ಸಿನಿಮಾದಲ್ಲಿ ನೃತ್ಯ, ಫೈಟ್ ದೃಶ್ಯಗಳಿಗೆ ಟ್ರೇನರ್ ಇರುತ್ತಾರೆ ಎಂಬುದು ನಿಮಗೆ ತಿಳಿದಿದೆ. ಅದರೆ ಲೈಂಗಿಕ ದೃಶ್ಯಗಳನ್ನು ಡೈರೆಕ್ಟ್ ಮಾಡುವವರು, ಟ್ರೇನರ್ಸ್ ಕೂಡ ಇರ್ತಾರೆ, ಸೆಕ್ಸ್ ಸೀನ್‌ಗಳ ಶೂಟಿಂಗ್ ನೈಜವಾಗಿ ಬರುವಂತೆ, ಏನೂ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿ. ಏನ್ ಮಾಡ್ತಾರೆ ಇವರು?
ಚಲನಚಿತ್ರಗಳಲ್ಲಿ ಡ್ಯಾನ್ಸ್, ಫೈಟ್, ಆಕ್ಷನ್ ಸೀನ್‌ಗಳನ್ನು ಮಾಡುವಂತೆ ಕಲಾವಿದರಿಗೆ ಟ್ರೇನಿಂಗ್ ಕೊಡುವವರಿದ್ದಾರೆ. ಆದರೆ, ಲೈಂಗಿಕ ದೃಶ್ಯಗಳನ್ನೂ ರಿಹರ್ಸಲ್ ಮಾಡುತ್ತಾರೆ, ಅದಕ್ಕೂ ಒಬ್ಬರು ಕೊಆರ್ಡಿನೇಟರ್ ಇರ್ತಾರೆ ಎಂದರೆ ನಂಬುತ್ತೀರಾ? ಹಾಲಿವುಡ್ ಸೇರಿದಂತೆ ಹಲವು ವಿದೇಶಿ ಚಿತ್ರರಂಗದಲ್ಲಿ ಹೀಗೊಂದು intimacy coordinator ಎಂಬ ಪರಿಕಲ್ಪನೆ ಹೊಸತೇನಲ್ಲ. ಆದರೆ ಭಾರತದಲ್ಲಿ ಇದು ಇತ್ತೀಚೆಗೆ ಪ್ರಚಲಿತಗೊಳ್ಳುತ್ತಿದೆ. ಒಂದು ಲೈಂಗಿಕ ದೃಶ್ಯ ಚಿತ್ರೀಕರಣಗೊಳ್ಳುವಾಗ ತೆರೆಯ ಹಿಂದಿನ ಕೆಲಸಗಳು ಹೇಗಿರಬಹುದು ಎಂಬುದನ್ನು ತಿಳಿಯುವ ಕುತೂಹಲ ನಿಮಗಿರಬಹುದು ಅಲ್ವಾ?
ಲೈಂಗಿಕ ದೃಶ್ಯಗಳನ್ನು ಚಿತ್ರೀಕರಿಸಲು ಪೂರ್ವಸಿದ್ಧತೆ ಹೇಗಿರುತ್ತದೆ ಎಂದು ಆಸ್ತಾ ಖನ್ನಾ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಆಸ್ತಾ ಖನ್ನಾ ಎಂಬ ಯುವತಿ ಭಾರತದ ಮೊದಲ ಇಂಟಿಮಸಿ ಕೊಆರ್ಡಿನೇಟರ್. ಅವರ ಮಾತುಗಳು ಹೀಗಿವೆ:
undefined
ಇತ್ತೀಚೆಗೆ ಚಾಲ್ತಿಯಲ್ಲಿರುವ, ಓಟಿಟಿಯಲ್ಲಿ ಬರುವ ಸಿನಿಮಾ ಅಥವಾ ವೆಬ್ ಸೀರೀಸ್‌ಗಳಲ್ಲಿ ಲೈಂಗಿಕ ದೃಶ್ಯಗಳು ಹೆಚ್ಚಿವೆ. ಉಳಿದ ದೃಶ್ಯಗಳಂತೆ ಇವೂ ಕೂಡ ಕೂಡ ನಟನೆಯೇ ಆಗಿರುತ್ತವೆ. ಆದರೆ ಅದು ನೈಜವಾಗಿ ಕಾಣುವಂತೆ ಮಾಡುವ ಕಾರ್ಯ ಇಂಟಿಮಸಿ ಕೊಆರ್ಡಿನೇಟರದ್ದು.
