ಸಂತೋಷ್ ಆನಂದರಾಮ್ ಪ್ರೇರಣೆಯಿಂದ BMW ಖರೀದಿಸಿದ ಜಗ್ಗೇಶ್‌ಗೆ ಸಿಕ್ತು ರಾಯರ ಗಿಫ್ಟ್

Published : May 08, 2022, 11:02 AM IST
ಸಂತೋಷ್ ಆನಂದರಾಮ್ ಪ್ರೇರಣೆಯಿಂದ BMW ಖರೀದಿಸಿದ ಜಗ್ಗೇಶ್‌ಗೆ ಸಿಕ್ತು ರಾಯರ ಗಿಫ್ಟ್

ಸಾರಾಂಶ

ಜಗ್ಗೇಶ್ ಹೊಸ ಕಾರು ಖರೀದಿಸಿರುವುದಾಗಿ ಬಹಿರಂಗ ಪಡಿಸಿದ್ದಾರೆ. ನವರಸನಾಯಕ ಜಗ್ಗೇಶ್ ಇದೀಗ ಬಿ ಎಂ ಡಬ್ಲ್ಯೂ(BMW) ಕಾರಿನ ಮಾಲಿಕರಾಗಿದ್ದಾರೆ. ಇತ್ತೀಚಿಗಷ್ಟೆ ಬಿ ಎಂ ಡಬ್ಲ್ಯೂ ಕಾರು ಖರೀದಿಸಿರುವುದಾಗಿ ಜಗ್ಗೇಶ್ ಹೇಳಿದ್ದಾರೆ. ಅಂದಹಾಗೆ ಹೊಸ ಕಾರು ಖರೀದಿಸಲು ಕಾರಣ ನಿರ್ದೇಶಕ ಸಂತೋಷ್ ಆನಂದರಾಮ್ ಎಂದು ಬಹಿರಂಗ ಪಡಿಸಿದ್ದಾರೆ. ಸಂತೋಷ್ ಆನಂದರಾಮ್ ಮತ್ತು ಜಗ್ಗೇಶ್ ಕಾಂಬಿನೇಷನ್ ನಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಮೂಡಿಬರುತ್ತಿದೆ.

ಸ್ಯಾಂಡಲ್ ವುಡ್ ಹಿರಿಯ ನಟ ಜಗ್ಗೇಶ್(Jaggesh) ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದಾ ಒಂದಲ್ಲೊಂದು ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಸಿನಿಮಾ ಜೊತೆಗೆ ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕವೂ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ತನ್ನ ಕುಟುಂಬದ ಬಗ್ಗೆ, ವಿಶೇಷ ಘಟನೆಗಳ ಬಗ್ಗೆ, ಚಿತ್ರರಂಗದ ಬಗ್ಗೆ ಆಗಾಗಾ ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ. ಅದರಲ್ಲೂ ರಾಘವೇಂದ್ರ ಸ್ವಾಮಿಗಳ ಬಗ್ಗೆ ವಿಶೇಷ ಭಕ್ತಿ ಹೊಂದಿರುವ ಜಗ್ಗೇಶ್ ಸದಾ ರಾಯರ ಬಗ್ಗೆ ಹೇಳುತ್ತಿರುತ್ತಾರೆ.   

ಇದೀಗ ಜಗ್ಗೇಶ್ ಹೊಸ ಕಾರು ಖರೀದಿಸಿರುವುದಾಗಿ ಬಹಿರಂಗ ಪಡಿಸಿದ್ದಾರೆ. ನವರಸನಾಯಕ ಜಗ್ಗೇಶ್ ಇದೀಗ ಬಿ ಎಂ ಡಬ್ಲ್ಯೂ(BMW) ಕಾರಿನ ಮಾಲಿಕರಾಗಿದ್ದಾರೆ. ಇತ್ತೀಚಿಗಷ್ಟೆ ಬಿ ಎಂ ಡಬ್ಲ್ಯೂ ಕಾರು ಖರೀದಿಸಿರುವುದಾಗಿ ಜಗ್ಗೇಶ್ ಹೇಳಿದ್ದಾರೆ. ಅಂದಹಾಗೆ ಹೊಸ ಕಾರು ಖರೀದಿಸಲು ಕಾರಣ ನಿರ್ದೇಶಕ ಸಂತೋಷ್ ಆನಂದರಾಮ್ ಎಂದು ಬಹಿರಂಗ ಪಡಿಸಿದ್ದಾರೆ. ಸಂತೋಷ್ ಆನಂದರಾಮ್ ಮತ್ತು ಜಗ್ಗೇಶ್ ಕಾಂಬಿನೇಷನ್ ನಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾ ಮುಗಿದ ತಕ್ಷಣ ಜಗ್ಗೇಶ್ ಅವರಿಗೆ ಹೊಸ ಕಾರು BMW-x5 ಕೊಳ್ಳಲು ಪ್ರೇರೇಪಿಸಿ ಬುಕ್ ಮಾಡಿಸಿದ್ದಾರೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಜೊತೆಗೆ ಈ ಕಾರಿನಲ್ಲಿ ಇಡಲು ರಾಘವೇಂದ್ರ ಸ್ವಾಮಿಗಳ ವಿಗ್ರಹ ಹುಡುಕುತ್ತಿದ್ದೆ ಆಗ ಗೆಳೆಯ ಅಪರೂಪದ ವಿಗ್ರಹ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.  ಈ ಬಗ್ಗೆ ಜಗ್ಗೇಶ್ ದೀರ್ಘವಾಗಿ ಬರೆದುಕೊಂಡಿದ್ದಾರೆ. 

