ಜೀವನದಲ್ಲಿ ಕೆಲವೊಂದು ಷರತ್ತು ಅನಿವಾರ್ಯ. ಮದುವೆ ಸಮಯದಲ್ಲಿ ಸಂಗಾತಿ ಮಧ್ಯೆ ನಡೆಯುವ ಷರತ್ತುಗಳು ಮುಂದಿನ ಜೀವನ ರೂಪಿಸಲು ಸಹಕಾರಿ. ಸಾಮಾನ್ಯರು ಮಾತ್ರವಲ್ಲ ದಿಗ್ಗಜ ಜೋಡಿ ಶರ್ಮಿಳಾ ಮತ್ತು ಮನ್ಸೂರ್ ಅಲಿ ಖಾನ್ ಕೂಡ ಮದುವೆ ವೇಳೆ ಷರತ್ತು ಹಾಕಿಕೊಂಡಿದ್ರು.
ಇಂದಿನ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನೋಡಿದ್ರೆ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಮತ್ತು ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಜೋಡಿ ನೆನಪಾಗುತ್ತದೆ. ಭಾರತದ ಪ್ರಸಿದ್ಧ ಸೆಲೆಬ್ರಿಟಿ ಜೋಡಿಯಲ್ಲಿ ಇವರು ಒಬ್ಬರು. ಶರ್ಮಿಳಾ ಟ್ಯಾಗೋರ್ ನಟನೆಯಲ್ಲಿ ಸೈ ಎನ್ನಿಸಿಕೊಂಡಿದ್ದರೆ, ಟೈಗರ್ ಪಟೌಟಿ ಅದ್ಭುತ ಆಟಗಾರನಾಗಿ ಹೊರಹೊಮ್ಮಿದ್ದರು. ಅವರ ದಾಂಪತ್ಯ ಜೀವನದಲ್ಲಿ ಒಂದು ಲಕ್ಷ್ಮಣ ರೇಖೆಯಿತ್ತು. ಸಂದರ್ಶನವೊಂದರಲ್ಲಿ ಶರ್ಮಿಳಾ ಟ್ಯಾಗೋರ್ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಮನಸೂರ್ ಅಲಿ ಖಾನ್ ನಿಧನದ ನಂತ್ರವೂ ಶರ್ಮಿಳಾ, ಈ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ, ಈ ನಿಯಮ ಕೇಳಿದ್ರೆ ಯುವಕರಿಗೆ ವಿಚಿತ್ರ ಎನ್ನಿಸಬಹುದು. ಆದ್ರೆ ಇಂಥ ಷರತ್ತುಗಳು ಜೀವನದಲ್ಲಿ ಅಗತ್ಯ ಎನ್ನಿಸದೆ ಇರದು.
ಶರ್ಮಿಳಾ (Sharmila) – ಮನ್ಸೂರ್ ಮಧ್ಯೆ ಇತ್ತು ಈ ಷರತ್ತು : ಬಾಲಿವುಡ್ (Bollywood) ಮತ್ತು ಕ್ರಿಕೆಟ್ (Cricket) ಎಂಬ ವಿಷ್ಯ ಬಂದಾಗ ಅಲ್ಲಿ ಶರ್ಮಿಳಾ ಮತ್ತು ಮನಸೂರ್ ಅಲಿ ಖಾನ್ ಬಂದು ಹೋಗ್ತಾರೆ. ಕಪಿಲ್ ಸಿಬಲ್ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶರ್ಮಿಳಾ ಟ್ಯಾಗೂರ್ ಅವರಿಗೆ, ಕ್ರಿಕೆಟ್ ಹಾಗೂ ಐಪಿಎಲ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಸಮಯದಲ್ಲಿ ನಗ್ತಾ ಉತ್ತರ ನೀಡಿದ್ದ ಶರ್ಮಿಳಾ, ನಾನು ಕ್ರಿಕೆಟ್ ಬಗ್ಗೆ ಮಾತನಾಡಲು ಅರ್ಹ ಎಂದು ಭಾವಿಸೋದಿಲ್ಲ. ಮದುವೆ ಸಮಯದಲ್ಲಿ ಕ್ರಿಕೆಟ್ ಬಗ್ಗೆ ಚರ್ಚಿಸಬಾರದು ಎಂಬ ಒಪ್ಪಂದವಾಗಿತ್ತು ಎಂದು ಶರ್ಮಿಳಾ ಹೇಳಿದ್ದರು.
ಕೊರಗಜ್ಜನ ದರ್ಶನ ಪಡೆದ ಸಿಂಪಲ್ ಸ್ಟಾರ್..! ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ಬ್ಯುಸಿ ಇರೋ ರಕ್ಷಿತ್!