ನಟ ಹಾಗೂ ನಟಿಯ ಬಳಿ ಅವರು ಈ ರೀತಿಯ ದೃಶ್ಯಗಳಿಗೆ ಅವರು ಕ್ಯಾಮೆರಾ ಮುಂದೆ ಎಷ್ಟು ಬೆತ್ತಲಾಗಲು ಸಿದ್ಧರಿದ್ದಾರೆ? ನಟ ಹಾಗೂ ನಟಿ ಇಬ್ಬರಿಗೂ ಪರಸ್ಪರ ಒಪ್ಪಿಗೆ ಇದೆಯೇ? ಅವರ ಮಿತಿ ಏನು? ಹೀಗೆ ಎಲ್ಲಾ ಮಾಹಿತಿಯನ್ನು ಇಂಟಿಮಸಿ ಕೊಆರ್ಡಿನೇಟರ್ ಮೊದಲು ಪಡೆಯಬೇಕು. ನಂತರ ಇಂಟಿಮಸಿ ಕೊಆರ್ಡಿನೇಟರ್‌ನ ಮುಖ್ಯ ಕೆಲಸ ಆರಂಭ. ನಟ ಹಾಗೂ ನಟಿಯರ ರಿಹರ್ಸಲ್. ದೃಶ್ಯ ಹೇಗೆ ಮೂಡಬೇಕು, ಅಭಿನಯ ಹೇಗಿರಬೇಕು ಎಂದು ನಟನಟಿಯರಿಗೆ ಟ್ರೇನಿಂಗ್ ಕೊಡುವ ಕೆಲಸ ಇಂಟಿಮಸಿ ಕೊಆರ್ಡಿನೇಟರ್ ಮಾಡುತ್ತಾರೆ.
ಒಂದು ದೃಶ್ಯ ತೆರೆಯ ಮೇಲೆ ಹೇಗೆ ಮೂಡಬೇಕೆಂದು ನಿರ್ದೇಶಕರಿಗೆ ಸರಿಯಾದ ಚಿತ್ರಣವಿರುತ್ತದೆ. ಅದು ಯಾವ ಪ್ರಮಾಣದಲ್ಲಿ ನೋಡುಗನ ಮನಮುಟ್ಟಬೇಕು? ಯಾವ ವಾತಾವರಣ ಸೃಷ್ಟಿಸಬೇಕು? ಈ ಕುರಿತು ನಿರ್ದೇಶಕ ಇಂಟಿಮಸಿ ಕೊಆರ್ಡಿನೇಟರ್‌ಗೆ ತಿಳಿಸಿರುತ್ತಾರೆ. ಇಂಟಿಮಸಿ ಕೊಆರ್ಡಿನೇಟರ್ ಅದಕ್ಕೆ ತಕ್ಕಂತೆ ರಿಹರ್ಸಲ್ ಮಾಡಿಸುತ್ತಾರೆ.
ರಿಹರ್ಸಲ್ ನಾಲ್ಕು ಗೋಡೆಯ ಮಧ್ಯ ನಡೆಯುವಂಥದ್ದು. ಆದರೆ ಶೂಟಿಂಗ್ ಸಂದರ್ಭದಲ್ಲಿ ಅವರನ್ನು ನೋಡುವ ಕಣ್ಣುಗಳು ಹಲವಾರು. ಅದರಿಂದ ನಟ ನಟಿಯರಿಗೆ ಮುಜುಗರ ಉಂಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಚಿತ್ರೀಕರಣದ ಸಂದರ್ಭದಲ್ಲಿ ಸಾಮಾನ್ಯವಾಗಿ 3-4 ಜನ ಮಾತ್ರ ಇರುತ್ತಾರೆ. ಒಮ್ಮೊಮ್ಮೆ 7-8 ಜನ ಇರುಬೇಕಾದ ಸಂದರ್ಭ ಇರುತ್ತದೆ.
ನಟ ಹಾಗೂ ನಟಿಯ ನಡುವೆ ಯಾವುದೇ ಸಂಕೋಚ ಇರಬಾರದು. ಇದ್ದರೆ ಅದು ಚಿತ್ರದ ಮೇಲೆ ನೆಗಟಿವ್ ಪರಿಣಾಮ ಬೀರಬಹುದು. ಇಬ್ಬರ ನಡುವಿನ ಸಂಕೋಚವನ್ನು ದೂರ ಮಾಡಿ, ಆಪ್ತತೆ ಹೆಚ್ಚಿಸುವುದು ತುಂಬಾ ಮುಖ್ಯ. ಹಾಗಾಗಿ ಇಂಟಿಮಸಿ ಕೊಆರ್ಡಿನೇಟರ್ ಕೂಡ ರಿಹರ್ಸಲ್ ಮೇಲೆ ಹೆಚ್ಚು ಗಮನ ನೀಡುತ್ತಾರೆ. ನಟ ಹಾಗೂ ನಟಿಯ ಪರಿಮಿತಿಯನ್ನು ಮೊದಲೇ ತಿಳಿಸಲಾಗಿರುತ್ತದೆ. ರಿಹರ್ಸಲ್ ಸಮಯದಲ್ಲಿ ಈ ಪರಿಮಿತಿಯನ್ನು ಮೀರುವಂತಿಲ್ಲ.
ಇಲ್ನೋಡಿ, ಬ್ರಹಾಂಡಕ್ಕೇ ತಿಳಿಯದ ಸನ್ನಿ ಲಿಯೋನ್ ಗುಟ್ಟು ಒಂದಿದೆ; ಯಾರಿಗೂ ಹೇಳ್ಬೇಡಿ ಆಯ್ತಾ?
