ಹೆಣ್ಣಿನ ಎಲ್ಲ ಪಾರ್ಟ್ಸ್​ ಮುಗೀತು, ಈ ಹುಡುಗೀಯ ಕಾಲು ವರ್ಣಿಸಿದ ರಾಮ್ ಗೋಪಾಲ್ ವರ್ಮಾ!

Published : Aug 10, 2023, 03:24 PM IST
ಹೆಣ್ಣಿನ ಎಲ್ಲ ಪಾರ್ಟ್ಸ್​ ಮುಗೀತು, ಈ ಹುಡುಗೀಯ ಕಾಲು ವರ್ಣಿಸಿದ ರಾಮ್ ಗೋಪಾಲ್ ವರ್ಮಾ!

ಸಾರಾಂಶ

ಸದಾ ಹುಡುಗಿಯರ ವಿಷಯದಿಂದ ಟ್ರೋಲ್​ಗೆ ಒಳಗಾಗುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಹುಡುಗಿಯ ಪಾದದ ವರ್ಣನೆ  ಮಾಡಿದ್ದಾರೆ.   

ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಪ್ರಭಾವ ಹೊಂದಿರುವ ರಾಮ್ ಗೋಪಾಲ್ ವರ್ಮಾ (RGV)  ತೆಲುಗು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಫೇಮಸ್. ತೆಲುಗು ಜೊತೆಗೆ ಕನ್ನಡ ಮತ್ತು ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿ, ಪ್ರೇಕ್ಷಕರ ಹೃದಯ ಗೆದ್ದಿರುವ ರಾಮ್ ಗೋಪಾಲ್ ವರ್ಮಾ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಪಡೆದಿರೋ ಇವರು, ಸದಾ ಒಂದಲ್ಲೊಂದು ಕಿರಿಕ್ ಮಾಡೋ ಮೂಲಕ ಸುದ್ದಿಯಲ್ಲಿರುತ್ತಾರೆ. ತಮ್ಮದೇ ಯೂಟ್ಯೂಬ್ ಮಾಹಿನಿ ಮೂಲಕ ಅಡಲ್ಟ್ ಸಿನಿಮಾಗಳನ್ನು ರಿಲೀಸ್ ಮಾಡಿ, ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಇವರು, ಮಹಿಳೆಯರ ವಿಷಯದಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ನಾಯಕಿಯರ ಮಧ್ಯೆಯೇ ಕಾಣಿಸಿಕೊಳ್ಳುವ ಆರ್‌ಜಿವಿ ಕೆಲ ತಿಂಗಳ ಹಿಂದೆ  ನಟಿಯೊಬ್ಬರ ಪಾದ ಹಿಡಿದು ಕುಳಿತಿರುವ ಫೋಟೋ ವೈರಲ್ ಆಗಿತ್ತು. ನಟಿಯ ಕಾಲು ಬುಡದಲ್ಲಿ ಕುಳಿತು ಆಕೆಯ ಪಾದ ಹಿಡಿದು ಗುರಾಸಿಯಿ ನೋಡುತ್ತಿರುವ ಫೋಟೋವನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಶೇರ್ ಮಾಡಿದ್ದರು. ಕೊನೆಗೆ ಆಕೆ ಬಿಗ್ ಬಾಸ್ ಖ್ಯಾತಿಯ ಅಶು ರೆಡ್ಡಿ ಎನ್ನುವುದು ತಿಳಿದುಬಂದಿತ್ತು. 

ಇದೀಗ ಅಂಥದ್ದೇ ಒಂದು ಫೋಟೋ (Photo) ಮತ್ತೆ ಸದ್ದು ಮಾಡುತ್ತಿದೆ. ಈಗ ರಾಮ್​ಗೋಪಾಲ್​ ವರ್ಮಾ ಅವರು, ಯುವತಿಯೊಬ್ಬಳ ಕಾಲು ಹಿಡಿದು ಕುಳಿತಿರುವ ಫೋಟೋ ಶೇರ್​  ಮಾಡಿಕೊಂಡಿದ್ದಾರೆ. ಸದಾ ಹುಡುಗಿಯರ ಅಂಗಾಂಗಗಳನ್ನು ಬಣ್ಣಿಸುವಲ್ಲಿ ಫೇಮಸ್​ ಆಗಿರೋ ಆರ್​ಜಿವಿ, ಈಗ ಹುಡುಗಿಯ ಪಾದದ ಗುಣಗಾನ ಮಾಡಿದ್ದಾರೆ. ಉಳಿದೆಲ್ಲಾ ಪಾರ್ಟ್​ಗಳಿಗಿಂತಲೂ ಪಾದ ತುಂಬಾ ಸುಂದರವಾಗಿದೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಸಿನಿರಂಗ ರಂಗ ಅತ್ಯಂತ ಷೇಮ್​ಫುಲ್​ ಮ್ಯಾನ್​ ಎಂದು ಕೆಲವರು ಹೇಳುತ್ತಿದ್ದರೆ, ನಿಮ್ಮ ತಪ್ಪು ಏನೂ ಇಲ್ಲ ಬಿಡಿ, ಬಾಲಿವುಡ್​ನ ನೈಜ ಮುಖವನ್ನು ತೋರಿಸುತ್ತಿದ್ದೀರಿ ಎಂದಿದ್ದಾರೆ. ಬಾಲಿವುಡ್​ನಲ್ಲಿ (Bollywood) ತಮ್ಮನ್ನು ತಾವು ಸ್ಥಾಪಿಸಿಕೊಳ್ಳಬೇಕಾದರೆ ನಟಿಯರು ಏನೆಲ್ಲಾ ಮಾಡಬೇಕು ಎನ್ನುವುದು ಇದಾಗಲೇ ಜಗಜ್ಜಾಹೀರವಾಗಿದೆ. ನೀವು ಅದನ್ನು ಖುಲ್ಲಂಖುಲ್ಲಾ ಆಗಿ ಎಲ್ಲರ ಎದುರು ತೆರೆದಿಡುತ್ತಿದ್ದೀರಿ ಅಷ್ಟೇ ಎಂದಿದ್ದಾರೆ. ಇನ್ನು ಕೆಲವರು ತೀರಾ ಅಶ್ಲೀಲ ಎನ್ನುವಂಥ ಕಮೆಂಟ್​ಗಳನ್ನೂ ಮಾಡಿದ್ದು, ರಾಮ್​ ಗೋಪಾಲ್​ ವರ್ಮಾ ಅವರಿಗೆ ಛೀಮಾರಿಯನ್ನೂ ಹಾಕುತ್ತಿದ್ದಾರೆ. 

