ಭಾರತದ ಟಾಪ್ 10 ಶ್ರೀಮಂತ ನಟರು ಯಾರು? ಅವರ ಆಸ್ತಿ ವಿವರ ಇಲ್ಲಿದೆ; ಇದರಲ್ಲಿ ಕನ್ನಡ ನಟರು ಯಾರಿದ್ದಾರೆ?

ಸಿನಿಮಾ ಉದ್ಯಮವು ಲಾಭದಾಯಕವಾಗಿದ್ದು, ಭಾರತದ ಶ್ರೀಮಂತ ನಟರ ಆಸ್ತಿಯ ವಿವರ ಇಲ್ಲಿದೆ. ಶಾರುಖ್ ಖಾನ್ ನಂ. 1 ಹಾಗೂ ರಜನಿಕಾಂತ್ 10ನೇ ಸ್ಥಾನದಲ್ಲಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಕನ್ನಡ ನಟರು ಯಾರಿದ್ದಾರೆ? ನೀವೇ ನೋಡಿ..

India top 10 richest actors and their net worth details Who among them could be Kannada Actors sat

ಸಾಮಾನ್ಯವಾಗಿ ಉದ್ಯಮದಲ್ಲಿ ಲಾಭ-ನಷ್ಟ ಎರಡೂ ಇರುತ್ತವೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಉದ್ಯಮವಾಗಿ ಬೆಳೆದಿರುವ ಸಿನಿಮಾ ಕೂಡ ಇದೀಗ ಭಾರೀ ಲಾಭದ ಉದ್ಯಮವಾಗಿ ಬೆಳೆದಿದೆ. ಆದ್ದರಿಂದ ಇದೀಗ ಸಿನಿಮಾ ಜಗತ್ತು ಎಂದರೆ ಹಣದಿಂದ ತುಂಬಿ ತುಳುಕುತ್ತದೆ ಎನ್ನುವವರು ಸಾಕಷ್ಟಿದ್ದಾರೆ. ಕೆಲಸಕ್ಕೆ ತಕ್ಕ ಸಂಬಳ ಅಥವಾ ಸಂಭಾವನೆ ವಿಚಾರದಲ್ಲಿ ಬೇರೆ ಎಲ್ಲ ಕ್ಷೇತ್ರಕ್ಕಿಂತಲೂ ಸಿನಿಮಾ ಕ್ಷೇತ್ರ ಮುಂದಿದೆ. ಹಾಗಾದರೆ ಭಾರತದಲ್ಲಿ ಅತಿ ಹೆಚ್ಚು ಶ್ರೀಮಂತ ನಟರ ಆಸ್ತಿ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಭಾರತದ ಟಾಪ್-10 ಶ್ರೀಮಂತ ನಟರ ಪಟ್ಟಿ.. 

ಭಾರತೀಯ ನಟರಲ್ಲಿ ಶಾರುಖ್ ಖಾನ್ ಅತ್ಯಂತ ಶ್ರೀಮಂತ ನಟ. ಶಾರುಖ್ ಖಾನ್ ಅವರ ಆಸ್ತಿ ಸುಮಾರು 7,300 ಕೋಟಿ ಎಂದು ವರದಿಯಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಶಾರುಖ್ ಅವರಿಗೆ ಸೇರಿದ್ದು, ಐಪಿಎಲ್‌ನಲ್ಲಿನ ಪಾಲುದಾರಿಕೆಯೇ ಇವರ ಆಸ್ತಿ ಹೆಚ್ಚಾಗಲು ಮುಖ್ಯ ಕಾರಣವಾಗಿದೆ ಎಂದು ತಿಳಿದುಬಂದಿದೆ. ಇನ್ನು ಶಾರುಖ್ ಒಂದು ಸಿನಿಮಾಗೆ ಸುಮಾರು 250 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.

