ಬೆತ್ತಲೆ ಹೆಣ್ಣಿನ ಮೇಲೆ ಆಹಾರವಿಟ್ಟು ತಿಂದ ಸ್ಟಾರ್ ನಟ; ವಿಡಿಯೋ ವೈರಲ್,ಸ್ತ್ರೀ ದ್ವೇಷಿ ಎಂದ ನೆಟ್ಟಿಗರು!

Published : Jun 15, 2023, 03:41 PM IST
ಬೆತ್ತಲೆ ಹೆಣ್ಣಿನ ಮೇಲೆ ಆಹಾರವಿಟ್ಟು ತಿಂದ ಸ್ಟಾರ್ ನಟ; ವಿಡಿಯೋ ವೈರಲ್,ಸ್ತ್ರೀ ದ್ವೇಷಿ ಎಂದ ನೆಟ್ಟಿಗರು!

ಸಾರಾಂಶ

 ವೈರಲ್ ಅಯ್ತು ನಟ ಕಾನ್ಯೆ ವೆಸ್ಟ್ ಬರ್ತಡೇ ವಿಡಿಯೋ. ಬೆತ್ತಲೆ ಹೆಣ್ಣಿನ ಮೇಲೆ ಆಹಾರವಿಟ್ಟು ಅಲಂಕಾರ ಮಾಡಿದ ನಟ....

ಅಮೆರಿಕದ ಜನಪ್ರಿಯ ಮ್ಯೂಸಿಕ್ ರ್ಯಾಪರ್ ಕಾನ್ಯೆ ವೆಸ್ಟ್‌ ಕೆಲವು ದಿನಗಳ ಹಿಂದೆ 46ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಆಯೋಜಿಸಿದ ಈ ಪಾರ್ಟಿಯಲ್ಲಿ ಬೆತ್ತಲೆ ಮಹಿಳೆಯರೂ ಇದ್ದರು. ಬೆತ್ತಲೆ ಅಂದಿತಕ್ಷಣ ಏನ್ ಏನೋ ಅರ್ಥ ಮಾಡಿಕೊಳ್ಳಬೇಡಿ ಅಮೆರಿಕದ ಜನರು ತುಂಬಾ ಇಷ್ಟ ಪಟ್ಟು ತಿನ್ನುವ ಸುಶಿ ಆಹಾರ ಆಕೆ ಮೈ ಮೇಲೆ ಪ್ಲ್ಯಾಟರ್‌ ರೀತಿ ಹಾಕಲಾಗಿತ್ತು.

ಹೌದು! ಸೋಷಿಯಲ್ ಮೀಡಿಯಾಲ್ಲಿ ಕಾನ್ಯೆ ವೆಸ್ಟ್‌ ಬರ್ತಡೇ ಪಾರ್ಟಿ ವಿಡಿಯೋ ವೈರಲ್ ಆಗುತ್ತಿದೆ. ಒಂದು ವಿಡಿಯೋದಲ್ಲಿ ಮಹಿಳೆ ಟೇಬಲ್‌ ಮೇಲೆ ಬೆತ್ತಲಾಗಿ ಮಲಗಿಕೊಂಡಿದ್ದಾಳೆ ಆಕೆ ಮೇಲೆ ವಿಧ ವಿಧವಾಗ ಸುಶಿಗಳನ್ನು ಜೋಡಿಸಲಾಗಿದೆ.ಯಾರಿಗೆ ಯಾವ ಸುಶಿ ಬೇಕು ಅವರು ಚಾಪ್‌ಸ್ಟಿಕ್‌ನ ಬಳಸಿ ಸುಶಿ ತಿನ್ನಬಹುದು. ಹಲವು ಗಂಟೆಗಳ ಕಾಲ ಆ ಮಹಿಳೆ ಟೇಬಲ್ ಮೇಲೆ ಅಲ್ಲಾಡದಂತೆ ಮಲಗಿಕೊಂಡಿರುತ್ತಾಳೆ. ಈ ವಿಡಿಯೋ ಎರಡು ಕಾರಣಕ್ಕೆ ಟ್ರೋಲ್ ಆಗುತ್ತಿದೆ. ಒಂದು ಕಾರಣ ಈ ಪಾರ್ಟಿಯಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟಿಲ್ಲ ಕೋಟಿಯಲ್ಲಿ ಹಣ ಖರ್ಚು ಮಾಡಿ ಹೆಣ್ಣನ್ನು ಬಳಸಿಕೊಂಡಿದ್ದಾರೆ. ಮತ್ತೊಂದು ಕಾರಣ ಕಾನ್ಯೆ ತಮ್ಮ ಮಗಳನ್ನು ಈ ಪಾರ್ಟಿಗೆ ಕರೆದುಕೊಂಡು ಹೋಗಿದ್ದು. ಪುಟ್ಟ ಮಕ್ಕಳ ಮನಸ್ಥಿತಿ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು. 