ಮಹಿಳೆಯರ ಕಣ್ಣಿಗೆ ನಟ ಇರ್ಫಾನ್ 'ಸೆಕ್ಸಿ'ಯಾಗಿ ಏಕೆ ಕಾಣಿಸ್ತಿದ್ರು? ಗುಟ್ಟು ಬಿಚ್ಚಿಟ್ಟ ಪತ್ನಿ

ಅಂದಹಾಗೆ ಕೆಲ ತಿಂಗಳ ಹಿಂದೆ ಇವರಿಗೆ ಸಂದರ್ಶನ ಮಾಡಿದಾಗ ಗೆಳೆತನ, ಪ್ರೀತಿ, ಸೆಕ್ಸ್ (Sex) ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಇವರನ್ನು ಕೇಳಿದ್ದಾಗ ಯಾವುದೇ  ಮುಜುಗರ ಇಲ್ಲದೆ ಸೆಕ್ಸ್ ಎಂದಿದ್ದರು. ಇವರ ಈ ಮಾತಿಗೆ ಹಲವರು ತಲೆದೂಗಿದ್ದರು ಕೂಡ. ಇವರ ಈ ಸಂದರ್ಶನ ವೈರಲ್​ ಆಗುತ್ತಲೇ ಆರ್​ಜಿವಿ ರೀತಿ ಓಪನ್ ಆಗಿ ಮಾತನಾಡುವ ಧೈರ್ಯ ನಮಗೂ ಬೇಕಿದೆ ಎಂದು ಹಲವರು ಹೇಳಿದ್ದರು. ತೆಲುಗಿನ ‘ಶಿವ’ ಚಿತ್ರವನ್ನು ನಿರ್ದೇಸಿಸುವ ಮೂಲಕ ಸಿನಿರಂಗ ಪ್ರವೇಶಿಸಿದ್ದ ರಾಮ್​  ಗೋಪಾಲ್​  ವರ್ಮಾ ಅವರು, ಹಲವಾರು   ಚಿತ್ರಗಳನ್ನು ನೀಡಿದ್ದಾರೆ. ಆದರೆ  ಅವರಿಗೆ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಸಿಕ್ಕಿಲ್ಲ. ಈ ಮಧ್ಯೆ ಈಗ ಹುಡುಗಿನ ಅಂಗಾಂಗ ವರ್ಣಿಸುತ್ತಲೇ ಸದ್ದು ಮಾಡುತ್ತಿದ್ದಾರೆ. 
 
37 ವರ್ಷಗಳ ನಂತರ ಬ್ಯಾಚುಲರ್ ಆಫ್ ಟೆಕ್ನಾಲಜಿಯಲ್ಲಿ ಪದವಿ (Technology degree) ಪಡೆದಿರೋ ಇವರು, ಆ ಒಂದು ವಿಷಯದಲ್ಲಿ ಬಹಳ ಮೆಚ್ಚುಗೆಗೂ ಪಾತ್ರರಾಗಿದ್ದರು. ನಿಜ ಹೇಳಬೇಕು ಅಂದ್ರೆ 1985ರಿಂದ ನಾನು ಪರೀಕ್ಷೆ ಬರೆದು ಬರೆದು ಎಲ್ಲಾ ಸಬ್ಜೆಕ್‌ಗಳಲ್ಲಿ ಪಾಸ್ ಆಗಿ ಪದವಿ ಸಿಗಲು ಇಷ್ಟ ವರ್ಷ ಹಿಡಿಯಿತು. ನನಗೆ ಸಿವಿಲ್ ಎಂಜಿನಿಯರಿಂಗ್ ಇಷ್ಟಾನೇ ಇರಲಿಲ್ಲ. ಕೊನೆಗೂ ಮುಗಿಯಿತು. ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯಕ್ಕೆ ನನ್ನ ವಂದನೆಗಳು ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮೂಲಕ ತಿಳಿಸಿದ್ದರು. ಆದರೆ ಇದೀಗ ಹುಡುಗಿಯರ ವಿಷಯದಲ್ಲಿ ಸಕತ್​ ಚರ್ಚೆಯಾಗುತ್ತಿದ್ದಾರೆ. 

ಅಬ್ಬಾ! ಉರ್ಫಿ ಜಾವೇದ್​ ನಿಜಕ್ಕೂ ಹೀಗಿದ್ರಾ? ಮೊದಲ ಆಡಿಷನ್​ ವಿಡಿಯೋ ವೈರಲ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!