Latest Videos

ಇನ್ನು ಎರಡನೇ ಸ್ಥಾನದಲ್ಲಿ ಯಾರು ಇದ್ದಾರೆ ಎಂದು ತಿಳಿದರೆ ಸಿನಿಮಾ ಪ್ರೇಕ್ಷಕರು ಬೆಚ್ಚಿ ಬೀಳುತ್ತಾರೆ. ಬಾಲಿವುಡ್ ನಟರನ್ನು ಹಿಂದಿಕ್ಕಿ ದಕ್ಷಿಣ ಭಾರತದ ನಟ ಅಕ್ಕಿನೇನಿ ನಾಗಾರ್ಜುನ ಎರಡನೇ ಸ್ಥಾನದಲ್ಲಿದ್ದಾರೆ. ನಾಗಾರ್ಜುನ ಅವರ ಒಟ್ಟು ಆಸ್ತಿ 3,310 ಕೋಟಿ ರೂಪಾಯಿ. ದಕ್ಷಿಣ ಭಾರತದಲ್ಲಿ ಸಂಭಾವನೆಯ ವಿಷಯದಲ್ಲಿ ಇವರು ಮುಂದಿದ್ದಾರೆ ಎಂದು ವರದಿಯಾಗಿದೆ. ಅನೇಕ ನಟರಿಗೆ ಸಿನಿಮಾ ಮಾತ್ರವಲ್ಲದೆ ಜಾಹೀರಾತು ಮತ್ತು ಇತರ ವ್ಯವಹಾರಗಳಿಂದಲೂ ಆದಾಯ ಬರುತ್ತದೆ. ಭಾರತದಲ್ಲಿ ಸ್ವಂತ ನಿರ್ಮಾಣ ಸಂಸ್ಥೆ ಹೊಂದಿರುವ ಅನೇಕ ನಟರಿದ್ದಾರೆ.

ಇದನ್ನೂ ಓದಿ: 

ಶ್ರೀಮಂತ ನಟರ ಪಟ್ಟಿ (ಕೋಟಿ ರೂ.ಗಳಲ್ಲಿ)

  1. ಶಾರುಖ್ ಖಾನ್- 7300 ಕೋಟಿ
  2. ನಾಗಾರ್ಜುನ್ ಅಕ್ಕಿನೇನಿ- 3310 ಕೋಟಿ
  3. ಸಲ್ಮಾನ್ ಖಾನ್- 2900 ಕೋಟಿ
  4. ಅಕ್ಷಯ್ ಕುಮಾರ್- 2500 ಕೋಟಿ
  5. ಹೃತಿಕ್ ರೋಷನ್- 2000 ಕೋಟಿ
  6. ಆಮಿರ್ ಖಾನ್- 1862 ಕೋಟಿ
  7. ಅಮಿತಾಭ್ ಬಚ್ಚನ್- 1600 ಕೋಟಿ
  8. ರಾಮ್ ಚರಣ್- 1370 ಕೋಟಿ
  9. ಸೈಫ್ ಅಲಿ ಖಾನ್- 1200 ಕೋಟಿ
  10. ರಜನಿಕಾಂತ್- 450 ಕೋಟಿ

ಇದನ್ನೂ ಓದಿ: ಅವಳು ದೂರವಾದ ಮೇಲೆ ದೊಡ್ಡ ಕುಡುಕನಾಗಿದ್ದೆ, ಫುಲ್ ಬಾಟಲ್​ ಕುಡೀತಿದ್ದೆ: ಅಂದಿನ ದಿನ ನೆನೆದ ಆಮೀರ್​ ಖಾನ್​

ಕರ್ನಾಟಕದ ಯಾವೊಬ್ಬ ನಟರೂ ಕೂಡ ಭಾರತದ ಶ್ರೀಮಂತ ನಟರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಇದೀಗ ಕರ್ನಾಟಕದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿರುವ ಯಶ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್, ದರ್ಶನ್ ತೂಗುದೀಪ, ಶಿವರಾಜ್ ಕುಮಾರ್ ಇವರ ಪೈಕಿ ಯಾವ ನಟರು ಟಾಪ್-10 ಸ್ಥಾನಕ್ಕೆ ಏರಬಹುದು ಎಂಬ ನಿರೀಕ್ಷೆ ಹೆಚ್ಚಾಗಿವೆ.

vuukle one pixel image
click me!