ವಿಚಿತ್ರ ಷರತ್ತಿನ ಮಹತ್ವ ಅರಿಯಿರಿ : ಮದುವೆ ಸಮಯದಲ್ಲಿ ಇಂಥ ಷರತ್ತಿನ ಅಗತ್ಯವಿತ್ತಾ ಎನ್ನುವ ಪ್ರಶ್ನೆ ನಿಮಗೆ ಮೂಡಬಹುದು. ಆದ್ರೆ ಆಗ ಅವರಿಬ್ಬರಿಗೆ ಈ ಷರತ್ತಿನ ಅನಿವಾರ್ಯತೆ ಇತ್ತು. ಯಾಕೆಂದ್ರೆ ಶರ್ಮಿಳಾ ಟ್ಯಾಗೂರ್ ಹಾಗೂ ಮನ್ಸೂರ್ ಅಲಿ ಖಾನ್ ತಮ್ಮ ಕ್ಷೇತ್ರದಲ್ಲಿ ಪ್ರವೀಣರಾಗಿದ್ದರೂ ಪರಸ್ಪರರ ಕ್ಷೇತ್ರದ ಬಗ್ಗೆ ಅವರಿಗೆ ಹೆಚ್ಚು ಮಾಹಿತಿ ಇರಲಿಲ್ಲ. ಹಾಗಾಗಿ ಅದ್ರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಅವರು ಭಾವಿಸಿದ್ದರು. ಇಬ್ಬರೂ ಪರಸ್ಪರರ ವೃತ್ತಿ ಬಗ್ಗೆ ಮಾತನಾಡಬಾರದು ಎಂಬ ಬುದ್ಧಿವಂತಿಕೆ ತೀರ್ಮಾನಕ್ಕೆ ಬಂದಿದ್ದರು. ಇದು ಇವರ ಸಂಬಂಧಕ್ಕೆ ಒಳ್ಳೆಯದು ಎಂದು ಅವರು ಭಾವಿಸಿದ್ದರು. ಮನ್ಸೂರ್ ಅಲಿ ಖಾನ್ ನಿಧನದ ನಂತ್ರವೂ ಶರ್ಮಿಳಾ ಟ್ಯಾಗೂರ್ ಈ ಷರತ್ತನ್ನು ಪಾಲಿಸ್ತಿರೋದು ಮಾತ್ರ ವಿಶೇಷ.
ಶರ್ಮಿಳಾ – ಮನ್ಸೂರ್ ಅಲಿ ಖಾನ್ ಲವ್ ಸ್ಟೋರಿ : 1968ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಅದಕ್ಕಿಂತ ಮುನ್ನ ದೀರ್ಘ ಸಮಯ ಇಬ್ಬರು ಪ್ರೇಮ ಸಂಬಂಧದಲ್ಲಿದ್ದರು. 1965 ರ ಮೊದಲ ಬಾರಿ ಶರ್ಮಿಳಾ ಹಾಗೂ ಮನ್ಸೂರ್ ಅಲಿ ಖಾನ್ ಭೇಟಿಯಾಗಿತ್ತು. ಮನ್ಸೂರ್ ಮೊದಲ ನೋಟದಲ್ಲೇ ಶರ್ಮಿಳಾ ಪ್ರೀತಿಗೆ ಬಿದ್ದಿದ್ದರು. ಆದ್ರೆ ಶರ್ಮಿಳಾರನ್ನು ಒಪ್ಪಿಸೋದು ಸುಲಭವಾಗಿರಲಿಲ್ಲ. ಸತತ ನಾಲ್ಕು ವರ್ಷ ಹೋರಾಡಿದ ಮನ್ಸೂರ್ ಅಲಿ ಖಾನ್ ರಿಗೆ ಕೊನೆಗೂ ಜಯ ಸಿಕ್ಕಿತು. ಶರ್ಮಿಳಾರನ್ನು ಒಪ್ಪಿಸಲು ಮನ್ಸೂರಿ, 7 ಫ್ರಿಜ್ ಕಳುಹಿಸಿದ್ದರು. ಆದ್ರೆ ಅದ್ರಿಂದ ಶರ್ಮಿಳಾ ಬದಲಾಗಿರಲಿಲ್ಲ. ಸತತ ನಾಲ್ಕು ವರ್ಷಗಳ ಕಾಲ ಹೂ ಕಳಿಸಿ ಅವರ ಮನಗೆದ್ದಿದ್ದರು ಮನ್ಸೂರ್ ಅಲಿ ಖಾನ್.
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ; ಅಕ್ಟೋಬರ್‌ಗೆ ಕಾಯುತ್ತಿರುವ ಎಂದ ಪತಿ ಭುವನ್!
ಮನ್ಸೂರ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ಮದುವೆಗೆ ಧರ್ಮ ಗೋಡೆಯಾಗಿತ್ತು. ಅದನ್ನು ಶರ್ಮಿಳಾ ಟ್ಯಾಗೋರ್ ಮುರಿದರು. ನವಾಬ್ ಪಟೌಡಿ ಅವರ ತಾಯಿ ಶರ್ಮಿಳಾ ಟ್ಯಾಗೋರ್ ಅವರ ಮುಂದೆ ಷರತ್ತು ಹಾಕಿದ್ದರು, ಅದನ್ನು ಪೂರೈಸಿದ ನಂತರವೇ ಶರ್ಮಿಳಾ ಮನ್ಸೂರ್ ಅವರನ್ನು ಮದುವೆಯಾಗಬಹುದು. ನವಾಬ್ ಪಟೌಡಿ ಅವರ ತಾಯಿ ಶರ್ಮಿಳಾ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಯಸಿದ್ದರು, ಅದಕ್ಕೆ ಅವರು ಸಹ ಒಪ್ಪಿದರು. ಶರ್ಮಿಳಾ ಮನ್ಸೂರ್ ಅಲಿ ಖಾನ್ ಮದುವೆಯಾಗಲು ಸುಲ್ತಾನ್ ಆದರು. ಕೆಲವೊಂದು ಸಂಬಂಧದಲ್ಲಿ ಷರತ್ತು ಅನಿವಾರ್ಯವಾಗುತ್ತದೆ. ಎಲ್ಲ ಎಲ್ಲ ಷರತ್ತು ನಕಾರಾತ್ಮಕವಾಗಿ ನೋಡಲು ಸಾಧ್ಯವಿಲ್ಲ.