ಇವರೇ ನೋಡಿ ಬಾಲಿವುಡ್‌ನ ಅತಿ ಶ್ರೀಮಂತ ವ್ಯಕ್ತಿ; ಇವರ ಸಂಪತ್ತು ಎಣಿಸಲು ಇಡೀ ಜೀವನ ಸಾಕಾಗಲ್ಲ!.

By Mahmad RafikFirst Published Oct 9, 2024, 4:58 PM IST
Highlights

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ನಟಿಯರಲ್ಲ. ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇವರು 13,000 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಮುಂಬೈ: ನಿಮಗೆ ಬಾಲಿವುಡ್ ಅಂಗಳದ ಕೋಟ್ಯಧಿಪತಿ ಯಾರು ಅಂತ ಗೊತ್ತಿದೆಯಾ? ಯಾರನ್ನಾದರೂ ಕೇಳಿದ್ರೆ ಬಹುತೇಕರು ಶಾರೂಖ್ ಖಾನ್, ಅಮಿತಾಬ್ ಬಚ್ಚನ್, ಕರಣ್‌ ಜೋಹರ್, ಸಂಜಯ್ ಲೀಲಾ ಬನ್ಸಾಲಿ ಎಂದು ಹೇಳಬಹುದು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಥವಾ ನಟಿ ಯಾರು ಇರಬಹುದು ಎಂಬ ಲೆಕ್ಕದಲ್ಲಿ ಶ್ರೀಮಂತರು ಯಾರು ಎಂಬುದನ್ನು ಊಹಿಸಬಹುದು. ಒಂದು ವೇಳೆ ನೀವು ಸಹ ಹೀಗೆ ಊಹೆ ಮಾಡಿದರೆ ಖಂಡಿತ ತಪ್ಪು. ಹಾಗಾದ್ರೆ ಬಾಲಿವುಡ್ ಅಂಗಳದ ಶ್ರೀಮಂತ ವ್ಯಕ್ತಿ ಯಾರು ಎಂಬುದನ್ನು ನೋಡೋಣ ಬನ್ನಿ. 

ಸಿನಿಮಾ ನಿರ್ಮಾಪಕ ರೋನಿ ಸ್ಕ್ರೂವಾಲಾ ಬಾಲಿವುಡ್ ಲೋಕದ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಳ್ಳುತ್ತಾರೆ. ಫೋರ್ಬ್ಸ್ ಬಿಡುಗಡೆ ಮಾಡುವ ಶ್ರೀಮಂತರ ಪಟ್ಟಿಯಲ್ಲಿ ರೋನಿ ಅವರ ಹೆಸರು ಬರುತ್ತದೆ. ಫೋರ್ಬ್ಸ್ ವರದಿ ಪ್ರಕಾರ, ರೋನಿ ಸ್ಕ್ರೂವಾಲಾ ಅವರ ಒಟ್ಟು ನಿವ್ವಳ ಆಸ್ತಿ 1.55 ಬಿಲಿಯನ್ ಡಾಲರ್. ಅಂದರೆ ಅಂದಾಜ 13,000 ಕೋಟಿ ರೂಪಾಯಿ ಆಗಿದೆ. ಹಾಗಾಗಿ ನಿರ್ಮಾಪಕ ರೋನಿ ಬಾಲಿವುಡ್ ಜಗತ್ತಿನ ಬಿಲಿಯೇನರ್ ಆಗಿದ್ದು, 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 78ನೇ ಸ್ಥಾನದಲ್ಲಿದ್ದಾರೆ. 

