ಪ್ರೇಮಿಯ ಮಗುವಿನ ಜತೆ ಮಾಜಿ ಪತಿ ಮಗಳ ನಿಶ್ಚಿತಾರ್ಥದಲ್ಲಿ ನಟಿ ಕಲ್ಕಿ! ಕನ್​ಫ್ಯೂಸ್​ ಆಗ್ತಿದೆ ಎಂದ ಫ್ಯಾನ್ಸ್​

Published : Aug 04, 2023, 12:30 PM IST
ಪ್ರೇಮಿಯ ಮಗುವಿನ ಜತೆ ಮಾಜಿ ಪತಿ ಮಗಳ ನಿಶ್ಚಿತಾರ್ಥದಲ್ಲಿ ನಟಿ ಕಲ್ಕಿ! ಕನ್​ಫ್ಯೂಸ್​ ಆಗ್ತಿದೆ ಎಂದ ಫ್ಯಾನ್ಸ್​

ಸಾರಾಂಶ

ಪ್ರೇಮಿಯ ಮಗುವಿನ ಜತೆ ಮಾಜಿ ಪತಿಯ ಮಗಳ ನಿಶ್ಚಿತಾರ್ಥದಲ್ಲಿ ನಟಿ ಕಲ್ಕಿ ಕಾಣಿಸಿಕೊಂಡಿದ್ದಾರೆ. ಇದರಿಂದ ಫ್ಯಾನ್ಸ್​ ಕನ್​ಫ್ಯೂಸ್​ ಆಗ್ತಿದೆ ಅಂತಿದ್ದಾರೆ.  

ಕೆಲ ನಟ-ನಟಿಯರ ಬದುಕೇ ವಿಚಿತ್ರ. ಯಾರದ್ದೋ ಪತಿ, ಇನ್ನಾರದ್ದೋ ಮಗು, ಮದ್ವೆಯಾಗದೇ ಮಗು, ಮದ್ವೆಯಾಗಿದ್ದರೂ ಅವರ ಜೊತೆ ಸಂಬಂಧ... ಹೀಗೆ ಏನೇನೋ ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಸಾಮಾನ್ಯ ಜನರ ಜೀವನದಲ್ಲಿಯೂ ಇಂಥ ಘಟನೆಗಳು ನಡೆಯುವುದೇ ಇಲ್ಲವೇನೆಂದಿಲ್ಲ. ಆದರೆ ಸೆಲೆಬ್ರಿಟಿಗಳ ಲೈಫ್​ನಲ್ಲಿ ಇಂಥ ಘಟನೆಗಳು ನಡೆದಾಗ ಅವರು ಸಾರ್ವಜನಿಕಗೊಳ್ಳುತ್ತವೆಯಷ್ಟೇ. ಅಂಥದ್ದರಲ್ಲಿ ಒಬ್ಬರು ಬಾಲಿವುಡ್‌ ನಟಿ ಮತ್ತು ಲೇಖಕಿ ಕಲ್ಕಿ ಕೊಚ್ಲಿನ್. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್‌ ಮಾಜಿ ಪತ್ನಿಯಾಗಿರುವ ಕಲ್ಕಿ (Kalki Koechlin ), ಈಗ ಇಸ್ರೇಲ್‌ನ ಗಾಯಕ ಗಯ್‌ ಹರ್ಶ್‌ಬರ್ಗ್‌ ಅವರೊಂದಿಗೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ತಮ್ಮ ಬಾಯ್​ಫ್ರೆಂಡ್​ನಿಂದ ಮಗುವನ್ನೂ ಪಡೆದಿರುವ ನಟಿ ಈಗ ಸದ್ದು ಮಾಡುತ್ತಿರುವುದು ಮಾಜಿ ಪತಿಯ ಮಗಳ ಮದುವೆಯ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ.
 
 ಅನುರಾಗ್‌ ಕಶ್ಯಪ್‌ ಅವರು 1997ರಲ್ಲಿ ಆರತಿ ಬಜಾಜ್‌ ಜೊತೆ ಮದುವೆ ಆಗಿದ್ದರು. ಆದರೆ, 2009ರಲ್ಲಿ ಈ ದಂಪತಿ ವಿಚ್ಛೇದನ ಪಡೆದುಕೊಂಡರು. ಆನಂತರ ಎರಡು ವರ್ಷ ಒಂಟಿಯಾಗಿದ್ದ ಅನುರಾಗ್, 2011ರಲ್ಲಿ ನಟಿ ಕಲ್ಕಿ ಕೊಚ್ಲಿನ್ ಜೊತೆ ಮದುವೆಯಾದರು. ಆದರೆ, ಆ ಮದುವೆ ಕೂಡ ಬಹಳ ದಿನ ಉಳಿಯಲಿಲ್ಲ. 2015ರಲ್ಲಿ ವಿಚ್ಛೇದನ ಪಡೆದುಕೊಂಡರು. ಆ ಬಳಿಕ  ಗಯ್‌ ಹೆರ್ಷ್‌ಬರ್ಗ್‌ (Guy Hershberg) ಜೊತೆ ಕಲ್ಕಿ ಡೇಟಿಂಗ್ ಮಾಡಲು ಶುರು ಮಾಡಿದರು. ತಮ್ಮ ವಿಶೇಷ ಲವ್​ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದ ಕಲ್ಕಿ ಅವರು, ನನಗಾಗಿ ಆತ ಇಸ್ರೇಲ್‌ನಿಂದ ಕೆಜಿಗಟ್ಟಲೆ ಕಿತ್ತಳೆ ಮತ್ತು ಅವಕಾಡೊ ಹಣ್ಣುಗಳನ್ನು ತರುತ್ತಿದ್ದ. ನಾನು ಆತನಿಗೆ ಭಾರತದಿಂದ ತೆಂಗಿನಕಾಯಿಗಳನ್ನು ಕಳಿಸುತ್ತಿದ್ದೆ. ಕೆಲವು ವರ್ಷಗಳ ಕಾಲ ನಡೆದ ಈ ಮುಂಬಯಿ ಟು ಜೆರುಸಲೇಮ್‌ ಪ್ರಯಾಣದಿಂದ ಕ್ರಮೇಣ ನಮ್ಮಿಬ್ಬರಲ್ಲಿ ಪ್ರೀತಿ ಚಿಗುರೊಡೆಯಿತು. ನಂತರ ಇಬ್ಬರೂ ಜೊತೆಯಾದೆವು ಎಂದಿದ್ದರು.

