ಮಿಡ್‌ನೈಟ್‌ ಗುಟ್ಟು ಹೇಳಿದ್ದ ಶ್ರುತಿ ಹಾಸನ್‌ ಜೀವನದಲ್ಲಿ 7ನೇ ಎಂಟ್ರಿ ಯಾರು? ನಟಿ ಕೊಟ್ಟ ಉತ್ತರ ಹೀಗಿದೆ...

By Suchethana D  |  First Published Jul 6, 2024, 3:18 PM IST

ಆರು ಮಂದಿಗೆ ಕೈಕೊಟ್ಟ ಬಳಿಕ ಶ್ರುತಿ ಹಾಸನ್‌ ಜೀವನದಲ್ಲಿ 7ನೇ ಎಂಟ್ರಿ ಯಾವಾಗ? ಫ್ಯಾನ್ಸ್ ಪ್ರಶ್ನೆಗೆ ಕಮಲ್‌ ಹಾಸನ್‌ ಪುತ್ರಿ ಹೇಳಿದ್ದೇನು?
 


ಬಾಲಿವುಡ್​ ನಟಿ ಶ್ರುತಿ ಹಾಸನ್​ ಮತ್ತು ಶಂತನು ಹಜಾರಿಕಾ ಅವರ ಸಂಬಂಧ, ಲಿವ್​ ಇನ್​ ರಿಲೇಷನ್​ ಮುರಿದು ಬಿದ್ದಿದೆ. ಈ ಮೂಲಕ ಆರು ಮಂದಿಯ ಜೊತೆ ಕಮಲ್‌ ಹಾಸನ್‌ ಪುತ್ರಿಯ ಬ್ರೇಕಪ್‌ ಆದಂತಾಗಿದೆ.  ಶ್ರುತಿ  ಅವರು​ ಶಂತನು ಹಜಾರಿಕಾ ಅವರನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದಾಗ,  ಶಂತನು ಕೂಡ ಶ್ರುತಿ ಅವರನ್ನು ಕೈಬಿಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆಯಾದಾಗಲೇ ಇವರಿಬ್ಬರೂ ಬ್ರೇಕಪ್​ ಆಗಿರೋ ಸುದ್ದಿ ಹೊರಗಡೆ ಬಂದಿತ್ತು. ಕೆಲ ತಿಂಗಳ ಹಿಂದೆಯೇ ಇವರಿಬ್ಬರೂ ಪ್ರತ್ಯೇಕ ಆಗಿರುವ ಗುಟ್ಟು ರಟ್ಟಾಗಿದ್ದು, ಅದು ಕನ್‌ಫರ್ಮ್‌ ಕೂಡ ಆಗಿದೆ. 

ಇದರ ನಡುವೆಯೇ ಕೆಲ ದಿನಗಳ ಹಿಂದೆ ನಟಿ,  ಮಿಡ್​ನೈಟ್​ ಸೀಕ್ರೇಟ್​ ಬಿಚ್ಚಿಟ್ಟಿದ್ದರು. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನಟಿ, ಬೆಳಗಿನ ಜಾವ ಮೂರಕ್ಕೆ ಎಲ್ಲರೂ ಮಲಗಿದ್ದರೆ ನಾನು ಮಾತ್ರ ಗೆಳೆಯರ ಜೊತೆ  ರೀಲು, ಮೀಮ್ಸ್​  ಹಂಚಿಕೊಳ್ಳುತ್ತಿರುತ್ತೇನೆ ಎಂದಿದ್ದರು.  ಇದೇನಾ ನಿಮ್ಮ ಸೀಕ್ರೇಟ್‌? ಏಳನೇ ಬಾಯ್​ಫ್ರೆಂಡ್​​ ಸಿಗಲಿಲ್ವಾ ಎಂದು ನಟಿಯ ಕಾಲೆಳೆಯುತ್ತಿದ್ದರು ನಡುರಾತ್ರಿ ಮೂರು ಗಂಟೆಯವರೆಗೆ ನಿದ್ದೆ ಬರದಿದ್ದರೆ ಹೇಳಿ, ನಾನು ಬರುವೆ ಎಂದು ಮತ್ತೆ ಕೆಲವರು ಹೇಳಿದ್ದರು. 

Tap to resize

Latest Videos

ನಸುಕಿನ 3 ಗಂಟೆಗೆ ಗೆಳೆಯರ ಜೊತೆ.... ಮಿಡ್​ನೈಟ್​ ಸೀಕ್ರೇಟ್​ ಹೇಳಿದ ನಟಿ ಶ್ರುತಿ ಹಾಸನ್​!

ಇದೀಗ ನಟಿಯ ಜೀವನದಲ್ಲಿ ಏಳನೆಯ ಎಂಟ್ರಿ ಯಾವಾಗ ಎಂದು ಮತ್ತೊಮ್ಮೆ ಪ್ರಶ್ನೆ ಎದುರಾಗಿದೆ. ನಿಮ್ಮ ಮದುವೆ ಯಾವಾಗ ಎಂದು ಮತ್ತೊಬ್ಬ ಅಭಿಮಾನಿ ನಟಿಯನ್ನು ಕೇಳಿದ್ದಾನೆ. ಇದಕ್ಕೆ ಗರಂ ಆಗಿರೋ ಶ್ರುತಿ ಹಾಸನ್‌, ನಿಮಗೆ ಬೇರೆ ಕೆಲಸ ಇಲ್ವಾ? ಹೆಣ್ಣುಮಕ್ಕಳಿಗೆ ಈ ರೀತಿಯ ಸಿಲ್ಲಿ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿ, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಗರಂ ಆಗಿಯೇ ಉತ್ತರಿಸಿದ್ದಾರೆ. 

ಅಂದಹಾಗೆ, ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​, ಕೆಲ ದಿನಗಳ ಹಿಂದೆ ತಮ್ಮ ಕರಾಳ ಜೀವನದ ಕುರಿತು ಹೇಳಿಕೊಂಡಿದ್ದಾರೆ.  ಅಪ್ಪ ಕಮಲ ಹಾಸನ್​ ಮತ್ತು ಅಮ್ಮ ನಟಿ ಸಾರಿಕಾ ಇವರಿಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ 2004ರಲ್ಲಿ ಇವರ ವಿಚ್ಛೇದನವಾಗಿತ್ತು. 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್​ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ  ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ  ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿಕೊಂಡಿದ್ದರು.
 

ನನ್ನ ದೇಹ ನೀವು ನೋಡಿದ್ರೆ... ಸಲಿಂಗಕಾಮಿ ಮಾತಿನ ನಡುವೆಯೇ ಕರಣ್‌ ಜೋಹರ್‌ ಓಪನ್‌ ಮಾತು...

click me!