Bollywood : ನಷ್ಟದಲ್ಲಿ ಪ್ರೊಡಕ್ಷನ್ ಹೌಸ್, ಸಂಭಾವನೆ ಪಡೆಯದ ಹೀರೋ ಅಕ್ಷಯ್ ಕುಮಾರ್!

By Roopa Hegde  |  First Published Jul 2, 2024, 12:25 PM IST

ಸಿನಿಮಾ ಸೂಪರ್ ಹಿಟ್ ಆಗ್ಲಿ ಬಿಡಲಿ ನಮ್ಮ ಸಂಭಾವನೆ ನಮಗೆ ಬೇಕು ಎನ್ನುವ ಹಿರೋಗಳೇ ಹೆಚ್ಚು. ಆದ್ರೆ ಕೆಲವೇ ಕೆಲವು ಕಲಾವಿದರು ನಿರ್ಮಾಪಕರು, ಪ್ರೊಡಕ್ಷನ್ ಹೌಸ್ ಗಳ ಕಷ್ಟವನ್ನು ಆಲಿಸ್ತಾರೆ. ಅವರಿಗೆ ಸಹಾಯ ಹಸ್ತ ಚಾಚುತ್ತಾರೆ. ಅದ್ರಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಒಬ್ಬರು. 
 


ಸಿನಿಮಾದಲ್ಲಿ ಸೂಪರ್ ಸ್ಟಾರ್ (Cine Super Star) ಆಗಿ ಮಿಂಚಿದ್ರೆ ಸಾಲದು. ನಿಜ ಜೀವನದಲ್ಲೂ ಎಲ್ಲರಿಗೆ ಆದರ್ಶವಾಗಿರಬೇಕು. ಕೋಟ್ಯಾಂತರ ಮಂದಿ ಸಿನಿಮಾ ಕಲಾವಿದರನ್ನು ಫಾಲೋ ಮಾಡ್ತಿರುತ್ತಾರೆ. ತೆರೆ ಮೇಲೆ ಹಾಗೂ ತೆರೆ ಹಿಂದೆ ಅವರನ್ನು ದೇವರಂತೆ ಪೂಜಿಸುವ ಅಭಿಮಾನಿಗಳಿದ್ದಾರೆ. ತಮ್ಮಿಷ್ಟದ ಕಲಾವಿದರು ಏನು ಮಾಡಿದ್ರೂ ಅದು ಸರಿ ಎನ್ನುವ ಅಭಿಮಾನಿಗಳು ಅದನ್ನೇ ತಮ್ಮ ಜೀವನದಲ್ಲಿ ಪಾಲಿಸ್ತಾರೆ. ಬಣ್ಣ ಹಚ್ಚಿ, ಪಾತ್ರಕ್ಕೆ ತಕ್ಕಂತೆ ಡೈಲಾಗ್ ಹೇಳಿ, ಡಾನ್ಸ್ ಮಾಡಿದ್ರೆ ಕಲಾವಿದರ ಕೆಲಸ ಮುಗಿಯಲಿಲ್ಲ. ಅವರ ಜವಾಬ್ದಾರಿ ಬೆಟ್ಟದಷ್ಟಿದೆ. ಅದನ್ನು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅರಿತಿದ್ದಾರೆ. ಒಂದು ಸಿನಿಮಾಕ್ಕೆ ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯುವ ಅಕ್ಷಯ್ ಕುಮಾರ್, ಕಷ್ಟದ ಸಮಯದಲ್ಲಿ ನಿರ್ಮಾಪಕರು, ನಿರ್ದೇಶಕರನ್ನು ಕೈ ಹಿಡಿದು ನಡೆಸುವ ಸ್ವಭಾವ ಹೊಂದಿದ್ದಾರೆ. ಇದಕ್ಕೆ ಈ ಘಟನೆ ಉತ್ತಮ ನಿದರ್ಶನ.

ಕೊರೊನಾ ನಂತ್ರ ಸಿನಿಮಾ (Movie) ಜಗತ್ತಿನ ಚಿತ್ರಣ ಬದಲಾಗಿದೆ. ಒಟಿಟಿಯಲ್ಲೇ ಸಿನಿಮಾಗಳನ್ನು ನೋಡಲು ಅವಕಾಶ ಸಿಗ್ತಿರುವ ಕಾರಣ ಥಿಯೇಟರ್ (Theater) ಗೆ ಹೋಗಿ ಫಿಲ್ಮಂ ವೀಕ್ಷಣೆ ಮಾಡೋರ ಸಂಖ್ಯೆ ಇಳಿಕೆ ಕಂಡಿದೆ. ಇದ್ರಿಂದಾಗಿ ಅನೇಕ ಚಿತ್ರ ನಿರ್ಮಾಪಕರು, ಹಾಕಿದ್ದ ಬಂಡವಾಳ ತೆಗೆಯಲು ಸಾಧ್ಯವಾಗಿಲ್ಲ. ಚಿತ್ರ ವೀಕ್ಷಕರ ಸಂಖ್ಯೆ ಕಡಿಮೆ ಆಗಿರುವ ಕಾರಣಕ್ಕೆ ಅನೇಕ ಸಿನಿಮಾ ಹೌಸ್ ಕೂಡ ನಷ್ಟದಲ್ಲಿದೆ. ಅದ್ರಲ್ಲಿ ಪೂಜಾ ಎಂಟರ್‌ಟೈನ್‌ಮೆಂಟ್ಸ್‌ (Pooja Entertainments) ಕೂಡ ಒಂದು. ಕಳೆದ ಒಂದು ವಾರದಿಂದ ಪೂಜಾ ಎಂಟರ್‌ಟೈನ್‌ಮೆಂಟ್ಸ್‌ ಬಗ್ಗೆ ಸಾಕಷ್ಟು ಸುದ್ದಿ ಚರ್ಚೆಯಲ್ಲಿದೆ.

