ಉತ್ತಮ ಆಯ್ಕೆಯಿರುವಾಗ ರಾಜಕಾರಣಿಯನ್ಯಾಕೆ ಮದ್ವೆಯಾಗ್ಲಿ ಎಂದಿದ್ರು ಪರಿಣಿತಿ!

Published : Apr 03, 2023, 02:32 PM IST
ಉತ್ತಮ ಆಯ್ಕೆಯಿರುವಾಗ ರಾಜಕಾರಣಿಯನ್ಯಾಕೆ ಮದ್ವೆಯಾಗ್ಲಿ ಎಂದಿದ್ರು ಪರಿಣಿತಿ!

ಸಾರಾಂಶ

ನಟಿ ಪರಿಣಿತಿ ಚೋಪ್ರಾ ಮತ್ತು  ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರ ವಿವಾಹದ ಸುದ್ದಿ ಬಹುತೇಕ ನಿಜವಾಗಿದೆ. ಈ ಸಂದರ್ಭದಲ್ಲಿ ನಟಿಯ ಹಳೆಯ ವಿಡಿಯೋ ವೈರಲ್​ ಆಗ್ತಿದೆ.  ಏನಿದೆ ಅದರಲ್ಲಿ?   

ಸದ್ಯ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು  ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರ ವಿವಾಹದ ಸುದ್ದಿ ಬಿ ಟೌನ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ.  ರಾಹುಲ್ -ಅಥಿಯಾ, ಸಿದ್-ಕಿಯಾರಾ ಬಳಿಕ ಈಗ ಪರಿಣಿತಿಚೋಪ್ರಾ ಮತ್ತು ರಾಘವ್ ಚಡ್ಡಾ (Raghva Chadha) ಹಸೆಮಣೆಯೇರಲು ಸನ್ನದ್ಧರಾಗಿದ್ದಾರೆ.  ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸುದ್ದಿಯಾಗಿದ್ದು, ಕೊನೆಗೂ ನಿಜ ಎನ್ನಲಾಗಿದೆ. ಆದರೆ ಈ ಜೋಡಿ ಮಾತ್ರ ಇದುವರೆಗೆ ಮದುವೆಯ ಬಗ್ಗೆ ತುಟಿಕ್​ ಪಿಟಿಕ್​ ಎನ್ನಲಿಲ್ಲ.  ಇತ್ತೀಚಿಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ರೂಮರ್ಸ್ ಹರಡಲು ಕಾರಣವಾಗಿತ್ತು.  ಹೊಟೇಲ್ ಭೇಟಿಯ ವೇಳೆ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊನೆಗೆ  ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜೀವ್ ಅರೋರಾ ಈಚೆಗಷ್ಟೇ ಟ್ವೀಟ್ ಮಾಡಿ ಸುದ್ದಿಯನ್ನು ಕನ್​ಫರ್ಮ್​ ಮಾಡಿದ್ದರು. ಇದಾದ ಬಳಿಕ, ಖ್ಯಾತ ನಟ-ಗಾಯಕ ಹಾರ್ಡಿ ಸಂಧು ಅವರು ಪರಿಣಿತಿ ಮತ್ತು ರಾಘವ್ ಅವರ ಮದುವೆಯ ಸುದ್ದಿಯ ಬಗ್ಗೆ ಚಿಕ್ಕದಾಗಿ ಹಿಂಟ್ ಕೊಟ್ಟಿದ್ದರು. ಹಾರ್ಡಿ ಸಂಧು ಪರಿಣಿತಿ ಚೋಪ್ರಾ ಅವರ ಬೆಸ್ಟ್​ಫ್ರೆಂಡ್. ನಟಿಯ ಮದುವೆಯ ಸುದ್ದಿಯನ್ನು ಅವರು ಖಚಿತಪಡಿಸಿದ್ದರು. 

