ಇದೀಗ ಮದುವೆಗೂ ಮುನ್ನದ ವಿಡಿಯೋಗಳು ಒಂದೊಂದಾಗಿ ಹೊರ ಬರುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಬಾತ್‌ರೂಮ್‌ನಿಂದ ಹೊರ ಬರುವ ಸೋನಾಕ್ಷಿಗೆ ಜಹೀರ್ ಹೆದರಿಸಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿತ್ತು.
ಮುಂಬೈ: ಬಾಲಿವುಡ್ ತಾರೆಯರಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ (Sonakshi Sinha - Zaheer Iqbal) ಮದುವೆಯಾಗಿ ಒಂದು ವಾರ ಕಳೆದಿವೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಮದುವೆ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಏಳು ವರ್ಷ ಪ್ರೀತಿ ಮಾಡಿದ್ದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದರು. ಇದೀಗ ಮದುವೆಗೂ ಮುನ್ನದ ವಿಡಿಯೋಗಳು ಒಂದೊಂದಾಗಿ ಹೊರ ಬರುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಬಾತ್‌ರೂಮ್‌ನಿಂದ ಹೊರ ಬರುವ ಸೋನಾಕ್ಷಿಗೆ ಜಹೀರ್ ಹೆದರಿಸಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ಹೊರ ಬಂದಿದ್ದು, ಇದರಲ್ಲಿ ಪ್ರಾಂಕ್ ಮಾಡಲು ಬಂದ ಜಹೀರ್‌ಗೆ ಒದ್ದು ಕಬರ್ಡ್‌ನಲ್ಲಿ ಕೂಡಿ ಹಾಕಿದ್ದಾರೆ.
ಸೋನಾಕ್ಷಿ ಸಿನ್ಹಾ ಬ್ಯಾಗ್‌ನಲ್ಲಿ ಏನೋ ಹುಡುಕುತ್ತಿರುತ್ತಾರೆ. ಈ ವೇಳೆ ತಮ್ಮ ಮುಂದಿರುವ ವ್ಯಕ್ತಿ ನಿಮಗೇನಾದರೂ ಗೊತ್ತಿದೆಯಾ ಎಂದು ಕೇಳುತ್ತಾರೆ. ಅದಕ್ಕೆ ಆ ವ್ಯಕ್ತಿ ವಿಡಿಯೋ ಮಾಡುತ್ತಾ ಕಬರ್ಡ್‌ನಲ್ಲಿ ಇರಬಹುದು ನೋಡು ಎಂದು ಹೇಳುತ್ತಾನೆ. ನಿಜಾನಾ, ಎಂದು ಹೇಳುತ್ತಾ ಕಬರ್ಡ್ ತೆರೆದಾಗ ಒಳಗೆ ಅವಿತಿದ್ದ ಜಹೀರ್ ಜೋರು ಧ್ವನಿ ಮಾಡಿ ಹೆದರಿಸುತ್ತಾರೆ. ಒಂದು ಕ್ಷಣ ಸೋನಾಕ್ಷಿ ಸಿನ್ಹಾ ಹೆದರಿಕೊಳ್ಳುತ್ತಾರೆ. ಈ ವೇಳೆ ಅಲ್ಲಿದ್ದ ಎಲ್ಲರೂ ಜೋರಾಗಿ ನಗುತ್ತಾರೆ. ಕೂಡಲೇ ಜಹೀರ್‌ಗೆ ಒದ್ದು, ಕಬರ್ಡ್ ಒಳಗೆ ತಳ್ಳಿ ಸೋನಾಕ್ಷಿ ಸಿನ್ಹಾ ಬಾಗಿಲು ಹಾಕುತ್ತಾರೆ.
ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಡೆದ ಮದುವೆ
ಜೂನ್ 23ರಂದು ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಲ್ಲಿ ಯಾವುದೇ ಶಾಸ್ತ್ರಗಳನ್ನು ಆಚರಣೆ ಮಾಡಿರಲಿಲ್ಲ. ಸೋನಾಕ್ಷಿ ಮದುವೆಗೆ ಲವ್ ಜಿಹಾದ್ ಎಂಬ ಕಳಂಕವೂ ಅಂಟಿಕೊಂಡಿತ್ತು. ಮಗಳ ಮದುವೆ ಬಗ್ಗೆಯೂ ಆರಂಭದಲ್ಲಿ ತಂದ ಶತ್ರುಘ್ನ ಸಿನ್ಹಾ ಮತ್ತು ಸೋದರರಾದ ಲವ್ ಸಿನ್ಹಾ ಅಸಮ್ಮತಿಯ ಮಾತುಗಳನ್ನಾಡಿದ್ದರು. ಅಂತಿಮವಾಗಿ ಎಲ್ಲರೂ ಸೋನಾಕ್ಷಿ ಸಿನ್ಹಾ ಮದುವೆಯಲ್ಲಿ ಭಾಗಿಯಾಗಿದ್ದರು.
ಮದುವೆಗೂ ಮುನ್ನ ಹೋಮ-ಹವನ
ಮದುವೆಗೂ ಮುನ್ನ ಸೋನಾಕ್ಷಿ ಸಿನ್ಹಾ ಮನೆಯಲ್ಲಿ ವಿಶೇಷ ಪೂಜೆ, ಹೋಮ-ಹವನ ಸಹ ನಡೆದಿತ್ತು. ನಂತರ ಪೋಷಕರ ಜೊತೆ ದೇವಸ್ಥಾನಕ್ಕೆ ತೆರಳಿದ್ದ ಸೋನಾಕ್ಷಿ ಸಿನ್ಹಾ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಮದುವೆ ಬಳಿಕ ಸೋನಾಕ್ಷಿ ಸಿನ್ಹಾ ಇಸ್ಲಾಂಗೆ ಮತಾಂತರ ಆಗಲ್ಲ. ಆಕೆ ತಾನು ಪ್ರೀತಿಸಿದ ಜೀವವನ್ನು ಮದುವೆಯಾಗಿದ್ದಾಳೆ ಎಂದು ಜಹೀರ್ ಇಕ್ಬಾಲ್ ತಂದೆ ರತನ್ಸಿ ಹೇಳಿದ್ದರು.
ಗರ್ಭಿಣಿ ವದಂತಿ
ಇನ್ನೂ ಮದುವೆಯಾದ ಐದನೇ ದಿನಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮುಂಬೈನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಿಂದ ಹೊರ ಬರುವಾಗ ಪಾಪರಾಜಿ ಕ್ಯಾಮೆರಾಗಳಲ್ಲಿ ನವಜೋಡಿ ಸೆರೆಯಾಗಿದ್ದರು. ಸೋನಾಕ್ಷಿ ಸಿನ್ಹಾ ಗರ್ಭಿಣಿಯಾಗಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳಲು ಶುರು ಮಾಡಿದ್ದರು. ಆದ್ರೆ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ತಂದೆಯ ಆರೋಗ್ಯ ವಿಚಾರಿಸಲು ಪತಿ ಜಹೀರ್ ಜೊತೆ ಸೋನಾಕ್ಷಿ ಆಸ್ಪತ್ರೆಗೆ ಆಗಮಿಸಿದ್ದರು.