ಡುಮ್ಮಿ ಎಂದವರಿಗೆ ತಿರುಗೇಟು ಕೊಡಲು ಸಮಂತಾ ಧೈರ್ಯ ಕೊಟ್ಟಳು: ತಮನ್ನಾ ಭಾಟಿಯಾ

Published : Apr 03, 2023, 02:29 PM IST
ಡುಮ್ಮಿ ಎಂದವರಿಗೆ ತಿರುಗೇಟು ಕೊಡಲು ಸಮಂತಾ ಧೈರ್ಯ ಕೊಟ್ಟಳು: ತಮನ್ನಾ ಭಾಟಿಯಾ

ಸಾರಾಂಶ

ಧೈರ್ಯ ಹೆಚ್ಚಿರುವವರಿಗೆ ದೇವರು ಕಷ್ಟ ಕೊಡುವುದು ಸಮಂತಾ ಆರೋಗ್ಯ ವಿಚಾರ ಬಗ್ಗೆ ಮಾತನಾಡಿದ ನಟಿ ತಮನ್ನಾ...  

ತೆಲುಗು ತಮಿಳು ಚಿತ್ರರಂಗದ ಟಾಪ್ ಸ್ಟಾರ್ ನಟಿಯರಾದ ಸಮಂತಾ ರುತ್ ಪ್ರಭು ಮತ್ತು ತಮನ್ನಾ ಭಾಟಿಯಾ ಒಳ್ಳೆ ಸ್ನೇಹಿತರು ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಕಾರ್ಯಕ್ರಮದಲ್ಲಿ ಇಬ್ಬರು ಭೇಟಿ ಮಾಡಿದರೆ ಒಂದು ಕಡೆ ಕುಳಿತುಕೊಂಡು ಟಾಪ್‌ ಟು ಬಾಟಮ್ ಎಲ್ಲಾ ವಿಚಾರಗಳನ್ನು ತಪ್ಪದೆ ಮಾತನಾಡುತ್ತಾರೆ. ಹಲವು ಸಲ ಇವರಿಬ್ಬರ ಗಾಸಿಪ್ ವಿಡಿಯೋ ಮತ್ತು ಫೋಟೋ ವೈರಲ್ ಆಗಿತ್ತು...ಹೀಗಾಗಿ ಇವರಿಬ್ಬರ ಸ್ನೇಹದ ತಮನ್ನಾ ಮಾತನಾಡಿದ್ದಾರೆ. 

'ಸಮಂತಾ ಮತ್ತು ನಾನು ತುಂಬಾ ಒಳ್ಳೆಯ ಸ್ನೇಹಿತರು. ನಾವಿಬ್ಬರೂ ದಿನವಿಡೀ ಮಾತನಾಡುವುದಿಲ್ಲ ಆದರೆ ಭೇಟಿ ಮಾಡಿ ಮಾತನಾಡಿದಾಗ ಸಂಪೂರ್ಣ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೀವಿ. ನಾವು ಮಾತನಾಡುವುದಕ್ಕೆ ಶುರು ಮಾಡಿದರೆ ಅದೆಲ್ಲಾ ದೊಡ್ಡ ದೊಡ್ಡ ವಿಚಾರಗಳೇ..ನೀವು ಏನು ಮಾಡುತ್ತಿದ್ದೀರಾ ಯಾವ ಕೆಲಸ ಎಂದು ಮಾತನಾಡುವುದಿಲ್ಲ ಬದಲಿಗೆ ನೇವರಾಗಿ ಲೆವೆಲ್ 10ರಲ್ಲಿ ಮಾತನಾಡುತ್ತೀವಿ. ಸಮಂತಾ ಮಾತ್ರವಲ್ಲ ಕಾಜಲ್‌ ಜೊತೆಗೂ ತುಂಬಾನೇ ಸೆಕ್ಯೂರ್ ಫೀಲ್ ಅಗುತ್ತದೆ. ನಾವು ಒಟ್ಟಿಗಿದ್ದರು ನಮ್ಮವರಿಗೆ ಸರಿಯಾಗಿ ಸ್ಪೆಸ್‌ ಕೊಡುತ್ತೀವಿ. ನಾವು ಬೇಗ ರಿಲೇಟ್ ಆಗಲು ಕಾರಣ ಏನೆಂದರೆ ನಾವು ಕನೆಕ್ಟ್‌ ಆಗುವುದು ಜನರ ವಿಚಾರಕ್ಕೆ. ಕಲಾವಿದೆ ಅನ್ನೋದು ಹೊರತು ಪಡಿಸಿ ನೋಡಿದರೆ ನಾವು ಮನುಷ್ಯರು ಅನೇಕ ವಿಚಾರಗಳು ಕನೆಕ್ಟ್‌ ಆಗುತ್ತದೆ. ಜೀವನ ನಡೆಸುವುದಕ್ಕೆ ನಾವು ಈ ಕೆಲಸ ಮಾಡುವುದು ಇದು ನಮ್ಮ ಕರ್ತವ್ಯ. ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೀವಿ ಹೀಗಾಗಿ ಎಲ್ಲರ ಜೊತೆ ಒಳ್ಳೆ ಸಂಬಂಧ ಹೊಂದಿರುವೆ' ಎಂದು ಬಾಲಿವುಡ್ ಬಬಲ್‌ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಬಚ್ಚಿಟ್ಟಿಕೊಳ್ಳಲು ತಪ್ಪು ಮಾಡಿಲ್ಲ, ಮದುವೆ ಉಳಿಸಿಕೊಳ್ಳಲು 100% ಪ್ರಯತ್ನ ಮಾಡಿದ್ದೆ: ಸಮಂತಾ

