ಫ್ಯಾಷನ್ ಡಿಸೈನರ್ ಮನೀಶ್​ ಸೊಂಟಕ್ಕೆ ಕೈಹಾಕಿದ ಶಾಹಿದ್​ ಕಪೂರ್​ ಪತ್ನಿ! ಮುಂದೇನಾಯ್ತು ನೋಡಿ...

By Suchethana D  |  First Published Oct 9, 2024, 5:31 PM IST

ಕಾರ್ಯಕ್ರಮವೊಂದರಲ್ಲಿ ಫ್ಯಾಷನ್ ಡಿಸೈನರ್ ಮನೀಶ್​ ಮಲ್ಹೋತ್ರಾ ಅವರ ಸೊಂಟಕ್ಕೆ ಶಾಹಿದ್​ ಕಪೂರ್​ ಪತ್ನಿ ಮೀರಾ ರಜಪೂರ್​ ಕೈಹಾಕಿದಾಗ ಅವರು ಮಾಡಿದ್ದೇನು? 
 


ಕರಣ್ ಜೋಹರ್, ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ರೂಪದರ್ಶಿ ಮೀರಾ ಕಪೂರ್ ಒಂದು ಈವೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅದರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದು ವೈರಲ್​ ಆಗಲು ಕಾರಣ ಮೂವರೂ ಒಟ್ಟಿಗೇ ಕಾಣಿಸಿಕೊಂಡಿದ್ದಕ್ಕೆ ಅಲ್ಲ, ಬದಲಿಗೆ, ಮೀರಾ ಕಪೂರ್​ ಅವರು ಮನೀಶ್​ ಅವರ ಸೊಂಟದ ಮೇಲೆ ಕೈಹಾಕಿ ಫೋಟೋಗೆ ಪೋಸ್​ ಕೊಡಲು ಮುಂದಾದಾಗ, ಮನೀಶ್​ ಅವರು ಮೀರಾ ಅವರ ಕೈಯನ್ನು ಸೊಂಟದ ಮೇಲಿನಿಂದ ತೆಗೆದು ಕೆಳಗೆ ಹಾಕಿರುವ ಕಾರಣದಿಂದ! 

ಮನೀಶ್​ ಅವರು  ಫ್ಯಾಷನ್ ಡಿಸೈನರ್,  ಕಾಸ್ಟ್ಯೂಮ್ ಸ್ಟೈಲಿಸ್ಟ್, ಉದ್ಯಮಿ ಮತ್ತು ಭಾರತದ ಮುಂಬೈ ಮೂಲದ ಸಿನಿಮಾ  ನಿರ್ಮಾಪಕರು.  ಫ್ಯಾಷನ್ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಪ್ರಿಯದರ್ಶಿನಿ ಸ್ಮಾರಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಾತ್ರವಲ್ಲದೇ  1996 ರಲ್ಲಿ ಬಿಡುಗಡೆಯಾದ ರಂಗೀಲಾ  ಚಿತ್ರಕ್ಕಾಗಿ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡವರು.  ಮನೀಶ್ ಅವರು ಈಚೆಗೆ  ನಾಲ್ಕು ಹೊಸ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ. ಅವೆಂದರೆ ಮನೀಶ್ ಮಲ್ಹೋತ್ರಾ ಬ್ಯೂಟಿ, ಮನೀಶ್ ಮಲ್ಹೋತ್ರಾ ಜ್ಯುವೆಲ್ಲರಿ, ಫಿಲ್ಮ್ ಪ್ರೊಡಕ್ಷನ್ ಕಂಪನಿ ಮತ್ತು ಹೋಮ್ ಡೆಕೋರ್. ಸಿನಿ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರೋ, ಇವರ ಜೊತೆ ಫೋಟೋಗೆ ಪೋಸ್​ ಕೊಡುವುದು ಎಂದರೆ ಬಹುತೇಕ ಎಲ್ಲಾ ತಾರೆಯರಿಗೂ ಇಷ್ಟವೇ. ಅದೇ ರೀತಿ ನಟಿ ಮೀರಾ ಕಪೂರ್ ಕೂಡ ಕಾರ್ಯಕ್ರಮವೊಂದರಲ್ಲಿ ಫೋಟೋಗೆ ಪೋಸ್​ ಕೊಡಲು ಹೋಗಿದ್ದು, ಅದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