ಜಪಾನಿನ ಸಂಪ್ರದಾಯದ ಪ್ರಕಾರ ಇದನ್ನು Hullabaloo ಎಂದು ಕರೆಯುತ್ತಾರೆ ಹೀಗಾಗಿಎ ಕಾನ್ಯೆ ಅಭಿಮಾನಿಗಳು ತಪ್ಪಲ್ಲ ಎನ್ನುತ್ತಿದ್ದಾರೆ. ಆದರೆ ಹೆಣ್ಣನ್ನು ಹೀಗೆ ಬಳಸಿಕೊಳ್ಳುತ್ತಿರುವವರನ್ನು misogynist ಎನ್ನುತ್ತಾರೆ ನೀನು ತಪ್ಪು ಮಾಡುತ್ತಿರುವೆ ಎಂದು ಟ್ರೋಲ್ ಮಾಡಿದ್ದಾರೆ. 

ಹೊಟ್ಟೆ ದಪ್ಪ ಆಗದಂತೆ ಸರ್ಜರಿ ಮಾಡಿಸಿಕೊಂಡ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್

ಏನಿದು ಜಪಾನ್ ಅಭ್ಯಾಸ?

ಜಪಾನ್‌ನ ಜನರು ಮಹಿಳೆಯರ ಮೇಲೆ ಸುಶಿ ಅಥವಾ ಸಶಿಮಿಯನ್ನು ಪ್ಲ್ಯಾಟರ್‌ ರೀತಿ ಇಟ್ಟು ಸರ್ವ್ ಮಾಡುತ್ತಾರೆ. ಇದನ್ನು ಬಾಡಿ ಸುಶಿ ಅಥವಾ Nyotaimori ಎಂದು ಕರೆಯುತ್ತಾರೆ. ಈ ರೀತಿ ಹೆಚ್ಚಾಗಿ ಬರ್ತಡೇ ಪಾರ್ಟಿ ಅಥವಾ ಬ್ಯಾಚುಲರ್‌ ಪಾರ್ಟಿಯಲ್ಲಿ ಕಾಣಬಹುದು. Nyotaimori ಎನ್ನು ದಶಕಗಳಿಂದ ಪಾಲಿಸುತ್ತಾರೆ. ಯೋಧರು ಯುದ್ಧ ಮುಗಿಸಿಕೊಂಡು ಹಿಂತಿರುಗಿದಾಗ ನೃತ್ಯ ಮಾಡುವ ಮಹಿಳೆಯರು ಮಲಗಿಕೊಂಡು ತಮ್ಮ ದೇಹದ ಮೇಲೆ ಸುಶಿ ಇಟ್ಟಿಕೊಳ್ಳುತ್ತಿದ್ದರು. ಆಹಾರ ಮತ್ತು ಹೆಣ್ಣನ್ನು ನೋಡಿಕೊಂಡು ಎಂಜಾಯ್ ಮಾಡುತ್ತಾ ಸೇವಿಸುತ್ತಿದ್ದರು. 

ಎರಡು ವರ್ಷಗಳ ಹಿಂದೆ ಮಾಡಿರುವ ವರದಿ ಪ್ರಕಾರ ಕಾನ್ಯೆ ವೆಸ್ಟ್‌ ಬಳಿ 1.8 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. 400 ಮಿಲಿಯನ್ ಡಾಲರ್ ಬರುವುದು ಅಡಿಡಾಸ್ ಬ್ರ್ಯಾಂಡ್‌ನಿಂದ ಎನ್ನಬಹುದು. 2012ರಲ್ಲಿ ಟಿವಿ ಸ್ಟಾರ್ ಕಿಮ್ ಕಾರ್ಡಶಿಯಾನ್ ಮತ್ತು ಕಾನ್ಯೆ ಪ್ರೀತಿಯಲ್ಲಿ ಬಿದ್ದರು 2013ರಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡು 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ನಾಲ್ಕು ಮಕ್ಕಳಿದ್ದಾರೆ ಅದರಲ್ಲಿ ಮೂವರು ಸೆರೋಗೆಸಿ ಮೂಲಕ ಹುಟ್ಟಿರುವುದು. ಕೆಲವೊಂದು ವೈಯಕ್ತಿಕ ಕಾರಣಗಳಿಂದ 2021ರಲ್ಲಿ ಕಿಮ್ ಕಾರ್ಡಶಿಯಾನ್ ಮತ್ತು ಕಾನ್ಯೆ ವೆಸ್ಟ್‌ ಡಿವೋರ್ಸ್‌ ಪಡೆದುಕೊಂಡರು. 2022ರ ನವೆಂಬರ್‌ನಲ್ಲಿ ಅಂತಿಮವಾಗಿತ್ತು, ಕೋರ್ಟ್‌ ಕೊಟ್ಟಿರುವ ನೋಟಿಸ್‌ ಪ್ರಕಾರ ನಾಲ್ಕು ಮಕ್ಕಳನ್ನು ನೋಡಿಕೊಳ್ಳಲು ತಿಂಗಳಿಗೆ 200,000 ಡಾಲರ್‌ ಹಣವನ್ನು ನೀಡಬೇಕು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?