ಬಾಲಿವುಡ್ ನಟರಾದ ಸನ್ನಿ ಲಿಯೋನ್ ಮತ್ತು ಸನ್ನಿ ಡಿಯೋಲ್ ಒಂದು ವೇಳೆ ಮದ್ವೆಯಾಗಿದ್ರೆ ಸನ್ನಿ ಲಿಯೋನ್ ಹೆಸರು ಏನಾಗ್ತಿತ್ತು ಎಂಬ ಬಗ್ಗೆ ನಕ್ಕುನಗಿಸುವ ಚರ್ಚೆ ಶುರುವಾಗಿದೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯ ವೇಳೆ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಹಾಗೂ ಖ್ಯಾತ ಆ್ಯಂಕರ್ ಅರ್ನಬ್ ಗೋಸ್ವಾಮಿ (Arnab Goswamy) ನಟರಾದ ಸನ್ನಿ ಲಿಯೋನ್ ಮತ್ತು ಸನ್ನಿ ಡಿಯೋಲ್ ನಡುವೆ ಕನ್ಫ್ಯೂಸ್ ಮಾಡಿಕೊಂಡು ಟ್ರೋಲ್ ಆಗಿದ್ದು ನೆನಪಿರಬಹುದು. ಲೋಕಸಭಾ ಚುನಾವಣೆಯ ಮತದಾನದ ಎಣಿಕೆ ಭರದಿಂದ ಸಾಗುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಸ್ಪಷ್ಟ ಬಹುಮತದತ್ತ ಸಾಗುತ್ತಿತ್ತು. ಆ ಸಮದಯಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್ನ ಗುರುದಾಸ್ಪುರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗಷ್ಟೇ ಬಾರ್ಡರ್ ಸಿನಿಮಾ ಖ್ಯಾತಿಯಲ್ಲಿದ್ದ ಸನ್ನಿ ಡಿಯೋಲ್ (Sunny Deol) ಆರಂಭಿಕ ಮತಗಳಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಕರ್ ಎದುರು ಮುನ್ನಡೆ ಗಳಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡುವ ಭರದಲ್ಲಿ ಆ್ಯಂಕರ್ ಅರ್ನಬ್ ಗೋಸ್ವಾಮಿ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಮುನ್ನಡೆಯಲ್ಲಿದ್ದಾರೆ ಎಂದು ಬಾಯಿತಪ್ಪಿ ಹೇಳಿದ್ದರು. ನಂತರ ಅವರು ಕೂಡಲೇ ಸಾರಿ ಸನ್ನಿ ಡಿಯೋಲ್ ಎಂದಿದ್ದರೂ ಟ್ರೋಲಿಗರಿಗೆ ಆಹಾರವಾಗಿದ್ದರು.
ಆ ಬಳಿಕ ಟ್ವಿಟರ್’ನಲ್ಲಿ ಮಾಜಿ ಪೋರ್ನ್ಸ್ಟಾರ್ ಸನ್ನಿ ಲಿಯೋನ್ (Sunny Leone) ಟ್ವಿಟರ್ನಲ್ಲಿ ಟ್ರೆಂಡ್ ಆಗಿದ್ದರು. ಅವರು ಕೂಡ ಇದಕ್ಕೆ ತಮಾಷೆ ಮಾಡಿ, ಎಷ್ಟು ಮತಗಳಿಂದ ನಾನು ಮುಂದಿದ್ದೇನೆ ಎಂದು ಪ್ರಶ್ನಿಸಿದ್ದರು! ಇದೀಗ ಇವರ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅದೇನೆಂದರೆ ಒಂದು ವೇಳೆ ಸನ್ನಿ ಲಿಯೋನ್ ಅವರು ನಟ ಸನ್ನಿ ಡಿಯೋಲ್ ಅವರನ್ನು ಮದುವೆಯಾದರೆ ಏನಾಗುತ್ತಿತ್ತು ಎನ್ನುವ ವಿಷಯ ಇಟ್ಟುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಲಾಗುತ್ತಿದೆ. ಇದಕ್ಕೆ ಥಹರೇವಾರಿ ಕಮೆಂಟ್ಗಳು ಬಂದಿವೆ. ಅಷ್ಟಕ್ಕೂ ಸದ್ಯ ಸನ್ನಿ ಡಿಯೋಲ್ ಮತ್ತು ಸನ್ನಿ ಲಿಯೋನ್ ಇಬ್ಬರಿಗೂ ಬೇರೆ ಮದುವೆಯಾಗಿದ್ದು, ಸುಖಿ ದಾಂಪತ್ಯವನ್ನು ನಡೆಸುತ್ತಿದ್ದಾರೆ ಎನ್ನಿ. ಮೊನ್ನೆಯಷ್ಟೇ ಸನ್ನಿ ಡಿಯೋಲ್ ಅವರ ಪುತ್ರ ಕರಣ್ ಡಿಯೋಲ್ ಅವರ ಮಗನ ಭರ್ಜರಿ ಮದುವೆಯ ವಿಡಿಯೋಗಳೂ ಸಕತ್ ವೈರಲ್ ಆಗಿದ್ದವು. ಅದೇ ಇನ್ನೊಂದೆಡೆ ನೀಲಿ ತಾರೆಯಾಗಿದ್ದ ಸನ್ನಿ ಲಿಯೋನ್ ಆ ವೃತ್ತಿ ಬಿಟ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.
