Rajeev Sen: ಡಿವೋರ್ಸ್​ ಪಡೆದು ವಾರದೊಳಗೇ ಹೆಂಡ್ತಿ ಬೇಕು ಎಂದು ಗೋಗರಿತಿರೋ ನಟಿ ಚಾರು ಪತಿ!

Published : Jun 15, 2023, 05:48 PM IST
Rajeev Sen: ಡಿವೋರ್ಸ್​ ಪಡೆದು ವಾರದೊಳಗೇ ಹೆಂಡ್ತಿ ಬೇಕು ಎಂದು ಗೋಗರಿತಿರೋ ನಟಿ ಚಾರು ಪತಿ!

ಸಾರಾಂಶ

ವರ್ಷಗಳಿಂದ ಪರಸ್ಪರ ಕಿತ್ತಾಡಿಕೊಂಡು ಕೊನೆಗೂ ವಿಚ್ಛೇದನ ಪಡೆದಿದ್ದರು ಸುಶ್ಮಿತಾ ಸೇನ್​ ಸಹೋದರ ರಾಜೀವ್​. ಈಗ ಪುನಃ ಪತ್ನಿ ಬೇಕು ಅಂತಿದ್ದಾರೆ. ಏನಿದು ವಿಷಯ?   

ಕೆಲ ತಿಂಗಳುಗಳಿಂದ ಬೀದಿಗೆ ಬಂದಿದ್ದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ (Sushmitha Sen) ಸಹೋದರ ರಾಜೀವ್ ಸೇನ್ ಹಾಗೂ ನಟಿ ಚಾರು ಅಸೋಪಾ ಅವರ ದಾಂಪತ್ಯ ಜೀವನ ಕಳೆದ ವಾರ ಕೊನೆಗೂ ಮುರಿದುಬಿದ್ದಿತ್ತು. ರಾಜೀವ್​  ವಿರುದ್ಧ ಪತ್ನಿ ಚಾರು ಅಸೋಪಾ ಸಾಲು ಸಾಲು ಆರೋಪಗಳನ್ನು ಮಾಡಿದ್ದರೆ, ತಮ್ಮ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಜೀವ್​ ಆರೋಪಿಸಿದ್ದರು.  ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾ ಜೊತೆ ಪತ್ನಿಗೆ  ಸಂಬಂಧವಿದೆ ಎನ್ನುವುದು ಅವರ ಆರೋಪವಾಗಿತ್ತು.  ಚಾರು ಅವರು ತಮ್ಮ  ಮೊದಲ ಮದುವೆಯ ವಿಷಯವನ್ನು  ಮುಚ್ಚಿಟ್ಟು ಮದುವೆಯಾದರು ಎಂದು  ರಾಜೀವ್ ಸೇನ್ ಹೇಳಿದ್ದರು. ಸೆಪ್ಟೆಂಬರ್ 2022 ರಲ್ಲಿ, ಇಬ್ಬರೂ ತಮ್ಮ ಮಗಳಿಗಾಗಿ ಮತ್ತೆ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. ಆದರೆ, ಕೆಲವೇ ತಿಂಗಳುಗಳಲ್ಲಿ ಇಬ್ಬರೂ ಮತ್ತೆ ಬೇರ್ಪಟ್ಟು ವಿಚ್ಛೇದನಕ್ಕೆ ಮುಂದಾದರು. ಹೀಗೆ ಈ ಜೋಡಿಯ ಗಲಾಟೆ ಜಗಜ್ಜಾಹೀರವಾಗಿತ್ತು. ಈಗ ಈ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, ಖುದ್ದು ದಂಪತಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ತಾವು ವಿಚ್ಛೇದನ ನೀಡಿರುವುದಾಗಿ ಹೇಳಿದ್ದರು. ಆದರೆ ಮಗಳಿಗಾಗಿ ಅಪ್ಪ-ಅಮ್ಮ ಆಗಿ ಮುಂದುವರೆಯುವುದಾಗಿ ತಿಳಿಸಿದ್ದರು. 

