ಕೊರೊನಾ ನಂತರ ಬಾಲಿವುಡ್‌ನಲ್ಲಿ ಕೆಲವು ಚಿತ್ರಗಳು ಯಶಸ್ಸು ಕಂಡವು. ಆದರೆ 2024ರಲ್ಲಿ ಬಿಡುಗಡೆಯಾದ ಹಲವು ಬಿಗ್ ಬಜೆಟ್ ಸಿನಿಮಾಗಳು ನಿರೀಕ್ಷಿತ ಲಾಭ ಗಳಿಸಲಿಲ್ಲ.
ಮುಂಬೈ: ಕೊರೊನಾ ಕಾಲಘಟ್ಟದ ಬಳಿಕ ಬಾಯ್ ಕಾಟ್ ಎಂಬ ಟ್ರೆಂಡ್‌ಗೆ ಸಿಲುಕಿದ್ದರಿಂದ ಬಾಲಿವುಡ್‌ನ ಹಲವು ಸಿನಿಮಾಗಳು ನೆಲಕಚ್ಚಿದ್ದವು. ನಂತರ ಹಂತ ಹಂತವಾಗಿ ಚೇತರಿಸಿಕೊಂಡ ಬಾಲಿವುಡ್ ಕೆಲವು ಬಾಕ್ಸ್ ಆಫಿಸ್ ಹಿಟ್ ಸಿನಿಮಾಗಳನ್ನು ನೀಡಿದೆ. ಇವುಗಳ ನಡುವೆ ಲಾಪತಾ ಲೇಡಿಸ್ ನಂತಹ ಅದ್ಭುತ ಚಿತ್ರಗಳು ಬಾಲಿವುಡ್ ಅಂಗಳದಿಂದ ಹೊರ ಬಂದಿವೆ. ಕಳೆದ ವರ್ಷದ ಬಿಡುಗಡೆಯಾದ ಶಾರೂಖ್ ಖಾನ್ ಅಭಿನಯದ 'ಪಠಾಣ್' ಒಂದು ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆದ್ರೆ ಈ ವರ್ಷ 2024ರಲ್ಲಿ ಬಿಡುಗಡೆಯಾದ ಹಲವು ಬಿಗ್ ಬಜೆಟ್ ಸಿನಿಮಾಗಳು ಮಕಾಡೆ ಮಲಗಿವೆ.
ನೂರಾರು ಕೋಟಿ ಬಂಡವಾಳ ಹಾಕಿ ಲಾಭದ ನಿರೀಕ್ಷೆಯಲ್ಲಿದ್ದ ನಿರ್ಮಾಣ ಸಂಸ್ಥೆಗಳು ಹಾಕಿದ ಹಣ ಸಿಕ್ಕರೆ ಸಾಕು ಅನ್ನೋ ಸ್ಥಿತಿ ತಲುಪಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾದ ನಟ ಸೂರ್ಯ ಅಭಿನಯದ ಕಂಗುವಾ ಸಹ ಸೇರ್ಪಡೆಯಾಗಿದೆ. ಈ ವರ್ಷ ಸೋತ ಬಿಗ್ ಬಜೆಟ್‌ನ 6 ಸಿನಿಮಾಗಳ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ.
1.ಸಿಂಗಂ ಅಗೇನ್
ಅಜಯ್ ದೇವಗನ್ ಮತ್ತು ಕರೀನಾ ಕಪೂನ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸಿಂಗಂ ಅಗೇನ್ ಸಿನಿಮಾ 300-350 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಇದರ ಜೊತೆ ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಸೇರಿದಂತೆ ದೊಡ್ಡ ಸ್ಟಾರ್ ಬಳಗವನ್ನು ಹೊಂದಿದ್ದರೂ ಚಿತ್ರ ಸೋತಿತು. ವರದಿಗಳ ಪ್ರಕಾರ, ಬಿಡುಗಡೆಯಾದ 1 ತಿಂಗಳ ನಂತರವೂ ಚಿತ್ರ 240 ಕೋಟಿ ರೂಪಾಯಿ ಹಣವನ್ನು ಗಳಿಸಲಿಲ್ಲ.
2.ಜಿಗರಾ
ಆಲಿಯಾ ಭಟ್ ಮತ್ತು ವೇದಾಂಗ್ ರೈನಾ ಜೊತೆಯಾಗಿ ನಿರ್ಮಿಸಿ ನಟಿಸಿದ್ದ ಚಿತ್ರ ಜಿಗರಾ. ಈ ಸಿನಿಮಾಗೆ ಕರಣ್ ಜೋಹರ್ ಸಹ ಬಂಡವಾಳ ಹೂಡಿಕೆ ಮಾಡಿದ್ದರು. ಒಟ್ಟು 90 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾದ ಜಿಗರಾ ಕೇವಲ 55.05 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ.
