ಬಾಲಿವುಡ್‌ನಲ್ಲಿ ಸಾಲು ಸಾಲಾಗಿ 19 ಫ್ಲಾಪ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟಿಯೀಕೆ. 4 ವರ್ಷಗಳ ನಂತರ ಹಿಟ್ ಚಿತ್ರ ನೀಡಿದರು. ಪ್ರಸ್ತುತ ಈಕೆ ಭಾರತದ ಶ್ರೀಮಂತ ನಟಿ; ಈಕೆಯ ಒಟ್ಟು ಆಸ್ತಿ ಮೌಲ್ಯವೆಷ್ಟು ಗೊತ್ತಾ?
ಬಾಲಿವುಡ್‌ನಲ್ಲಿ ಹಲವಾರು ಸೂಪರ್‌ಸ್ಟಾರ್ ನಟ-ನಟಿಯರಿದ್ದಾರೆ. ತಮ್ಮ ಅಭಿನಯದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಜೊತೆಗೆ ಸಿನಿಮಾದಿಂದ ಮಾತ್ರವಲ್ಲ ಜಾಹೀರಾತುಗಳಿಂದಲೂ ಕೋಟ್ಯಾಂತರ ರೂ. ಗಳಿಸುತ್ತಾರೆ. ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ, ಕತ್ರೀನಾ ಕೈಫ್, ಆಲಿಯಾ ಭಟ್ ಮೊದಲಾದವರು ನಟನೆಗಿಂತಲೂ ಉದ್ಯಮಗಳಿಂದ ಕೋಟ್ಯಾಂತರ ಲಾಭ ಪೆಡಯುತ್ತಾರೆ. ಹೀಗಾಗಿಯೇ ಅವರ ಒಟ್ಟು ಆಸ್ತಿ ಮೌಲ್ಯ ಯಾವಾಗಲೂ ಕೋಟಿಗಟ್ಟಲೆ ಮೀರುತ್ತದೆ. ಆದರೆ, ಬಾಲಿವುಡ್ ನ ಶ್ರೀಮಂತ ನಟಿ ಯಾರು ಗೊತ್ತಾ? ಆ ಬಗ್ಗೆ ಇಲ್ಲಿದೆ ಮಾಹಿತಿ.
ದೀಪಿಕಾ ಒಂದು ಚಿತ್ರಕ್ಕೆ ಸುಮಾರು 25 ರಿಂದ 30 ಕೋಟಿ ರೂ. ಪಡೆಯುತ್ತಾರೆ. ಆಕೆಯ ಹೆಚ್ಚಿನ ಗಳಿಕೆಯು ಜಾಹೀರಾತು (Advertisement)ಗಳಿಂದ ಬರುತ್ತದೆ. ಪ್ರಸ್ತುತ ದೀಪಿಕಾ ಪಡುಕೋಣೆ, ಏಷ್ಯನ್ ಪೇಂಟ್ಸ್, ಲಾಯ್ಡ್, ಜಾಗ್ವಾರ್, ಜಿಯೋ, ಲೋರಿಯಲ್, ತನಿಷ್ಕ್ ಮತ್ತು ಕೋಕಾ-ಕೋಲಾದಂತಹ ದೊಡ್ಡ ಕಂಪನಿಗಳಿಗೆ ಮಾಡೆಲ್ ಆಗಿದ್ದಾರೆ. ಇದಲ್ಲದೆ, ಅವರು ಸೌಂದರ್ಯ ಉತ್ಪನ್ನ (Beauty product) ಕಂಪನಿ 82E ನ ಮಾಲೀಕರಾಗಿದ್ದಾರೆ. ದೀಪಿಕಾ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 500 ಕೋಟಿ ರೂ. ಬಾಲಿವುಡ್‌ನ ಶ್ರೀಮಂತ ನಟಿಯರ ಪಟ್ಟಿಯಲ್ಲಿ (Richest actress) 4 ನೇ ಸ್ಥಾನದಲ್ಲಿದ್ದಾರೆ.
ಬಾಲಿವುಡ್‌ನಲ್ಲಿ ಸೂಪರ್ ಫ್ಲಾಪ್ ಆದ ಸ್ಟಾರ್ ಕಿಡ್, ಶ್ರೀದೇವಿ ಜೊತೆ ನಟಿಸಿದ್ರೂ ಸಿನ್ಮಾ ಫೈಲ್ಯೂರ್!
ಬಾಲಿವುಡ್ ನಟಿಯರ ಒಟ್ಟು ಆಸ್ತಿಯೆಷ್ಟು ಗೊತ್ತಾ?
