ಬಾಲಿವುಡ್‌ ಸ್ಟಾರ್‌ಗಳ ಫಾರಿನ್‌ ಮನೆ ಹೀಗಿದೆ ನೋಡಿ!

Suvarna News   | Asianet News
Published : Dec 27, 2019, 02:44 PM IST
ಬಾಲಿವುಡ್‌ ಸ್ಟಾರ್‌ಗಳ ಫಾರಿನ್‌ ಮನೆ ಹೀಗಿದೆ ನೋಡಿ!

ಸಾರಾಂಶ

ಬಾಲಿವುಡ್‌ ಸ್ಟಾರ್‌ಗಳು ಅಂದಮೇಲೆ ಲಕ್ಸುರಿ ಲೈಫ್‌ಸ್ಟೈಲ್‌ ಇದ್ದಿದ್ದೇ. ಫಾರಿನ್‌ನಲ್ಲಿ ಪ್ರಾಪರ್ಟಿ, ಮನೆ ಮಾಡೋದು ಅವ್ರಿಗೆಲ್ಲ ಪ್ರತಿಷ್ಠೆಯ ವಿಷ್ಯ. ಬಾಲಿವುಡ್‌ ನಟ ನಟಿಯರ ಫಾರಿನ್‌ ಐಷಾರಾಮಿ ಲೈಫ್‌ಸ್ಟೋರಿ ಇಲ್ಲಿದೆ.

1. ಪ್ರಿಯಾಂಕಾ ಚೋಪ್ರಾ ಮನೆ ವ್ಯಾಲ್ಯೂ ಎಷ್ಟು ಗೊತ್ತಾ?

ಅಂದಾಜು 20 ಮಿಲಿಯನ್‌ ಡಾಲರ್‌ಗಳಿಗೂ ಅಧಿಕ ಬೆಲೆಯ ಐಷಾರಾಮಿ ಮನೆ ಪ್ರಿಯಾಂಕಾ ಚೋಪ್ರಾದ್ದು. ಈ ಬೆಲೆ ಅಂದರೆ ಇಂಡಿಯನ್‌ ರುಪಾಯಿಗಳಲ್ಲಿ ಎಷ್ಟಾಗುತ್ತೆ ಅಂತ ಅಂದಾಜು ಮಾಡಿ. ಸುಮಾರು 144 ಕೋಟಿ ರುಗಳ ಲಕ್ಸೂರಿ ಮನೆ ಇದು. 7 ಬೆಡ್‌ ರೂಮ್‌, 11 ಬಾತ್‌ ರೂಮ್‌, ಎತ್ತರದ ಸೀಲಿಂಗ್‌ಗಳು, ವಿಶಾಲ ಸ್ವಿಮ್ಮಿಂಗ್‌ ಪೂಲ್‌, ಸುತ್ತಲೂ ಜಾಗ, ಮನೆಯ ಅಕ್ಕಪಕ್ಕ ಹಸಿರು ಪರಿಸರ. ದೊಡ್ಡ ದೊಡ್ಡ ಗಾಜಿನ ಕಿಟಕಿಗಳ ಪರದೆ ಎಳೆದರೆ ಹಸಿರು ವನರಾಜಿಯ ದರ್ಶನ.

ಖ್ಯಾತ ನಟನ ನಾಲ್ವರು ಪುತ್ರಿಯರಲ್ಲಿ ಈಕೆಗೆ ಇದ್ದಾರೆ ಮಿಲಿಯನ್ ಫಾಲೋವರ್ಸ್!

ಸೂರ್ಯೋದಯ ಸೂರ್ಯಸ್ತದ ನಯನ ಮನೋಹರ ದೃಶ್ಯ. ಈ ಜಾಗ 20,000ಸ್ಕ್ವಾರ್‌ ಫೀಟ್‌ ವಿಸ್ತೀರ್ಣದ್ದು. ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ಮನೆ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನ್ಸ್‌ ರೊಮ್ಯಾಂಟಿಕ್‌ ಬದುಕಿಗೆ ಸಾಕ್ಷಿಯಾಗಿದೆ. ಮನೆಗೊಬ್ಬ ಹೊಸ ಅತಿಥಿಯ ಆಗಮನವಾದರೆ ಅದಕ್ಕೂ ಅನುಕೂಲವಾಗುವಂಥಾ ಮನೆಯನ್ನು ನೋಡಿಕೊಂಡಿರೋದು ವಿಶೇಷ.

