ಬ್ರಹಾಂಡಕ್ಕೇ ತಿಳಿಯದ ಸನ್ನಿ ಲಿಯೋನ್ ಗುಟ್ಟು ಒಂದಿದೆ; ಇಲ್ನೋಡಿ, ಯಾರಿಗೂ ಹೇಳ್ಬೇಡಿ ಆಯ್ತಾ?

By Shriram Bhat  |  First Published Jul 25, 2024, 8:23 PM IST

ಸನ್ನಿ ಮೊದಲು ಹಾಟ್ ಸ್ಟಾರ್ ಪಟ್ಟದಲ್ಲಿದ್ದರು. ಈಗ ನಟಿಯಾಗಿ ಬದಲಾಗಿದ್ದಾರೆ. ಭಾರತದಲ್ಲಿ ನಾರ್ತ್-ಸೌತ್ ಬೇಧವಿಲ್ಲದೇ ಸನ್ನಿ ಲಿಯೋನ್ ಸಿನಿಮಾಗಳಲ್ಲಿ ಸಿಕ್ಕ ಆಫರ್ ಬಿಟ್ಟುಕೊಡದೇ ನಟಿಸುತ್ತಿದ್ದಾರೆ. ಏಕೆಂದರೆ, ಸನ್ನಿ ಲಿಯೋನ್ ಅವರಿಗೆ ಈಗ ತಮ್ಮ..


ಹಾಟ್ ಸ್ಟಾರ್ ಸನ್ನಿ ಲಿಯೋನ್ (Sunny Leone) ಅವರು ಕಳೆದ ಎರಡು ದಶಕಗಳಿಂದಲೂ ಪಡ್ಡೆ ಹುಡುಗರ ಕನಸಿನ ಕನ್ಯೆ. ಸನ್ನಿ ಲಿಯೋನ್ ಫೋಟೋಗಳಿಗಾಗಿ,  ವೀಡಿಯೋಗಳಿಗಾಗಿ ಇಂಟರ್ನೆಟ್‌ನಲ್ಲಿ ಹುಡುಕುವವರ ಸಂಖ್ಯೆ ಕಡಿಮೆಯೇನಿಲ್ಲ. ಸನ್ನಿ ಲಿಯೋನ್ ಮುಖ ದರ್ಶನ ಆದರೂ ಸಾಕು, ಅಂದು ರಾತ್ರಿ ಪಡ್ಡೆಗಳಿಗೆ ಊಟ ಸೇರದು, ನಿದ್ದೆ ಬಾರದು. ಅಂಥ ಸನ್ನಿ ಲಿಯೋನ್ ಈಗ ಸಿನಿಮಾ ನಟಿಯಾಗಿ ಬದಲಾಗುತ್ತಿದ್ದಾರೆ. ಒಂದಾದ ಮೇಲೆ ಮತ್ತೊಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಸನ್ನಿ ಮೊದಲು ಹಾಟ್ ಸ್ಟಾರ್ ಪಟ್ಟದಲ್ಲಿದ್ದರು. ಈಗ ನಟಿಯಾಗಿ ಬದಲಾಗಿದ್ದಾರೆ. ಭಾರತದಲ್ಲಿ ನಾರ್ತ್-ಸೌತ್ ಬೇಧವಿಲ್ಲದೇ ಸನ್ನಿ ಲಿಯೋನ್ ಸಿನಿಮಾಗಳಲ್ಲಿ ಸಿಕ್ಕ ಆಫರ್ ಬಿಟ್ಟುಕೊಡದೇ ನಟಿಸುತ್ತಿದ್ದಾರೆ. ಏಕೆಂದರೆ, ಸನ್ನಿ ಲಿಯೋನ್ ಅವರಿಗೆ ಈಗ ತಮ್ಮ ಇಮೇಜ್ ಇನ್ನೂ ಹೆಚ್ಚು ಬದಯಾಲಿಸಿಕೊಳ್ಳಬೇಕಿದೆ. ಈಗಾಗಲೇ ಬ್ಲೂ ಫಿಲಂ ನಟಿ ಇಮೇಜ್‌ನಿಂದ ಹೊರಬಂದಿರುವನಟಿ ಸನ್ನಿ ಲಿಯೋನ್, ಎಲ್ಲರಂತೆ ನಟಿ ಪಟ್ಟಕ್ಕೆ ಲಗ್ಗೆ ಇಟ್ಟಾಗಿದೆ. ಇನ್ನೇನಿದ್ದರೂ ಅವರ ಗುರಿ 'ಕಲಾವಿದೆ' ಪಟ್ಟ ಎನ್ನಲಾಗಿದೆ. 

Tap to resize

Latest Videos

undefined

ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!

ಕಲಾವಿದೆ ಎನಿಸಿಕೊಳ್ಳಬೇಕು, ತಾವೂ ಕೂಡ ಕತ್ತಲೆ ಜಗತ್ತಿನಿಂದ ಬೆಳಕಿನ ಜಗತ್ತಿನಲ್ಲಿ ಉತ್ತಮ ಅಭಿನೇತ್ರಿ ಎಂದು ಗುರುತಿಸಿಕೊಳ್ಳಬೇಕು ಎಂಬುದು ನಟಿ ಸನ್ನಿ ಲಿಯೋನ್ ಅವರ ಅಭಿಲಾಷೆಯಂತೆ. ಅದು ನೆರವೇರಲು ಪೂರಕವಾದ ಪಾತ್ರಗಳನ್ನು ಹುಡುಕುತ್ತಿದ್ದಾರೆ ಸನ್ನಿ. ಆದರೆ, ಅವರಿಷ್ಟದಂತೆ ಪಾತ್ರಗಳು ಬರುತ್ತಿಲ್ಲವಾದರೂ ಬಂದ ಪಾತ್ರಗಳು ಸದ್ಯಕ್ಕೆ ಇರುವ ಅವರ ಇಮೇಜನ್ನು ಹಂತಹಂತವಾಗಿ ಬದಲಾಯಿಸಿ ಉತ್ತಮ ಕಲಾವಿದೆಯಾಗುವ ದಿಕ್ಕಿನಲ್ಲಿ ಕರೆದೊಯ್ಯಲು ಸಹಾಯಕ ಎನಿಸಿದೆಯಂತೆ. 

