
ಮೈಚಾಂಗ್ ಚಂಡಮಾರುತವು ಚೆನ್ನೈ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ದಿನಗಳಿಂದ ಭಾರಿ ಹಾನಿಯನ್ನುಂಟುಮಾಡುತ್ತಿದೆ. ತೀವ್ರ ಚಂಡಮಾರುತದಿಂದ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ದಿನಗಳಿಂದ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಕೆಲ ದಿನಗಳ ಹಿಂದೆ ಕರಪಾಕ್ಕಂನಲ್ಲಿ ಸಿಲುಕಿದ್ದ ನಟ ವಿಷ್ಣು ವಿಶಾಲ್ ಅವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ರಕ್ಷಿಸಿತ್ತು. ವಿಷ್ಣು ವಿಶಾಲ್ ಅವರನ್ನು ರಕ್ಷಿಸುವ ಸಮಯದಲ್ಲಿ ಆಮೀರ್ ಖಾನ್ ಕೂಡ ಚಂಡಮಾರುತದ ಸುಳಿಗೆ ಸಿಲುಕಿದ್ದರು ಎನ್ನುವ ವಿಷಯ ಬಹಿರಂಗಗೊಂಡಿತ್ತು. ವಿಷ್ಣು ವಿಶಾಲ್ ಅವರು ತಮ್ಮ ರಕ್ಷಣಾ ಕಾರ್ಯಾಚರಣೆಯ ಫೋಟೋ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ನಟ ಅಮೀರ್ ಖಾನ್ ಅವರೂ ಇದ್ದರು.
ಇದೀಗ ಈ ಚಂಡಮಾರುತದಿಂದ ಉಂಟಾದ ಪ್ರವಾಹದಿಂದ ಚೆನ್ನೈನಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಹಲವು ಜನರನ್ನು ಇದಾಗಲೇ ಸ್ಥಳಾಂತರ ಮಾಡಲಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಈ ಪ್ರವಾಹದಲ್ಲಿ ನಟ ರಜನಿಕಾಂತ್ ಅವರ ಮನೆಗೂ ಹಾನಿಯಾಗಿದೆ ಎಂದು ವರದಿಯಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದಲ್ಲಿ ರಜನಿಕಾಂತ್ ಅವರ ಮನೆಗೆ ನೀರು ನುಗ್ಗಿದೆ ಎನ್ನಲಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಚೆನ್ನೈನ ಭಾರಿ ಚಂಡಮಾರುತದ ಸುಳಿಗೆ ಸಿಲುಕಿದ್ದ ಆಮೀರ್ ಖಾನ್! ವೈರಲ್ ಚಿತ್ರದಿಂದ ವಿಷಯ ಬಹಿರಂಗ...
ಈ ವಿಡಿಯೋದಲ್ಲಿ ನಟನ ಮನೆ ಕೂಡ ಪ್ರವಾಹದ ಸುಳಿಗೆ ಸಿಲುಕಿರುವುದನ್ನು ನೋಡಬಹುದು. ರಸ್ತೆಯ ಮೇಲೆ ಜಲಾವೃತವಾಗಿದ್ದು, ರಜನೀಕಾಂತ್ ಅವರ ಮನೆಯ ಎದುರು ಕೂಡ ನೀರು ನಿಂತಿದೆ. ಆದರೆ ಅದೃಷ್ಟವಶಾತ್ ಈ ಸಮಯದಲ್ಲಿ ರಜನಿಕಾಂತ್ ಮತ್ತು ಅವರ ಕುಟುಂಬ ಚೆನ್ನೈನಲ್ಲಿ ಇರಲಿಲ್ಲ ಎನ್ನಲಾಗಿದೆ. ಅವರ ಅಭಿಮಾನಿಯೊಬ್ಬರ ಪ್ರಕಾರ ರಜನೀಕಾಂತ್ ಅವರು, ತಲೈವರ್ 170 ಚಿತ್ರದ ಶೂಟಿಂಗ್ ಕೆಲಸಗಳ ಕಾರಣದಿಂದ ಹೊರಗೆ ಹೋಗಿದ್ದಾರೆ. ತಲೈವರ್ 170 ಬಿಡುಗಡೆಗೆ ಕಾಯುತ್ತಿರುವ ಫ್ಯಾನ್ಸ್, ತಮ್ಮ ನೆಚ್ಚಿನ ನಟ ಸುರಕ್ಷಿತವಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಅಂದಹಾಗೆ, ತಲೈವರ್ 170 ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ನಟಿಸಲಿದ್ದು, ಇದರ ಕುರಿತು ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ ವಿವರಣೆ ನೀಡಿದೆ. ರಜನಿ ಅವರ 170ನೇ ಸಿನಿಮಾ ಇದಾಗಿರುವ ಕಾರಣ, ತಲೈವರ್ 170 ಎನ್ನಲಾಗುತ್ತಿದ್ದು, ಶೀರ್ಷಿಕೆ ಇನ್ನಷ್ಟೇ ಹೊರಬರಬೇಕಿದೆ. ಈ ಜೋಡಿ ಈ ಹಿಂದೆ, ‘ಹಮ್’ ಚಿತ್ರದಲ್ಲಿ ನಟಿಸಿತ್ತು. 32 ವರ್ಷಗಳು ಕಳೆದ ಬಳಿಕ ಇಬ್ಬರೂ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದು, ಇಬ್ಬರ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ‘ಜೈ ಭೀಮ್’ ಖ್ಯಾತಿಯ ಟಿ.ಜೆ. ಜ್ಞಾನವೇಲ್ ಅವರ ನಿರ್ದೇಶನದ ತಲೈವರ್ 170 ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಬೆತ್ತಲೆ ಸೀನ್ ವೇಳೆ ನಾಲ್ವರು ಇದ್ವಿ, ರಣಬೀರ್ ನರ್ವಸ್ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.