ಅಮ್ಮನನ್ನು ನೆನಪಿಸಿಕೊಂಡು ಎಲ್ಲಾ ವೇಳೆ ನಾನು ಅಳುತ್ತಲೇ ಇರಲು ಆಗುವುದಿಲ್ಲ. ನಾನು ನನ್ನ ಜೀವನವನ್ನೂ ನೋಡಿಕೊಳ್ಳಲೇಬೇಕಲ್ಲ. ನನ್ನ ತಂಗಿ, ಅಪ್ಪನ ಬಗ್ಗೆಯೂ ಯೋಚಿಸಲೇಬೇಕು. ಇಲ್ಲದಿದ್ದರೆ, ನಾನು ಅಳುತ್ತಾ ಕೂತುಬಿಟ್ಟರೆ ಅವರೂ ಅದನ್ನೇ ಮಾಡಬೇಕಾಗುತ್ತದೆ.
ಬಾಲಿವುಡ್ ಸೂಪರ್ ಸ್ಟಾರ್ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ತನ್ನ ಅಮ್ಮನ ಬಗ್ಗೆ ಮಾತನಾಡಿದ್ದಾಳೆ. ಜಾನ್ವಿ ಆಗಾಗ ಅವಳಮ್ಮನ ನೆನಪು ಮಾಡಿಕೊಂಡು ಸಂದರ್ಶನಗಳಲ್ಲಿ ಮಾತನಾಡುತ್ತಲೇ ಇರುತ್ತಾರೆ. ನಟಿ ಶ್ರೀದೇವಿ ಜಗತ್ತಿಗೆ ಸ್ಟಾರ್ ಆದರೂ ಜಾನ್ವಿ ಹಾಗೂ ಖುಷಿಗೆ ಅಮ್ಮ ತಾನೆ? ಅಮ್ಮನನ್ನು ಕಳೆದುಕೊಂಡ ಮಕ್ಕಳ ಪಾಡು ಅರ್ಥವಾಗುವಂಥದ್ದೇ. ಸದಾ ಅನಾಥ ಪ್ರಜ್ಞೆ ಕಾಡುತ್ತಲೇ ಇರುತ್ತದೆ. ಅದೇ ರೀತಿ ಜಾನ್ವಿಗೂ ಕೂಡ ಆಗಾಗಾ ಅಮ್ಮನ ನೆನಪು ಕಾಡುತ್ತದೆ.
'ನನಗೆ ಸದಾ ಅಮ್ಮನದೇ ಧ್ಯಾನ. ಅವರೊಬ್ಬ ಶ್ರೇಷ್ಠ ನಟಿ ಎಂಬುದಕ್ಕಿಂತ ಹೆಚ್ಚಾಗಿ ಅವಳು ನನ್ನಮ್ಮ. ಅವಳು ನಮ್ಮನೆ ಕಾರಿಡಾರ್‌ನಲ್ಲಿ ಓಡಾಡುವುದು, ಬೆಳಿಗ್ಗೆ ವಾಕಿಂಗ್ ಮಾಡುವುದು ಎಲ್ಲವೂ ನನಗೆ ಇನ್ನು ಕಣ್ಣಿಗೆ ಕಟ್ಟಿದಂತಿದೆ. ನಾನು ಅಲ್ಲಿಗೆ ಹೋದಾಗ ನನ್ನ ಅಮ್ಮ ನನ್ನ ಸುತ್ತಲೂ ಇದ್ದಾಳೆ ಎಂದೇ ನನಗೆ ಭಾಸವಾಗುತ್ತದೆ. ಜನರು, ಅಮ್ಮನ ಅಭಿಮಾನಿಗಳು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೋ ಏನೋ! ಆದರೆ, ನಾನು ಅಮ್ಮನನ್ನು ಮರೆತಿಲ್ಲ, ಸದಾ ನೆನಪಿನಲ್ಲೇ ಇರುತ್ತಾರೆ.
ಲೀಲಾವತಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ; ಕಲಾ ಸಾಧನೆ ಅಜರಾಮರ
ಆದರೆ, ಅಮ್ಮನನ್ನು ನೆನಪಿಸಿಕೊಂಡು ಎಲ್ಲಾ ವೇಳೆ ನಾನು ಅಳುತ್ತಲೇ ಇರಲು ಆಗುವುದಿಲ್ಲ. ನಾನು ನನ್ನ ಜೀವನವನ್ನೂ ನೋಡಿಕೊಳ್ಳಲೇಬೇಕಲ್ಲ. ನನ್ನ ತಂಗಿ, ಅಪ್ಪನ ಬಗ್ಗೆಯೂ ಯೋಚಿಸಲೇಬೇಕು. ಇಲ್ಲದಿದ್ದರೆ, ನಾನು ಅಳುತ್ತಾ ಕೂತುಬಿಟ್ಟರೆ ಅವರೂ ಅದನ್ನೇ ಮಾಡಬೇಕಾಗುತ್ತದೆ. ಮೂವರೂ ಸೇರಿ ಅಮ್ಮನನ್ನು ನೆನಪಿಸಿಕೊಂಡು ಕೊರಗುತ್ತಿದ್ದರೆ ಅಲ್ಲೆಲ್ಲೋ ಇರುವ ಅಮ್ಮನ ಆತ್ಮ ನಮ್ಮನ್ನು ನೆನಪಿಸಿಕೊಂಡು ಕೊರಗುತ್ತದೆ. ಅದೆಲ್ಲ ಬೇಡ, ಅಮ್ಮನೂ ಇರುವಲ್ಲಿ ಖುಷಿಯಾಗಿರಲಿ, ನಾವೂ ಖುಷಿಯಾಗಿ ಇರುಬೇಕು.
'ಮುಂಗಾರು ಮಳೆ' ಮನೆಗೆ ಭೇಟಿ ಕೊಟ್ಟ ಮಳೆ ಹುಡುಗಿ; ಸವಿನೆನನಪು ಹಂಚಿಕೊಂಡ ನವವಧು ಪೂಜಾ ಗಾಂಧಿ
ನಾನು ಆರೋಗೆಂಟ್ ಎಂದುಕೊಳ್ಳಬೇಕಿಲ್ಲ. ದಯವಿಟ್ಟು ನನ್ನ ಮಾತನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ನಾನು ಎಲ್ಲರಂತೆ ಅಪ್ಪಾ-ಅಮ್ಮನ ಮುದ್ದಿನ ಮಗಳು. ಎಲ್ಲರಂತೆ ನನ್ನ ಅಮ್ಮ-ಅಪ್ಪ ಕೂಡ ಸಾಯುತ್ತಾರೆ, ನಾನೂ ಎಲ್ಲರೂ ಒಂದಲ್ಲ ಒಂದು ದಿನ ಈ ಭೂಮಿ ಬಿಟ್ಟು ಹೋಗುತ್ತೇವೆ. ಜೀವನ ಇರುವುದೇ ಹಾಗೆ. ಎಲ್ಲವನ್ನೂ ಅರ್ಥೈಸಿಕೊಳ್ಳಬೇಕು, ನೋವು-ನಲಿವು ಅನುಭವಿಸಲೇಬೇಕು. ಒಬ್ಬರ ಜೀವನದಲ್ಲಿ ಇನ್ನೊಬ್ಬರು ಇದ್ದಷ್ಟು ದಿನ ಚೆನ್ನಾಗಿರಬೇಕು ಸಂಬಂಧ ಎಂದು ನಾನು ಭಾವಿಸುತ್ತೇನೆ, ಅನುಸರಿಸುತ್ತೇನೆ' ಎಂದಿದ್ದಾರೆ ನಟಿ ಜಾನ್ವಿ ಕಪೂರ್.