ಗುಟ್ಟಾಗಿ ಮದ್ವೆಯಾದ್ರಂತೆ ನಟಿ ರಶ್ಮಿಕಾ ಮಂದಣ್ಣ! ಹುಡುಗನ ಬಗ್ಗೆ ರಿವೀಲ್​ ಮಾಡಿದ ನಟಿ

ಇವರಿಬ್ಬರೂ ಇದುವರೆಗೂ ಮದುವೆಯಾಗಿಲ್ಲ. 2020 ರಲ್ಲಿ ನಟಿ ಕಲ್ಕಿ ಕೋಚ್ಲಿನ್ ಮದುವೆಯಾಗದೇ ಗರ್ಭಿಣಿಯಾದರು. ಮತ್ತು ಅವರ ಗೆಳೆಯ ಗೈ ಹರ್ಶ್‌ಬರ್ಗ್ ಅವರ ಮಗಳು ಸಫೊ (Sappho )ಅವರನ್ನು ಸ್ವಾಗತಿಸಿದರು. ನಟಿ ವಿವಾಹವಿಲ್ಲದೆ ಮಗುವನ್ನು ಹೊಂದಿದ್ದಕ್ಕಾಗಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದರು.  ತನ್ನ ಮಗುವಿನ ದಾಖಲಾತಿ, ಅಧಿಕಾರಶಾಹಿ ಮತ್ತು ಶಾಲಾ ನೋಂದಣಿಗೆ ಅಗತ್ಯವಿದ್ದಲ್ಲಿ ಖಂಡಿತವಾಗಿಯೂ ಮದುವೆಯಾಗಲು ಯೋಚಿಸುತ್ತೇನೆ. ಆದರೆ. ಒಟ್ಟಿಗೆ ಬದುಕಲು ಮದುವೆ ಅಗತ್ಯವೆಂದು ಯಾವತ್ತೂ ಯೋಚಿಸಿಲ್ಲವೆನ್ನುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು. ಬಾಯ್​ಫ್ರೆಂಡ್​ ಜೊತೆ ಸುಖವಾಗಿ ಬಾಳುತ್ತಿದ್ದಾರೆ ನಟಿ.

ಇದರ ನಡುವೆಯೇ,  ಅನುರಾಗ್ ಕಶ್ಯಪ್‌ ವಿರುದ್ಧ ನಟಿ ಪಾಯಲ್‌ ಘೋಷ್‌  ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಐದು ವರ್ಷಗಳ ಹಿಂದೆ ಅನುರಾಗ್ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು. ಆಗ ಮಾಜಿ ಪತಿಯ ಬೆನ್ನಿಗೆ ನಿಂತಿದ್ದರು ಕಲ್ಕಿ.  ಇದೀಗ  ಮಾಜಿ ಪತಿ ಅನುರಾಗ್​ ಕಶ್ಯಪ್​ ಅವರ ಮಗಳು ಆಲಿಯಾ (Aaliyah) ಮದುವೆ ನಿಶ್ಚಿತಾರ್ಥದಲ್ಲಿ ಕಲ್ಕಿ ತಮ್ಮ ಪುಟ್ಟ ಮಗಳ ಜೊತೆ ಕಾಣಿಸಿಕೊಂಡಿದ್ದು, ಸಕತ್​ ವೈರಲ್​ ಆಗಿದೆ. ಖುಷಿಯಿಂದಲೇ ಕಲ್ಕಿ ಈ ಸಮಾರಂಭದಲ್ಲಿ ಹಾಜರಾಗಿದ್ದಾರೆ. ಇದನ್ನು ನೋಡಿ ಕನ್​ಫ್ಯೂಸ್​ ಆಗ್ತಿದೆ ಅಂತಿದ್ದಾರೆ ಫ್ಯಾನ್ಸ್​. ಇನ್ನು ಕೆಲವರು ಮಗುವಿನ ಜೊತೆ ವಾಟರ್​ ಬಾಟಲಿ ಕೂಡ ಇದ್ದದ್ದು ಕಂಡು ಸೋ ಕೇರಿಂಗ್​ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

Padma Lakshmi: 50ರ ವಯಸ್ಸಲ್ಲಿ ದೇಹ ಪ್ರದರ್ಶಿಸಿ ಪ್ರಖ್ಯಾತಿ ಗಳಿಸಿದ ನಟಿ: ಕೊನೆಗೂ ಕನಸು ನನಸಾಯ್ತು!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?