'ಸಮಂತಾಗೆ ಬಂದಿರುವ ಕಾಯಿಲೆ ಬಗ್ಗೆ ಕೇಳಿಸಿಕೊಂಡಾಗ ನನಗೆ ತುಂಬಾನೇ ಬೇಸರವಾಯ್ತು.ತುಂಬಾ ದಿನಗಳ ಕಾಲ ಡಿಸ್ಟರ್ಬ್‌ ಆಗಿ ಬಿಟ್ಟಿದ್ದೆ. fortunately unfortunately ನಾವು ಮಾಡುವ ಕೆಲಸ ತುಂಬಾನೇ ಫಿಸಿಕಲ್. ಪಬ್ಲಿಕ್ ನಡುವೆ ನಾವು ಕೆಲಸ ಮಾಡುವುದು ನೂರಾರು ಮಂದಿ ನಮ್ಮನ್ನು ನೋಡುತ್ತಾರೆ. ನಾವು ನೋಡಲು ಹೇಗಿದ್ದೀವಿ, ಮೇಕಪ್ ಹಾಕಿದ ಮೇಲೆ ಹೇಗೆ ಕಾಣಿಸುತ್ತೀವಿ ನಾವು ಹೇಗೆ ಫೀಲ್ ಮಾಡುತ್ತೀವಿ ಅನ್ನೋದು ಮುಖ್ಯವಾಗುತ್ತದೆ. ಇದ್ದಕ್ಕಿದ್ದಂತೆ ಸಮಸ್ಯೆ ಆದಾಗ ಅದನ್ನು ಎದುರಿಸಲು ತುಂಬಾ ಶಕ್ತಿ ಬೇಕು ತುಂಬಾ ಧೈರ್ಯ ಬೇಕು. ನನಗೆ ಕೋವಿಡ್‌ ಆಗಿ ಆಸ್ಪತ್ರೆಯಲ್ಲಿ ಇದ್ದಾಗ ಸ್ಟಿರಾಯ್ಡ್ ಮೆಡಿಕೇಷನ್‌ ನನಗೆ ಕೊಟ್ಟಿದ್ದರು ಅದರಿಂದ ತುಂಬಾ ದಪ್ಪಗಾಗಿದ್ದೆ. ಎಲ್ಲ ಸಮಯ ಸಂದರ್ಭದಲ್ಲೂ ಹೇಟರ್ಸ್‌ ಇರುವ ರೀತಿ ಆಗಲೂ ನನ್ನನ್ನು ಡುಮ್ಮಿ ಮೋಟಿ ಎಂದು ಕಾಮೆಂಟ್ ಮಾಡಿ ಕಾಲೆಳೆದವರು ಇದ್ದಾರೆ. ಆಗ ಯಾಕೆ ಸುಮ್ಮನಿರುವೆ ಅವರಿಗೆ ಸರಿಯಾಗಿ ಉತ್ತರ ಕೊಡು ಎಂದು ಸಮಂತಾ ನನಗೆ ಬುದ್ದಿ ಹೇಳುತ್ತಿದ್ದಳು' ಎಂದು ಸಮಂತಾ ಹೇಳಿದ್ದಾರೆ.

 

ಸ್ಟಾರ್‌ ನಟಿಯರ ನಡುವೆ ತಂದಿಡುವ ಕೆಲ್ಸ ಮಾಡ್ಬೇಡಿ; ರಶ್ಮಿಕಾ ಮಂದಣ್ಣ ಬಗ್ಗೆ ಸಮಂತಾ ಹೇಳಿಕೆ

'ತನಗೆ ಏನು ಅನಿಸುತ್ತದೆ ಅದನ್ನು ನೇರವಾಗಿ ಹೇಳುವ ಬುದ್ಧಿ ಸಮಂತಾಗೆ ಇದೆ ಯಾವುದಕ್ಕೂ ಯಾರಿಗೂ ಕೇರ್ ಮಾಡುವುದಿಲ್ಲ. ಕಲಾವಿದರಾಗಿ ನಾವು ನೆಗೆಟಿವ್ ಕಾಮೆಂಟ್ಸ್‌ಗಳನ್ನು ಸ್ವೀಕರಿಸಿ ಅದಕ್ಕೆ ಯೋಚಿಸಿ ಸರಿಯಾಗಿ ಉತ್ತರ ಕೊಡುವುದಕ್ಕೆ ತುಂಬಾ ಧೈರ್ಯ ಮತ್ತು ಗಟ್ಟಿ ಮನಸ್ಸು ಬೇಕು. ತುಂಬಾ ಧೈರ್ಯ ಇರುವವರಿಗೆ ದೇವರು ಕಷ್ಟ ಕೊಡುವುದು ಹೀಗಾಗಿ ಸಮಂತಾಗೆ ಎದುರಾಗಿರುವ ಕಷ್ಟ ಸಮಯ ಕೂಡ ಮುಂದೆ ಸಾಗಲಿದೆ' ಎಂದಿದ್ದಾರೆ ಸಮಂತಾ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?