Asianet Suvarna News Asianet Suvarna News

ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ- ರೇಪ್​ ಸೀನ್​ ಮಾಡಿಸುವಷ್ಟರಲ್ಲಿ ಸುಸ್ತಾದ ನಟ, ನಿರ್ದೇಶಕ!

80-90ರ ದಶಕದಲ್ಲಿ ರೇಪ್​, ಸೆಕ್ಸ್​, ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸಬೇಕಾದಾಗ ಮಾಧುರಿ ದೀಕ್ಷಿತ್​ ಏನೇನು ಮಾಡಿದ್ರು ಎನ್ನೋದನ್ನು ಇದೀಗ ರಿವೀಲ್​ ಆಗಿದೆ...
 

Madhuri Dixits reaction when it comes to intimate scenes in her 80s 90s film curiours story here suc
Author
First Published Jul 4, 2024, 12:58 PM IST

ಇದೀಗ ನಟಿಯರು ಯಾವ ದೃಶ್ಯಕ್ಕೂ ಹೇಸುವವರಲ್ಲ. ಸಂಪೂರ್ಣ ಬೆತ್ತಲಾಗಲೂ ಸೈ ಎನ್ನಿಸಿಕೊಂಡಿದ್ದಾರೆ. ಆದರೆ ಹತ್ತಿಪ್ಪತ್ತು ವರ್ಷಗಳ ಹಿಂದೆ ಮರ್ಯಾದೆ ಉಳಿಸಿಕೊಂಡ ನಟಿಯರು ಇದ್ದರು. ಕೆಲವು ದೃಶ್ಯಗಳಲ್ಲಿ ನಟಿಸೋದೇ ಇಲ್ಲ ಎಂದು ಹೇಳುತ್ತಿದ್ದರು. ಅಂಥವರಲ್ಲಿ ಒಬ್ಬರು ನಟಿ ಮಾಧುರಿ ದೀಕ್ಷಿತ್​. ಶನಾಖ್ತ್ ಚಿತ್ರದ ಸಂದರ್ಭದಲ್ಲಿ ಬ್ರಾ ಧರಿಸಲ್ಲ ಎಂದು ಹಠ ಮಾಡಿ ನಿರ್ಮಾಪಕ, ನಿರ್ದೇಶಕರನ್ನು ಸುಸ್ತು ಮಾಡಿದ್ದವರು ಮಾಧುರಿ ದೀಕ್ಷಿತ್​.  ಈ ಚಿತ್ರದ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ, ನಿರ್ಮಾಪಕ ಟಿನ್ನು ಆನಂದ್ ಅವರು ಮಾಧುರಿ ದೀಕ್ಷಿತ್​ (Madhuri Dixit) ಅವರ ಜೊತೆಗಿನ ಜಗಳದ ಕುರಿತು ಮಾತನಾಡಿದ್ದರು.  ಮಾಧುರಿ ದೀಕ್ಷಿತ್​ ತಮ್ಮ ರವಿಕೆಯನ್ನು ಕಳಚಿ ಬ್ರಾ ಮೇಲೆ ಶೂಟಿಂಗ್​ ಮಾಡುವ ಸೀನ್​ನಲ್ಲಿ ಉಂಟಾದ ವಿವಾದದ ಕುರಿತು ಹೇಳಿದ್ದರು.

 

ಈ ಚಿತ್ರದಲ್ಲಿ ಚಿತ್ರದ ನಾಯಕ ಅಮಿತಾಭ್​ (Amitabh Bachchan) ಅವರನ್ನು  ಸರಪಳಿಯಲ್ಲಿ ಬಂಧಿಸುವ ಸನ್ನಿವೇಶ ಬರುತ್ತದೆ. ವಿಲನ್​ಗಳು ಇವರನ್ನು  ಸರಪಳಿಯಲ್ಲಿ ಕಟ್ಟಿರುತ್ತಾರೆ. ಈ ಸಮಯದಲ್ಲಿ ಗೂಂಡಾಗಳ ಕೈಯಿಂದ ನಾಯಕಿ  ಮಾಧುರಿ ದೀಕ್ಷಿತ್ ಅವರನ್ನು ರಕ್ಷಿಸಲು ನಾಯಕ ಪ್ರಯತ್ನಿಸುತ್ತಾನೆಯಾದರೂ ಅದು ಸಾಧ್ಯವಾಗುವುದಿಲ್ಲ. ಆಗ ನಾಯಕಿ,  ಮಹಿಳೆಯೊಬ್ಬರು ನಿಮ್ಮ ಮುಂದೆ ನಿಂತಿರುವಾಗ ನೀವು ಸರಪಳಿಯಲ್ಲಿ ಪುರುಷನ ಮೇಲೆ ಏಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ.  ಆ ಸಂದರ್ಭದಲ್ಲಿ ನಾಯಕನನ್ನು ರಕ್ಷಿಸಲು ತನ್ನ ಬ್ಲೌಸ್​ ಕಳಚಿ ಬ್ರಾದಲ್ಲಿಯೇ ನಿಲ್ಲುವ ದೃಶ್ಯ ಬರುತ್ತದೆ. ದೃಶ್ಯವು ಹೀಗೆ ಇರಲಿದೆ, ಕ್ಯಾಮೆರಾ ಮುಂದೆ ನಾಯಕಿ ಬ್ರಾ ಧರಿಸಿ ನಿಲ್ಲುವ ಸನ್ನಿವೇಶ ಬರುತ್ತದೆ ಎಂಬ ಬಗ್ಗೆ ನಿರ್ಮಾಪಕರು ಮಾಧುರಿ ಅವರಿಗೆ ಮೊದಲೇ ಹೇಳಿದ್ದರಂತೆ.  ಆದರೆ ಮಾಧುರಿ ಆ ದೃಶ್ಯವನ್ನು ಮಾಡದೇ ಅಳುತ್ತಾ ಕುಳಿತಿದ್ದ ಬಗ್ಗೆ ಹೇಳಿದ್ದರು.