ಇದರ ನಡುವೆಯೇ ಇದೀಗ, ಪರಿಣಿತಿ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾತಲಾಣದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ (AAP) ನಾಯಕ ರಾಘವ್ ಚಡ್ಡಾ ನಡುವಿನ ವಿವಾಹದ ವದಂತಿಗಳ ನಡುವೆ, ಈ ವಿಡಿಯೋ  ವೈರಲ್ ಆಗುತ್ತಿದೆ. ಇದು ಹಳೆಯ ಸಂದರ್ಶನವೊಂದರ ವಿಡಿಯೋ. ಅದು ಇಷ್ಟೆಲ್ಲಾ ಸದ್ದು ಮಾಡುತ್ತಿರಲು ಕಾರಣ, ನಟಿ ಆ ಸಂದರ್ಶನದಲ್ಲಿ ಎಂದಿಗೂ ಯಾವುದೇ ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ನಡೆದಿದ್ದ ಈ ಸಂದರ್ಶನವು ಅವರ ಸಿನಿಮಾವೊಂದರ  ಪ್ರಚಾರದ ಸಂದರ್ಭದಲ್ಲಿ ನಡೆದಿತ್ತು. ಆಗ ಪತ್ರಕರ್ತರು ಮದುವೆಯ ಕುರಿತು ಕೇಳಿದ್ದ ಪ್ರಶ್ನೆಗೆ ನಟಿ ಪರಿಣಿತಿ, ಒಬ್ಬ ರಾಜಕಾರಣಿ ತನ್ನ ಗಂಡನಾಗಲು ಸಾಧ್ಯವಿಲ್ಲ. ಅದು ನನ್ನ  ಮೊದಲ ಆಯ್ಕೆಯಾಗುವುದಿಲ್ಲ ಎಂದಿದ್ದರು.

ಪರಿಣಿತಿ-ರಾಘವ್​ ಮದ್ವೆ ಸುದ್ದಿಗೆ ಬ್ರೇಕ್ ಹಾಕಿದ AAP ನಾಯಕ: ಭಾರತಕ್ಕೆ ಪ್ರಿಯಾಂಕಾ

ಈ ಸಂದರ್ಶನದ ಸಮಯದಲ್ಲಿ ಇದಲ್ಲದೆ, ಆದರ್ಶ ಪತಿಯ ಮೂರು ಗುಣಗಳ ಬಗ್ಗೆ ಕೇಳಿದಾಗ, ಪರಿಣಿತಿ ಅವರು 'ಅವನು ತಮಾಷೆಯಾಗಿರಬೇಕು, ಅವನು ಒಳ್ಳೆಯ ಗುಣ ಹೊಂದಿರಬೇಕು ಮತ್ತು ಅವನು ನನ್ನನ್ನು ಗೌರವಿಸಬೇಕು' ಎಂದು ಹೇಳಿದ್ದರು.  ನಂತರ ನೀವು ಯಾರನ್ನು ಮದುವೆಯಾಗುವಿರಿ ಎಂದು ಪ್ರಶ್ನಿಸಲಾಗಿತ್ತು. ಮೊದಲು ನಟರ ಬಗ್ಗೆ ಕೇಳಲಾಗಿತ್ತು. ನಂತರ  ಹಾಲಿವುಡ್ ನಟ ಬ್ರಾಡ್ ಪಿಟ್ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅವುಗಳ ಬಗ್ಗೆ ನಟಿ ಮೌನವಾಗಿದ್ದಾಗ ಒಂದು ವೇಳೆ  ರಾಜಕಾರಣಿಯನ್ನು (Politician) ಮದುವೆಯಾಗುವುದಾದರೆ ನೀವು ಒಪ್ಪಿಕೊಳ್ಳುವಿರಾ ಎಂದು ಪ್ರಶ್ನಿಸಲಾಗಿತ್ತು. ಕೂಡಲೇ ಪರಿಣಿತಿ, ಸಾಧ್ಯವೇ ಇಲ್ಲ. ಅದು ನನ್ನ ಮೊದಲ ಆಯ್ಕೆ ಆಗುವುದೇ ಇಲ್ಲ.  ನಾನು ರಾಜಕಾರಣಿಯನ್ನು ಮದುವೆಯಾಗಲು ಬಯಸುವುದಿಲ್ಲ. ಹಲವು ಉತ್ತಮ ಆಯ್ಕೆಗಳು ಇರುವಾಗ ರಾಜಕಾರಣಿಯನ್ನು ಯಾರು ಮದುವೆಯಾಗುತ್ತಾರೆ ಎಂದಿದ್ದರು. ಸ್ವಯಂ ನಿರ್ಮಿತ ಪುರುಷನನ್ನು ಜೀವನ ಸಂಗಾತಿಯನ್ನಾಗಿ ಬಯಸುತ್ತೇನೆ.  ನಾನು ಸ್ವಾಭಿಮಾನ ಹೊಂದಿರುವ, ತಮ್ಮನ್ನು ತಾವು ರೂಪಿಸಿಕೊಂಡ ಪುರುಷರನ್ನು ಇಷ್ಟಪಡುತ್ತೇನೆ. ರಾಜಕಾರಣಿ ನನ್ನ ಆಯ್ಕೆಯಾಗಲು ಸಾಧ್ಯವಿಲ್ಲ ಎಂದಿದ್ದರು.