5ಮಿಲಿಯನ್‌ಗೂ ಹೆಚ್ಚು ಮನಗಳ ಗೆದ್ದ ಟ್ರೇಲರ್- ‘ತೋತಾಪುರಿ’ಯಲ್ಲಿದೆ ಬೇರೆಯದ್ದೇ ಪ್ರಪಂಚ

'ನೆನೆದವರ ಮನದಲ್ಲಿ ಗುರುರಾಯ. ಆತ್ಮೀಯ ನಿರ್ದೇಶಕ ಸಂತೋಷ್ ಆನಂದರಾಮ್ ರಾಘವೇಂದ್ರ ಸ್ಟೋರ್ಸ್ ಮುಗಿದ ತಕ್ಷಣ ನನಗೆ ಹೊಸ ಕಾರು BMW-x5 ಕೊಳ್ಳಲು ಪ್ರೇರೇಪಿಸಿ ಬುಕ್ ಮಾಡಿಸಿದ. ನನಗೆ ನನ್ನ ಕಾರಿನಲ್ಲಿ ರಾಯರ ಪ್ರತಿಮೆ ಕಡ್ಡಾಯ, ಹಾಗಾಗಿ ಮಂತ್ರಾಲಯದಲ್ಲಿ ರಾಯರ ಪಾದುಕೆ ಕೊಂಡು ಬೃಂದಾವನದಲ್ಲಿ ಇರಿಸಿ ತಂದೆ.  ಆದರೆ ನನಗೆ ರಾಯರ ಪ್ರತಿಮೆ ತೃಪ್ತಿಯಾಗಲಿಲ್ಲಾ. ಕಾರು delivery ಸಮಯದಲ್ಲಿ ಕೊಳ್ಳುವ ಎಂದು ಮನದಲ್ಲಿ ಸಂಕಲ್ಪಿಸಿದೆ. ನೋಡಿದರೆ ನನ್ನ ಮಿತ್ರ ENT Drsunil ಆಕಸ್ಮಿಕ ಮನೆಗೆ ಬಂದರು ಅಪರೂಪದ ಈ handmade ಬೆಳ್ಳಿ ರಾಯರ ಪ್ರತಿಮೆ ಕೊಟ್ಟರು' ಎಂದು ಹೇಳಿದ್ದಾರೆ.

'ರಾಯರು ಎಂಥ ಕರುಣಾಮಯಿ ತಮ್ಮ ಭಕ್ತರು ಮನಸ್ಸಲ್ಲಿ ಅಂದುಕೊಂಡದ್ದು ನೆರವೇರಿಸಿಬಿಡುತ್ತಾರೆ. ನಾನು ಧನ್ಯ ಅನ್ನಿಸಿತು ಆಧ್ಯಾತ್ಮಿಕ ಮಾರ್ಗ ಅರಿವಿದ್ದವರಿಗೆ ಮಾತ್ರ ಅರಿವಾಗೋದು ರಾಯರ ಪವಾಡ. ರಾಯರ ಭಕ್ತರ ಹೃದಯಕ್ಕೆ ತಿಳಿಸುವ ಮನಸ್ಸಾಯಿತು ತಿಳಿಸಿ ಮನಸ್ಸು ಹಗುರ ಮಾಡಿಕೊಂಡೆ. ನಂಬಿಕೆ ಭಕ್ತಿಯಿಂದ ಕೂಗಿದರೆ ರಾಯರು ನಮ್ಮ ನಿಮ್ಮ ಗಮನಿಸುತ್ತಾರೆ ನಮ್ಮ ಜೊತೆ ನಿಲ್ಲುತ್ತಾರೆ. ಶುಭಮಸ್ತು' ಎಂದು ಜಗ್ಗೇಶ್ ಕಾರಿನ ಜೊತೆಗೆ ರಾಯರು ಸಿಕ್ಕ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ.
ಜಗ್ಗೇಶ್ 'ತೋತಾಪುರಿ' ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಜಗ್ಗೇಶ್ ಸದ್ಯ ತೋತಾಪುರಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಜೊತೆಗೆ ರಾಘವೇಂದ್ರ ಸ್ಟೋರ್ಸ್, ರಂಗನಾಯಕ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.     
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್