Latest Videos

ರೋನಿ ಅವರ ನಿಜವಾದ ಹೆಸರು ರೊಹಿಂಟನ್ ಸೋಲೀ ಸ್ಕ್ರೂವಾಲಾ. 1956 ಸೆಪ್ಟೆಂಬರ್ 8ರಂದು ಮುಂಬೈನ ಪಾರ್ಸಿ ಕುಟುಂಬದಲ್ಲಿ ಜನಿಸಿದ ಇವರನ್ನು ರೋನಿ ಎಂಬ ಹೆಸರಿನಿಂದಲೇ ಜನಪ್ರಿಯರು. 70ರ ದಶಕದಲ್ಲಿ ಟೂಥ್‌ಬ್ರಶ್ ಕಂಪನಿಯನ್ನು ಆರಂಭಿಸಿದ್ದರು. ನಂತರ 1981ರಲ್ಲಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕೇಬಲ್ ಟಿವಿ ಎಂಬ ಪರಿಕಲ್ಪನೆಯ ಶ್ರೇಯಸ್ಸು ರೋನಿ ಸ್ಕ್ರೂವಾಲಾವರಿಗೆ ಸಲ್ಲುತ್ತದೆ. 80ರ ದಶಕದಲ್ಲಿ ಜನರು ಕೇವಲ ದೂರದರ್ಶನದ ಮೇಲೆ ಅವಲಂಬಿತರಾಗಿದ್ದರು. ಈ ಸಮಯದಲ್ಲಿ ರೋನಿ ಕೇಬಲ್ ಟಿವಿ ಪರಕಲ್ಪನೆಯನ್ನು ಪರಿಚಯಿಸಿದರು. ಇದಾದ ಬಳಿಕ 1990ರಲ್ಲಿ ಯುಟಿವಿ ಸಾಫ್ಟ್‌ವೇರ್ ಕಮ್ಯುನಿಕೇಷನ್ ಎಂಬ ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಭಿಸಿದರು. ರೋನ ಅವರ ಈ ಮಹತ್ವದ ಹೆಜ್ಜೆ ದೂರದರ್ಶನ ಮಾಧ್ಯಮದಲ್ಲಿ ಹೊಸ ಪರ್ವಕ್ಕೆ ಕಾರಣವಾಯ್ತು. 

ಪ್ರಧಾನಿ ಸೂಚನೆ ಮೇರೆಗೆ ಮಾಡಿದ್ರು ಸಿನಿಮಾ, ಕೇವಲ 24 ಗಂಟೆಯಲ್ಲಿ ರೆಡಿಯಾದ ಕಥೆಯ ಫಿಲಂ ಆಗಿತ್ತು ಸೂಪರ್ ಹಿಟ್‌

ಇಂದು ರೋನಿ ಸ್ಕ್ರೂವಾಲಾ RSVP ಮೋವಿಸ್ ಹೆಸರಿನ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. RSVP ಮೋವಿಸ್ ಮೂಲಕವೇ ಸ್ವತಃ ಸ್ಕ್ರಿಪ್ಟ್‌ ಮತ್ತು ಸ್ಕ್ರೀನ್ ಪ್ಲೇ ಬರೆಯುತ್ತಾರೆ. ನಿರ್ದೇಶಕರ ಜೊತೆಗೂಡಿ ಸಿನಿಮಾ ನಿರ್ಮಾಣಗಳನ್ನು ರೋನಿ ಸ್ಕ್ರೂವಾಲಾ ಮಾಡುತ್ತಾರೆ. 2017ರಲ್ಲಿ ಇವರ ಪ್ರೊಡಕ್ಷನ್ ಹೌಸ್‌ ನಿಂದ "ಲವ್ ಪರ್ ಸ್ಕ್ವೆರ್ ಫೂಟ್" (Love per Square Foot) ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದರು. ಇದಾದ ಬಳಿಕ ಲಸ್ಟ್ ಸ್ಟೋರಿಸ್, ಪಿಹೂ, ಉರಿ, ಮರ್ದ್ ಕೋ ದರ್ದ್ ನಹೀ ಹೋತಾ, ದಿ ಸ್ಕೈ ಇಸ್ ಪಿಂಕ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ Hurun India Rich List ನಲ್ಲಿ, ಬಾಲಿವುಡ್‌ ಐವರು ಸ್ಥಾನ ಪಡೆದುಕೊಂಡಿದ್ದರು. ಈ ಪಟ್ಟಿಯಲ್ಲಿ 7300 ಕೋಟಿ ರೂ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದರು. ಹೃತಿಕ್ ರೋಷನ್, ಅಮಿತಾಬ್ ಬಚ್ಚನ್ ಮತ್ತು ಕರಣ್ ಜೋಹರ್ ಜೊತೆಗೆ ಜೂಹಿ ಚಾವ್ಲಾ ಹೆಸರು ಕೂಡ ಈ ಪಟ್ಟಿಯಲ್ಲಿತ್ತು.

ಮೇಲುಡುಗೆ ಧರಿಸದೇ ಬಂದು ಕುಳಿತ ಅನನ್ಯಾ ಅಕ್ಕ;  ಕ್ಲಾಸ್ ತೆಗೆದುಕೊಂಡ ಅಪ್ಪ ಪಾಂಡೆ

click me!