ನನ್ನ ದೇಹ ನೀವು ನೋಡಿದ್ರೆ... ಸಲಿಂಗಕಾಮಿ ಮಾತಿನ ನಡುವೆಯೇ ಕರಣ್‌ ಜೋಹರ್‌ ಓಪನ್‌ ಮಾತು...

Published : Jul 06, 2024, 01:27 PM IST
ನನ್ನ ದೇಹ ನೀವು ನೋಡಿದ್ರೆ... ಸಲಿಂಗಕಾಮಿ ಮಾತಿನ ನಡುವೆಯೇ ಕರಣ್‌ ಜೋಹರ್‌ ಓಪನ್‌ ಮಾತು...

ಸಾರಾಂಶ

ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರು ಸಲಿಂಗಕಾಮಿ ಎನ್ನುವ ಮಾತಿನ ನಡುವೆಯೇ ತಮ್ಮ ದೇಹ ರಚನೆಯ ಕುರಿತು ಹೀಗೆಲ್ಲಾ ಹೇಳಿದ್ದಾರೆ.   

ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರಿಗೆ ಈಗ 52 ವರ್ಷ ವಯಸ್ಸು. ಅವರು ಇನ್ನೂ ಮದುವೆಯಾಗಿಲ್ಲ. ಆದರೆ ಅವರು ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ.  ಬಾಡಿಗೆ ತಾಯಿ ಮೂಲಕ ಅವರು ಅವಳಿ ಮಕ್ಕಳನ್ನು ಪಡೆದು ಸಾಕುತ್ತಿರುವ ಕರಣ್‌ ಅವರು ಸಲಿಂಗಕಾಮಿ ಎನ್ನುವ ಮಾತೂ ಇದೆ. ತಮ್ಮ ಕರಣ್‌ ಷೋನಲ್ಲಿಯೂ ಇವರು ಹೆಚ್ಚಾಗಿ ಸೆಕ್ಸ್‌ ಕುರಿತೇ ಮಾತನಾಡುತ್ತಿರುತ್ತಾರೆ. ಅದಕ್ಕಾಗಿ ಅವರಿಗೆ ಸಲಿಂಗ ಕಾಮಿಯೇ ಎನ್ನುವ ಪ್ರಶ್ನೆ ಪದೇ ಪದೇ ಎದುರಾಗುತ್ತಲೇ ಇರುತ್ತದೆ. ಕೆಲವು ತಿಂಗಳ ಹಿಂದೆ ಅವರಿಗೆ ನೆಟ್ಟಿಗರೊಬ್ಬರು ನೇರಾನೇರವಾಗಿ ನೀವು  ಸಲಿಂಗ ಕಾಮಿಯೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಕರಣ್‌,   ‘ನಿಮಗೆ ಆಸಕ್ತಿ ಇದೆಯೇ’  ಮರುಪ್ರಶ್ನೆ ಹಾಕುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಆಗಿನಿಂದಲೂ ಇವರು ಸಲಿಂಗಕಾಮಿ ಎನ್ನುವ ಮಾತು ಮತ್ತಷ್ಟು ಕೇಳಿಬರುತ್ತಿದೆ.

ಇದರ ನಡುವೆಯೇ ಇದೀಗ ತಮ್ಮ ದೇಹದ ರಚನೆ ಕುರಿತು ಕರಣ್‌ ಮಾತನಾಡಿದ್ದಾರೆ. ತಮಗೆ ಬಾಡಿ ಡಿಸ್ಮಾರ್ಫಿಯಾ (body dysmorphia) ಇರುವುದಾಗಿ ಅವರು ಹೇಳಿಕೊಂಡಿದ್ದಾರೆ. body dysmorphia ಎನ್ನುವುದು ಮಾನಸಿಕ ಸ್ಥಿತಿಯಾಗಿದೆ. ತಮ್ಮ ದೇಹ ಮೇಲೆ ಸದಾ ಚಿಂತೆ ಮಾಡುತ್ತಿರುವುದು ಇದರ ಪ್ರಮುಖ ಅಂಶ. ಅಂದರೆ  ಸ್ವಂತ ದೇಹದ ಬಗ್ಗೆ ಅಭದ್ರತೆಯ ಭಾವನೆಯನ್ನು ಬೆಳೆಸಿಕೊಳ್ಳುವುದು ಇದರ ಪ್ರಮುಖ ಲಕ್ಷಣ.  ಇದು ವಿಶೇಷವಾಗಿ ಅವಾಸ್ತವಿಕ ಸಾಮಾಜಿಕ ರಚನೆಗಳು ಮತ್ತು ಪುರುಷ ಅಥವಾ ಸ್ತ್ರೀ ದೇಹದ ಪರಿಕಲ್ಪನೆಯಿಂದಾಗಿ ಸಂಭವಿಸಬಹುದು. ಇಂಥದ್ದೊಂದು ಸಮಸ್ಯೆಯಿಂದ ತಾವು ಬಳಲುತ್ತಿರುವುದಾಗಿ ಕರಣ್‌ ಜೋಹರ್‌ ಹೇಳಿದ್ದಾರೆ. 

