
ಸೌತ್ ಸ್ಟಾರ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Nayanthara and Vignesh Shivan) ಮದುವೆ ದಿನಾಂಕ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಒಟ್ಟಿಗೆ ಇದ್ದ ಈ ಜೋಡಿ ಕೊನೆಗೂ ಮದುವೆಯಾಗುವ ನಿರ್ಧಾರ ಮಾಡಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವಿಘ್ನೇಶ್ ಶಿವನ್ ಜೊತೆ ಡೇಟಿಂಗ್‌ನಲ್ಲಿದ್ದ ನಯನತಾರಾ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಯಾವಾಗಲೂ ಎದುರಾಗುತ್ತಿತ್ತು. ಕೊನೆಗೂ ತಾರಾ ಜೋಡಿ ಮದುವೆಗೆ ಸಿದ್ಧವಾಗಿದೆ.
ಮೂಲಗಳ ಪ್ರಕಾರ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್ 9ರಂದು(Married on June 9) ಹಸೆಮಣೆ ಏರುತ್ತಿದ್ದಾರೆ ಎನ್ನಲಾಗಿದೆ. ಮದುವೆ ದಿನಾಂಕದ ಬಗ್ಗೆ ಮತ್ತು ಸ್ಥಳದ ಬಗ್ಗೆ ಎಲ್ಲೂ ರಿವೀಲ್ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ ಇಬ್ಬರು ಆಂಧ್ರ ಪ್ರದೇಶದ ತಿರುಮಲ(Tirupati Temple) ದೇವಸ್ಥಾನದಲ್ಲಿ ವಿವಾಹವಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇಬ್ಬರ ಮದುವೆಗೆ ಕೇವಲ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಲಿದ್ದಾರಂತೆ.
ಸರಳವಾಗಿ ತಿರುಪತಿಯಲ್ಲಿ ಮದುವೆಯಾಗಲಿರುವ ಈ ಜೋಡಿ ಬಳಿಕ ಅದ್ದೂರಿ ಆರತಕ್ಷತೆ ಆಯೋಜಿಸಿದ್ದಾರೆ ಎನ್ನಲಾಗಿದೆ. ಮಾಲ್ಡೀವ್ಸ್ ನಲ್ಲಿ ಸೆಲೆಬ್ರೆಟಿ ಫ್ರೆಂಡ್ಸ್ ಗೆ ರಿಸೆಪ್ಷನ್ ಕಾರ್ಯಕ್ರಮ ಪ್ಲಾನ್ ಮಾಡಿದ್ದಾರಂತೆ. ಆದರೆ ಈ ಎಲ್ಲಿಯೂ ಸ್ಟಾರ್ ಜೋಡಿ ಬಹಿರಂಗ ಪಡಿಸಿಲ್ಲ. ನಯನತಾರಾ ವಿಘ್ನೇಶ್ ಶಿವನ್ ಅವರ ಕಾತುವಾಕುಲ ರೆಂಡು ಕಾದಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಸಮಂತಾ ಕೂಡ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಪಡೆಯುತ್ತಿದೆ.
Nayanthara Vignesh Shivan ಮಗುವಿಗಾಗಿ ಪ್ಲಾನ್ ಮಾಡುತ್ತಿದ್ದಾರಾ?
ಮದುವೆ ಸುದ್ದಿ ವೈರಲ್ ಆಗಿರುವ ಬೆನ್ನಲ್ಲೇ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ತಿರುಪತಿ ದೇವಸ್ಥಾನ, ಶಿರಡಿ ಸಾಯಿಬಾಬ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇಬ್ಬರೂ ಜೊತೆ ಇರುವ ಫೋಟೋವನ್ನು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ.
Nayanthara Marriage: ಬಾಯ್‍ಫ್ರೆಂಡ್ ವಿಘ್ನೇಶ್ ಜೊತೆ ಗುಟ್ಟಾಗಿ ಮದುವೆಯಾದ್ರಾ ನಯನತಾರಾ?
ನಯನತಾರಾ ಸದ್ಯ ಗಾಡ್ ಫಾದರ್, ಓ2, ಗೋಲ್ಡ್ ಕನೆಕ್ಟ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್‌ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ನಯನತಾರಾ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಶಾರುಖ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಶಾರುಖ್, ನಯನತಾರಾ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.