ಸದ್ಯ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಡೈವೋರ್ಸ್ ರೂಮರ್ ದಟ್ಟವಾಗಿದೆ. ಐಶು, ತನ್ನ ಹೆಸರಿನಿಂದ ಬಚ್ಚನ್ ಎಂಬ ಸರ್‌ನೇಮ್ ತೆಗೆದು ಎಸೆದಿದ್ದಾಳೆ ಎಂದೂ ಸುದ್ದಿಯಿದೆ. ಅದೇನೇ ಇರಲಿ, ಆಕೆ ಸೃಷ್ಟಿಸಿದ ಒಂದು ಚುಂಬನ ವಿವಾದದ ಬಗ್ಗೆ ಓದುವುದಕ್ಕೆ ಇದು ಸಕಾಲ.
ಬಾಲಿವುಡ್‌ನಲ್ಲಿ ಅತ್ಯಂತ ವಿವಾದ ಸೃಷ್ಟಿಸಿದ ಚುಂಬನದ ದೃಶ್ಯ ಯಾವುದು? ಅದು ಮಲ್ಲಿಕಾ ಶೆರಾವತ್‌ದಲ್ಲ. ಮಾಧುರಿ ದೀಕ್ಷಿತ್‌ದಾಗಲೀ, ಕರಿಷ್ಮಾ ಕಪೂರ್‌ದಾಗಲೀ ಅಲ್ಲ. ಬದಲಾಗಿ ಐಶ್ವರ್ಯ ರೈ ಅವರದು. ಈ ಸೀನ್‌ಗಾಗಿ ಆಕೆ ಲೀಗಲ್ ನೋಟೀಸ್ ಕೂಡ ಪಡೆಯಬೇಕಾಗಿ ಬಂದಿತ್ತು. ಅದರ ವಿವರ ಇಲ್ಲಿದೆ.
ಪ್ರಸ್ತುತ ತನ್ನ ವೈಯಕ್ತಿಕ ಜೀವನಕ್ಕಾಗಿ ಗಮನ ಸೆಳೆಯುತ್ತಿರುವ ನಟಿ, ಒಮ್ಮೆ ಒಬ್ಬ ಸೂಪರ್‌ಸ್ಟಾರ್ ಜೊತೆಗಿನ ಸೂಪರ್‌ಹಿಟ್ ಚಲನಚಿತ್ರದಲ್ಲಿ ಲಿಪ್‌ಲಾಕ್ ಮಾಡಿದಳು. ಅದಕ್ಕಾಗಿ ಕಾನೂನು ತೊಂದರೆಯನ್ನೂ ಎದುರಿಸಿದಳು. ಇಮ್ರಾನ್ ಹಶ್ಮಿ ಬಾಲಿವುಡ್‌ನ "ಸೀರಿಯಲ್ ಕಿಸ್ಸರ್" ಎಂಬ ಬಿರುದನ್ನು ಗಳಿಸಿದ್ದಾನೆ. ಮಲ್ಲಿಕಾ ಶೆರಾವತ್, ಆಲಿಯಾ ಭಟ್, ಅನುಷ್ಕಾ ಶರ್ಮಾ, ಕರೀನಾ ಕಪೂರ್, ಕರಿಷ್ಮಾ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರಂತಹ ನಟಿಯರೂ ಸಹ ತಮ್ಮ ಆನ್-ಸ್ಕ್ರೀನ್ ಕಿಸ್ ದೃಶ್ಯಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ. ಆದರೆ ಇವರ್ಯಾರೂ ಐಶ್ವರ್ಯ ಥರ ಕಾನೂನು ತೊಂದರೆಗೆ ಸಿಲುಕಿದ ಹಾಗಿಲ್ಲ.
ಆ ದೃಶ್ಯ ಕೇವಲ ವಿವಾದ ಸೃಷ್ಟಿಸಿದ್ದು ಮಾತ್ರವಲ್ಲ, ಐಶುಗೆ ಕಾನೂನು ತೊಡಕನ್ನೂ ಒಡ್ಡಿತು. ಆ ಫಿಲಂ ಯಾವುದು? ಅದು ʼಧೂಮ್ 2ʼ. ಅದರಲ್ಲಿ ಐಶ್ವರ್ಯಾ ರೈ ಮತ್ತು ಹೃತಿಕ್ ರೋಷನ್ ಹಲವಾರು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧೂಮ್ 2ರಲ್ಲಿನ ಎರಡು-ಸೆಕೆಂಡ್ ಕಾಲದ ಚುಂಬನದ ದೃಶ್ಯ ದೇಶದಲ್ಲಿ ಭಾರಿ ಕೋಲಾಹಲವನ್ನು ಉಂಟುಮಾಡಿತು. ಹೃತಿಕ್ ರೋಷನ್ ಜೊತೆಗೆ ಐಶ್ವರ್ಯಾ ರೈ ಅವರ ಆನ್‌ಸ್ಕ್ರೀನ್ ಕಿಸ್‌ನ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.