ಇದಾಗಿ ಒಂದು ವಾರವಾಗಿದೆಯಷ್ಟೇ. ವರ್ಷಗಳಿಂದ ಕಿತ್ತಾಟ ಮಾಡಿಕೊಂಡಿದ್ದ ಜೋಡಿ ಅಧಿಕೃತವಾಗಿ ಕಾನೂನುಬದ್ಧವಾಗಿ ಬೇರೆಯಾಗಿ ವಾರವಾಗಿದೆ. ಆದರೆ ಈಗಲೇ ರಾಜೀವ್ ಸೇನ್ (Rajeev Sen) ಅವರಿಗೆ ಪತ್ನಿಯನ್ನು ಬಿಟ್ಟಿರಲು ಸಾಧ್ಯವಿಲ್ಲವಾಗಿದೆಯಂತೆ!  ರಾಜೀವ್ ಮತ್ತೆ ಪತ್ನಿ ಜೊತೆ ಒಂದಾಗುವ ಮನಸ್ಸು ಮಾಡಿದ್ದು, ಈ ಕುರಿತು ಮಾತಾಡಿದ್ದಾರೆ. ಜೂನ್ 8ರಂದು  ವಿಚ್ಛೇದನ ಆಗಿದ್ದು, ವಾರದಲ್ಲಿಯೇ  ಮತ್ತೆ ಪತ್ನಿ ಬೇಕು ಎನ್ನುತ್ತಿದ್ದಾರೆ.  ಈ ಕುರಿತು  ಇ ಟೈಮ್ಸ್ ಟಿವಿ ಜೊತೆ ಮನಸ್ಸಿನಲ್ಲಿರುವುದನ್ನು ಹೇಳಿಕೊಂಡಿರುವ ಅವರು,  ಮಗಳನ್ನೂ ಒಳಗೊಂಡಿರುವ ಸಂಬಂಧ ಇದಾಗಿರುವುದರಿಂದ ಪತ್ನಿ ಹಾಗೂ ನನ್ನ ನಡುವೆ ಗೆಳೆತನ ಮುಖ್ಯ. ನಾವಿಬ್ಬರೂ ಎಂದಿಗೂ ಪರಸ್ಪರ ಒಬ್ಬರಿಗೊಬ್ಬರ ಒಳ್ಳೆಯದನ್ನೇ ಬಯಸುತ್ತೇವೆ.  ತಂದೆಯಾಗಿ ಮಗಳಿಗೆ ಹೆಚ್ಚಿನ ಸಮಯ ಕೊಡುವುದು ನನ್ನ ಆದ್ಯತೆ. ಹಾಗೆಯೇ ಚಾರುವನ್ನು ಚೆನ್ನಾಗಿ ನೋಡಿಕೊಳ್ಳುವುದು ಕೂಡಾ ಅಗತ್ಯ. ನನ್ನ ಪ್ರೀತಿ ಹಾಗೂ ಬೆಂಬಲ ಹೀಗೆಯೇ ಇರುತ್ತದೆ. ಒಂದು ದಿನ ನಾನು ಚಾರು ಒಂದಾಗುತ್ತೇವೆ ಎನ್ನುವ ಭರವಸೆ ಇದೆ ಎಂದಿದ್ದಾರೆ. ಈ ಮೂಲಕ ಮತ್ತೆ  ಒಂದಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ!

ದಾಂಪತ್ಯ ಮುರೀತು, ಪ್ರೀತಿ ಇರುತ್ತೆ: ನೋಟ್​ ಬರೆದು ನಟಿ ಚಾರುಗೆ ಡಿವೋರ್ಸ್​ ಕೊಟ್ಟ ಸುಷ್ಮಿತಾ ಸೇನ್​ ತಮ್ಮ

