವಾಪಸ್ಸು ನೀಡಿಲ್ಲ. ಹಣ ಕೇಳಿದರೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಸೌರವ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಸನ್ನಿ ಡಿಯೋಲ್ ನನ್ನಿಂದ ಹಣ ಪಡೆದು ವಂಚಿಸಿದ್ದಾರೆ. ದಾಖಲೆಗಳನ್ನು ತಿದ್ದಿದ್ದಾರೆ. ಹಣ ವಾಪಸ್ ಕೇಳಿದರೆ ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮದವರ ಎದುರು ಗಂಭೀರ ಆರೋಪ ಮಾಡಿದ್ದಾರೆ. 2016ರಲ್ಲಿ ಇವರು ತಮ್ಮ ಸಹಯೋಗದ ಯೋಜನೆಯೊಂದರ ಆರಂಭಿಕ ಮಾತುಕತೆಗೆ ಭೇಟಿಯಾಗಿದ್ದರು. ಸುಮಾರು 4 ಕೋಟಿ ರೂಪಾಯಿಗೆ ತಮ್ಮ ಚಿತ್ರದಲ್ಲಿ ನಟಿಸಲು ಸನ್ನಿ ಡಿಯೋಲ್ ಒಪ್ಪಿಕೊಂಡಿದ್ದರು. ಈ ಮಾತುಕತೆ ಬಳಿಕ 2.55 ಕೋಟಿ ಮೊತ್ತದ ವಂಚನೆ ನಡೆದಿದೆ. ಇವರಿಂದ ನನಗೆ 25 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಸೌರವ್ ಹೇಳಿದ್ದಾರೆ.
ಆರು ವರ್ಷಗಳ ಲಿವ್ ಇನ್ ಸಂಬಂಧಕ್ಕೆ ಬಿತ್ತು ಬ್ರೇಕ್? ಮಲೈಕಾ- ಅರ್ಜುನ್ ನಡುವೆ ಆಗಿದ್ದೇನು?
ನಾನು ಒಂದು ಕೋಟಿ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ ಅವರು ನನ್ನ ಸಿನಿಮಾ ಪ್ರಾರಂಭ ಮಾಡುವ ಬದಲಿಗೆ ‘ಪೋಸ್ಟರ್ ಬಾಯ್ಸ್’ ಸಿನಿಮಾದ ಶೂಟಿಂಗ್ಗೆ ತೆರಳಿದರು. ಆ ಬಳಿಕ ನನ್ನಿಂದ ಹಲವು ಬಾರಿ ಹಣವನ್ನು ಪಡೆದುಕೊಂಡರು. ಇತರೆ ನಿರ್ದೇಶಕರಿಗೆ ನನ್ನಿಂದ ಹಣ ಕೊಡಿಸಿದರು. ಫಿಲ್ಮಿಸ್ತಾನ್ ಸ್ಟುಡಿಯೋ ಬುಕ್ ಮಾಡಿಸಿದರು. ಒಬ್ಬ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ಗೆ ಹಣ ಕೊಡಿಸಿದರು. ಈವರೆಗೆ ನನ್ನ ಖಾತೆಯಿಂದ 2.55 ಕೋಟಿ ರೂಪಾಯಿ ಹಣವನ್ನು ಸನ್ನಿ ಡಿಯೋಲ್ ಪಡೆದುಕೊಂಡಿದ್ದಾರೆ. ಆದರೆ ಈ ವರೆಗೆ ಸಿನಿಮಾ ಮಾಡಿಕೊಟ್ಟಿಲ್ಲ’ ಎಂದಿದ್ದಾರೆ.
ಅಂದಹಾಗೆ, ಸಂಸದರೂ ಆಗಿರುವ ಸನ್ನಿ ಡಿಯೋಲ್ ಒಂದರ ಮೇಲೊಂದರಂತೆ ಫ್ಲಾಪ್ ಚಿತ್ರ ಕೊಟ್ಟಿದ್ದರು. ಆದರೆ 2023ರಲ್ಲಿ ಬಿಡುಗಡೆಯಾದ ಗದರ್ ಇವರಿಗೆ ಭಾರಿ ಗೆಲುವು ತಂದುಕೊಟ್ಟಿತು. ಚಿತ್ರ ಸೂರಪ್‌ಡ್ಯೂಪರ್ ಬ್ಲಾಕ್‌ಬಸ್ಟರ್ ಆಯಿತು. ಇದರ ನಡುವೆಯೇ ಈ ಆರೋಪ ಕೇಳಿಬಂದಿದೆ. ಸನ್ನಿ ಡಿಯೋಲ್ ಜೊತೆಗೆ ಸಿನಿಮಾ ಮಾಡಲೆಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಒಪ್ಪಂದದ ಪ್ರಕಾರ ನಾಲ್ಕು ಕೋಟಿ ಹಣವನ್ನು ಸಂಭಾವನೆಯಾಗಿ ಸನ್ನಿ ಡಿಯೋಲ್ಗೆ ನೀಡಬೇಕಿತ್ತು, ಅಲ್ಲದೆ ಸಿನಿಮಾ ಲಾಭ ಮಾಡಿದರೆ ಒಂದು ಕೋಟಿ ಹೆಚ್ಚುವರಿ ಹಣ ನೀಡಬೇಕಿತ್ತು. ಒಪ್ಪಂದದಂತೆ ಒಂದು ಕೋಟಿ ರೂಪಾಯಿ ಹಣವನ್ನು ಸನ್ನಿಗೆ ಸೌರವ್ ನೀಡಿದ್ದಾರೆ. ಆದರೆ ಸನ್ನಿ, ಸೌರವ್ ಜೊತೆಗೆ ಸಿನಿಮಾ ಮಾಡಿಲ್ಲ, ಬದಲಿಗೆ ಅವರಿಂದ ಹೆಚ್ಚು-ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ ಎಂದಿದ್ದಾರೆ ಸೌರವ್.
ಕುಡಿದ ಅಮಲಿನಲ್ಲಿ ಮೈಮುಟ್ಟಿ ತಳ್ಳಿದ್ರಾ ನಟ ನಂದಮೂರಿ ಬಾಲಕೃಷ್ಣ? ನಟಿ ಅಂಜಲಿ ಹೇಳಿದ್ದೇನು?