GADAR-2: ಜಾತಕದಲ್ಲಿ ಗುರು ಸ್ಥಿರ, ಮುಂದೇನು? ಸನ್ನಿ ಡಿಯೋಲ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

Published : Aug 10, 2023, 04:13 PM IST
GADAR-2: ಜಾತಕದಲ್ಲಿ ಗುರು ಸ್ಥಿರ, ಮುಂದೇನು? ಸನ್ನಿ ಡಿಯೋಲ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

ಸಾರಾಂಶ

ಸನ್ನಿ ಡಿಯೋಲ್​ ಅವರ ಬಹು ನಿರೀಕ್ಷಿತ ಗದರ್: ಏಕ್ ಪ್ರೇಮ್ ಕಥಾ-2' ನಾಳೆ  ಬಿಡುಗಡೆಗೆ ಸಿದ್ಧವಾಗಿದ್ದು, ಇದರ ಬಗ್ಗೆ ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಏನು ಹೇಳಿದ್ದಾರೆ?  

ಸನ್ನಿ ಡಿಯೋಲ್ (Sunny Deol) ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' (Gadar: Ek Prem Katha) ಚಿತ್ರ 2001ರ ಜೂನ್ 15ರಂದು ಬಿಡುಗಡೆಯಾಗಿತ್ತು. ಈ ಚಿತ್ರ ಇದೇ ಜೂನ್ 9 ರಂದು  ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಭಾರಿ ಸದ್ದು ಮಾಡುತ್ತಿದೆ. 2001ರಲ್ಲಿ ಚಿತ್ರ ಬಿಡುಗಡೆಯಾದ ಬರೋಬ್ಬರಿ 21 ವರ್ಷಗಳ ನಂತರ ಈ ಚಿತ್ರ ಮತ್ತೊಮ್ಮೆ ತೆರೆಗೆ ಅಪ್ಪಳಿಸಿದೆ.  ಗದರ್​ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಖುದ್ದು ನಿರ್ದೇಶಕರೇ ಅಚ್ಚರಿಗೆ ಒಳಗಾಗಿದ್ದಾರೆ. ಈ ಚಿತ್ರ ಮತ್ತೊಮ್ಮೆ ಬಿಡುಗಡೆಯಾದರೆ ಇಷ್ಟೊಂದು ಹಂಗಾಮ ಸೃಷ್ಟಿಸಬಹುದು ಎಂದು ಖುದ್ದು ನಿರ್ದೇಶಕ ಅನಿಲ್ ಶರ್ಮಾ ಯೋಚಿಸಿರಲಿಲ್ಲ.  ಚಿತ್ರ ಬಿಡುಗಡೆಯಾದ ತಕ್ಷಣ ಗಲ್ಲಾಪೆಟ್ಟಿಗೆಯಲ್ಲಿ ಬಿರುಸು ಕಂಡಿದೆ. ಮೊದಲ ದಿನವೇ ಚಿತ್ರ ದಾಖಲೆ ಬರೆದಿದೆ. ಜನಕ್ಕೆ ಈ ಸಿನಿಮಾ ಇಷ್ಟವಾಗಿದ್ದು ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ.  ಗಳಿಕೆಯಲ್ಲಿ ಚಿತ್ರ ದಾಖಲೆ ನಿರ್ಮಿಸಿದೆ. ಹೌದು. 19 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 2001ರಲ್ಲಿ ಬಿಡುಗಡೆಯಾದಾಗ ವಿಶ್ವದಾದ್ಯಂತ 133 ಕೋಟಿ ಗಳಿಸಿತ್ತು. ನಾಳೆ ಗದರ್​-2 ಚಿತ್ರ ಬಿಡುಗಡೆಯಾಗಲಿದ್ದು, ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. 

ಇನ್ನೊಂದೆಡೆ, ಬಹು ವಿವಾದಕ್ಕೆ ಒಳಗಾಗಿರುವ ಓ ಮೈ ಗಾಡ್​-2 ಕೂಡ ನಾಳೆಯೇ ಬಿಡುಗಡೆಯಾಗಲಿದೆ.  ವಾರಾಂತ್ಯದಲ್ಲಿ ಜನರು ಎದುರು ನೋಡುತ್ತಿರುವ ದೊಡ್ಡ ಬಾಲಿವುಡ್ ಚಿತ್ರಗಳು ಇವೆರಡು.  ಎರಡೂ ಚಿತ್ರಗಳು ಸೂಪರ್‌ಸ್ಟಾರ್‌ಗಳನ್ನು ಹೊಂದಿವೆ ಮತ್ತು  ಗಣನೀಯ ಪ್ರಚಾರ ಪಡೆದಿವೆ.  ಸನ್ನಿ ಡಿಯೋಲ್ ಅವರ ದೇಶಭಕ್ತಿಯ ಸಾಹಸಮಯ ಚಿತ್ರ ಗದರ್ 2 OMG 2 ಗಿಂತ ಏಳು ಪಟ್ಟು ಹೆಚ್ಚು ಮುಂಗಡ ಬುಕಿಂಗ್ ಹೊಂದಿದೆ. ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಅವರ ಚಲನಚಿತ್ರವು ಸೆನ್ಸಾರ್ ಮಂಡಳಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಕ್ಷಯ್ ಕುಮಾರ್ ಪಾತ್ರವನ್ನು ಶಿವನಿಂದ ಮೆಸೆಂಜರ್ ಆಫ್ ಗಾಡ್ (ಧೂತ) ಆಗಿ ಬದಲಾಯಿಸಲಾಗಿದ್ದು,  ಚಿತ್ರದಲ್ಲಿ CBFC ಸಾಕಷ್ಟು ಕಟ್ ಮಾಡಿದೆ. ಮತ್ತೊಂದೆಡೆ, ಗದರ್ 2 ಗಾಗಿ ಮುಂಗಡ ಬುಕ್ಕಿಂಗ್‌ನೊಂದಿಗೆ ಸಿಂಗಲ್ ಸ್ಕ್ರೀನ್‌ಗಳು ಹುಚ್ಚೆದ್ದು ಹೋಗುತ್ತಿವೆ.