Tap to resize

Latest Videos

undefined

ಶೂಟಿಂಗ್​ ವೇಳೆ ಭಾರಿ ಅವಘಡ: ನಟಿ ತುಳಸಿ ಕೂದಲೆಳೆಯಲ್ಲಿ ಪಾರು! ಶಾಕಿಂಗ್​ ವಿಡಿಯೋ ವೈರಲ್​

ಈ ಕಾರ್ಯಕ್ರಮದಲ್ಲಿ ಮನೀಶ್​, ಮೀರಾ  ಮತ್ತು ನಿರ್ಮಾಪಕ ಕರಣ್​ ಜೋಹರ್​ ಜೊತೆಯಲ್ಲಿ ಫೋಟೋಗೆ ಪೋಸ್​ ಕೊಡಲು ನಿಂತಿದ್ದಾರೆ. ಸಾಮಾನ್ಯವಾಗಿ ಈ ರೀತಿ ಪೋಸ್​ ಕೊಡುವಾಗ ಹೆಗಲ ಮೇಲೆ ಇಲ್ಲವೇ ಸೊಂಟದ ಮೇಲೆ ಕೈಹಾಕುವುದು ಮಾಮೂಲು. ಅದೇ ರೀತಿ ಮಧ್ಯ ನಿಂತಿರುವ ಮೀರಾ ಅವರು ಅತ್ತ ಕರಣ್​ ಹಾಗೂ ಇತ್ತ ಮನೀಶ್​ ಅವರ ಸೊಂಟವನ್ನು ಬಳಸಿದ್ದಾರೆ. ಕರಣ್​ ಸುಮ್ಮನಿದ್ದಾರೆ. ಆದರೆ ಇದು ಯಾಕೋ ಮನೀಶ್​ ಅವರಿಗೆ ಸರಿ ಕಾಣಿಸಲಿಲ್ಲ. ಅವರು ಕಷ್ಟಪಟ್ಟು ಕೈಯನ್ನು ಬಿಡಿಸಿ ಕೆಳಕ್ಕೆ ಇರಿಸಿದ್ದಾರೆ. ಇದರಿಂದ ಮೀರಾ ಸ್ವಲ್ಪ ಇರುಸುಮುರುಸುಗೆ ಒಳಗಾದಂತೆ  ಕಂಡುಬಂದರು. ಇದನ್ನು ನೋಡಿದ ಹಲವರು ಮನೀಶ್​ ಅವರು ಜಂಟಲ್​ಮೆನ್​ ಎನ್ನುತ್ತಿದ್ದಾರೆ. 

ಇನ್ನು ಮೀರಾ ಕಪೂರ್​ ಕುರಿತು ಹೇಳುವುದಾದರೆ, ಇವರು, ನಟ ಶಾಹಿದ್ ಕಪೂರ್ ಪತ್ನಿ.  2015ರಲ್ಲಿ ನಡೆದ ಇವರ ಮದುವೆ ಸಕತ್​ ಸುದ್ದಿಯಾಗಿತ್ತು. ಇದಕ್ಕೆ ಕಾರಣ ಇವರಿಬ್ಬರ ನಡುವೆ 14 ವರ್ಷಗಳ ಅಂತರ ಇರುವುದು. ಮದುವೆ ಸಂದರ್ಭದಲ್ಲಿ ಮೀರಾ ಅವರಿಗೆ 20 ವರ್ಷ ವಯಸ್ಸು. ಶಾಹಿದ್​ಗೆ 34 ವರ್ಷ ವಯಸ್ಸಾಗಿತ್ತು. ಅಷ್ಟಕ್ಕೂ ಲವ್​ ಸ್ಟೋರಿ ಶುರುವಾಗಿದ್ದು,  ಮೀರಾ  16 ವರ್ಷದ ಬಾಲಕಿ ಇದ್ದಾಗ.  ಫ್ಯಾಮಿಲಿ ಫ್ರೆಂಡ್​ ಮನೆಯ ಕಾರ್ಯಕ್ರಮದಲ್ಲಿ ಶಾಹಿದ್ ಭಾಗಿ ಆಗಿದ್ದರು. ಅಲ್ಲಿಗೆ ಮೀರಾ ಕೂಡ ಬಂದಿದ್ದರು. ಅಲ್ಲಿ ಇವರಿಬ್ಬರ ಮದುವೆ ಬಗ್ಗೆ ಕುಟುಂಬದವರೇ ಚರ್ಚಿಸಿದ್ದರಂತೆ. ವಿಷಯ ಇಬ್ಬರಿಗೂ ಗೊತ್ತಾಗಿ ಸುಮಾರು ಏಳು ಗಂಟೆ ಮಾತನಾಡಿ ಮದುವೆಯಾಗಲು ಸಮ್ಮತಿ ಸೂಚಿಸಿದ್ದರು ಮೀರಾ. ಇವರಿಗೆ ಮಿಶಾ ಮತ್ತು ಜೈನ್ ಎಂಬ ಮಕ್ಕಳಿದ್ದಾರೆ. 

ಬಾಲಿವುಡ್​ ಸ್ಟಾರ್ಸ್​ ಸನ್ನಿ ಲಿಯೋನ್-ಇಮ್ರಾನ್​ ಹಶ್ಮಿ ಮಗ ಬಿಹಾರದಲ್ಲಿ! ಮನೆ ರೆಡ್​ಲೈಟ್​ ಏರಿಯಾದಲ್ಲಿ!

 

click me!