ಕೋಟಿ ಕೋಟಿ ಬೆಲೆಬಾಳುವ ಮೂರು ಕಾರು ಕಳ್ಕೊಂಡ ನಟಿ ಸನ್ನಿ ಲಿಯೋನ್!

Published : Aug 10, 2023, 03:32 PM ISTUpdated : Aug 10, 2023, 03:33 PM IST
ಕೋಟಿ ಕೋಟಿ ಬೆಲೆಬಾಳುವ ಮೂರು ಕಾರು ಕಳ್ಕೊಂಡ ನಟಿ ಸನ್ನಿ ಲಿಯೋನ್!

ಸಾರಾಂಶ

ಭಾರತಕ್ಕೆ ಆಮದು ಮಾಡಿಕೊಂಡಿದ್ದ ಮೂರು ಐಷಾರಾಮಿ ಕಾರುಗಳನ್ನು ಮಳೆಗೆ ಕೊಚ್ಚಿಕೊಂಡು ಹೋದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ ಬಾಲಿವುಡ್​ ನಟಿ ಸನ್ನಿ ಲಿಯೋನ್​,   

ಬಾಲಿವುಡ್​ ನಟಿ, ಮಾಜಿ ಪೋರ್ನ್​ ಸ್ಟಾರ್​ ಸನ್ನಿ ಲಿಯೋನ್ (Sunny Leone) ಹಲವು ದುಬಾರಿ ಹಾಗೂ ಐಷಾರಾಮಿ ಕಾರು ಹೊಂದಿದ್ದಾರೆ. ಇವರಿಗೆ ಕಾರಿನ ಕ್ರೇಜ್​ ಸಿಕ್ಕಾಪಟ್ಟೆ ಇದೆ. ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದಾಗಲೆಲ್ಲಾ ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡುತ್ತಾರೆ. ಅವರಿಗೆ ದುಬಾರಿ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚಿದೆ. ಅವರ ಬಳಿ ಇರುವ ಐಷಾರಾಮಿ ಕಾರುಗಳೆಲ್ಲವೂ ಕೋಟಿ ಕೋಟಿ ಬೆಲೆ ಬಾಳುವಂಥವೇ. ಇದರ ಹೊರತಾಗಿಯೂ ದೇಶ-ವಿದೇಶಗಳಲ್ಲಿಯೂ ಆಸ್ತಿ ಹೊಂದಿದ್ದಾರೆ ನಟಿ. ಅಮೆರಿಕದಲ್ಲಿ ನೆಲೆಸಿದ್ದ ಸನ್ನಿ ಲಿಯೋನ್​ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಇಲ್ಲಿಯ ಮಳೆಗಾಲವನ್ನು ಆನಂದಿಸಿದ ಹಾಗೂ ನಂತರ ನಡೆದ ದುರ್ಘಟನೆಯ ಕುರಿತು ಮೆಲುಕು ಹಾಕಿದ್ದಾರೆ. ಭಾರತದ  ಮಳೆಗಾಲದ ಕುರಿತು ತಮ್ಮ ಪ್ರೀತಿ ಹಾಗೂ ನೆನಪುಗಳ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನಟಿ ಹಲವಾರು ಇಂಟರೆಸ್ಟಿಂಗ್​ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
 
ಮುಂಬೈ ಮಳೆಯೊಂದಿಗಿನ ತಮ್ಮ ಮೊದಲ ಅನುಭವವನ್ನು ಸನ್ನಿ ಲಿಯೋನ್ ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ತಾವು ಭಾರೀ ಮಳೆಯಲ್ಲಿ ಮೂರು ದುಬಾರಿ ಕಾರುಗಳನ್ನು (Cars) ಕಳೆದುಕೊಂಡಿರುವುದಾಗಿ ಹೇಳಿದರು. ಮಾಧ್ಯಮದ ಸಂದರ್ಶನವೊಂದರ ವೇಳೆ ಸನ್ನಿ, 'ಮುಂಬೈ ಮಳೆಯ ಬಗ್ಗೆ ತನಗೆ ತಿಳಿದಿರಲಿಲ್ಲ.  ಅಷ್ಟು ಮಳೆ ಆಕಾಶದಿಂದ ಬೀಳಬಹುದು ಎಂಬ ಊಹೆಯೂ ಇರಲಿಲ್ಲ' ಎಂದಿದ್ದಾರೆ.  ಮುಂಗಾರು ಮಳೆಯ ಮೇಲಿನ ಪ್ರೀತಿಯನ್ನು ಹಂಚಿಕೊಂಡ ನಟಿ, 'ನಾನು ಮುಂಬೈನಲ್ಲಿ ವಾಸಿಸುತ್ತಿದ್ದೆ, ನಿಜವಾಗಿಯೂ ಸಮುದ್ರದ ಹತ್ತಿರ, ನಾನು ಕೆಲಸಕ್ಕಾಗಿ ಭಾರತಕ್ಕೆ ಬಂದಾಗ, ಇಲ್ಲಿಯ ಮಳೆಯ ರೌದ್ರ ನರ್ತನ ನೋಡಿ ಶಾಕ್​ ಆದೆ ಎಂದಿದ್ದಾರೆ. ಇಲ್ಲಿಯ ಹವಾಮಾನವನ್ನು  ನಾನು ಹವಾಮಾನವನ್ನು ಇಷ್ಟಪಟ್ಟೆ. ಮಾನ್ಸೂನ್ ಬಹುಶಃ ಅದರಲ್ಲಿ ಒಂದಾಗಿದೆ ಎಂದಿದ್ದಾರೆ.