ಈ ವಿಡಿಯೋ ಸಕತ್​ ಸೌಂಡ್​ ಮಾಡುತ್ತಿದ್ದು, ಬಳಕೆದಾರರು ನಟಿಯ ಕಾಲೆಳೆಯುತ್ತಿದ್ದಾರೆ. ದೇವರು ಯಾರ ಹಣೆಯ ಮೇಲೆ ಯಾರು ಎಂದು ಬರೆದಿರುತ್ತಾರೋ ಅವರನ್ನು ಮದುವೆಯಾಗಲೇಬೇಕು. ಹೀಗೆಲ್ಲಾ ಮೊದಲೇ ಸ್ಟೇಟ್​ಮೆಂಟ್​ ಕೊಟ್ಟು ಸಿಕ್ಕಿಹಾಕಿಕೊಳ್ಳಬಾರದು ಎಂದು ಕೆಲವರು ಹೇಳಿದರೆ, ತಾವು ರಾಘವ್ ಚಡ್ಡಾ ಅವರ ಜೊತೆ ಡೇಟಿಂಗ್​ ಮಾಡುತ್ತಿರುವ ವಿಷಯವನ್ನು ಮುಚ್ಚಿಡಲು ನೀವು ಹೀಗೆ ಹೇಳಿದ್ದೀರಿ ತಾನೆ ಎಂದೂ ಕೆಲವರು ನಟಿಯನ್ನು ಪ್ರಶ್ನಿಸಿದ್ದಾರೆ. 

Parineeti Chopra- Raghav Chadha: ಆಪ್​ ನಾಯಕನಿಗೆ ಬಾಲಿವುಡ್​ ತಾರೆ ಹೃದಯ ಕೊಟ್ಟಿದ್ದು ಈ ಜಾಗದಲ್ಲಿ!

ಈ ಜೋಡಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದವರು. ಅಲ್ಲಿಯೇ ಲವ್​ ಶುರುವಾಗಿತ್ತು ಎನ್ನಲಾಗಿತ್ತು.  ಪರಿಣಿತಿ  ಮತ್ತು ರಾಘವ್ ಲಂಡನ್​ನಲ್ಲಿ  ತಮ್ಮ ವಿಶ್ವವಿದ್ಯಾನಿಲಯದ ದಿನಗಳಿಂದಲೂ ಸ್ನೇಹಿತರಾಗಿದ್ದರು. ಲಂಡನ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಕಾಣಿಸಿಕೊಂಡ ನಂತರ ಇಬ್ಬರೂ ಮೊದಲು ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿದರು. ಅದರ ನಂತರ ಅವರು ಹಲವಾರು ಪ್ರವಾಸಗಳನ್ನು ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಹೊಸ ಸುದ್ದಿ ಹೊರಬಂದಿದೆ. ಅದೇನೆಂದರೆ,  ಪರಿಣಿತಿ ಚೋಪ್ರಾ ಮೊದಲು ಪಂಜಾಬ್‌ನಲ್ಲಿ (Punjab) ರಾಘವ್ ಚಡ್ಡಾ ಅವರನ್ನು ಭೇಟಿಯಾಗಿದ್ದರಂತೆ. ಆಗ ನಟಿ ಅಲ್ಲಿ ಶೂಟಿಂಗ್ ಮಾಡುತ್ತಿದ್ದರು. ಆ ಸಂದರ್ಭವೇ ಜೋಡಿ ಮೊದಲ ಬಾರಿ ಮೀಟ್ ಆಗಿದ್ದಾರೆ. ಲವ್​ ಆ್ಯಟ್​ ಫಸ್ಟ್​ ಸೈಟ್​ (Love At first sight) ಆಗಿದೆ. ಇದಾಗಿ ಸುಮಾರು ಆರು ವರ್ಷಗಳೇ ಕಳೆದಿದ್ದು, ಇಬ್ಬರೂ ಸಂಬಂಧದಲ್ಲಿದ್ದರು. ಆದರೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ವಿಷಯ ಮುಚ್ಚಿಡಲು ನಟಿ ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಿರಬಹುದು ಎನ್ನುವುದು ನೆಟ್ಟಿಗರ ಗುಮಾನಿ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?