2. ಬಾಲಿವುಡ್‌ ಬಾದ್‌ಷಾನ ಫಾರಿನ್‌ ಆಸ್ತಿ ಕೇಳಿದ್ರೆ ದಂಗಾಗ್ತೀರಾ!

ಮುಂಬೈಯಲ್ಲಿ ಸುಮಾರು 200 ಕೋಟಿ ರು ಬೆಲೆಬಾಳುವ ‘ಮನ್ನತ್‌’ ಮಹಲ್‌ನ ಒಡೆಯ ಶಾರುಖ್‌ ಖಾನ್‌. ದುಬೈ ಶಾರುಖ್‌ ಖಾನ್‌ಗೆ ಎರಡನೇ ಮನೆ ಇದ್ದಹಾಗೆ. ಇಲ್ಲೊಂದು ದ್ವೀಪ ಇದೆ. ಪಾಮ್‌ ಜುಮೇರಯ್‌ ಅಂತ. ಇದು ವಿಶ್ವದ ಅತೀ ದೊಡ್ಡ ಕೃತಕವಾಗಿ ಸೃಷ್ಟಿಸಿದ ದ್ವೀಪ. ಇಲ್ಲಿ ಶಾರುಕ್‌ ಹಾಲಿಡೇ ಹೋಮ್‌ ಇದೆ. 14 ಸಾವಿರ ಸ್ಕ್ವೇರ್‌ ಫೀಟ್‌ ವಿಸ್ತೀರ್ಣದ ಶಾರುಖ್‌ ಸಿಗ್ನೇಚರ್‌ ಹೋಂ ಇದು. ಇದರಲ್ಲಿ ಎರಡು ಫೆä್ಲೕರ್‌ಗಳಿದ್ದು ಎರಡು ಮನೆಗಳಿವೆ. ಪ್ರತೀ ಮನೆ 8,500 ಸ್ಕ್ವೇರ್‌ಫೀಟ್‌ ವಿಸ್ತೀರ್ಣದ್ದು. ಪ್ರತೀ ಮನೆಯೂ ಆರು ಬೆಡ್‌ ರೂಮ್‌, ಲಿವಿಂಗ್‌ ಏರಿಯಾ, ಹಲವು ಬಾತ್‌ ರೂಮ್‌, ಸ್ವಿಮ್ಮಿಂಗ್‌ ಪೂಲ್‌ಗಳನ್ನು ಒಳಗೊಂಡಿದೆ.

ಇದಲ್ಲದೇ ಲಂಡನ್‌ನಲ್ಲಿ ಲಕ್ಸೂರಿ ಮನೆ ಇದೆ. ಇದೊಂದು ಅಪಾರ್ಟ್‌ಮೆಂಟ್‌ ಮಾದರಿಯ ಮನೆ. ಸುಮಾರು 170 ಕೋಟಿಗೂ ಅಧಿಕ ಮೌಲ್ಯದ್ದು. ಎಂಥಾ ಶ್ರೀಮಂತ ಇಂಗ್ಲೀಷ್‌ ವ್ಯಕ್ತಿಗೂ ಬಲು ದುಬಾರಿ ಎನಿಸುವ ಈ ಮನೆ ಶಾರಖ್‌ ಅಂತಸ್ತಿಗೆ ತಕ್ಕ ಹಾಗಿದೆ.

ಕಾಲಿವುಡ್ ಸೂಪರ್ ಸ್ಟಾರ್ ಶಿವ ಕಾರ್ತಿಕೇಯನ್‌ ಲವ್‌ ಸ್ಟೋರಿ ಇದು!

