ರಿಲೀಸ್‌ಗೂ ಮುನ್ನ 'ಚಪಕ್‌'ಗೆ ಎದುರಾಯ್ತು ಸಂಕಷ್ಟ!

By Suvarna News  |  First Published Dec 25, 2019, 2:21 PM IST

ಪೋಸ್ಟರ್‌ನಿಂದಲೇ ಗಮನ ಸೆಳೆದಿದ್ದ ದೀಪಿಕಾ ಪಡುಕೋಣೆ 'ಚಪಕ್' ಚಿತ್ರಕ್ಕೆ ಕೃತಿಚೌರ್ಯದ ಆರೋಪ ಎದುರಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರ ರಿಲೀಸ್ ಆಗಲಿದ್ದು ಸಂಕಷ್ಟ ಎದುರಾಗಿದೆ. 


ದೀಪಿಕಾ ಪಡುಕೋಣೆ ಅಭಿನಯದ ಚಪಕ್ ಚಿತ್ರದ ಟೀಸರ್ ಕೆಲದಿನಗಳ ಹಿಂದೆ ರಿಲೀಸ್ ಆಗಿದ್ದು ಬಾಲಿವುಡ್‌ನಲ್ಲಿ ಬಾರೀ ಸಂಚಲನ ಮೂಡಿಸಿದೆ. ಮಾಲತಿಯಾಗಿ ದೀಪಿಕಾ ಲುಕ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಜನವರಿ 10 ಕ್ಕೆ ಬಿಡುಗಡೆಯಾಗಬೇಕಿದ್ದ ಚಪಕ್‌ಗೆ ಸಂಕಷ್ಟ ಎದುರಾಗಿದೆ. ಚಿತ್ರ ರಿಲೀಸ್‌ಗೂ ಮುನ್ನ ವಿವಾದದ ಹೊಗೆಯಾಡುತ್ತಿದೆ. 

ಮಾತೇ ಬರದಂತೆ ತಡೆಯುತ್ತದೆ 'ಚಪಕ್' ಟ್ರೇಲರ್; ದೀಪಿಕಾ ಸಿಂಪ್ಲಿ ಸೂಪರ್!

Tap to resize

Latest Videos

ಚಿತ್ರಕಥೆಯನ್ನು ಪ್ರಶ್ನಿಸಿ ಲೇಖಕ ರಾಕೇಶ್ ಭಾರ್ತಿ ಎಂಬುವವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 'ಆ್ಯಸಿಡ್ ಸಂತ್ರಸ್ತೆಯ ಮೂಲ ಕಥೆಯನ್ನು ಬರೆದಿದ್ದು ನಾನು. ಅದನ್ನು ಯಥಾವತ್ತಾಗಿ ಚಿತ್ರದಲ್ಲಿ ಕಾಪಿ ಮಾಡಲಾಗಿದೆ. ಈ ಚಿತ್ರದ ಕ್ರೆಡಿಟನ್ನು ನನಗೇ ಕೊಡಬೇಕೆಂದು' ಕೇಳಿಕೊಂಡಿದ್ದಾರೆ. 

'ಚಪಕ್' ಟ್ರೇಲರ್ ನೋಡಿ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಜೀವನಾಧಾರಿತ ಕಥೆಯನ್ನು ಇಟ್ಟುಕೊಂಡು ಚಪಕ್ ಸಿನಿಮಾವನ್ನು ಮಾಡಲಾಗುತ್ತಿದೆ. ದೀಪಿಕಾ ಲುಕ್‌ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. 

 

click me!