ಬಾಡಿಗೆ ತಾಯಿ ಮೂಲಕ ಮಗು ಪಡೆಯುವ ಪ್ಲಾನ್ ಮಾಡಿದ್ದಾರಾ ನಯನತಾರಾ-ವಿಘ್ನೇಶ್?

Published : Mar 23, 2022, 03:13 PM IST
ಬಾಡಿಗೆ ತಾಯಿ ಮೂಲಕ ಮಗು ಪಡೆಯುವ ಪ್ಲಾನ್ ಮಾಡಿದ್ದಾರಾ ನಯನತಾರಾ-ವಿಘ್ನೇಶ್?

ಸಾರಾಂಶ

ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಡಿಗೆ ತಾಯಿ ಮೂಲಕ ಮಗುವ ಪಡೆಯುವ ಪ್ಲಾನ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಸುದ್ದಿಯನ್ನು ಮೂಲಗಳು ತಳ್ಳಿ ಹಾಕಿವೆ.

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ನಯನತಾರಾ(Nayanthara) ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ನಯನತಾರಾ ಸಿನಿಮಾದ ಜೊತೆಗೆ ವೈಯಕ್ತಿಕ ಜೀವದ ಬಗ್ಗೆಯೂ ಅಷ್ಟೆ ಸದ್ದುಮಾಡುತ್ತಿರುತ್ತಾರೆ. ತಮಿಳು ನಿರ್ದೇಶಕ ವಿಘ್ನೇಶ್ ಶಿವನ್(Vignesh Shivan) ಜೊತೆ ಪ್ರೀತಿಯಲ್ಲಿರುವ ನಯನತಾರಾ ಗುಟ್ಟಾಗಿ ಮದುವೆ ಸಹ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸದಾ ಜೊತೆಯಲ್ಲೆ ಇರುವ ಈ ಜೋಡಿ ಮದುವೆ ಆಗಿದ್ದಾರೆ, ಆದರೆ ಎಲ್ಲೂ ಬಹಿರಂಗ ಪಡಿಸಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇದೀಗ ಇವರಿಬ್ಬರ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯುವ ಪ್ಲಾನ್ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ನಯನತಾರಾ ಸದ್ಯಕ್ಕೆ ಮಗು ಮಾಡಿಕೊಳ್ಳುವ ಮತ್ತು ಅದ್ದೂರಿಯಾಗಿ ಮದುವೆಯಾಗುವ ಯಾವುದೇ ಯೋಜನೆ ಮಾಡಿಲ್ಲವಂತೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಯನತಾರಾ ಸದ್ಯ ಸಿನಿಮಾಗಳ ಕಡೆ ಗಮನ ಹರಿಸುತ್ತಿದ್ದಾರೆ. ಹಾಗಾಗಿ ಈ ಜೋಡಿ ಬಾಡಿಗೆ ತಾಯಿ(surrogacy) ಮೂಲಕ ಮಗು ಪಡೆಯುವ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ತಾರಾ ಜೋಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಈ ಬಗ್ಗೆ ಯನತಾರಾ ಆಪ್ತ ಮೂಲಗಳು ಪ್ರತಿಕ್ರಿಯೆ ನೀಡಿದ್ದು 'ಈ ರೀತಿಯ ಸುದ್ದಿ ಕೇಳಿ ನಗು ಬರುತ್ತೆ ಅಷ್ಟೆ. ಪ್ರತಿ 3 ತಿಂಗಳಿಗೊಮ್ಮೆ ಈ ರೀತಿಯ ಸುದ್ದಿ ಕೇಳುತ್ತಿರುತ್ತೇವೆ. ಅವರಿನ್ನೂ ಮದುವೆ ಆಗಿಲ್ಲ' ಎಂದು ಹೇಳಿದ್ದಾರೆ. 'ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಮಗು ಪಡೆಯುವ ಯಾವುದೇ ಯೋಜನೆ ಮಾಡಿಲ್ಲ. ಅವರು ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಮಗು ಪಡೆಯುವುದು ದೊಡ್ಡ ಜವಾಬ್ದಾರಿ' ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ವದಂತಿಗೆ ಬ್ರೇಕ್ ಹಾಕಿದ್ದಾರೆ.