3. ಐಶ್ವರ್ಯಾ ರೈ ದುಬೈ ಮನೆ ಏನ್‌ ಚಂದ

ಬಾಲಿವುಡ್‌ನ ಎವರ್‌ಗ್ರೀನ್‌ ಲೇಡಿ ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ದಂಪತಿಗೆ ಮುಂಬೈಯಲ್ಲೊಂದು ಐಷಾರಾಮಿ ಮನೆ ಇದೆ. ಇದರ ಜೊತೆಗೆ ದುಬೈನಲ್ಲೂ ಸುಂದರವಾದ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಈ ಬಚ್ಚನ್‌ ದಂಪತಿ. ಅತ್ಯಾಧುನಿಕ ಸ್ಟೈಲ್‌ನ ಅಡುಗೆ ಮನೆ, ಉಡುಗೆಗಳನ್ನಿಡಲೆಂದೇ ಒಂದು ರೂಮ್‌, ಅಲ್ಲಿ ನವೀನ ವಾರ್ಡ್‌ರೋಬ್‌ಗಳು, ಮನೆ ಎದುರು, ರೂಮ್‌ ಪಕ್ಕದಲ್ಲಿ ಸ್ವಿಮ್ಮಿಂಗ್‌ ಪೂಲ್‌ ಇರುವ ಈ ಮನೆಯ ಸಖತ್‌ ಲಕ್ಸೂರಿಯಾಗಿದ್ದು, ಐಶ್‌ ಲೈಫ್‌ಸ್ಟೈಲ್‌ಗೆ ಹೇಳಿ ಮಾಡಿಸಿದಂತಿದೆ. ಐಶ್‌ ಮಂಗಳೂರು ಮೂಲದವರು. ಮುಂಬೈಯಲ್ಲಿ ಬೆಳೆದವರು, ದುಬೈಗೂ ಕಾರ್ಯಕ್ಷೇತ್ರ ವಿಸ್ತರಿಸಿದವರು. ಇವುಗಳೆಲ್ಲ ಕರಾವಳಿ ಪ್ರದೇಶಗಳು ಅನ್ನೋದು ವಿಶೇಷ.

ಇತರೆ ಸ್ಟಾರ್‌ಗಳು

ಬಾಲಿವುಡ್‌ನ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ಗೆ ಒಟ್ಟು ಎಂಟು ಲಕ್ಸೂರಿ ಹೋಂಗಳಿವೆ. ಕನಸಿನ ಸಿಟಿ ಪ್ಯಾರಿನ್‌ನಲ್ಲಿ ಚಂದದೊಂದು ಮನೆಯನ್ನು ಕೆಲವು ವರ್ಷಗಳ ಹಿಂದೆ ಕೊಂಡಿದ್ದರು. ಈ ಮನೆಗಳೆಲ್ಲ ಬಿಗ್‌ ಬಿ ಟೇಸ್ಟ್‌ಗೆ ತಕ್ಕಂತಿವೆ. ತಾನಾಯ್ತು, ತನ್ನ ಶೂಟಿಂಗ್‌, ಫ್ರೆಂಡ್ಸ್‌ ಆಯ್ತು ಅಂತಿರೋ ಸಲ್ಮಾನ್‌ ಅವರ ಮುಂಬೈ ಮನೆ ಅವರ ಫ್ಯಾನ್‌ಗಳಿಗೆ ಟೂರಿಸ್ಟ್‌ ಸ್ಪಾಟ್‌. ಚಂದದ ಹಸಿರು ಆವರಣದಲ್ಲಿರುವ ಆ ಮನೆ ಹೊರತುಪಡಿಸಿ ದುಬೈನಲ್ಲೂ ಇವರಿಗೆ ಮನೆ ಇದೆ.

ವಿಶ್ವಸುಂದರಿ ಮಗಳ ನಾಟಿ ಪೋಟೋಗಳಿವು!

ಸೈಫ್‌-ಕರೀನಾ ಸ್ವಿಜರ್‌ಲ್ಯಾಂಡ್‌ನ ಮನಮೋಹಕ ಜಾಗದಲ್ಲೊಂದು ಚಂದದ ಮನೆ ಹೊಂದಿದ್ದಾರೆ. ಅಕ್ಷಯ್‌ ಕುಮಾರ್‌ ಕೆನಡಾದ ಬೆಟ್ಟದ ಮೇಲೊಂದು ಸುಂದರವಾದ ಮನೆ ಖರೀದಿಸಿದ್ದಾರೆ. ಶಿಲ್ಪಾ ಶೆಟ್ಟಿಗೆ ಲಂಡನ್‌, ದುಬೈನಲ್ಲಿ ಐಷಾರಾಮಿ ಬಂಗಲೆಗಳಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actor Dhanush Wedding: 20 ವರ್ಷದ ಮಗನಿರೋ ತಮಿಳು ನಟ ಧನುಷ್‌ಗೆ ಮದುವೆ, ನೆಟ್‌ವರ್ಥ್ ಏನು?
ಮೊದಲು 'ಕಪಾಲಿ ಥಿಯೇಟರ್' ಇದ್ದ ಜಾಗದಲ್ಲಿ ಈಗ ತೆಲುಗು ಸ್ಟಾರ್ ಮಹೇಶ್ ಬಾಬು ಸಿನಿಮಾಸ್ ಶುರು..!