ಹಲ ವರ್ಷಗಳ ನಂತ್ರ ಖುದ್ದು ಮೇಕಪ್ ಮಾಡ್ಕೊಂಡ ಆಲಿಯಾ: ಹೊಟೇಲ್‌ನ ಕ್ರೀಂ ಚೆನ್ನಾಗಿಲ್ಲವೆಂದ ನಟಿ!

By Suvarna News  |  First Published Jun 15, 2023, 5:23 PM IST

ಕೋರಿಯಾಕ್ಕೆ ಭೇಟಿ ಕೊಟ್ಟಿದ್ದ ನಟಿ ಆಲಿಯಾ ಭಟ್​ ಹೋಟೆಲ್​ನಲ್ಲಿ ಖುದ್ದು ಮೇಕಪ್​ ಮಾಡಿಕೊಂಡು ಗಮನ ಸೆಳೆದಿದ್ದಾರೆ. 
 


ನಟಿ ಆಲಿಯಾ ಭಟ್​ (Alia Bhatt) ಹೆಚ್ಚಾಗಿ ಮೇಕಪ್​ ಇಲ್ಲದೆಯೇ ತಮ್ಮ ಸಹಜ ಸೌಂದರ್ಯದಿಂದ ಅಭಿಮಾನಿಗಳ ಮನ ಗೆಲ್ಲುತ್ತಲೇ ಬಂದಿದ್ದಾರೆ.  ಈಚೆಗೆ ಅವರು,  ಬೀಚ್​ಗೆ ತೆರಳಿ ಬೇಸಿಗೆಯನ್ನು ಆನಂದಿಸುತ್ತಿರುವುದಾಗಿ ಹೇಳಿಕೊಂಡಿದ್ದರು.   ನೇರಳೆ ಬಣ್ಣದ ಬಿಕಿನಿಯಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದರು.  ಈ ಫೋಟೋ ನೋಡಿದ ಅಭಿಮಾನಿಗಳು  ಮೇಕಪ್ ಇಲ್ಲದೆ ಆಲಿಯಾ ಎಷ್ಟು ಚೆಂದ ಕಾಣುತ್ತಿದ್ದಾರೆ ಎಂದೆಲ್ಲಾ  ಕಮೆಂಟ್ಸ್​ ಹಾಕಿದ್ದರು. ಹೀಗೆ ಆಗಾಗ್ಗೆ ನಟಿ ಮೇಕಪ್​ರಹಿತವಾಗಿಯೇ ಸುಂದರ ಕಾಣಿಸುತ್ತಾರೆ. ಒಂದು ಮಗುವಾದ ಮೇಲೂ ನಟಿಯ ಸೌಂದರ್ಯ ವೃದ್ಧಿಸುತ್ತಲೇ ಇದೆ. ಈಕೆಯ  ಫಿಟ್​ನೆಸ್​ ಮತ್ತು  ನೈಸರ್ಗಿಕ ಸೌಂದರ್ಯ ಎರಡನ್ನೂ ಫ್ಯಾನ್ಸ್​ ಪ್ರಶಂಸಿಸುತ್ತಲೇ ಇರುತ್ತಾರೆ.  ರಾಹಾ ಕಪೂರ್ (Raha Kapoor) ಅವರ ಜನನದ ನಂತರ, ಆಲಿಯಾ ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರತಿ ಬಾರಿಯೂ ಅವರ ನೋಟ ಮತ್ತು ಸೌಂದರ್ಯವು ಎಲ್ಲರ ಗಮನವನ್ನು ಸೆಳೆಯುತ್ತದೆ.  ಇದರಲ್ಲಿ ಅವರ ನೋ ಮೇಕಪ್ ಲುಕ್ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ.

ಇದೀಗ ನಟಿ ಮಾಡಿಕೊಂಡಿರುವ  ಮೇಕಪ್ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್​ ಆಗಿದೆ. ಒಂದೇ ದಿನದಲ್ಲಿ ಐದೂವರೆ ಲಕ್ಷ ಮಂದಿ ಈಕೆಯ ಮೇಕಪ್​ ನೋಡಿದ್ದಾರೆ. ತಮ್ಮ ಮೇಕಪ್​ ಕುರಿತು ವಿಡಿಯೋ ಒಂದನ್ನು ಅವರು ಯುಟ್ಯೂಬ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಸಹಸ್ರಾರು ಮಂದಿ ಕಮೆಂಟ್​ ಮೂಲಕ ಇದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಇದರಲ್ಲೇನು ವಿಶೇಷತೆ ಅಂತೀರಾ? ಇದರಲ್ಲಿ ಏನು ವಿಶೇಷತೆ ಎಂದರೆ, ಆಲಿಯಾ ಖುದ್ದು ಮೇಕಪ್​ ಮಾಡಿಕೊಂಡಿದ್ದಾರೆ. ಹೌದು! ನಟಿಯರಿಗೆ ಹೋದಲ್ಲಿ ಬಂದಲ್ಲಿ ಮೇಕಪ್​ ಮ್ಯಾನ್​ಗಳು ಜೊತೆಯಲ್ಲಿಯೇ ಇರುತ್ತಾರೆ. ಆದರೆ ಬಹಳ ವರ್ಷಗಳ ಬಳಿಕ ನಟಿ ಆಲಿಯಾ ಖುದ್ದು ಮೇಕಪ್​ ಮಾಡಿಕೊಂಡಿದ್ದು, ಅದರ ಸಂಪೂರ್ಣ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