Nayanatara Remuneration: ಚಿರಂಜೀವಿ ಜೊತೆ ನಟಿಸಲು ಲೇಡಿ ಸೂಪರ್ ಸ್ಟಾರ್ ಇಷ್ಟೊಂದು ಡಿಮ್ಯಾಂಡ್ ಮಾಡಿದ್ರಾ?

ಅಂದಹಾಗೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಳೆದ 6 ವರ್ಷಗಳಿಂದ ಲಿವ್ ಇನ್ ರಿಲೇಶನ್ ನಲ್ಲಿ ಇದ್ದಾರೆ. 2015ರಿಂದ ಇಬ್ಬರು ಪ್ರೀತಿಸುತ್ತಿದ್ದು ಒಟ್ಟಿಗೆ ಬದುಕುತ್ತಿದ್ದಾರೆ. ಆದರೆ ಇಬ್ಬರ ಸಂಬಂಧದ ಬಗ್ಗೆ ನಯನತಾರಾ ಆಗಲಿ ಅಥವಾ ವಿಘ್ನೇಶ್ ಶಿವನ್ ಹೆಚ್ಚಾಗಿ ಎಲ್ಲಿಯೂ ಮಾತನಾಡುವುದಿಲ್ಲ. ಮದುವೆ ಫಿಕ್ಸ ಆದಾಗ ಖಂಡಿತ ಎಲ್ಲರಿಗೂ ತಿಳಿಸುತ್ತೇವೆ ಎನ್ನುವ ಈ ಜೋಡಿ ಯಾವುದೆ ಗಾಸಿಪ್ ಗಳ ಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ.

ಇತ್ತೀಚಿಗಷ್ಟೆ ನಯನತಾರಾ ಮತ್ತು ವಿಘ್ನೇಶ್ ಜೋಡಿ ದೇವಸ್ಥಾನವೊಂದರಲ್ಲಿ ಕಾಣಿಸಿಕೊಂಡಿದ್ದರು. ನಯನತಾರಾ ದೊಡ್ಡದಾಗಿ ಸಿಂದೂರ ಇಟ್ಟಿದ್ದರು. ಇಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಜೋಡಿಯನ್ನು ನೋಡಿ ಆಗಲೆ ಇಬ್ಬರು ಗುಟ್ಟಾಗಿ ಮದುವೆಯಾಗಿದ್ದರೆ ಎನ್ನಲಾಗಿತ್ತು. ಅಲ್ಲದೆ ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲೂ ಸಹ ಈ ಜೋಡಿ ದೇವಸ್ಥಾನದಲ್ಲಿ ಕಾಣಸಿಕೊಂಡಿದ್ದರು. ಆಗ ಇಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

Nayantara: ಪ್ರಭುವೇವನ ಮೇಲಿನ ಪ್ರೀತಿಯಿಂದ ಅವರ ಪತ್ನಿಗೆ 3 ಕೋಟಿ ರೂ, 75 ಲಕ್ಷದ ನೆಕ್ಲೆಸ್ ಕೊಟ್ಟಿದ್ರು ನಟಿ

ಅಂದಹಾಗೆ ನಯನತಾರಾ ಸದ್ಯ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಜೊತೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಶಾರುಖ್ ಗೆ ಜೋಡಿಯಾಗಿರುವ ನಯನತಾರಾ ಮೊದಲ ಬಾಲಿವುಡ್ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಿಂದಿ ಸಿನಿಮಾ ಜೊತೆಗೆ ಶಾರುಖ್ ತಮಿಳಿನ ಒಂದು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?