ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಮತ್ತೆ ಬೇಸರದ ಸುದ್ದಿ: ಬಹಿರಂಗ ಕ್ಷಮೆ ಕೇಳಿದ ಸಿನಿಮಾತಂಡ

Published : Jul 29, 2023, 05:31 PM IST
ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಮತ್ತೆ ಬೇಸರದ ಸುದ್ದಿ: ಬಹಿರಂಗ ಕ್ಷಮೆ ಕೇಳಿದ ಸಿನಿಮಾತಂಡ

ಸಾರಾಂಶ

ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಮತ್ತೆ ಬೇಸರದ ಸುದ್ದಿ ಹೊರಬಿದ್ದಿದೆ. ಅನುಷ್ಕಾರನ್ನು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿದಿದೆ. 

ಸೌತ್ ಸಿನಿಮಾರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಮತ್ತೆ ಬೇಸರದ ಸುದ್ದಿ ಹೊರಬಿದ್ದಿದೆ. ಅನುಷ್ಕಾ ಶೆಟ್ಟಿ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅನುಷ್ಕಾ ಅಭಿಮಾನಿಗಳ ಮುಂದೆ ಬಂದಿಲ್ಲ. ಸದ್ಯ ಬಾಹುಬಲಿ ಸುಂದರಿ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅನುಷ್ಕಾ ನಿವೀನ್ ಪೋಲಿಶೆಟ್ಟಿ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಟೀಸರ್ ಮತ್ತು ಪೋಸ್ಟರ್‌ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಸಿದ್ದ ಈ ಸಿನಿಮಾ ನೋಡಲು ಕಾತರರಾಗಿದ್ದರು. ಆದರೀಗ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. 

ಅಂದುಕೊಂಡಂತೆ ಆಗಿದ್ದರೆ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಆಗಸ್ಟ್ 4ರಂದು ರಿಲೀಸ್ ಆಗಬೇಕಿತ್ತು. ಆದರೀಗ ಮುಂದಕ್ಕೆ ಹೋಗಿದೆ. ಅನೇಕ ಸಮಯದ ಬಳಿಕ ಅನುಷ್ಕಾ ಶೆಟ್ಟಿಯನ್ನು ತೆರೆಮೇಲೆ ನೋಡಿ ಸಂಭ್ರಮಿಸಲು ಸಜ್ಜಾಗಿದ್ದ ಅಭಿಮಾನಿಗಳಿಗೆ ಇದು ಬೇಸರ ಮೂಡಿಸಿದೆ. ಆಗಸ್ಟ್ 4ಕ್ಕೆ ಸಿನಿಮಾ ರಿಲೀಸ್ ಆಗುತ್ತಿಲ್ಲ. ಇನ್ನೇನು ರಿಲೀಸ್‌ಗೆ ಎರಡು ವಾರಗಳು ಮಾತ್ರವಿತ್ತು. ಆದರೀಗ ದಿಢೀರ್ ಮುಂದೂಡಿತ್ತು ಅಚ್ಚರಿ ಮೂಡಿಸಿದೆ. 

ಸಿನಿಮಾ ರಿಲೀಸ್ ಮುಂದೂಡಲಾಗಿದೆ. ಆದರೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ರಿಲೀಸ್ ಡೇಟ್ ಬಹಿರಂಗ ಪಡಿಸಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದ ಸಿನಿಮಾ  ಮುಂದಕ್ಕೆ ಹೋಗಲು ಕಾರಣ ಪೋಸ್ಟ್ ಪ್ರೊಡಕ್ಷನ್ ಕೆಲಸ ತಡವಾಗುತ್ತಿರುವುದು ಎನ್ನಲಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ತಡವಾಗುತ್ತಿದ್ದ ಕಾರಣ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ ಎನ್ನುವ ಮಾತು ಕೇಳಿಬರುತ್ತಿದೆ. 

Anushka Shetty ಟ್ವಿಟರ್​ನಲ್ಲಿ ದಾಖಲೆಯ ಖುಷಿ ಹಂಚಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳಬಹುದಾ?

ಈ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬಹಿರಂಗ ಪಡಿಸಿದೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಆಗಸ್ಟ್ 4ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿನ ಕೆಲವು ವಿಳಂಬಗಳಿಂದಾಗಿ ಈ ಸಿನಿಮಾ ಬಿಡುಗಡೆಯನ್ನು ಮುಂದೂಡುತ್ತಿದ್ದೇವೆ. ಹೊಸ ರಿಲೀಸ್ ಡೇಟ್ ಮತ್ತು ಟ್ರೇಲರ್ ರಿಲೀಸ್ ಡೇಟ್ ಸದ್ಯದಲ್ಲೇ ತಿಳಿಸುತ್ತೇವೆ' ಎಂದು ಹೇಳಿದ್ದಾರೆ. ಜೊತೆಗೆ 'ಈ ಅನಿರೀಕ್ಷಿತ ವಿಳಂಬಕ್ಕಾಗಿ ನಾವು ನಮ್ಮ ಕ್ಷಮೆಯಾಚಿಸುತ್ತೇವೆ' ಎಂದು ಬಹಿರಂಗ ಕ್ಷಮೆ ಕೇಳಿದ್ದಾರೆ.

ಮೀ ಟೂ ಕಾರಣಕ್ಕೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಜೆಕ್ಟ್? ಏನಿದು ಅನುಷ್ಕಾ ಶೆಟ್ಟಿ ಬಗ್ಗೆ ಹೊಸ ಸುದ್ದಿ

ಅನುಷ್ಕಾ ಶೆಟ್ಟಿ ಕೊನೆಯದಾಗಿ ನಿಶಬ್ದಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಿಶಬ್ದಂ ಸಿನಿಮಾ 2020ರಲ್ಲಿ ರಿಲೀಸ್ ಆಗಿತ್ತು. ತಮಿಳು ಮತ್ತು ತೆಲುಗಿನಲ್ಲಿ ಆ ಸಿನಿಮಾ ಬಿಡುಗೆಯಾಗಿತ್ತು. ಆದರೆ ಆ ಸಿನಿಮಾ ಕೇಳಿಕೊಳ್ಳುವುಷ್ಟು ಸಕ್ಸಸ್ ಕಂಡಿಲ್ಲ. ಸಕ್ಸಸ್‌ಗಾಗಿ ಕಾಯುತ್ತಿರುವ ಅನುಷ್ಕಾ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಮೂಲಕ ಗೆಲುವಿನ ಟ್ಯ್ರಾಕ್ಗೆ ಮರಳುತ್ತಾರಾ ಎಂದು ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!