ಕತ್ರಿನಾ-ವಿಕ್ಕಿ ನಂತರ ರಾಜಸ್ಥಾನದಲ್ಲಿ ಕಿಯಾರಾ-ಸಿದ್ಧಾರ್ಥ್ ಮದುವೆ; ಫೆಬ್ರವರಿಯಲ್ಲಿ ಅದ್ದೂರಿ ವಿವಾಹ

By Shruthi Krishna  |  First Published Jan 1, 2023, 12:21 PM IST

ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅಡ್ವಾಣಿ ಈ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರುತ್ತಿದ್ದಾರೆ. 


ಬಾಲಿವುಡ್ ಮತ್ತೊಂದು ಅದ್ದೂರಿ ಮದುವೆಗೆ ಸಜ್ಜಾಗುತ್ತಿದೆ. ಹೊಸ ವರ್ಷ ಸ್ವಾಗತಿಸುತ್ತಿದ್ದಂತೆ ಮದುವೆ ಸುದ್ದಿ ಕೂಡ ಜೋರಾಗಿದೆ. ಬಾಲಿವುಡ್ ನ ಸ್ಟಾರ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅಡ್ವಾನಿ ಇಬ್ಬರೂ ದಾಂಪತ್ಯಕ್ಕೆ ಕಾಲಿಡಲು ತಯಾರಾಗಿದ್ದಾರೆ. ಅಂದಹಾಗೆ ಇಬ್ಬರೂ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇಬ್ಬರ ಪ್ರೀತಿಯ ವಿಚಾರ ಗುಟ್ಟಾಗಿ ಉಳಿದಿಲ್ಲ. ಹಾಗಂತ ಎಲ್ಲಿಯೂ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ಇದುವರೆಗೂ ಈ ಸ್ಟಾರ್ ಜೋಡಿ ಪ್ರೀತಿ, ಮದುವೆ ವಿಚಾರದ ಬಗ್ಗೆ ತುಟಿ ಬಿಚ್ಚಿಲ್ಲ. ಆದರೆ ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದು, ಪ್ರವಾಸಕ್ಕೆ ಹೋಗುವ ಮೂಲಕ ತಮ್ಮ ನಡುವೆ ಸ್ನೇಹಕ್ಕಿಂತ ಮಿಗಿಲಾದ ಬಂಧವಿದೆ ಎನ್ನುವುದನ್ನು ಹೇಳುತ್ತಿದ್ದರು. ಇದೀಗ ಇಬ್ಬರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇದೇ ವರ್ಷ ಹಸೆಮಣೆ ಏರುತ್ತಿದ್ದಾರೆ. ಮೂಲಗಳ ಪ್ರಕಾರ ಈ ಸ್ಟಾರ್ ಜೋಡಿಯ ಮದುವೆ ರಾಜಸ್ಥಾನದಲ್ಲಿ ನಡೆಯಲಿದೆಯಂತೆ. ಈಗಾಗಲೇ ಎಲ್ಲಾ ತಯಾರಿ ನಡೆದಿದ್ದು ರಾಜಸ್ಥಾನದ ಅರಮನೆ ಕೂಡ ಸಿದ್ಧವಾಗಿದೆ ಎನ್ನಲಾಗಿದೆ. ರಾಜಸ್ಥಾನದ ಪ್ರಸಿದ್ಧ ಜೈಸಲ್ಮೇರ್ ಅರಮನೆಯಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಮಾಹಿತಿ ಬಹಿರಂಗವಾಗಿದೆ. ಅಂದಹಾಗೆ ಬಾಲಿವುಡ್ ಮತ್ತೋರ್ವ ಸ್ಟೋರ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ರಾಜಸ್ಥಾನದಲ್ಲಿ ಮದುವೆಯಾಗಿದ್ದರು. 2021 ಡಿಸೆಂಬರ್ ನಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು. ಇದೀಗ ರಾಜಸ್ಥಾನದಲ್ಲಿ ಬಾಲಿವುಡ್‌ನ ಮತ್ತೊಂದು ಜೋಡಿಯ ಮದುವೆ ನಡೆಯುತ್ತಿರುವುದು ವಿಶೇಷ. 

ಮದುವೆ ವಿಚಾರ ಗುಟ್ಟಾಗಿ ಇಡೋದು ತುಂಬಾ ಕಷ್ಟ; ಕಿಯಾರಾ ಜೊತೆಗಿನ ವಿವಾಹದ ಬಗ್ಗೆ ಮೌನ ಮುರಿದ ಸಿದ್ಧಾರ್ಥ್

Tap to resize

Latest Videos

ಮದುವೆ ಯಾವಾಗ?

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಮದುವೆ ಫೆಬ್ರವರಿಯಲ್ಲಿ ನಡೆಯಲಿದೆ. ಫೆಬ್ರವರಿ 6ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫಬ್ರವರಿ 4ರಿಂದನೇ ಮದುವೆ ಸಮಾರಂಭ ಪ್ರಾರಂಭವಾಗಲಿದೆ. 4 ಮತ್ತು 5ಕ್ಕೆ ಸಂಗೀತ, ಮೆಹಂದಿ, ಹಳದಿ ಶಾಸ್ತ್ರಗಳು ನಡೆಯಲಿದೆ. 6ಕ್ಕೆ ಕಿಯಾರಾ ಕೊಗಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ ಸಿದ್ಧಾರ್ಥ್ ಎನ್ನುವ ಸುದ್ದಿ ಕೇಳಿಬಂದಿದೆ. ಆದರೆ ಈ ಬಗ್ಗೆ ಕಿಯಾರಾ-ಸಿದ್ಧಾರ್ಥ್ ಕಡೆಯಿಂದ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಅಂದಹಾಗೆ ಇಬ್ಬರ ಮದುವೆಗೆ ಬಾಲಿವುಡ್‌ ಸ್ಟಾರ್ ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ.  

ಸಿದ್ಧಾರ್ಥ್ ಮಲ್ಹೋತ್ರಾ 10 ವರ್ಷಗಳ ಸಿನಿ ಪಯಣದಲ್ಲಿ ನೀಡಿದ ಹಿಟ್‌ ಸಿನಿಮಾಗಳೆಷ್ಟು

ಸಿನಿಮಾಗಳು 

ಕಿಯಾರಾ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಕಿಯಾರಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಸದ್ಯ ರಾಮ್ ಚರಣ್ ಮತ್ತು ಶಂಕರ್ ಕಾಂಬಿನೇಷನ್ ನಲ್ಲಿ ಬರ್ತಿರುವ RC15(ತಾತ್ಕಾಲಿಕ ಹೆಸರು) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕಿಯಾರಾ ಕೊನೆಯದಾಗಿ ಗೋವಿಂದ ಮೇರಾ ನಾಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನು ಸಿದ್ಧಾರ್ಥ್ ವಿಚಾರಕ್ಕೆ ಬರುವುದಾದರೆ ಸದ್ಯ ಮಿಷನ್ ಮಜ್ನು ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ರಶ್ಮಿಕಾ ಮಂದಣ್ಣ ಜೊತೆ ತೆರೆಹಂಚಿಕೊಂಡಿದ್ದು ಸದ್ಯ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.  

   

click me!