ಪ್ರಿಯಾಂಕಾ ಚೋಪ್ರಾ ಜೋನಾಸ್ ಬಾಲಿವುಡ್‌ನ ಎರಡನೇ ಶ್ರೀಮಂತ ನಟಿ. ಚಲನಚಿತ್ರಗಳು ಮತ್ತು ಜಾಹೀರಾತುಗಳಿಂದ ಗಳಿಸುವ ಜೊತೆಗೆ, ಪ್ರಿಯಾಂಕಾ ಸೌಂದರ್ಯ ಉತ್ಪನ್ನ ಕಂಪನಿ ಅನೋಮಲಿ, ಬಟ್ಟೆ ಕಂಪನಿ ಪರ್ಫೆಕ್ಟ್ ಮೊಮೆಂಟ್, ನ್ಯೂಯಾರ್ಕ್‌ನಲ್ಲಿ ರೆಸ್ಟೋರೆಂಟ್ ಸೋನಾ ಮತ್ತು ಪರ್ಪಲ್ ಪಿಕ್ಚರ್ಸ್ ಎಂಬ ನಿರ್ಮಾಣ ಕಂಪನಿಯನ್ನು ಸಹ ಹೊಂದಿದ್ದಾರೆ. ಹಲವು ಸ್ಟಾರ್ಟ್‌ಅಪ್‌ಗಳಲ್ಲೂ ಹೂಡಿಕೆ ಮಾಡಿದ್ದಾರೆ. ಸದ್ಯಕ್ಕೆ ಪ್ರಿಯಾಂಕಾ ಅವರ ಒಟ್ಟು ಆಸ್ತಿ 600 ಕೋಟಿ ರೂ.
ಚಿತ್ರವೊಂದಕ್ಕೆ 9 ರಿಂದ 10 ಕೋಟಿ ರೂಪಾಯಿ ಚಾರ್ಜ್ ಮಾಡುವ ಆಲಿಯಾ ಭಟ್, ನಿವ್ವಳ ಮೌಲ್ಯದಲ್ಲಿ ಬಾಲಿವುಡ್‌ನ ಮೂರನೇ ಶ್ರೀಮಂತ ನಟಿ. ಅವರು ಎಡ್-ಎ-ಮಮ್ಮ ಎಂಬ ಬಟ್ಟೆ ಬ್ರಾಂಡ್ ಅನ್ನು ಪ್ರಾರಂಭಿಸಿದರು, ಇದು ಒಂದು ವರ್ಷದಲ್ಲಿ 150 ಕೋಟಿ ರೂಪಾಯಿಗಳ ವಹಿವಾಟು ನಡೆಸಿತು. ಇದಲ್ಲದೇ ಎಟರ್ನಲ್ ಸನ್ ಶೈನ್ ಹೆಸರಿನ ಪ್ರೊಡಕ್ಷನ್ ಹೌಸ್ ಕೂಡಾ ಇದೆ. ಆಲಿಯಾ ಡ್ಯುರೊಫ್ಲೆಕ್ಸ್, ಅವರ್, ಕ್ಯಾಡ್ಬರಿ, ಕ್ವಾಲಿಟಿ ವಾಲ್ಸ್, ಕಾರ್ನೆಟ್ಟೊ ಮತ್ತು ಫ್ರೂಟಿಯಂತಹ ಕಂಪನಿಗಳಿಗೆ ಜಾಹೀರಾತುಗಳನ್ನು ಸಹ ಮಾಡುತ್ತಾರೆ. ಆಕೆಯ ನಿವ್ವಳ ಮೌಲ್ಯ ಸುಮಾರು 550 ಕೋಟಿ ರೂ.
ಬಾಲಿವುಡ್‌ನ ಜ್ಯೂನಿಯರ್ ಅಮಿತಾಬ್ ಎಂದೇ ಕರೆಯಲ್ಪಡುವ ನಟ, ಅಭಿಷೇಕ್ ಬಚ್ಚನ್ ಅಲ್ಲ!