ಯುವಕರು ಹೆಚ್ಚು ಸುಖ ಕೊಡ್ತಾರೋ, ಅಂಕಲ್​ಗಳೊ? ಶಿಲ್ಪಾ ಶೆಟ್ಟಿಗೆ ಎದುರಾಯ್ತು ದಿಢೀರ್​ ಪ್ರಶ್ನೆ- ನಟಿ ಕೊಟ್ಟ ಉತ್ತರ ವೈರಲ್​​!

ಇದೀಗ ಅಂಥದ್ದೇ ಇನ್ನೊಂದು ಚಿತ್ರದ ಬಗ್ಗೆ ಇದೀಗ ಬೆಳಕಿಗೆ ಬಂದಿದೆ. ಅದೇನೆಂದರೆ,  1989ರಲ್ಲಿ 'ಪ್ರೇಮ್ ಪ್ರತಿಜ್ಞಾ' ಚಿತ್ರದಲ್ಲಿ ಖಳನಾಯಕನ ಜೊತೆ ನಟಿಸಲ್ಲ ಎಂದು ಮಾಧುರಿ ಅಳುತ್ತಿದ್ದರು ಎನ್ನುವುದು. ಈ ಕುರಿತು ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿದ್ದ ರಂಜಿತ್​ ಇದೀಗ 80ರ ದಶಕದಲ್ಲಿನ ಮಾಧುರಿ ಅವರನ್ನು ನೆನಪಿಸಿಕೊಂಡಿದ್ದಾರೆ.  ಮಾಧುರಿ ದೀಕ್ಷಿತ್ ತಮ್ಮ ಜೊತೆ ದೃಶ್ಯವೊಂದರಲ್ಲಿ ನಟಿಸಲು ಹಿಂದೇಟು ಹಾಕಿದ್ದನ್ನು ಹೇಳಿದ್ದಾರೆ.  ಈ ಚಿತ್ರದಲ್ಲಿ  ನಾಯಕಿ ಮಾಧುರಿ ತಂದೆ ಕಡುಬಡವ. ಆತನದ್ದು ಒಂದು ಕೈಗಾಡಿ ಇತ್ತು. ಆ ಕೈಗಾಡಿಯಲ್ಲಿಯೇ ನಾನು ಅಂದರೆ ಖಳನಾಯಕ ರೇಪ್​ಗೆ ಟ್ರೈ ಮಾಡುವ ನೀಡುವ ದೃಶ್ಯವಿತ್ತು.  ಈ ದೃಶ್ಯದ ಬಗ್ಗೆ ತಿಳಿಯುತ್ತಿದ್ದಂತೆಯೇ ನಟಿ ಜೋರಾಗಿ ಅಳಲು ಶುರು ಮಾಡಿದರು. ಈ ದೃಶ್ಯ ತಮ್ಮಿಂದ ಮಾಡಲು ಸಾಧ್ಯವೇ ಇಲ್ಲ ಎಂದರು.

ಅವರನ್ನು ಸಮಾಧಾನ ಪಡಿಸಲು ತುಂಬಾ ಕಷ್ಟಪಡಬೇಕಾಯಿತು.  ಸಿನಿಮಾಗಳಲ್ಲಿ ಇಂತಹ ಕಿರುಕುಳ ನೀಡುವ ದೃಶ್ಯಗಳು ಇದ್ದೇ ಇರುತ್ತವೆ ಎಂದು ಹೇಳುತ್ತವೆ. ಈ ದೃಶ್ಯಗಳಲ್ಲಿ ನಟಿಸುವುದು ನಿಮ್ಮ ಕೆಲಸವೆಂದು ಅವರ ಮನ ಒಲಿಸಲಾಯಿತು. ಅಷ್ಟಕ್ಕೂ  ಫೈಟ್ ಮಾಸ್ಟರ್ ಆಗಿದ್ದ ಅಜಯ್ ದೇವಗನ್ ತಂದೆ ಕೂಡ ಇಂತಹ ಬೋಲ್ಡ್ ದೃಶ್ಯಗಳನ್ನು ಚಿತ್ರಿಸುವಾಗ ಕ್ಯಾಮೆರಾಗೆ ಕಟ್ ಅಂತ ಹೇಳುತ್ತಿರಲಿಲ್ಲ. ಆದ್ದರಿಂದ ಧೈರ್ಯವಾಗಿ ಮಾಡಿ ಎಂದೆಲ್ಲಾ ಮನವೊಲಿಸಿದ ಮೇಲೆ ನಟಿ ಒಪ್ಪಿಕೊಂಡರು ಎಂದು ಸ್ಮರಿಸಿದ್ದಾರೆ. ಈ ಸೀನ್​ ಮಾಡುವಷ್ಟರಲ್ಲಿ ನಿರ್ದೇಶಕ ಹೈರಾಣಾಗಿ ಹೋದ್ರು ಎಂದಿದ್ದಾರೆ! 

ಸೆಕ್ಸ್​ ಸೀನ್​ಗಳಿಗೆ ಮೂಡ್​ ಕ್ರಿಯೇಟ್​ ಮಾಡ್ತಾರೆ, ಭಾವನೆ ತಡೆಯಲು ಆಗಲ್ಲ.. ಆಗ... ವಿಜಯ್‌ ವರ್ಮಾ ಓಪನ್ ಮಾತು
 

Latest Videos
Follow Us:
Download App:
  • android
  • ios