ಹ್ಯಾಪ್ಪಿ ನ್ಯೂ ಇಯರ್ ಚಿತ್ರದಲ್ಲಿ ಶಾರುಖ್ ಖಾನ್ ಅವರನ್ನು ಹೀರೋ ಮಾಡದಂತೆ ತಮಗೆ 10 ಕೋಟಿ ಆಫರ್ ಬಂದಿತ್ತು ಎನ್ನುವ ಶಾಕಿಂಗ್ ವಿಷ್ಯ ಬಹಿರಂಗಗೊಳಿಸಿದ ನಿರ್ದೇಶಕಿ ಫರಾ ಖಾನ್. ಅವರು ಹೇಳಿದ್ದೇನು?
ಅದು 2014ರ ಸಮಯ. ಹ್ಯಾಪ್ಪಿ ನ್ಯೂ ಇಯರ್ ಚಿತ್ರಕ್ಕಾಗಿ ನಿರ್ದೇಶಕಿ ಫರಾ ಖಾನ್ ಅವರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ನಾಯಕ-ನಾಯಕಿಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಇಬ್ಬರೂ ಒಪ್ಪಿಗೆ ಸೂಚಿಸಿದ್ದರು ಕೂಡ. ಆದರೆ ಅದೇ ಸಮಯದಲ್ಲಿ ಫರಾ ಅವರ ಬಳಿಗೆ ಬಂದಿದ್ದ ನಿರ್ಮಾಪಕರೊಬ್ಬರು ಹತ್ತು ಕೋಟಿ ರೂಪಾಯಿ ಆಫರ್ ನೀಡಿದ್ದರಂತೆ. ಈ ಆಫರ್ ಏಕೆಂದರೆ ಈ ಚಿತ್ರದಿಂದ ಶಾರುಖ್ ಖಾನ್ ಅವರನ್ನು ಹೊರಗಿಟ್ಟು ತಮ್ಮ ಮಗನನ್ನು ನಾಯಕ ಮಾಡುವಂತೆ! ಆದರೆ ಈ ಆಫರ್ ಅನ್ನು ಫರಾ ಖಾನ್ ತಿರಸ್ಕರಿಸಿದ್ದರಂತೆ...
ಈ ಕುರಿತು ಫರಾ ಅವರು ಇದೀಗ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಶಾರುಖ್ ಖಾನ್ ಅವರನ್ನು ಹೀರೋ ಸ್ಥಾನದಿಂದ ತೆಗೆಯಲು ನನಗೆ 10 ಕೋಟಿ ರೂಪಾಯಿ ಆಫರ್ ಬಂದಿತ್ತು. ಆದರೆ, ಈ ಆಫರ್ನ ನಾನು ಒಪ್ಪಿಕೊಂಡಿಲ್ಲ. ಈ ಆಫರ್ ಕೊಟ್ಟವರು ನಿರ್ಮಾಪಕರು ಎಂದಿರುವ ಫರಾ, ಅವರ ಹೆಸರನ್ನು ಹೇಳದೇ ಈ ಆಫರ್ ಅನ್ನು ನೇರವಾಗಿ ತಿರಸ್ಕರಿಸಿದೆ. ನೋ ಎಂದೆ. 10 ಕೋಟಿ ರೂಪಾಯಿ ಪಡೆದು ಶಾರುಖ್ ಅವರನ್ನು ಚಿತ್ರದಿಂದ ಹೊರ ಹಾಕಿದರೆ ಎಲ್ಲರೂ ಏನು ಭಾವಿಸಬಹುದು ಎಂಬ ಆಲೋಚನೆ ಬಂದಿತ್ತು. ಅಷ್ಟೇ ಅಲ್ಲದೇ ನಿರ್ಮಾಪಕರು ತಮ್ಮ ಮಗನನ್ನು ಈ ಚಿತ್ರಕ್ಕೆ ಹೀರೋ ಮಾಡಲು ಹೇಳಿದ್ದರು. ಇದು ನನಗೆ ಸರಿ ಕಾಣಿಸಲಿಲ್ಲ ಎಂದಿದ್ದಾರೆ.
ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ- ರೇಪ್ ಸೀನ್ ಮಾಡಿಸುವಷ್ಟರಲ್ಲಿ ಸುಸ್ತಾದ ನಟ, ನಿರ್ದೇಶಕ!
‘ನಾನು ಹೀಗೆ ಮಾಡಲು ಸಾಧ್ಯವೇ ಇಲ್ಲ ಎಂದು ನೇರಾನೇರವಾಗಿ ಹೇಳಿದೆ. ನಾನು ಸಿನಿಮಾಗೆ ಅನ್ಯಾಯ ಮಾಡಲ್ಲ. 10 ಕೋಟಿ ರೂಪಾಯಿ ಪಡೆದು ನಾನು ಶಾರುಖ್ನ ಹೊರ ಹಾಕಿದೆ ಎಂಬುದು ಅವರಿಗೆ ಗೊತ್ತಾದರೆ ಹೇಗನ್ನಿಸಬೇಡ? ನಾನು ಹಾಗೆ ಮಾಡಲಾರೆ ಎಂದೆ’ ಎಂದು ಅಂದು ನಡೆದ ಘಟನೆಯನ್ನು ಫರಾ ಖಾನ್ ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.
ಅಂದಹಾಗೆ ಫರಾ ಅವರು, ‘ತೀಸ್ ಮಾರ್ ಖಾನ್’, ‘ಮೇ ಹೂ ನಾ’, ‘ಓಂ ಶಾಂತಿ ಓಂ’ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇನ್ನು ಶಾರುಖ್ ಮತ್ತು ದೀಪಿಕಾ ಅಭಿನಯದ ‘ಹ್ಯಾಪಿ ನ್ಯೂ ಇಯರ್’ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿ ಗಳಿಕೆ ಮಾಡಿತು. ನಿರೀಕ್ಷೆ ಬಹಳ ಇತ್ತು. ಆದರೆ ಈ ಚಿತ್ರ ವಿಮರ್ಶೆಯಲ್ಲಿ ಸೋತಿತ್ತು. ಅಭಿಷೇಕ್ ಬಚ್ಚನ್, ಸೋನು ಸೂದ್, ಜಾಕಿ ಶ್ರಾಫ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಮಿಡ್‌ನೈಟ್ ಗುಟ್ಟು ಹೇಳಿದ್ದ ಶ್ರುತಿ ಹಾಸನ್ ಜೀವನದಲ್ಲಿ 7ನೇ ಎಂಟ್ರಿ ಯಾರು? ನಟಿ ಕೊಟ್ಟ ಉತ್ತರ ಹೀಗಿದೆ...