ಕೆಲವೊಮ್ಮೆ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ಫ್ಲೋ ಜೊತೆ ಹೋಗಬೇಕಾಗುತ್ತದೆ. ನಿರ್ದೇಶಕರು ಸ್ಥಳದಲ್ಲಿ ಬದಲಾವಣೆ ಮಾಡಬಹುದು. ಹಾಗಿದ್ದಾಗ ಇಂಟಿಮಸಿ ಕೊಆರ್ಡಿನೇಟರ್ ಸೂಚನೆ ನೀಡುವ ಸಂದರ್ಭ ಎದುರಾಗುತ್ತದೆ. ಉದಾಹರಣೆಗೆ ಕೆಲವೊಮ್ಮೆ ʼಮೊದಲು ವ್ಯಕ್ತಿಯ ಮುಖವನ್ನು ಸ್ಪರ್ಶಿಸಿ, ನಂತರ ಭುಜ ಹಾಗೂ ಕುತ್ತಿಗೆಯನ್ನು ಚುಂಬಿಸಿ ಹಿಂದೆ ಸರಿಯಬೇಕುʼ ಎಂದೆಲ್ಲ ನಿರ್ದೇಶಿಸಬೇಕಾಗುತ್ತದೆ. ಆದರೆ ಇದು ಕೂಡ ಇಬ್ಬರ ಒಪ್ಪಿಗೆಯನ್ನು ಪಡೆದು ಮುಂದುವರಿಯಬೇಕು.
ಲೈಂಗಿಕ ಉದ್ರೇಕ ಉಂಟಾದರೆ?
ಲೈಂಗಿಕ ದೃಶ್ಯವನ್ನು ಚಿತ್ರಿಸುವಾಗ ಅಥವಾ ರಿಹರ್ಸಲ್ ವೇಳೆಯಲ್ಲಿ ಯಾರೂ ಕಾಮೋದ್ರೇಕಕ್ಕೆ ಒಳಗಾಗುವುದಿಲ್ಲವೇ? ಈವರೆಗೆ ಆ ರೀತಿಯ ಸಂದರ್ಭ ಎದುರಾಗಿಲ್ಲವಂತೆ. ರಿಹರ್ಸಲ್ ಹಾಗೂ ಚಿತ್ರೀಕರಣದ ಸಮಯದಲ್ಲಿ ಜನರು ಅವರನ್ನು ನೋಡುತ್ತಿರುತ್ತಾರೆ. ಇದನ್ನು ಅವರು ಅರಿತುಕೊಂಡಿರುತ್ತಾರೆ. ಹಾಗಾಗಿ ಪ್ರಚೋದನೆಗೆ ಅವಕಾಶ ಇರುವುದಿಲ್ಲ. ಇಂಟಿಮಸಿ ಕೊಆರ್ಡಿನೇಟರ್ ಮೊದಲೇ ಅವರ ಬಳಿ ಮಾತನಾಡಿರುತ್ತಾರೆ. ಪ್ರಚೋದನೆಗೆ ಪೂರಕವಲ್ಲದ ವಿಷಯಗಳನ್ನು ಮಾತನಾಡಿರುತ್ತಾರೆ.
ಆಸ್ತಾ ಖನ್ನಾ ತಮ್ಮ ಬ್ಯಾಗಿನಲ್ಲಿ ಮಿಂಟ್, ಮೌತ್ ವಾಶ್, ಬಾಡಿ ಟೇಪ್, ಸಿಲಿಕಾನ್ ಒಳಉಡುಪುಗಳನ್ನು ಇಟ್ಟಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಟನಟಿಯರ ಜನನಾಂಗಗಳು ಟಚ್ ಆಗುವದನ್ನು ತಡೆಯಲು ಸೈಕಲ್ ಸೀಟ್ ಕವರ್ ರೀತಿಯ ಒಂದು ಕವರ್ ಹಾಗೂ 9 ಇಂಚಿನ ಪೈಲೆಟ್ಸ್ ಬಾಲ್‌ನ್ನು ಬಳಸಲಾಗುತ್ತದೆ. ಇದರಿಂದಾಗಿ, ಕಾಮೋದ್ರೇಕದ ಭಯ ಇರುವುದಿಲ್ಲ.
ಸಿನಿಮಾ ಎಂಬ ಮಾಯಾಲೋಕದಲ್ಲಿ ಎಷ್ಟೊಂದು ವಿಚಿತ್ರಗಳಿರುತ್ತವೆ ಅಲ್ಲವೇ? ತೆರೆಯ ಮೇಲೆ ಕಾಣುವ 3 ಗಂಟೆಯ ಸಿನಿಮಾದ ಹಿಂದೆ ಎಷ್ಟೋ ಕೆಲಸಗಳು ನಡೆಯುತ್ತವೆ. ಇದನ್ನು ಊಹಿಸುವುದು ಕಷ್ಟ.
'ಇವತ್ತಿನ ರಾತ್ರಿ..' ಎಂದ್ಕೊಂಡು ಮತ್ತಷ್ಟು ಹಾಟ್ ಆಗಿ ಬಂದ ತಮನ್ನಾ!