ಇದು ಪರದೆಯ ಮೇಲೆ ಐಶು ನೀಡಿದ ಮೊದಲ ಮುತ್ತು ಆಗಿತ್ತು! ಈ ದೃಶ್ಯದ ಬಗ್ಗೆ ಐಶ್ವರ್ಯಾ ಅಷ್ಟೇನೂ ಆರಾಮದಾಯಕವಾಗಿರಲಿಲ್ಲವಂತೆ. ಅಂದರೆ ಕಿಸ್ಸಿಂಗ್ ಬಗ್ಗೆ ಆಕೆಗೆ ಅಷ್ಟು ಒಲವಿರಲಿಲ್ಲ. ಐಶ್ವರ್ಯಾ ಅದಕ್ಕೂ ಹಿಂದೆ ಚುಂಬನದ ದೃಶ್ಯಗಳನ್ನು ತಪ್ಪಿಸಿದ್ದಳು. ಮತ್ತು ಇಂಟಿಮೇಟ್ ದೃಶ್ಯಗಳಿರುವ ಸ್ಕ್ರಿಪ್ಟ್‌ಗಳನ್ನು ತಿರಸ್ಕರಿಸಿದ್ದರು. ಚುಂಬನದ ಬಗ್ಗೆ ಭಾರತದಲ್ಲಿ ಎಷ್ಟು ಚರ್ಚೆಯಾಗುತ್ತದೆ ಎಂದು ಆಕೆಗೆ ತಿಳಿದಿತ್ತು. ಹೀಗಾಗಿ ದೇಹದ ಸಂಪರ್ಕವಿಲ್ಲದೆ ಅನ್ಯೋನ್ಯತೆಯನ್ನು ಚಿತ್ರಿಸಬೇಕು ಎಂದು ಅವಳು ಬಯಸಿದ್ದಳು. ಆದರೂ ಆಕೆ ಅದನ್ನು ಮಾಡಬೇಕಾಯಿತು.
ಸಂದರ್ಶನವೊಂದರಲ್ಲಿ ಐಶ್ವರ್ಯಾ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದರು. "ನಾನು ಧೂಮ್ 2ನಲ್ಲಿ ಕಿಸ್ ದೃಶ್ಯವನ್ನು ಮಾಡಿದ್ದೇನೆ. ಅದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ನನಗೆ ನಿಜವಾಗಿ ಆಶ್ಚರ್ಯವಾಯಿತು. ವಾಸ್ತವವಾಗಿ, ದೇಶದ ಕೆಲವು ಜನರು ಅದರ ಬಗ್ಗೆ ನನಗೆ ಲೀಗಲ್ ನೋಟಿಸ್‌ಗಳನ್ನು ಸಹ ಕಳುಹಿಸಿದ್ದಾರೆ. ಅದನ್ನು ನನ್ನ ಲೀಗಲ್ ಟೀಮ್ ಹ್ಯಾಂಡಲ್ ಮಾಡಿತು" ಎಂದಿದ್ದಾರೆ.
ನೀಲಿ ಚಿತ್ರ ತಂದಿಟ್ಟ ಫಜೀತಿ! ಶಿಲ್ಪಾ ಶೆಟ್ಟಿ ದಂಪತಿಗೆ ಶಾಕ್ ಕೊಟ್ಟ ಇ.ಡಿ- ಮನೆ, ಕಚೇರಿ ಮೇಲೆ ದಾಳಿ!
"ನಾನು ನನ್ನ ಕೆಲಸವನ್ನು ಮಾಡುತ್ತಿರುವ ನಟಿ. ಆದರೆ ಮೂರು ಗಂಟೆಗಳ ಚಲನಚಿತ್ರದಲ್ಲಿ ಕೇವಲ ಎರಡು ಸೆಕೆಂಡುಗಳ ದೃಶ್ಯಕ್ಕಾಗಿ ಉತ್ತರಿಸಲು ನನ್ನನ್ನು ಕೇಳಲಾಯಿತು" ಎಂದು ಆಕೆ ಆಶ್ಚರ್ಯ ವ್ಯಕ್ತಪಡಿಸಿದ್ದಳು. ಅದರ ನಂತರ ಶಬ್ದ್, ಏ ದಿಲ್ ಹೈ ಮುಷ್ಕಿಲ್‌ನಂತಹ ಕೆಲವು ಚಲನಚಿತ್ರಗಳಲ್ಲಿ ಐಶ್ವರ್ಯಾ ಚುಂಬನದ ದೃಶ್ಯಗಳನ್ನು ನೀಡಿದರು.
ಸದ್ಯ ವಿಚ್ಛೇದನದ ವದಂತಿಗಳಿಂದಾಗಿ ನಟಿ ಸುದ್ದಿಯಲ್ಲಿದ್ದಾರೆ. ಇದರ ಬಗ್ಗೆ ಐಶು ಇನ್ನೂ ಏನೂ ಹೇಳಿಲ್ಲ. ಆದರೆ ಅವರ ಪತಿ ಅಭಿಷೇಕ್ ಬಚ್ಚನ್ ಈ ವದಂತಿಗಳನ್ನು ನಿರಾಕರಿಸಿದ್ದಾರೆ.
ಅಳಿಯನ ಮುಂದೆ ಇದೆಂಥ ಮಾತನಾಡಿದ್ರು ಸೋನಾಕ್ಷಿ ತಾಯಿ? ಪೂನಂ ಸಿನ್ಹಾ ವಿಡಿಯೋ ವೈರಲ್