ಅಮ್ಮ ಆಗ್ತಿರೋ ಗುಡ್​ನ್ಯೂಸ್​ ಕೊಟ್ಟ ದೀಪಿಕಾ ಪಡುಕೋಣೆಯಿಂದ ಇದೆಂಥ ಹೇಳಿಕೆ? ಬಾಲಿವುಡ್​ನಲ್ಲಿ ಹಲ್​ಚಲ್​!
 
ಬಾಲ್ಯದಿಂದಲೂ ಈ ಸಮಸ್ಯೆ ಇದೆ. ವರ್ಷಗಳಲ್ಲಿ ಏನೂ ಬದಲಾಗಿಲ್ಲ,  ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಕರಣ್‌.  ನಾನು ಕೊಳಕ್ಕೆ ಹೋದರೂ ವಿಚಿತ್ರ ಎನಿಸುತ್ತದೆ. ಮಾನಸಿಕವಾಗಿ ನೋವಾಗುತ್ತದೆ. ಅದೇನು ಭಾವನೆ ನನ್ನ ದೇಹದ ಮೇಲೆ ಬರುತ್ತದೆಯೋ ತಿಳಿದಿಲ್ಲ.  ಅದನ್ನು ಜಯಿಸಲು ತುಂಬಾ ಪ್ರಯತ್ನಿಸಿದೆ. ಆದರೂ ಸಾಧ್ಯವಾಗಲಿಲ್ಲ. ನೀವು ಯಾವುದೇ ಯಶಸ್ಸನ್ನು ಸಾಧಿಸಿದರೂ, ನಿಮ್ಮ   ತಲೆಯಲ್ಲಿ ನಿಮ್ಮ ಬಗ್ಗೆ ಇಂಥ ಭಾವನೆ ಬಂದಾಗ ಅದನ್ನು ತೊಡೆದು ಹಾಕುವುದು ಕಷ್ಟ ಎಂದಿದ್ದಾರೆ ಅವರು.  ನಾನು ಯಾವಾಗಲೂ ನನ್ನ ದೇಹದ ಬಗ್ಗೆ ಸರಿಯಾಗಿ ಗೊತ್ತಾಗದಂತೆ ಧರಿಸುತ್ತೇನೆ.  ನಾನು ಯಾವಾಗಲೂ ದೇಹದೊಂದಿಗೆ  ಹೋರಾಡುತ್ತೇನೆ, ತೂಕ ಕಳೆದುಕೊಳ್ಳಬೇಕು ಎನ್ನಿಸುತ್ತದೆ.  ನಾನು ಯಾವಾಗಲೂ ದಪ್ಪವಾಗಿದ್ದೇನೆ ಎಂದು ಭಾವನೆ ಬರುತ್ತದೆ.  ಹಾಗಾಗಿ ನೀವು ನನ್ನ ದೇಹದ ಯಾವುದೇ ಭಾಗವನ್ನು ನೋಡಬೇಕೆಂದು ನಾನು ಬಯಸುವುದಿಲ್ಲ ಎಂದಿದ್ದಾರೆ. 

ನಾನು ಈಜುಕೊಳಕ್ಕೆ ಹೋದರೂ  ಕೊನೆಯ ಕ್ಷಣದವರೆಗೂ  ನಿಲುವಂಗಿಯಲ್ಲೇ ಇರುತ್ತೇನೆ.  ಎಂಟನೇ ವಯಸ್ಸಿನಿಂದ ಇದೇ ಸಮಸ್ಯೆ ಇದೆ. ನನ್ನ ದೇಹದ ಬಗ್ಗೆ ನನಗೆ ನಾಚಿಕೆ ಇದೆ.  ನಾನು ಅದಕ್ಕೆ ಚಿಕಿತ್ಸೆ ತೆಗೆದುಕೊಂಡಿದ್ದೇನೆ. ಆದರೆ ಸಮಸ್ಯೆ ಪರಿಹಾರವಾಗಿಲ್ಲ.  ಪ್ಯಾನಿಕ್ ಅಟ್ಯಾಕ್‌ನಿಂದ ಬಳಲುತ್ತಿರುವ ನಂತರ ನಾನು ಔಷಧಿಗಳನ್ನು ತೆಗೆದುಕೊಂಡಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ ಕರಣ್‌ ಜೋಹರ್‌. 

ಜನರ ಪ್ರಾಣ ತೆಗೆವ ಕೆಲಸ ಮಾಡಿದ್ರಾ ನಟಿ? ಸಮಂತಾರನ್ನು ಜೈಲಿಗೆ ಅಟ್ಟಿ ಎಂದ ಖ್ಯಾತ ವೈದ್ಯ! ನಟಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?