ಪಠಾಣ್​, ಬಾಹುಬಲಿ2 ದಾಖಲೆ ಮುರಿಯಲಿವೆ Hrithik Roshan ಚಿತ್ರಗಳು!

By Suvarna NewsFirst Published Apr 3, 2023, 2:44 PM IST
Highlights

ನಟ ಹೃತಿಕ್​ ರೋಷನ್​ ಇದಾಗಲೇ ಹಲವಾರು ಚಿತ್ರಗಳಿಗೆ ಸಹಿ ಹಾಕಿದ್ದು, ಅವರ ಮುಂಬರುವ ಕೆಲವು ಚಿತ್ರಗಳು ಬ್ಲಾಕ್​ಬಸ್ಟರ್​ ಆಗಲಿವೆ ಎಂದು ಅಂದಾಜು ಮಾಡಲಾಗಿದೆ. ಅವು ಯಾವುವು?
 

ಡೇಟಿಂಗ್​, ಮದ್ವೆ ಸುದ್ದಿಯಿಂದ ಸದ್ದು ಮಾಡುತ್ತಿರುವ ನಟರ ಪೈಕಿ  ಹೃತಿಕ್​ ರೋಷನ್​ ಒಬ್ಬರು. ಇವರ ಮತ್ತು ಕಂಗನಾ ರಣಾವತ್​ (Kangana Ranaut) ಮತ್ತು ಅವರ ನಡುವಿನ ಲವ್​ ಸ್ಟೋರಿ ಚಿತ್ರಪ್ರಿಯರಿಗೆ ಹೊಸತೇನಲ್ಲ. ಮದುವೆಯಾದ ಮೇಲೂ ಹೃತಿಕ್​ ರೋಷನ್​ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿ ಸೂಸೇನ್​ ಖಾನ್​ ಅವರನ್ನು  ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್​ ರೋಷನ್​ (Hruthik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್​ ರೋಷನ್​ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು. ನಟ ಹೃತಿಕ್​ ರೋಷನ್​ ಮತ್ತು ನಟಿ ಕಂಗನಾ ರಣಾವತ್​  ನಡುವೆ ನಂತರ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಕಿತ್ತಾಟದ ಬಳಿಕವಷ್ಟೇ ಇವರಿಬ್ಬರೂ  ಡೇಟಿಂಗ್​ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು.  

ಇದಾದ ಬಳಿಕ ಹೃತಿಕ್​ ಅವರು ಪತ್ನಿ  ಸುಸೇನ್ ಖಾನ್ (Susen Khan) ಅವರ ಜೊತೆಯೂ ನಿಲ್ಲಲಿಲ್ಲ. ಅವರಿಗೆ ವಿಚ್ಛೇದನ ನೀಡಿದರು.  ಮದುವೆಯಾಗಿ ಸುಮಾರು 14 ವರ್ಷಗಳ ಬಳಿಕ 2014 ರಲ್ಲಿ ಬಾಲಿವುಡ್​ನ ಕ್ಯೂಟ್​ ಜೋಡಿ ಎನಿಸಿಕೊಂಡಿದ್ದ ಈ ಜೋಡಿ ದೂರವಾಗುವುದಾಗಿ ಘೋಷಿಸಿದರು. ಈ ಜೋಡಿಯ ವಿಚ್ಛೇದನಕ್ಕೆ 4 ವರ್ಷಗಳು ಬೇಕಾಯಿತು. ಈ ಜೋಡಿ ಬೇರ್ಪಡುವ ಬಗ್ಗೆ ಬಹಳ ಸುದ್ದಿಯಾಯಿತು. ಇದಾದ ಬಳಿಕ ಹೃತಿಕ್​ ಮತ್ತು ಸಬಾ ಖಾನ್​ ಅವರ ಡೇಟಿಂಗ್​ ವಿಷಯ ಹೊರಬಂತು. ಇದೀಗ ಅವರಿಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಲಾಗುತ್ತಿದೆ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಈ ವರ್ಷದ ಅಂತ್ಯದ ವೇಳೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಇವರ ಮದುವೆಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸುದ್ದಿ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.

Latest Videos

ಡಾನ್ಸ್​, ಆ್ಯಕ್ಷನ್​ ಸೀನ್​ ಮಾಡಿದ್ರೆ ಹೃತಿಕ್‌ ಜೀವಕ್ಕೆ ಅಪಾಯ ಎಂದಿದ್ರಂತೆ ಡಾಕ್ಟರ್!