3.ಬಡೇ ಮಿಯಾ, ಚೋಟಾ ಮಿಯಾ
ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ನಟನೆಯ ಆಕ್ಷನ್ ಸಿನಿಮಾ ಸಹ ಪ್ರೇಕ್ಷಕರನ್ನು ಸೆಳೆಯುವಲ್ಲಿ ಬಹುತೇಕ ವಿಫಲವಾಯ್ತು. ಚಿತ್ರದಲ್ಲಿ ಮಾನುಷಿ ಚಿಲ್ಲರ್ ಮತ್ತು ಅಲಾಯ ಸಹ ಪ್ರಮಖ ಪಾತ್ರದಲ್ಲಿ ನಟಿಸಿದ್ದರು. 350 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಬಡೇ ಮಿಯಾ, ಚೋಟಾ ಮಿಯಾ ಗಲ್ಲಾಪಟ್ಟಿಗೆಗೆ ಸೇರಿದ್ದು ಕೇವಲ 102.6 ಕೋಟಿ ರೂಪಾಯಿ ಎನ್ನಲಾಗಿದೆ.
4.ಕಂಗುವಾ
ನಟ ಸೂರ್ಯ ನಟನೆಯ ಕಂಗುವಾ ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ತೆರೆಗೆ ಅಪ್ಪಳಿಸಿತ್ತು. ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಕಂಗುವಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದುವರೆಗಿನ ವರದಿಗಳ ಪ್ರಕಾರ, ಕಂಗುವಾ ಸಿನಿಮಾ 100 ಕೋಟಿಯ ಕ್ಲಬ್ ಸೇರ್ಪಡೆಯಾಗಿಲ್ಲ.
5.ಇಂಡಿಯನ್-2
ಇದು ಸಹ ನ್ ಇಂಡಿಯಾ ಕಲ್ಪನೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಪಾತ್ರ ಹೆಚ್ಚು ನಿರೀಕ್ಷೆಯನ್ನು ಸೃಷ್ಟಿಸಿತ್ತು. ಆದ್ರೆ ನಿರೀಕ್ಷಿತ ಗೆಲುವು ಮಾತ್ರ ಚಿತ್ರತಂಡಕ್ಕೆ ಸಿಗಲಿಲ್ಲ. 250 ಕೋಟಿ ರೂಪಾಯಿಯಲ್ಲಿ ನಿರ್ಮಣವಾಗಿದ್ದ ಇಂಡಿಯನ್-2 ಸಿನಿಮಾ 81.32 ಕೋಟಿ ರೂ. ಗಳಿಸಿದೆ ಎಂದು sacnilk ವರದಿ ಮಾಡಿದೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 50 ಫಿಲಂ; ಈ ನಟ ಸಾವನ್ನಪ್ಪಿದ ನಂತರ 5 ವರ್ಷದವರೆಗೆ 35 ಸಿನಿಮಾ ರಿಲೀಸ್
6.ಮೈದಾನ್
ಟೀಸರ್ ಮತ್ತು ಟ್ರೈಲರ್‌ನಿಂದ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಅಜಯ್ ದೇವಗನ್ ನಟನೆಯ 'ಮೈದಾನ್' ಸಿನಿಮಾ ಸಹ ಸೋಲಿನ ಪಟ್ಟಿಗೆ ಸೇರ್ಪಡೆಯಾಗಿದೆ. ಫುಟ್ಬಾಲ್ ಕ್ರೀಡೆಯಾಧರಿತ ಈ ಸಿನಿಮಾ 235 ಕೋಟಿ ರೂಪಾಯಿ ನಿರ್ಮಾಣವಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಆದ್ರೆ ಬಿಡುಗಡೆ ಬಳಿಕ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರಿಂದ ಸಿನಿಮಾ ಕೇವಲ 69.09 ಕೋಟಿ ರೂಪಾಯಿ ಹಣ ಕಲೆ ಹಾಕಲು ಶಕ್ತವಾಯ್ತು.
ಇದನ್ನೂ ಓದಿ: ಅಲ್ಲು ಅರ್ಜುನ್ ಈಡೇರದ ಆಸೆ ಏನು ಗೊತ್ತಾ? ಬಾಲಯ್ಯ ಜೊತೆ ಸೀಕ್ರೆಟ್ ಶೇರ್ ಮಾಡ್ಕೊಂಡ ನಟ