ಅಂದಹಾಗೆ ರಾಜೀವ್ ಸೇನ್ ಅವರು ಚಾರು ಅಸೋಪಾ ಅವರೊಂದಿಗೆ 16 ಜೂನ್ 2019 ರಂದು ಗೋವಾದಲ್ಲಿ ವಿವಾಹವಾಗಿದ್ದರು.  2021 ರಲ್ಲಿ  ಹೆಣ್ಣು ಮಗುವಿನ ಪಾಲಕರಾಗಿದ್ದು, ಮಗುವಿಗೆ  ಝಿಯಾನಾ ಎಂದು ಹೆಸರಿಟ್ಟಿದ್ದಾರೆ. ಆದರೆ ಇಬ್ಬರ ನಡುವಿನ ಕಲಹ ತಾರಕಕ್ಕೇರಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಈ ಹಿಂದೆ ಚಾರು ಮತ್ತು ರಾಜೀವ್‌ಗೆ ನ್ಯಾಯಾಲಯ ಆರು ತಿಂಗಳ ಕೂಲಿಂಗ್ ಅವಧಿಯನ್ನು (Cooling period) ನೀಡಿತ್ತು. ರಾಜೀವ್ ಮತ್ತು ಚಾರು ತಮ್ಮ ಸಂಬಂಧವನ್ನು ಸರಿಪಡಿಸಲು ಕೌನ್ಸೆಲಿಂಗ್ ಸೆಷನ್‌ಗಳಿಗೆ ಹಾಜರಾಗಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ಕೊನೆಗೂ ಕೋರ್ಟ್​ ಡಿವೋರ್ಸ್​ ನೀಡಿತ್ತು. ಈಗ ಮತ್ತೆ ಪತ್ನಿ ಬೇಕು ಎನ್ನುತ್ತಿದ್ದಾರೆ ರಾಜೀವ್​. 

ಇವರ ಗಲಾಟೆ ಇನ್ನಷ್ಟು ಬಿಗಡಾಯಿಸಲು ಕಾರಣ, ಪತ್ನಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಜೊತೆ ಸಂಬಂಧವಿದೆ ಎಂದು ರಾಜೀವ್​ ಗಂಭೀರ ಆರೋಪ ಮಾಡಿದ್ದರು. ನಾನು ಆಕೆಯ ವಾಯ್ಸ್ ನೋಟ್ (Voice Note) ಗಮನಿಸಿದೆ. ಇದರಿಂದ ವಿಷಯ ತಿಳಿಯಿತು ಎಂದಿದ್ದರು.  ಈ ವಿಚಾರವನ್ನು ಆಕೆಯ ತಾಯಿಯೇ ಬಹಿರಂಗ ಪಡಿಸಿದ್ದರು. ಅವಳು ಕರಣ್ ಮೆಹ್ರಾ ಜೊತೆ ರೊಮ್ಯಾಂಟಿಕ್ ರೀಲ್ ಮಾಡಿದ್ದಾಳೆ. ನನಗೆ ಮೋಸ ಮಾಡಿದ್ದಾಳೆ. ಅವಳಿಗೆ ಈ ವಿಷಯ ಕೇಳಿದ್ದಕ್ಕೆ ನನ್ನ ಮೇಲಿಯೇ ದೂಷಿಸುತ್ತಿದ್ದಾಳೆ ಎಂದು ರಾಜೀವ್​ ಆರೋಪಿಸಿದ್ದರು. ಈ ಆರೋಪವನ್ನು ಕರಣ್​ ಮೆಹ್ರಾ ತಳ್ಳಿ ಹಾಕಿದ್ದರು. ಬದಲಿಗೆ  ಚಾರು ಕೂಡ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 'ದಾಂಪತ್ಯಕ್ಕೆ ದ್ರೋಹ ಮಾಡಿದರು. ನಾನು ಮನೆಯಲ್ಲಿ ಇಲ್ಲದಿದ್ದಾಗ ಸಿಸಿಟಿವಿ (CCTV) ಸ್ವಿಚ್ ಆಫ್ ಮಾಡಿ ಇಡುತ್ತಿದ್ದರು. ಯಾಕೆ ಎಂದು ಕೇಳಿದ್ದಕ್ಕೆ ಇದೇನು ಬಿಗ್ ಬಾಸ್ ಹೌಸಾ ಎಂದು ಕೇಳುತ್ತಿದ್ದರು. ಇದೊಂದು ದೊಡ್ಡ ವಿಚಾರಾ ಎಂದು ಗಲಾಟೆ ಮಾಡುತ್ತಿದ್ದರು. ಜಿಮ್ ಹೆಸರಲ್ಲಿ ಯಾವಾಗಲೂ ಹೊರಗಡೆ ಇರುತ್ತಿದ್ದರು' ಎಂದು ಹೇಳಿದ್ದರು. 

ಅಹಂಕಾರ ಬಿಟ್ಟು 'ಪಠಾಣ್'ನಲ್ಲಿ ಆ್ಯಕ್ಟ್​ ಮಾಡು: ಅಮ್ಮನಿಗೇ ಬುದ್ಧಿ ಹೇಳಿದ್ದ ಟ್ವಿಂಕಲ್​ ಖನ್ನಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?