ಅದೇನೇ ಇದ್ದರೂ ಸದ್ಯ, ಹೃತಿಕ್​ ರೋಷನ್​ ಹಿಟ್​ ಚಿತ್ರಗಳನ್ನು ಕೊಡುವುದನ್ನು ಮುಂದುವರೆಸಿದ್ದಾರೆ.  ನಟನ  ಹಲವಾರು ಚಿತ್ರಗಳು ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿವೆ.  ಇಂದು, ಈ ವಿಶೇಷ ವರದಿಯಲ್ಲಿ,  ಹೃತಿಕ್ ರೋಷನ್ ಅವರ ಆ ಚಿತ್ರಗಳ ಬಗ್ಗೆ ಹೇಳಲಿದ್ದೇವೆ,  ವಿಕ್ರಮ್ ವೇದಾ ಜೊತೆಗಿನ ಹೃತಿಕ್ ರೋಷನ್ ಅವರ ಕೊನೆಯ ಚಿತ್ರವು ಫ್ಲಾಪ್ ಎಂದು ಸಾಬೀತಾಯಿತು. ಆದರೆ ಈಗ ಹೃತಿಕ್ ರೋಷನ್ ಅವರ ಮುಂಬರುವ ಚಿತ್ರಗಳ ಬಗ್ಗೆ ಅವರ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಪಠಾಣ್​ ಮತ್ತು ಬಾಹುಬಲಿ-2 ದಾಖಲೆಯನ್ನು ಈ ಚಿತ್ರಗಳು ಮುರಿಯಲಿವೆ ಎಂಬ ಆಸೆ ಹೊಂದಿದ್ದಾರೆ. ಹಾಗಾದರೆ ಹೃತಿಕ್ ರೋಷನ್ ಅವರ ಯಾವ ಚಿತ್ರಗಳು ರಾಕ್ ಮಾಡಲಿವೆ ಎಂದು ನೋಡೋಣ.

ವಾರ್​ 2 (War -2), ಫೈಟರ್​ 
ಹೃತಿಕ್ ರೋಷನ್ ಟೈಗರ್ ಶ್ರಾಫ್ ಸಿನಿಮಾ 'ವಾರ್' ಭರ್ಜರಿ ಚರ್ಚೆಯಲ್ಲಿತ್ತು. ವರದಿಗಳ ಪ್ರಕಾರ, ನಿರ್ಮಾಪಕರು ಈ ಚಿತ್ರದ ಎರಡನೇ ಭಾಗವನ್ನು ತರಲು ತಯಾರಿ ನಡೆಸುತ್ತಿದ್ದಾರೆ. ಇನ್ನು ಫೈಟರ್​ (Fighther) ಚಿತ್ರ.  ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ವರದಿಗಳ ಪ್ರಕಾರ, ಈ ಚಿತ್ರ 2023 ರಲ್ಲಿಯೇ ಬಿಡುಗಡೆಯಾಗಲಿದೆ. 
 
ರಾಮಾಯಣ (Ramayan), ಸತರಂಗಿ 
ರಾಮಾಯಣ ಚಿತ್ರ ಬಹಳ ಚರ್ಚೆಯಾಗಿದೆ. ವರದಿಗಳ ಪ್ರಕಾರ, ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಕಾಣಿಸಿಕೊಳ್ಳಬಹುದು. ಮಾಹಿತಿಗಾಗಿ, ಇದು ಬಿಗ್ ಬಜೆಟ್ ಚಿತ್ರವಾಗಲಿದೆ ಎಂದು ಹೇಳೋಣ. ಇನ್ನು ಸತರಂಗಿ ಚಿತ್ರ (Satarangi). ಇದರ ಅರ್ಥ ಕಾಮನಬಿಲ್ಲು. ಈ  ಚಿತ್ರದೊಂದಿಗೆ ಹೃತಿಕ್ ರೋಷನ್ ಹೆಸರು ತಳುಕು ಹಾಕಿಕೊಂಡಿತ್ತು. ಈ ಚಿತ್ರದ ಬಗ್ಗೆ ಹಲವು ಸುದ್ದಿಗಳೂ ಹೊರಬಿದ್ದವು. ಮಾಧ್ಯಮ ವರದಿಗಳ ಪ್ರಕಾರ, ಹೃತಿಕ್ ರೋಷನ್ ಚಿತ್ರದ ಕೆಲಸಗಳು ಇನ್ನೂ ನಡೆಯುತ್ತಿವೆ.

ಕಂಗನಾ, ಹೃತಿಕ್​ ರೋಷನ್​ ಲವ್​ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್​ ಮಸ್ಕ್​ ಟ್ವೀಟ್​!

ಕ್ರಿಶ್ 4 (Krish 4)
ಹೃತಿಕ್ ರೋಷನ್ ಅವರ ಚಿತ್ರ ಬಹಳ ದಿನಗಳಿಂದ ಕಾಯುತ್ತಿದೆ. ಹೃತಿಕ್ ರೋಷನ್ ಈ ಚಿತ್ರವನ್ನು ಬಹಳ ಹಿಂದೆಯೇ ಘೋಷಿಸಿದ್ದಾರೆ. ಇದಲ್ಲದೇ, ಹೃತಿಕ್ ರೋಷನ್ ಮತ್ತು ಸಾಜಿದ್ ಖಾನ್ ಕೂಡ ಚಿತ್ರವೊಂದಕ್ಕೆ ಕೈ ಜೋಡಿಸಿದ್ದಾರೆ. ಆದರೆ ಈ ಚಿತ್ರದ ಹೆಸರಿನ ಬಗ್ಗೆ ಇನ್ನೂ ಯಾವುದೇ ಪ್ರಮುಖ ಅಪ್ಡೇಟ್ ಇಲ್ಲ.  ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಧವನ್ ಅವರ ಮುಂದಿನ ಚಿತ್ರದಲ್ಲೂ ಹೃತಿಕ್ ರೋಷನ್ ಕಾಣಿಸಿಕೊಳ್ಳಬಹುದು. ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಅದೇ ರೀತಿ ಪಠಾಣ್​2 ದರಲ್ಲಿಯೂ  ರೋಷನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 
 

click me!