ಹಲವಾರು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಬಾಲಿವುಡ್ ನಿರ್ದೇಶಕ ರಾಕೇಶ್ ರೋಷನ್, ಹೃತಿಕ್ ಅವರ ತಂದೆಗೆ ಹಿಂದಿಯೇ ಸರಿಯಾಗಿ ಬರುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಟ, ನಿರ್ಮಾಪಕ, ನಿರ್ದೇಶಕ ರಾಕೇಶ್ ರೋಷನ್ (Rakesh Roshan) ಹಲವಾರು ದಶಕಗಳಿಂದ ಚಲನಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಟನಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ರಾಕೇಶ್ ಅವರಿಗೆ ಈಗ 74 ವರ್ಷ ವಯಸ್ಸು. 1987 ರಲ್ಲಿ ಖುದ್ಗರ್ಜ್ ಚಲನಚಿತ್ರದ ನಿರ್ಮಾಣದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಾಕೇಶ್, ನಂತರ ಖೂನ್ ಭರಿ ಮಾಂಗ್, ಕಿಂಗ್ ಅಂಕಲ್, ಕೋಯಿ... ಮಿಲ್ ಗಯಾ, ಕಹೋ ನಾ... ಪ್ಯಾರ್ ಹೈ, ಕ್ರಿಶ್ ಮತ್ತು ಕ್ರಿಶ್ 3 ನಂತಹ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡಿದ್ದಾರೆ. ಈ ಕಾಲದ ಅತ್ಯಂತ ಜನಪ್ರಿಯ ಸೂಪರ್ ಸ್ಟಾರ್ ಹೃತಿಕ್ ರೋಷನ್ (Hrithik Roshan) ಅವರ ತಂದೆ ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯವೇ. ಕಳೆದ ಕೆಲ ವರ್ಷಗಳಿಂದ ರಾಕೇಶ್ ರೋಷನ್ ಅವರ ಬಹಳ ಸುದ್ದಿಯಲ್ಲಿ ಇದ್ದುದು ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎನ್ನುವ ವಿಷಯ ಬಹಿರಂಗಗೊಂಡಾಗ. ಈಗ ಅದು ನಿಯಂತ್ರಣದಲ್ಲಿದ್ದು ಡಯಾಗ್ನೈಸ್ ಗೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಬಹುಶಃ ಕೆಲವರಿಗೆ ಮಾತ್ರ ತಿಳಿದಿರಬಹುದು. ಬಾಲಿವುಡ್ನ ಸುಪ್ರಸಿದ್ಧ, ಖ್ಯಾತನಾಮ ನಿರ್ದೇಶಕರಲ್ಲಿ ಒಬ್ಬರು ಎನಿಸಿರುವ ರಾಕೇಶ್ ರೋಶನ್ ಅವರು ವಿಧಿಯನ್ನು (Destiny) ಬಹಳಷ್ಟು ನಂಬುತ್ತಾರೆ. ಇದಕ್ಕೆ ಕಾರಣ ಇಲ್ಲಿಯವರೆಗೆ ನಿರ್ದೇಶಿಸಿದ ಬಹುತೇಕ ಚಲನಚಿತ್ರಗಳು 'ಕೆ' ಅಕ್ಷರದಿಂದ ಪ್ರಾರಂಭವಾಗುತ್ತವೆ ಎನ್ನುವುದು.
ಆದರೆ ಇದೀಗ ಅವರು ಸುದ್ದಿಯಲ್ಲಿ ಇರುವುದು ಇವರ ವಿದ್ಯಾಭ್ಯಾಸದ ಕುರಿತು ಹೇಳಿಕೊಂಡಾಗ. ಶಾಲೆಯಲ್ಲಿ ಕಲಿತ ವಿದ್ಯಾಭ್ಯಾಸಕ್ಕೂ ಜೀವನದಲ್ಲಿ ಕಲಿಯುವ ಅಧ್ಯಯನಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎನ್ನುವುದು ಎಷ್ಟು ಸತ್ಯವೋ, ಶಾಲೆಯಿಂದ ಡ್ರಾಪ್ಔಟ್ ಆದ ಮಂದಿಯೇ ಇಂದು ಖ್ಯಾತನಾಮರಾಗಿದ್ದಾರೆ, ದೊಡ್ಡದೊಡ್ಡ ಉದ್ಯಮಿಗಳಾಗಿದ್ದು 3-4 ಡಿಗ್ರಿ ಪಡೆದವರನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ. ನಮ್ಮ ಶಿಕ್ಷಣ ಪದ್ಧತಿ ಹೀಗಿದ್ದರೂ ಎಲ್ಲರೂ ಕೇಳುವುದು ವಿದ್ಯಾಭ್ಯಾಸದ ಕುರಿತೇ.
Hrithik Roshan: ಡಿವೋರ್ಸ್ ಬಳಿಕ 'ಚಳಿಗಾಲದ ಪ್ರೇಯಸಿ' ಜೊತೆ ಕಂಗನಾ ಎಕ್ಸ್! ಜ್ಯೋತಿಷಿ ಮಾತು ನಿಜವಾಗತ್ತಾ?
