ರಿಷಬ್ ಪಂತ್ ನೋಡಲು ಆಸ್ಪತ್ರೆಗೆ ಧಾವಿಸಿದ ಅನಿಲ್ ಕಪೂರ್, ಅನುಪಮ್ ಖೇರ್; ಸ್ಟಾರ್ ನಟರು ಹೇಳಿದ್ದೇನು?

Published : Jan 01, 2023, 01:27 PM IST
ರಿಷಬ್ ಪಂತ್ ನೋಡಲು ಆಸ್ಪತ್ರೆಗೆ ಧಾವಿಸಿದ ಅನಿಲ್ ಕಪೂರ್, ಅನುಪಮ್ ಖೇರ್; ಸ್ಟಾರ್ ನಟರು ಹೇಳಿದ್ದೇನು?

ಸಾರಾಂಶ

ಅಪಘಾತದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಂಡಿಯಾ ಇಂಡಿಯಾ ಆಟಗಾರ ರಿಷಬ್ ಪಂತ್ ನೋಡಲು ಬಾಲಿವುಡ್ ಸ್ಟಾರ್ ಕಲಾವಿದರಾದ ಅನಿಲ್ ಕಪೂರ್ ಮತ್ತು ಅನುಪಪಮ್ ಖೇರ್ ಭೇಟಿ ನೀಡಿದ್ದರು.

ಭೀಕರ ಕಾರು ಅಪಘಾತದ ನಂತರ ಇಂಡಿಯಾ ಆಟಗಾರ ರಿಷಬ್ ಪಂತ್ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಷಬ್ ಪಂತ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಕ್ರಿಕೆಟ್ ದಿಗ್ಗಜರು, ಸಿನಿಮಾ ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಪಂತ್ ನೋಡಲು ಅನೇಕ ಮಂದಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಇದೀಗ ಪಂತ್ ಆರೋಗ್ಯ ವಿಚಾರಿಸಲು ಬಾಲಿವುಡ್ ಸ್ಟಾರ್‌ಗಳಾದ ಅನಿಲ್ ಕಪೂರ್ ಮತ್ತು ಅನುಪಮ್ ಖೇರ್ ಭೇಟಿ ನೀಡಿದ್ದಾರೆ. ಶನಿವಾರ (ಡಿಸೆಂಬರ್ 31)   ಡೆಹ್ರಾಡೂನ್‌ನ ಆಸ್ಪತ್ರೆಗೆ ತೆರಳಿದ ಬಾಲಿವುಡ್ ಕಲಾವಿದರು ಪಂತ್ ನೋಡಿ ಆರೋಗ್ಯ ವಿಚಾರಿಸಿದ್ದಾರೆ. 

ಪಂತ್ ತಾಯಿ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅನುಪಮ್ ಖೇರ್ ಸಾಮಾನ್ಯ ವ್ಯಕ್ತಿಗಳಾಗಿ ನಾವು ಪಂತ್ ನೋಡಲು ಬಂದಿರುವುದಾಗಿ ಹೇಳಿದ್ದಾರೆ. 'ರಿಷಬ್ ಪಂತ್ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದು ನಾನು ಮತ್ತು ಅನಿಲ್ ಇಬ್ಬರೂ ಸಾಮಾನ್ಯ ವ್ಯಕ್ತಿಗಳಾಗಿ ನೋಡಲು ಬಂದಿದ್ದೇವೆ. ನಾವು ಅವರ ತಾಯಿಯನ್ನು ಭೇಟಿ ಮಾಡಿದೆವು. ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಸ್ಪಿರಿಟ್ ಜಾಸ್ತಿ ಇದೆ. ಇಡೀ ಭಾರತೀಯ ಆಶೀರ್ವಾದ ಅವರ ಮೇಲಿದೆ. ಶೀಘ್ರದಲ್ಲೇ ಗುಣಮುಖರಾಗುತ್ತಾರೆ. ನಾವು ಅವರ ಸಂಬಂಧಿಕರನ್ನು ಭೇಟಿ ಮಾಡಿದೆವು. ಎಲ್ಲಾ ನಾರ್ಮಲ್ ಇದ್ದಾರೆ. ನಾವು ಅವನ್ನು ನಗೆಸಿದೆವು. ಅಭಿಮಾನಿಗಳಾಗಿ ನಾವು ಭೇಟಿ ಮಾಡಲು ಹೋಗಿದ್ದೆವು. ಜವಾಬ್ದಾರಿಯುತ ನಾಗರಿಕರಾದ ನಾವು ದಯವಿಟ್ಟು ಎಚ್ಚರಿಕೆಯಿಂದ ಚಾಲನೆ ಮಾಡಿ. ವಿಶೇಷವಾಗಿ ರಾತ್ರಿಯಲ್ಲಿ ಮಂಜು ಇರುತ್ತದೆ. ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು' ಎಂದು ಹೇಳಿದರು. 

ಗಾಯಾಳು ರಿಷಭ್ ಪಂತ್ ಹಣೆಗೆ ಪ್ಲಾಸ್ಟಿಕ್ ಸರ್ಜರಿ.!

ಬಳಿಕ ಅನಿಲ್ ಕಪೂರ್ ಮಾತನಾಡಿ, 'ಪಂತ್ ಸ್ಪಿರಿಟ್ ಹೈ ಇದೆ. ಚೇತರಿಸಿಕೊಳ್ಳುತ್ತಿದ್ದಾರೆ. ಅವರ ತಾಯಿ ಹಾಗೂ ಸಂಬಂಧಿಕರನ್ನು ಭೇಟಿ ಮಾಡಿದೆವು. ಎಲ್ಲರೂ ನಾರ್ಮಲ್ ಆಗಿದ್ದಾರೆ. ಯಾರೆ ಆಗಲಿ ಅವರಿಗಾಗಿ ಪ್ರಾರ್ಥಿಸಿ, ಬೇಗ ಚೇತರಿಸಿಕೊಂಡು ಮತ್ತೆ ಆಡುವುದನ್ನು ನಾವು ನೋಡುತ್ತೇವೆ' ಎಂದು ಹೇಳಿದರು. 

ರಿಷಭ್ ಪಂತ್ ಕಾಪಾಡಿದ ಡ್ರೈವರ್‌ ರಿಯಲ್ ಹೀರೋ ಎಂದು ಬಣ್ಣಿಸಿದ ವಿವಿಎಸ್ ಲಕ್ಷ್ಮಣ್‌..! ಟ್ವೀಟ್ ವೈರಲ್

ಇಂಡಿಯಾ ಆಟಗಾರ ರಿಷಬ್ ಪಂತ್ ದೆಹಲಿಯಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದ ರಭಸಕ್ಕೆ ಪಂತ್ ಇದ್ದ ಐಷಾರಾಮಿ ಕಾರು ಹೊತ್ತಿ ಉರಿದಿದ್ದು. ಪಂತ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಅಪಘಾತದ ತೀವ್ರತೆಗೆ ಪಂತ್ ಸಿಕ್ಕಾಪಟ್ಟೆ ಗಾಯಗೊಂಡಿದ್ದರು. ರಕ್ತ ಸುರಿಯುತ್ತಿತ್ತು. ಸ್ಥಳಿಯರ ಸಹಾಯ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. 

  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?