ಪೋರ್ನ್​ ಸ್ಟಾರ್ ಸನ್ನಿ ಲಿಯೋನ್​ಗಾಗಿ ಅಪ್ಪನನ್ನು ಬಿಗ್​ಬಾಸ್​ ಮನೆಗೆ ಕಳುಹಿಸಿದ್ದಂತೆ ನಟಿ ಪೂಜಾ ಭಟ್​!

ಮಳೆ ಚಿಕ್ಕದಾಗಿ ಬಂದಾಗ ಓಕೆ, ಆದರೆ ಒಮ್ಮೆ ನನ್ನ ಐಷಾರಾಮಿ ಮೂರು ಕಾರುಗಳು ಕೊಚ್ಚಿ ಹೋದ ನೋವೂ ನನಗಿದೆ ಎಂದಿರೋ ನಟಿ,  ಮಳೆಗಾಲದಲ್ಲಿ ತಮಗಾದ ಕೆಟ್ಟ ಅನುಭವವನ್ನು ನೆನಪಿಸಿಕೊಂಡರು. ಮೂರು ಕಾರುಗಳ ನಷ್ಟವನ್ನು ಹೇಗೆ ಅನುಭವಿಸಿದೆ ಎಂದು ಹೇಳಿಕೊಂಡರು.  'ನಾನು ಮಳೆಯಿಂದಾಗಿ ಮೂರು ಉತ್ತಮವಾದ ಕಾರುಗಳನ್ನು ಕಳೆದುಕೊಂಡಿದ್ದೇನೆ, ಒಂದೇ ದಿನದಲ್ಲಿ ಎರಡು ಕಾರು ನನ್ನನ್ನು ಬಿಟ್ಟು ಹೋದವು. ಇದು ಭಯಾನಕವಾಗಿದೆ, ನಾನು ಸಿಕ್ಕಾಪಟ್ಟೆ ಅತ್ತಿದ್ದೆ.  ಏಕೆಂದರೆ ಭಾರತಕ್ಕೆ ಆ ಕಾರುಗಳನ್ನು  ಆಮದು ಮಾಡಿಕೊಂಡಿದ್ದೆ. ಆ ಸಂದರ್ಭದಲ್ಲಿ ದುಬಾರಿ ತೆರಿಗೆಯನ್ನು ಪಾವತಿಸಿದ್ದೆ ಎಂದಿದ್ದಾರೆ.

ತಾವು ಕಳೆದುಕೊಂಡಿರುವ ಕಾರುಗಳ ಬಗ್ಗೆ ವಿವರಿಸಿದ ನಟಿ, ಅದರಲ್ಲಿ ಒಂದು ಎಂಟು ಆಸನಗಳ ಮರ್ಸಿಡಿಸ್ ಟ್ರಕ್ ಕೂಡ ಆಗಿತ್ತು. ಆದರೆ ಅದೇ ಕೊನೆ. ಕೊನೆಗೆ ಯಾವುದೇ ಕಾರುಗಳನ್ನು ಆಮದು ಮಾಡಿಕೊಳ್ಳಲಿಲ್ಲ. ಈಗ  ನಾನು ಈಗ ನನ್ನ ಭಾರತ ನಿರ್ಮಿತ ಕಾರುಗಳನ್ನು ಪ್ರೀತಿಸುತ್ತೇನೆ. ಇಲ್ಲಿಯ ಕಾರುಗಳು ಮಳೆಗಾಲಕ್ಕೂ (Rainy Season) ತಕ್ಕಂತೆ ರೂಪಿಸಲಾಗುತ್ತದೆ ಎನ್ನುವುದನ್ನು ಅರಿತಿದ್ದೇನೆ. ಆಗ ನನ್ನ ಆಯ್ಕೆ ತಪ್ಪಾಗಿತ್ತು ಎಂದು ಎನಿಸುತ್ತದೆ ಎಂದಿದ್ದಾರೆ.  ಮಾನ್ಸೂನ್ ತಮ್ಮ ವೃತ್ತಿಪರ ಬದ್ಧತೆಗಳಿಗೆ ಎಂದಿಗೂ ಅಡ್ಡಿಯಾಗಲಿಲ್ಲ ಎಂದು ಸನ್ನಿ ಹೇಳಿದ್ದಾರೆ.  

ಸನ್ನಿ ಲಿಯೋನ್​, ಸನ್ನಿ ಡಿಯೋಲ್​ರನ್ನು ಮದ್ವೆಯಾಗಿದ್ರೆ ಏನಾಗ್ತಿತ್ತು? ನಕ್ಕುನಗಿಸುವ ಪೋಸ್ಟ್ ವೈರಲ್​

ಇನ್ನು ಸನ್ನಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು, ಮುಂಬರುವ ತಮಿಳು ಚಲನಚಿತ್ರ ಕೊಟೇಶನ್ ಗ್ಯಾಂಗ್‌ನಲ್ಲಿ ಸನ್ನಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ವಿವೇಕ್ ಕೆ. ಕುಮಾರ್ ಅವರ ನಿರ್ದೇಶನದಲ್ಲಿ ಜಾಕಿ ಶ್ರಾಫ್, ಪ್ರಿಯಾಮಣಿ, ಸಾರಾ ಅರ್ಜುನ್, ವಿ. ಜಯಪ್ರಕಾಶ್, ವಿಷ್ಣು ವಾರಿಯರ್ ಮತ್ತು ಇತರರೊಂದಿಗೆ ಸನ್ನಿ ಸೇರಿದಂತೆ ಸಮಗ್ರ ತಾರಾಗಣವಿದೆ. ಈ ವರ್ಷ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!