ಸೌಂದರ್ಯ ಉತ್ಪನ್ನದ ಬ್ರ್ಯಾಂಡ್‌ನಿಂದ ಕೋಟಿ ಕೋಟಿ ಗಳಿಸ್ತಾರೆ ನಟಿಯರು
ಗಳಿಕೆಯಲ್ಲಿ ಕರೀನಾ ಕಪೂರ್ ಖಾನ್ ಐದನೇ ಸ್ಥಾನದಲ್ಲಿದ್ದಾರೆ. ಕರೀನಾ ಚಿತ್ರವೊಂದಕ್ಕೆ 10 ಕೋಟಿ ಹಾಗೂ ಜಾಹೀರಾತಿಗೆ 6 ಕೋಟಿ ಚಾರ್ಜ್ ಮಾಡುತ್ತಾರೆ. ಸ್ಟೇಜ್ ಶೋಗಳು ಮತ್ತು ರೇಡಿಯೋ ಕಾರ್ಯಕ್ರಮಗಳಿಂದಲೂ ಅವರು ಹಣವನ್ನು ಗಳಿಸುತ್ತಾರೆ. ಕರೀನಾ ಅವರ ಒಟ್ಟು ಆಸ್ತಿ 485 ಕೋಟಿ ರೂ. ಆಗಿದೆ. ಗಳಿಕೆಯಲ್ಲಿ 6ನೇ ಸ್ಥಾನದಲ್ಲಿರುವ ಕತ್ರೀನಾ ಕೈಫ್ ಚಿತ್ರವೊಂದಕ್ಕೆ ಸುಮಾರು 7-8 ಕೋಟಿ ರೂ. ಪಡೆಯುತ್ತಾರೆ. ಕತ್ರೀನಾ ಜಾಹೀರಾತಿಗಾಗಿ ಸುಮಾರು 7 ಕೋಟಿ ರೂ. ಗಳಿಸುತ್ತಾರೆ. ಆಕೆಯ ಸೌಂದರ್ಯ ಉತ್ಪನ್ನ ಬ್ರ್ಯಾಂಡ್ ಕೇ ಬ್ಯೂಟಿ ವಾರ್ಷಿಕವಾಗಿ ಸುಮಾರು 100 ಕೋಟಿ ರೂಪಾಯಿ ವ್ಯವಹಾರ (Business) ಮಾಡುತ್ತದೆ. ಆಕೆಯ ಒಟ್ಟು ನಿವ್ವಳ ಮೌಲ್ಯ ಸುಮಾರು 264 ಕೋಟಿ ರೂ.
ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಸುವ ನಟಿ ಐಶ್ವರ್ಯಾ ರೈ. ಅವರು ದೀರ್ಘಕಾಲದಿಂದ ಚಲನಚಿತ್ರಗಳಲ್ಲಿ ನಟಿಸುತ್ತಿಲ್ಲ. ಆದರೆ ಇಂದಿಗೂ, ಐಶ್ವರ್ಯಾ ರೈ ಬಚ್ಚನ್ ನಿವ್ವಳ ಮೌಲ್ಯದ ವಿಷಯದಲ್ಲಿ ಇಡೀ ಬಾಲಿವುಡ್ ಅನ್ನು ಆಳುವ ನಟಿ. ಸಿನಿಮಾಗಳಿಗೆ 10 ಕೋಟಿ ಮತ್ತು ಜಾಹೀರಾತಿಗೆ 7 ರಿಂದ 8 ಕೋಟಿ ಚಾರ್ಜ್ ಮಾಡುತ್ತಾರೆ, ಐಶ್ವರ್ಯಾ ರೈ ಬಚ್ಚನ್ ಅವರ ಆಸ್ತಿ ಸುಮಾರು 800 ಕೋಟಿ ರೂಪಾಯಿ.
ಇನ್ನು, ಅನುಷ್ಕಾ ಶರ್ಮಾ 7ನೇ ಸ್ಥಾನದಲ್ಲಿದ್ದು ಅವರ ನಿವ್ವಳ ಮೌಲ್ಯ 255 ಕೋಟಿ ರೂ. ಇದರ ನಂತರ ಮಾಧುರಿ ದೀಕ್ಷಿತ್ ನೇನೆ ಅವರು ಸುಮಾರು 250 ಕೋಟಿ ರೂ. ಈ ಪಟ್ಟಿಯಲ್ಲಿ, ಕಾಜೋಲ್ 235 ಕೋಟಿ ರೂ ನಿವ್ವಳ ಮೌಲ್ಯದೊಂದಿಗೆ 9ನೇ ಸ್ಥಾನದಲ್ಲಿದ್ದರೆ, ರಾಣಿ ಮುಖರ್ಜಿ ಹೆಸರು 10ನೇ ಸ್ಥಾನದಲ್ಲಿದೆ. ಆಕೆಯ ಆಸ್ತಿ ಸುಮಾರು 206 ಕೋಟಿ ರೂ. ಆಗಿದೆ.