ಶಾರುಖ್​ ಖಾನ್​ ಚಿತ್ರದ ರೆಕಾರ್ಡ್​ ಬ್ರೇಕ್​ ಮಾಡಿದ ಸನ್ನಿ ಡಿಯೋಲ್​ 'ಗದರ್'​!

ಸನ್ನಿ ಡಿಯೋಲ್ ಸಿನಿ ಭವಿಷ್ಯದ ಕುರಿತು  ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ (Pandith Jagannath Guruji) ಅವರು ಈಗ ಭವಿಷ್ಯ ನುಡಿದಿದ್ದಾರೆ. ಬಲವಾದ ಗ್ರಹಗಳಿಂದ ಸನ್ನಿ ಪ್ರಯೋಜನ ಪಡೆಯುತ್ತಾರೆ. ಚಿತ್ರ ಹಿಟ್ ಆಗುವ ಉತ್ತಮ ಅವಕಾಶಗಳಿವೆ ಎಂದು ಹೇಳಿದ್ದಾರೆ. ಆದರೆ ಇದು ಸಾರ್ವಕಾಲಿಕ ಬ್ಲಾಕ್‌ಬಸ್ಟರ್‌ ಆಗದೇ ಇರಬಹುದು ಎಂದೂ ಹೇಳಿದ್ದಾರೆ.  'ಸನ್ನಿ ಡಿಯೋಲ್ ಅವರ ಜಾತಕದ ಪ್ರಕಾರ, ಅವರ ಗುರುವು ಸ್ಥಿರವಾದ ಮತ್ತು ಬಲವಾದ ರೂಪದಲ್ಲಿರುವಂತೆ ತೋರುತ್ತಿದೆ. ಅದು ಗದರ್ 2 ಬಿಡುಗಡೆಯಾದ ಮೊದಲ ವಾರದಲ್ಲಿ ಅದ್ಭುತಗಳನ್ನು ಮಾಡಬಲ್ಲದು.  ಪ್ರೇಕ್ಷಕರು ಪ್ರೀತಿಸುವ ಚಿತ್ರವಾಗಲಿದೆ ಮತ್ತು ಚಲನಚಿತ್ರದಲ್ಲಿನ ಸನ್ನಿ ಡಿಯೋಲ್‌ನ ಅಭಿನಯವನ್ನು ಮೆಚ್ಚುವ ಮೂಲಕ ಇದು ಸರಾಸರಿ ಹಿಟ್ ಆಗಲಿದೆ ಎಂದಿದ್ದಾರೆ.  

ಗದರ್ 2 ನಲ್ಲಿ ಸನ್ನಿ ಡಿಯೋಲ್ ಅಪ್ರತಿಮ ತಾರಾ ಸಿಂಗ್ ಆಗಿ ಪುನರಾಗಮನ ಆಗಲಿದ್ದಾರೆ.  ಅಮಿಷಾ ಪಟೇಲ್ ಸಕೀನಾ ಆಗಿದ್ದಾರೆ. 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಪಾಕಿಸ್ತಾನದಲ್ಲಿ ಸಿಲುಕಿರುವ ತಮ್ಮ ಮಗನನ್ನು ತಾರಾ ಸಿಂಗ್ ವಾಪಸ್​ ಕರೆತರಲು ಪಾಕಿಸ್ತಾನಕ್ಕೆ ಹಿಂದಿರುಗುವ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ತಾರಾಸಿಂಗ್​ ತನ್ನ ಮಗ ಚರಣಜೀತ್‌ನನ್ನು ಮನೆಗೆ ಕರೆತರಲು ಸಾಧ್ಯವಾಗತ್ತಾ ಎನ್ನುವುದು ಚಿತ್ರದ ಕುತೂಹಲ.

ಸನ್ನಿ ಲಿಯೋನ್​, ಸನ್ನಿ ಡಿಯೋಲ್​ರನ್ನು ಮದ್ವೆಯಾಗಿದ್ರೆ ಏನಾಗ್ತಿತ್ತು? ನಕ್ಕುನಗಿಸುವ ಪೋಸ್ಟ್ ವೈರಲ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?