Tap to resize

Latest Videos

Alia Bhatt: ತುಂಬಾ ತೊಂದ್ರೆ ಕೊಡ್ತಿದ್ದಾರೆ ನಿಮ್ ಮಗ ಎಂದ ಆಲಿಯಾ: ಇದ್ರೆ ಹೀಗಿರ್ಬೇಕೆಂದ ನೆಟ್ಟಿಗರು

ಅಷ್ಟಕ್ಕೂ ಈ ವಿಡಿಯೋ ಚಿತ್ರೀಕರಣ ಮಾಡಿದ್ದು ಕೊರಿಯಾದಿಂದ. ಕಳೆದ ತಿಂಗಳು ಆಲಿಯಾ  ಕೊರಿಯಾಕ್ಕೆ ಭೇಟಿ ನೀಡಿದ್ದರು. ಫ್ಯಾಷನ್  ರಾಯಭಾರಿಯಾಗಿ ಅವರು ದಕ್ಷಿಣ ಕೊರಿಯಾದ ಸಿಯೋಲ್‌ಗೆ ಪ್ರಯಾಣಿಸಿದ್ದರು.   ಸಿಯೋಲ್‌ನಲ್ಲಿ ತಮ್ಮ ಜಾಗತಿಕ ಬ್ರಾಂಡ್ ಅಂಬಾಸಿಡರ್ (Brand Ambasiddor) ಆಗಿ ಗುಸ್ಸಿ ಕ್ರೂಸ್ ಶೋ 2024 ರಲ್ಲಿ ಭಾಗವಹಿಸಿದ್ದರು.  ಇದು ತಮ್ಮ ಭೇಟಿ ಎಂದು ಆಲಿಯಾ ಹೇಳಿಕೊಂಡಿದ್ದರು.  ನಾನು ಹಿಂದೆಂದೂ ಕೊರಿಯಾಕ್ಕೆ ಹೋಗಿರಲಿಲ್ಲ. ತುಂಬಾ ಖುಷಿಯಾಗುತ್ತಿದೆ ಎಂದು ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ಶೇರ್​ ಮಾಡಿಕೊಂಡಿದ್ದರು.  ಪೋಲ್ಕಾ-ಡಾಟ್ ಕಟ್‌ಔಟ್‌ಗಳೊಂದಿಗೆ ಮಿನಿ ಕಪ್ಪು ಉಡುಗೆಯನ್ನು ಆಲಿಯಾ ಆಯ್ಕೆ ಮಾಡಿಕೊಂಡಿದ್ದ ಆಲಿಯಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಈಕೆಯ ಡ್ರೆಸ್ಸಿಂಗ್ ಸೆನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದರು. ಆದರೆ ಆಲಿಯಾ ಅವರಿಗೆ ತುಂಬಾ ಬೇಸರವಾಗಿದ್ದ ಸಂಗತಿ ಏನೆಂದರೆ, ಅವರು ಉಳಿದುಕೊಂಡಿದ್ದ ಹೋಟೆಲ್​ನಲ್ಲಿ ನೀಡಲಾಗಿದ್ದ ಮೇಕಪ್​ ಕುರಿತು!

ನಟಿ ಆಲಿಯಾ ಅವರು ಉಳಿದುಕೊಂಡಿದ್ದ ಹೋಟೆಲ್​ನಲ್ಲಿ ಆಕೆಗೆಂದೇ ಇರಿಸಲಾಗಿದ್ದ ಮೇಕಪ್​ ಸಾಮಗ್ರಿ ಅದರಲ್ಲಿಯೂ ಫೇಸ್​ಕ್ರೀಮ್​ ತುಂಬಾ ಕೆಟ್ಟದ್ದಾಗಿ ಇತ್ತಂತೆ. ಅದಕ್ಕೆ ಬೇಸರ ವ್ಯಕ್ತಪಡಿಸಿದ ನಟಿ, ತಾವೇ ತೆಗೆದುಕೊಂಡು ಹೋಗಿದ್ದ ಮೇಕಪ್​ ಸಾಮಗ್ರಿಗಳಿಂದ ಸಂಪೂರ್ಣ ಮೇಕ್​ ಓವರ್​ (Make over) ಮಾಡಿಕೊಂಡಿರುವ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ. ಮೇಕಪ್​ಗೆ ಅಗತ್ಯವಾಗಿರುವಷ್ಟು ಸಾಮಗ್ರಿ ತಾವು ತರದಿದ್ದರೂ ಇರುವ ಸಾಮಾನುಗಳಲ್ಲಿಯೇ ಮೇಕಪ್​ ಮಾಡಿಕೊಳ್ಳುವುದಾಗಿ ಹೇಳಿದ ಆಲಿಯಾ, ಆರಂಭದಲ್ಲಿ ಫೌಂಡೇಷನ್​ ಕ್ರೀಮ್​ ಹಚ್ಚುವುದರಿಂದ ಹಿಡಿದು ಹತ್ತು ನಿಮಿಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಸಂಪೂರ್ಣ ಮೇಕಪ್​  ಮಾಡಿಕೊಂಡು ಗಮನ ಸೆಳೆದಿದ್ದಾರೆ. ಈಕೆಯ ಈ ಮೇಕಪ್​ ಸೆನ್ಸ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. 

ರಣಬೀರ್​-ಆಲಿಯಾ ವೆಡ್ಡಿಂಗ್​ ಆ್ಯನಿವರ್ಸರಿ: ಮಾಜಿ ಪ್ರಿಯತಮನಿಗಾಗಿ ಕಣ್ಣೀರಿಟ್ಟ ನಟಿ ಕತ್ರೀನಾ

 

click me!