
ಬಾಲಿವುಡ್ ಸಿಂಪಲ್ ಹುಡುಗಿ ಆಲಿಯಾ ಭಟ್ ಜೀವನದಲ್ಲಿ 2022 ತುಂಬಾನೇ ಸ್ಪೆಷಲ್ ವರ್ಷ ಏಕೆಂದರೆ ಸೂಪರ್ ಹಿಟ್ ಸಿನಿಮಾ ರಿಲೀಸ್, ರಣಬೀರ್ ಕಪೂರ್ ಜೊತೆ ಮದುವೆ ಆನಂತರ ಮಗಳ ಎಂಟ್ರಿ. ಒಟ್ಟಿನಲ್ಲಿ ಈ ವರ್ಷ ತುಂಬಾನೇ ಬ್ಯುಸಿಯಾಗಿದ್ದ ಅಲಿಯಾ ಕಂಡು ಎಲ್ಲರೂ ಕೇಳಿದ್ದು ಒಂದೇ ಪ್ರಶ್ನೆ ಯಾಕಿಷ್ಟು ಬೇಗ ಎಂದು. ವೃತ್ತಿ ಜೀವನ ಪೀಕ್‌ನಲ್ಲಿದ್ದಾಗ ಇನ್ನು ಹೆಚ್ಚು ಕೆಲಸ ಮಾಡಬೇಕು ಸಂಪಾದನ ಮಾಡಬೇಕು ಅನ್ನೋದು ತಲೆಯಲ್ಲಿ ಕೂರುತ್ತದೆ ಆದರೆ ಆಲಿಯಾ ಈ ರೀತಿ ಯೋಚನೆ ಮಾಡಲಿಲ್ಲ. ಹೀಗಾಗಿ ಆಲಿಯಾ ನಿರ್ಧಾರ ಬಗ್ಗೆ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹೆಚ್ಚಿದೆ.....
'ಜೀವನದಲ್ಲಿ ಸರಿ ತಪ್ಪು ಅನ್ನೋದೇ ಇಲ್ಲ. ನನಗೆ ಅನ್ವಯ ಆಗುವುದು ಮತ್ತೊಬ್ಬರಿಗೆ ಅನ್ವಯ ಆಗಬೇಕು ಅಂತೇನಿಲ್ಲ. ಸದಾ ಮನಸ್ಸಿನ ಮಾತು ಕೇಳುವ ಹುಡುಗಿ ನಾನು ಹೀಗಾಗಿ ಜೀವನದಲ್ಲಿ ಏನೂ ಪ್ಲ್ಯಾನ್ ಮಾಡಲು ಆಗುವುದಿಲ್ಲ. ವಿಧಿಯೇ ಎಲ್ಲವೂ ಪ್ಲ್ಯಾನ್ ಮಾಡುತ್ತದೆ ನಾವು ಅದನ್ನು ಸುಮ್ಮನೆ ಫಾಲೋ ಮಾಡಬೇಕು ಅಷ್ಟೆ. ಸಿನಿಮಾ ಆಗಿರಲಿ ಅಥವಾ ಬೇರೆ ಯಾವ ಕೆಲಸವೇ ಆಗಿರಲಿ ನನ್ನ ಮನಸ್ಸು ನಿರ್ಧಾರ ತೆಗೆದುಕೊಳ್ಳಲು ಬಿಡುವೆ. ಹೌದು ನನ್ನ ವೃತ್ತಿ ಜೀವನ ಪೀಕ್‌ನಲ್ಲಿದ್ದಾಗ ನಾನು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆ ಅಲ್ಲದೆ ಮಗು ಮಾಡಿಕೊಂಡೆ. ಆದರೆ ಯಾರು ಹೇಳಿದ್ದು ಮದುವೆ ಮತ್ತು ಮಗು ಆದ ಮೇಲೆ ಹೆಣ್ಣುಮಕ್ಕಳ ವೃತ್ತಿ ಜೀವನ ಬದಲಾಗುತ್ತದೆ ಎಂದು? ಒಂದು ವೇಳೆ ಬದಲಾದರು ಆಗಲಿ ಬಿಡಿ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ನನ್ನ ಪ್ರಕಾರ ಜೀವನ ಅಂದ್ರೆ ಇದೇ. ಮಗು ಮಾಡಿಕೊಂಡ ವಿಚಾರದ ಬಗ್ಗೆ ನನಗೆ ಯಾವುದೇ ರೀತಿ regret ಇಲ್ಲ. ಇದೆಲ್ಲವೂ ನ್ಯಾಚುರಲ್ ಆಲೋಚನೆಗಳು. ನನ್ನ ಪ್ರಕಾರ ನನ್ನ ಜೀವನದಲ್ಲಿ ನಾನು ತೆಗೆದುಕೊಂಡಿರುವ ಬೆಸ್ಟ್ ನಿರ್ಧಾರಗಳಿವು. ಈಗ ಖುಷಿಯಾಗಿರುವಷ್ಟು ಅಂದು ಆಗಿರಲಿಲ್ಲ' ಎಂದು ಆಲಿಯಾ ಭಟ್ ಕೆಲವು ದಿನಗಳ ಹಿಂದೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ತಾಯಿ ಆದ ಮೇಲೆ ಪ್ರತಿ ಕ್ಷಣವೂ ಸುಂದರವಾಗಿದೆ ಹಾಗೂ ಅರ್ಥಪೂರ್ಣವಾಗಿದೆ. ಕಲಾವಿದೆಯಾಗಿ ನನ್ನ ಮೇಲೆ ನನಗೆ ನಂಬಿಕೆ ಇದೆ. ಶ್ರಮ ಪಟ್ಟು ಕೆಲಸ ಮಾಡಿದ್ದರೆ ಜನರು ಮೆಚ್ಚುತ್ತಾರೆ ಆಗ ಎಲ್ಲರೂ ನಿಮ್ಮ ಜೊತೆ ಕೈ ಜೋಡಿಸಿ ಕೆಲಸ ಮಾಡಲು ಮುಂದಾಗುತ್ತಾರೆ. ಆಗ ಬೇಡ ಅಂದರೂ ಕೈಯಲ್ಲಿ ಕೆಲಸವಿರುತ್ತದೆ. ಒಂದು ವೇಳೆ ಕೆಲಸವಿಲ್ಲ ಅಂದುಕೊಳ್ಳಿ..ಪರ್ವಾಗಿಲ್ಲ ಈ ರೀತಿ ಜೀವನವನ್ನೂ ಎಂಜಾಯ್ ಮಾಡಬೇಕು. ಇದು ನನ್ನ ಸಮಯವಲ್ಲ ಅಂದುಕೊಂಡು ಸುಮ್ಮನಾಗುವೆ. ಈ ವಿಚಾರಗಳ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ವ್ಯಕ್ತಿ ನಾನಲ್ಲ. ನನ್ನ ಕೆಲಸದ ಮೇಲೆ ನನಗೆ ಹೆಚ್ಚಿನ ಗೌರವವಿದೆ, ನನ್ನ ಜೀವನ ಮತ್ತು ಈ ಜೀವನದಲ್ಲಿ ಜೊತೆಗಿರುವ ವ್ಯಕ್ತಿಗಳ ಮೇಲೆ ಗೌರವವಿದೆ. ಕೆಲಸ ಮತ್ತು ಫ್ಯಾಮಿಲಿಯನ್ನು ಬ್ಯಾಲೆನ್ಸ್ ಮಾಡಬೇಕು. ದಯವಿಟ್ಟು ನಿಮ್ಮ ಮನಸ್ಸು ಹೇಳುವ ರೀತಿ ಸಾಗಿ' ಎಂದು ಆಲಿಯಾ ಹೇಳಿದ್ದಾರೆ.
Fitness Secrets: ಹೆರಿಗೆಯಾದ ಒಂದೂವರೆ ತಿಂಗಳಿಗೇ ತಲೆ ಕೆಳಗು ಮಾಡಿ ನಿಂತ್ಕೊಂಡ್ರು ಆಲಿಯಾ ಭಟ್
14 ಏಪ್ರಿಲ್ 2022ರಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುಂಬೈ ನಿವಾಸದಲ್ಲಿ ನಡೆದ ಮದುವೆ ಇದಾಗಿದ್ದು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದು. ಮದುವೆ ಆದ ಎರಡೇ ತಿಂಗಳಿಗೆ ತಾಯಿ ಆಗುತ್ತಿರುವ ವಿಚಾರವನ್ನು ಅನೌನ್ಸ್ ಮಾಡಿದ್ದರು. ನವೆಂಬರ್ 6, 2022ರಲ್ಲಿ ಹೆಣ್ಣು ಮಗುವನ್ನು ಬರ ಮಾಡಿಕೊಂಡರು. ನವೆಂಬರ್ 24ರಂದು ಮಗಳಿಗೆ Raha ಎಂದು ನಾಮಕರಣ ಮಾಡಿರುವುದಾಗಿ ಪೋಸ್ಟ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.