Tap to resize

Latest Videos

ಹೊರ ಬಿತ್ತು ಯಶ್ 'ಟಾಕ್ಸಿಕ್' ಚಿತ್ರದ ಮತ್ತೊಂದು ಗುಟ್ಟು; ಯಾರು ಆ ಮತ್ತೊಬ್ಬ ನಟ?

ಕೊನೆಗೂ ನಿರ್ಮಾಪಕ ಜಾಕಿ ಭಗ್ನಾನಿ ಈ ಬಗ್ಗೆ ಮೌನ ಮುರಿದಿದ್ದಾರೆ. ಪೂಜಾ ಎಂಟರ್ ಟೈನ್ಮೆಂಟ್ಸ್ ನಷ್ಟದಲ್ಲಿದೆ ಎಂದು ಜಾಕಿ ಭಗ್ನಾನಿ ಒಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲ ಕಷ್ಟದ ಸಮಯದಲ್ಲಿ ಅಕ್ಷಯ್ ಕುಮಾರ್ ತಮ್ಮ ಬೆಂಬಲಕ್ಕೆ ನಿಂತಿದ್ದಾರೆಂದು ಅವರು ಹೇಳಿದ್ದಾರೆ. ಅಕ್ಷಯ್ ಅವರು ಪ್ರೊಡಕ್ಷನ್ ಹೌಸ್, ಸಿಬ್ಬಂದಿಯ ಸಂಬಳವನ್ನು ಪಾವತಿಸಲು ತಮ್ಮ ಶುಲ್ಕವನ್ನು ತಡೆಹಿಡಿದಿದ್ದಾರೆ.

ಸಂಬಳ ತಡೆ ಹಿಡಿದ ಅಕ್ಷಯ್ : ಜಾಕಿ ಭಗ್ನಾನಿ ಪ್ರಕಾರ, ಅಕ್ಷಯ್ ಕುಮಾರ್ ಅವರನ್ನು ತಮ್ಮ ಬಳಿ ಕರೆದಿದ್ದರಂತೆ. ಅಕ್ಷಯ್ ಎಲ್ಲ ವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರೊಡಕ್ಷನ್ ಹೌಸ್ ಸಿಬ್ಬಂದಿಗೆ ತಿಂಗಳ ಸಂಬಳ ಸಿಕ್ಕಿಲ್ಲ ಎಂಬ ಸಂಗತಿ ಅಕ್ಷಯ್ ಕುಮಾರ್ ಗೆ ತಿಳಿದಿದೆ. ಇದ್ರ ನಂತ್ರ ಅಕ್ಷಯ್ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಸಿಬ್ಬಂದಿಗೆ ಸಂಬಳ ಸಿಕ್ಕ ಮೇಲೆಯೇ ತನ್ನ ಸಂಭಾವನೆ ಪಡೆಯುತ್ತೇನೆಂದ ಅಕ್ಷಯ್, ಸಂಬಳ ತಡೆಹಿಡಿಯುವ ನಿರ್ಧಾರಕ್ಕೆ ಬಂದಿದ್ದಾರೆ.

ಮೂರೇ ದಿನದಲ್ಲಿ 400 ಕೋಟಿ ಕಲೆಕ್ಷನ್..ಪ್ರಭಾಸ್‌ಗೆ ಮತ್ತೊಂದು ಬಿಗ್ ಹಿಟ್ !

ನಷ್ಟದಲ್ಲಿರುವ ಪ್ರೊಡಕ್ಷನ್ ಹೌಸ್ : ಪೂಜಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ತಯಾರಾದ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರದರ್ಶನ ಮಾಡಿವೆ. ಇದ್ರಿಂದಾಗಿ ಕಂಪನಿ ನಷ್ಟದಲ್ಲಿದೆ. . ಪೂಜಾ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಾದ ಕೊನೆಯ ಚಿತ್ರ ಬಡೇ ಮಿಯಾನ್ ಛೋಟೆ ಮಿಯಾನ್ 2. ಇದು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಇದ್ರಿಂದ ಕಂಪನಿಗೆ ಮತ್ತಷ್ಟು ನಷ್ಟವಾಗಿದೆ. ಸಿಬ್ಬಂದಿಗೆ ಸಂಬಳ ನೀಡದ ಸ್ಥಿತಿ ನಿರ್ಮಾಣವಾಗಿದೆ. ಪೂಜಾ ಎಂಟರ್‌ಟೈನ್‌ಮೆಂಟ್‌ ಮಾಲಿಕರಾದ  ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿಗೆ ಅಕ್ಷಯ್ ಕುಮಾರ್ ಈಗ ಬೆಂಬಲ ನೀಡಿದ್ದಾರೆ. ಬಡೇ ಮಿಯಾನ್ ಚೋಟೆ ಮಿಯಾನ್ 2 ಚಿತ್ರದ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ, ಸಂಬಳ ಸಿಕ್ಕಿಲ್ಲ ಎಂದು ಆರೋಪ ಮಾಡಿದ್ದರು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 350 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರ 102 ಕೋಟಿ ಹಣ ಗಳಿಸಿತ್ತು. 

click me!