ಮಗನ ಮದ್ವೆ ಖುಷಿಯಲ್ಲಿ ಹೀಗೆ ಡ್ಯಾನ್ಸ್ ಮಾಡೋದಾ ಸನ್ನಿ ಡಿಯೋಲ್? ಫ್ಯಾನ್ಸ್ ಫಿದಾ
ಇನ್ನು ಇಬ್ಬರೂ ಸನ್ನಿಗಳು ಮದುವೆಯಾದರೆ ಏನಾಗುತ್ತಿತ್ತು ಎನ್ನುವ ವಿಷಯಕ್ಕೆ ಬರುವುದಾದರೆ, ಇದಕ್ಕೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ಆದರೆ ಸಕತ್ ಟ್ರೆಂಡಿಂಗ್ನಲ್ಲಿರೋ ಕಮೆಂಟ್ ಎಂದರೆ, ಸನ್ನಿ ಲಿಯೋನ್ ಮದುವೆಯಾದ ಮೇಲೆ ಸಹಜವಾಗಿ ಸನ್ನಿ ಡಿಯೋಲ್ ಆಗುತ್ತಿದ್ದರು ಎನ್ನುವುದು. ಮದುವೆಯಾದ ಮೇಲೆ ಮಹಿಳೆಯರು ತಮ್ಮ ಪತಿಯ ಸರ್ನೇಮ್ ಇಟ್ಟುಕೊಳ್ಳುವುದು ಸಾಮಾನ್ಯ. ಹೀಗೇನಾದರೂ ಆಗಿದ್ದರೆ ಸನ್ನಿ ಲಿಯೋನ್ ಕೂಡ ಸನ್ನಿ ಡಿಯೋಲ್ ಆಗುತ್ತಿದ್ದರು. ಪತಿ-ಪತ್ನಿ ಇಬ್ಬರನ್ನೂ ಒಂದೇ ರೀತಿ ಕರೆಯಬೇಕಿತ್ತು. ಆಗ ಏನಾಗುತ್ತಿತ್ತು, ತುಂಬಾ ಮಜವಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಇನ್ನು, ಸನ್ನಿ ಡಿಯೋಲ್ ಅವರ ಪತ್ನಿಯ ಬಗ್ಗೆ ಹೇಳುವುದಾದರೆ, ಅವರ ಹೆಸರು ಲಿಂಡಾ ಡಿಯೋಲ್. ಅವರನ್ನು ಪೂಜಾ ಡಿಯೋಲ್ ಎಂದೂ ಕರೆಯಲಾಗುತ್ತದೆ. ಅವರು ಅರ್ಧ ಬ್ರಿಟನ್ ಮತ್ತು ಅರ್ಧ ಭಾರತೀಯ ಪ್ರಜೆ ಎನ್ನಲಾಗುತ್ತದೆ. ಇದಕ್ಕೆ ಕಾರಣ, ಅವರ ತಾಯಿ ಯುನೈಟೆಡ್ ಕಿಂಗ್‌ಡಮ್‌ನಿಂದ (United Kingdom) ಬಂದಾಗ ಅವರ ತಂದೆ ಭಾರತದ ಸ್ಥಳೀಯರಾಗಿದ್ದರು. ಪೂಜಾ ವೃತ್ತಿಯಲ್ಲಿ ಲೇಖಕಿಯಾಗಿದ್ದು, 'ಯಮ್ಲಾ ಪಾಗ್ಲಾ ದೀವಾನಾ' ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಮಾಧ್ಯಮಗಳ ಪ್ರಚಾರದಿಂದ ದೂರವೇ ಉಳಿಯುತ್ತಾರೆ. ಸನ್ನಿ ಲಿಯೋನ್ ಅವರ ಬಗ್ಗೆ ಹೇಳುವುದಾದರೆ ಇವರು ಡೇನಿಯಲ್ ವೆಬರ್ ಅವರನ್ನು ಮದುವೆಯಾಗಿದ್ದು, ನಿಶಾ, ನೋಹ್ ಮತ್ತು ಆಶರ್ ಎಂಬ ಮಕ್ಕಳನ್ನು ಹೊಂದಿದ್ದಾರೆ.
ಆಂಧ್ರದ ರಾಜಕೀಯದಲ್ಲಿ ಕೋಲಾಹಲ: ಪವನ್ ಕಲ್ಯಾಣ್-ರೋಜಾ ಮಧ್ಯೆ ಬಂದ ಸನ್ನಿ ಲಿಯೋನ್!