ರಾಯನ್ ರಾಜ್ ಸರ್ಜಾ ಡಾನ್ಸಿಂಗ್ ಚಾಂಪಿಯನ್ ನಲ್ಲಿ(Dancing Champion) ಕಾಣಿಸಿಕೊಂಡಿದ್ದಾರೆ. ಇದು ರಾಯನ್ ನ ಮೊದಲ ಸ್ಟೇಜ್ ಶೋ ಆಗಿದೆ.ಈ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ವಿಶ್ ಮಾಡಲಾಗಿದೆ. ಇದೇ ಸಮಯದಲ್ಲಿ ಮೇಘನಾ ಪುತ್ರನನ್ನು ವೇದಿಕೆ ಮೇಲೆ ಕರೆದುಕೊಂಡು ಬರುವ ಮೂಲಕ ಸರ್ಪ್ರೈಸ್ ನೀಡಲಾಯಿತು.
ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್(Meghana Raj) ಸದ್ಯ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ಚಿರಂಜೀವಿಯನ್ನು ಕಳೆದುಕೊಂಡ ಬಳಿಕ ಮೇಘನಾ ಬಾಳಿಕೆ ಬೆಳಕಾಗಿ ಬಂದಿದ್ದ ಪುತ್ರ ರಾಯನ್ ರಾಜ್ ಸರ್ಜಾ(Raayan Raj Sarja). ಪುತ್ರನ ಜೊತೆ ಇರುವ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ತಾಯಿಯ ಹಾಗೆ ಮಗ ರಾಯನ್ ಕೂಡ ಸಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದಾನೆ. ರಾಯನ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿರುತ್ತದೆ.
ಸದ್ಯ ರಾಯನ್ ರಾಜ್ ಸರ್ಜಾ ಡಾನ್ಸಿಂಗ್ ಚಾಂಪಿಯನ್ ನಲ್ಲಿ(Dancing Champion) ಕಾಣಿಸಿಕೊಂಡಿದ್ದಾರೆ. ಇದು ರಾಯನ್ ನ ಮೊದಲ ಸ್ಟೇಜ್ ಶೋ ಆಗಿದೆ. ಅಂದಹಾಗೆ ಸದ್ಯ ಕಲರ್ಸ್ ಕನ್ನಡದಲ್ಲಿ ಡಾನ್ಸಿಂಗ್ ಚಾಂಪಿಯನ್ ಮತ್ತು ಗಿಚ್ಚಿ ಗಿಲಿಗಿಲಿ ಶೋನ ಮಹಾಮಿಲನ ಎಪಿಸೋಡ್ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ವಿಶ್ ಮಾಡಲಾಗಿದೆ. ಇತ್ತೀಚಿಗಷ್ಟೆ ಜನ್ಮದಿನಾಚರಣೆ ಆಚರಿಸಿಕೊಂಡ ಮೇಘನಾ ಅವರಿಗೆ ಮಹಾಮಿಲನ ಎಪಿಸೋಡ್ ನಲ್ಲಿ ವಿಶೇಷವಾಗಿ ಹುಟ್ಟುಹಬ್ಬದ ವಿಶ್ ಮಾಡುವ ಮೂಲಕ ಜನ್ಮದಿನವನ್ನು ಸಂಭ್ರಮಿಸಿದ್ದಾರೆ. ಇದೇ ಸಮಯದಲ್ಲಿ ಮೇಘನಾ ಪುತ್ರನನ್ನು ವೇದಿಕೆ ಮೇಲೆ ಕರೆದುಕೊಂಡು ಬರುವ ಮೂಲಕ ಸರ್ಪ್ರೈಸ್ ನೀಡಲಾಯಿತು.
RajaMarthanda: ಚಿರು ಪ್ರೀತಿಗೆ 'ರಾಜಮಾರ್ತಾಂಡ' ನೋಡಿ: ಮೇಘನಾ ರಾಜ್
ಈ ಸಮಯದಲ್ಲಿ ಮೇಘನಾ ತಂದೆ ಸುಂದರ ರಾಜ್ ಮತ್ತು ತಾಯಿ ಪ್ರಮಿಳಾ ಜೋಷಾಯ್ ಇಬ್ಬರೂ ಮೊಮ್ಮಗನನ್ನು ವೇದಿಕೆ ಮೇಲೆ ಕರೆದುಕೊಂಡು ಬಂದರು. ಮೊದಲ ಬಾರಿಗೆ ರಾಯನ್ ತೆರೆಮೇಲೆ ಕಾಣಿಸಿಕೊಂಡಿದ್ದಾನೆ. ಮೇಘನಾ ಹುಟ್ಟುಹಬ್ಬಕ್ಕೆ ಪುತ್ರ ರಾಯನ್ ವಿಶ್ ಮಾಡಿರುವ ಪತ್ರವನ್ನು ನೀಡಲಾಯಿತು. ಪೇಪರ್ ಮೇಲೆ ರಾಯನ್ ಗೀಚಿರುವ ಪತ್ರವನ್ನು ನಿರೂಪಕ ಅಕುಲ್, ಮೇಘನಾಗೆ ನೀಡಿದರು. ಇದನ್ನು ನೋಡಿ ಮೇಘನಾ ಸಂತಸ ಪಟ್ಟರು.
#HappybirthdayMeghanaRaj ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮೇಘನಾ ರಾಜ್!
ಬಳಿಕ ಮೇಘನಾ ಮಗ ಬಳಿ ಅಮ್ಮ ಎಂದು ಹೇಳಿಸಿದರು. ರಾಯನ್ ಅಮ್ಮ ಎನ್ನುವುದಕ್ಕಿಂತ ಮೊದಲು ಅಪ್ಪ ಎಂದು ಹೇಳುತ್ತಿದ್ದನಂತೆ. ಈ ಶೋ ಪ್ರಾರಂಭದಲ್ಲಿ ತನ್ನ ಮಗ ಅಪ್ಪ ಎಂದು ಮಾತ್ರ ಕರೆಯುತ್ತಾನೆ ಎಂದು ಮೇಘನಾ ಹೇಳಿದ್ದರು. ಇದೀಗ ಶೋ ಮುಗಿಯುತ್ತಾ ಬಂತು, ಈಗ ಅಮ್ಮ ಎಂದು ಹೇಳುತ್ತಾನೆ ಎಂದು ಮಗನ ಬಾಯಲ್ಲಿ ಅಮ್ಮ ಎಂದು ಹೇಳಿಸಿದರು. ರಾಯನ್ ಬಾಯಲ್ಲಿ ಅಮ್ಮ.... ಪದ ಕೇಳಿ ಮೇಘನಾ ಫುಲ್ ಖುಷ್ ಆದರು. ಈ ಎಪಿಸೋಡ್‌ನ ಪ್ರೋಮೋ ಸದ್ಯ ಕಲರ್ಸ್ ವಾಹಿನಿ ಬಿಡುಗಡೆ ಮಾಡಿದ್ದು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ ಮಹಾಮಿಲನ ಕಾರ್ಯಕ್ರಮ ಈ ವೀಕೆಂಡ್ ನಲ್ಲಿ ಪ್ರಸಾರವಾಗುತ್ತಿದೆ. ಈ ಎಪಿಸೋಡ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.