ಅದೇ ಮಾತೀಗ ರಾಕೇಶ್ ರೋಷನ್ ಅವರಿಗೂ ಅನ್ವಯ ಆಗಿದ್ದು, ಅವರು ತಮಗೆ ತಮಗೆ ಯಾವುದೇ ವಿಶೇಷ ವಿದ್ಯಾರ್ಹತೆಗಳಿಲ್ಲ. ಏಕೆಂದರೆ, ನಾನು ಶಾಲೆಗೆ ಹೋಗಿ ಕಲಿತಿಲ್ಲ ಎಂದು ಹೇಳಿಕೊಂಡಿದ್ದಾರೆ. 'ಶಿಕ್ಷಣದ (Education) ವಿಷಯದಲ್ಲಿ ಹೇಳುವುದಾದರೆ ನಾನು ಸಂಪೂರ್ಣವಾಗಿ ಅವಿದ್ಯಾವಂತ. ಅಷ್ಟೇ ಏಕೆ ಬಾಲಿವುಡ್ನ ನಿರ್ದೇಶಕನಾಗಿದ್ದರೂ ನನಗೆ ಇಂಗ್ಲಿಷ್ ಅಷ್ಟೇ ಅಲ್ಲ ಹಿಂದಿ ಕೂಡ ಚೆನ್ನಾಗಿ ಬರುವುದಿಲ್ಲ ಎಂದಿದ್ದಾರೆ. ನನ್ನ ಬಹುಪಾಲು ಸಮಯವನ್ನು ಸಿನಿಮಾಗಳನ್ನು ನೋಡುವುದರಲ್ಲಿ ಕಳೆಯುತ್ತಿದ್ದೆ. ಚಿತ್ರಮಂದಿರಗಳಲ್ಲಿಯೇ ನನ್ನ ದಿನ ಹೋಗುತ್ತಿತ್ತು. ಆದ್ದರಿಂದ ಶಾಲೆಯ ಶಿಕ್ಷಣ ತಲೆಗೆ ಹತ್ತಲೇ ಇಲ್ಲ ಎಂದಿದ್ದಾರೆ.
ರಾಕೇಶ್ ರೋಷನ್ ಅವರು ಚಿತ್ರರಂಗಕ್ಕೆ (Cinema) ಅವರದ್ದೇ ಆದ ಬಹುದೊಡ್ಡ ಕೊಡಗೆ ನೀಡಿದ್ದರೂ, ಕೆಲವರ ಬಾಯಲ್ಲಿ ಇವರೊಬ್ಬ ದಂತಕಥೆ ಎಂದು ಎನಿಸಿಕೊಳ್ಳುತ್ತಿದ್ದರೂ ಉನ್ನತ ಮಟ್ಟದ ಚರ್ಚೆಗಳಲ್ಲಿ ಈ ಜಾಗಕ್ಕೆ ತಮ್ಮನ್ನು ಕುಳ್ಳರಿಸಿರುವುದರ ಕುರಿತು ರಾಕೇಶ್ ಅವರು ಹೆಚ್ಚಿಗೆ ತಲೆಕೆಡಿಸಿಕೊಂಡಿಲ್ಲ. ರಾಕೇಶ್ ಪ್ರತಿ ಬಾರಿ ಹೇಗೆ ಹೊಸ ಪರಿಕಲ್ಪನೆಯೊಂದಿಗೆ ಸಿನಿಮಾ ಮಾಡುತ್ತಾರೆ ಎಂಬ ಮಾತಿದ್ದರೂ ಲೆಜೆಂಡರಿ ಸ್ಥಾನದವರ ಹೆಸರು ಹೇಳುವಾಗ ಇವರ ಹೆಸರು ಅಷ್ಟಾಗಿ ಏಕೆ ಕೇಳಿಬರುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಅವರು, ಸಿನಿಮಾರಂಗದ ಬಗ್ಗೆ ಮಾತನಾಡುವಾಗ ಬಾಲಿವುಡ್ನವರು ನನ್ನ ಬಗ್ಗೆ ಮಾತನಾಡದಿರಬಹುದು. ಅದರ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಏಕೆಂದರೆ, ಜನರಿಗೆ ನನ್ನ ಬಗ್ಗೆ ತಿಳಿದಿದೆ, ನಾನು ಅವರಿಗೆ ಹತ್ತಿರವಾಗಿದ್ದೇನೆ. ಅದೇ ನನಗೆ ಖುಷಿ ಎಂದಿದ್ದಾರೆ. ನನಗೆ ಹೊಸ ಹೊಸ ಕಲ್ಪನೆಗಳು ಹೇಗೆ ಬರುತ್ತವೆ ಎಂದು ನನಗೆ ತಿಳಿದಿಲ್ಲ. ಕೆಲವೊಮ್ಮೆ, ನನ್ನ ಹಳೆಯ ಚಿತ್ರಗಳನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ, ‘ನಾನು ಇದನ್ನು ಹೇಗೆ ಯೋಚಿಸಿದೆ, ನಾನು ಇದನ್ನು ಹೇಗೆ ಗ್ರಹಿಸಿದೆ? ಎಂದು ಆಲೋಚಿಸುತ್ತಿರುತ್ತೇನೆ ಎಂದಿದ್ದಾರೆ.
ಆಸ್ಕರ್ ಅವಾರ್ಡ್ಗೆ ನಾಮನಿರ್ದೇಶನಗೊಂಡ 'ಚಂಪಾರಣ್ ಮಟನ್'! ಪತ್ನಿಗಾಗಿ ಸವಾಲು ಸ್ವೀಕರಿಸಿದವನ ಕಥೆ..