ಕೆನಡಾದಲ್ಲಿ ಬಡ ಕುಟುಂಬದಲ್ಲಿ ಜನಿಸಿದ್ದ ಸನ್ನಿ ಲಿಯೋನ್ ಅವರು ತಾವು ಶ್ರೀಮಂತೆ ಆಗಲು ವಯಸ್ಕರ ಸಿನಿಮಾ ನಟಿಯಾಗಿ ಬದಲಾದರು ಎನ್ನಲಾಗಿದೆ. ಆದರೆ, ಒಂದು ಹಂತದಲ್ಲಿ ದುಡ್ಡು ಎಲ್ಲವೂ ಅಲ್ಲ, ಜೀವನ ಹಾಗು ಸಮಾಜದಲ್ಲಿ ಗೌರವ ಮುಖ್ಯ ಎನಿಸಿತಂತೆ. ಈ ಕಾರಣಕ್ಕೆ ಅದೊಂದು ಚಿನ ತಾವಿನ್ನು ಕತ್ತಲ ಕೋಣೆಯಲ್ಲಿ ಅಡಲ್ಟ್‌ ಸಿನಿಮಾ ಮಾಡುವುದಿಲ್ಲ ಎಂದು ಘೋಷಿಸಿ ಅಲ್ಲಿಂದ ಹೊರಗೆ ಬಂದುಬಿಟ್ಟರು ಸನ್ನಿ ಲಿಯೋನ್. ಇದೇ ಸನ್ನಿ ಲಿಯೋನ್ ಇಂದು ಯಶಸ್ವಿ ನಟಿಯಾಗಿರುವ ಗುಟ್ಟು!

ಇದು ಸನ್ನಿ ಲಿಯೋನ್ ಅವರು ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸಿ ಜನಮನ್ನಣೆ ಪಡೆಯುತ್ತಿದ್ದಾರೆ. ಸದ್ಯ ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಯು/ಐ' ಸಿನಿಮಾದಲ್ಲಿ ಕೂಡ ಒಂದು ಮುಖ್ಯ ಪಾತ್ರದಲ್ಲಿ  ನಟಿಸಿದ್ದಾರೆ ಸನ್ನಿ ಲಿಯೋನ್. ಈ ಮೊದಲು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡು ಚಪ್ಪಾಳೆ ಗಿಟ್ಟಿಸುತ್ತಿದ್ದರು ನಟಿ ಸನ್ನಿ ಲಿಯೋನ್. ಆದರೆ, ಈಗ ಪಾತ್ರವನ್ನು ಪೋಷಣೆ ಮಾಡಿ ಪ್ರಶಂಸೆ ಪಡೆಯುವಷ್ಟು ಬೆಳೆದಿದ್ದಾರೆ. 

ವಿಷ್ಣುವರ್ಧನ್‌ಗೆ ಪೋನ್‌ನಲ್ಲಿ ಡಾ ರಾಜ್‌ ಹೇಳಿದ್ದು ಕೇಳಿ ಎಸ್‌ ನಾರಾಯಣ್ ಕಕ್ಕಾಬಿಕ್ಕಿ ಯಾಕ್ ಆದ್ರು..?

ಒಟ್ಟಿನಲ್ಲಿ, ಕ್ಯಾಮೆರಾ ಮುಂದೆ ಕೂಡ ಮಾತುಕತೆಗಳಲ್ಲಿ ಕೂಡ ಸಾಕಷ್ಟು ಪ್ರೌಢತೆ ಮೆರೆಯುತ್ತಿದ್ದಾರೆ ಸನ್ನಿ ಲಿಯೋನ್. ಕೇಳಿದ ಪ್ರಶ್ನೆಗೆ ಅಗತ್ಯವಿದ್ದರೆ ಮಾತ್ರ ಉತ್ತರ ಕೊಡುತ್ತಾರೆ. ಇಲ್ಲದಿದ್ದರೆ ನುಣಿಚಿಕೊಂಡು ಜಾಣತನ ಮೆರೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ದರ್ಶನ್ ಘಟನೆ ಬಗ್ಗೆ ಪ್ರಶ್ನಿಸಿದಾಗ ನಟಿ ಸನ್ನಿ ಲಿಯೋನ್ 'ನಿಮಗೆ ಒಮ್ಮೆ ತಾಯಿ, ಹೆಂಡತಿ ಹಾಗೂ ತಂಗಿ ಒಪ್ಪುವ ಗಿಫ್ಟ್ ತನ್ನಿ ಎಂದರೆ ನಿಮಗೆ ಕಷ್ಟವಾಗುವುದಿಲ್ಲವೇ, ಈ ಪ್ರಶ್ನೆ ಕೂಡ ಹಾಗೆ' ಎಂದು ಹೇಳಿ ಪ್ರಶ್ನಿಸಿದವರ ಬಾಯಿ ಮುಚ್ಚಿಸಿದ್ದಾರೆ. 

click me!