
ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಫರ್ಹಾ ಖಾನ್ ಬಾಲಿವುಡ್‌ಗೆ ಬಂದು 30 ವರ್ಷಗಳೇ ಕಳೆದಿದ್ದು, ಈ ಸಂದರ್ಭದಲ್ಲಿ ಅವರು ಹಲವು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಕೊರಿಯೋಗ್ರಾಫ್ ಮಾಡಿದ ಸೂಪರ್ ಹಿಟ್ ಹಾಡುಗಳ ಬಗ್ಗೆ ಫರ್ಹಾ ನೆನೆದಿದ್ದಾರೆ. 1997 ರಲ್ಲಿ ತೆರೆ ಕಂಡ ಬಾರ್ಡರ್ ಚಿತ್ರದ ಸಂದೇಸೆ ಆತೆ ಹೈ ಹಾಡನ್ನು ನೀವು ಕೇಳಿರಬಹುದು. ಆದರೆ ಹಾಡು ಸಾಕಷ್ಟು ಜನಪ್ರಿಯವಾಗಿದ್ದರು, ಈ ಭಾವುಕ ಹಾಡಿಗೆ ಕೊರಿಯೋಗ್ರಾಪ್ ಮಾಡುವುದು ಬಲು ಸವಾಲಿನ ವಿಚಾರವಾಗಿತಂತೆ. ನೃತ್ಯಕ್ಕೆ ಅವಕಾಶ ಇಲ್ಲದ ಸೈನಿಕನ ಭಾವನೆಯಾಗಿ ಹೊಮ್ಮಿದ ಹಾಡನ್ನು ನೃತ್ಯದಲ್ಲಿ ಕಾಣಿಸಲು ಸಾಧ್ಯವಿರಲಿಲ್ಲ.
ಆ ಸಂದರ್ಭ ತುಂಬಾ ಕಠಿಣವಾಗಿತ್ತು . ಸಂಗೀತಾದ ಬೀಟ್‌ಗೆ ತಕ್ಕಂತೆ ಹೆಜ್ಜೆ ಹಾಕಲಾಗುತ್ತಿರಲಿಲ್ಲ. ನೃತ್ಯಗಾರರು ತಮ್ಮದೇ ಆದ ಬಡಿತದಲ್ಲಿ ಸಾಗುತ್ತಿದ್ದರು. ಅವರು ನನ್ನ ಸೂಚನೆಗಳನ್ನು ಅರ್ಥಮಾಡಿಕೊಂಡರು. ಆದರೆ ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಅದಲ್ಲದೆ, ಅದರ ಶೂಟ್ ಸಂಧರ್ಭ ಸುಡುವ ಬಿಸಿಲಿತ್ತು. ಆ ಸಮಯದಲ್ಲಿ ನಾನು ರೋಜಾಗಳನ್ನು ಇಡುತ್ತಿದ್ದೆ. ಮರುಭೂಮಿಯಲ್ಲಿ ಆ ಹಾಡಿನ ಚಿತ್ರೀಕರಣ ಮಾಡುವಾಗ ನಾನು ಬೇರೆ ರಾಜ್ಯದಲ್ಲಿದ್ದೆ. ಆದರೆ, ಪ್ರತಿ ಬಾರಿ ಹಾಡು ಪ್ಲೇ ಆಗುತ್ತಿದ್ದಂತೆ ಎಲ್ಲರೂ ಅಳಲು ಪ್ರಾರಂಭಿಸಿದರು. ಸೈನಿಕರು, ನಟರು ಮತ್ತು ನಾನು ಕೂಡ ಅಳಲು ಪ್ರಾರಂಭಿಸಿದೆ. ಅದು ಅಂತಹ ಭಾವನಾತ್ಮಕ ಹಾಡಾಗಿತ್ತು. ಇದು ಬಹಳ ದೀರ್ಘವಾದ ಟ್ರ್ಯಾಕ್ ಆಗಿರುವುದರಿಂದ ನಾವು ಅದನ್ನು 5-6 ದಿನಗಳಿಗಿಂತ ಹೆಚ್ಚು ಕಾಲ ಚಿತ್ರೀಕರಿಸಿದ್ದೇವೆ. ಪ್ರತಿಯೊಬ್ಬ ಯೋಧನ ಕಥೆಯೂ ಹಾಡಿನಲ್ಲಿ ಇತ್ತು ಎಂದು ಫರ್ಹಾ ಹೇಳಿದರು.
Farah Khan Birthday: ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ದ ಫರಾ ಖಾನ್ ಈಗ ಫೇಮಸ್ ಕೊರಿಯೊಗ್ರಾಫರ್..!
ನಾನು ನಿರ್ದೇಶಕ ಜೆ ಪಿ ದತ್ತಾ ಜೊತೆ ಕೆಲಸ ಮಾಡಿದ್ದು ಒಂದೇ ಬಾರಿ. ಅವರೊಂದಿಗೆ ಕೆಲಸ ಮಾಡುವುದು ತುಂಬಾ ಕಷ್ಟ ಮತ್ತು ಕಠಿಣ ಎಂದು ಎಲ್ಲರೂ ನನ್ನನ್ನು ಹೆದರಿಸಿದ್ದರು. ಆದಾಗ್ಯೂ, ಅವರು ನನಗೆ ಪ್ರಿಯರಾಗಿದ್ದರು. ಈಗಲೂ ನಮ್ಮಲ್ಲಿ ಉತ್ತಮ ಬಾಂಧವ್ಯವಿದೆ. ಅವರು ಕೆಲಸ ಮಾಡಲು ತುಂಬಾ ಒಳ್ಳೆಯವರಾಗಿದ್ದರು ಎಂದು ಫರ್ಹಾ ಹೇಳಿದರು. ಸಂಜಯ್ ಲೀಲಾ ಬನ್ಸಾಲಿ ಮತ್ತು ನಾನು ಇಡೀ ಚಿತ್ರಕಥೆಯನ್ನು ಬರೆಯುತ್ತಿದ್ದೆವು. ಡ್ಯಾನ್ಸ್ ಇಲ್ಲದ ಹಾಡುಗಳನ್ನು ಮಾಡುವುದು ಹೆಚ್ಚು ಕಷ್ಟ. ಶೀಲಾ ಕಿ ಜವಾನಿ, ಮುನ್ನಿ ಬದ್ನಾಮ್ ಮುಂತಾದವುಗಳನ್ನು ಮಾಡಲು ಸುಲಭವಾದ ಕಾರಣ ನನ್ನ ಕೊರಿಯೋಗ್ರಾಫ್‌ನ ಈ ಹಾಡುಗಳು ದೊಡ್ಡ ಹಿಟ್ ಆಗಿವೆ ಎಂದರು.
ಸಾನಿಯಾ ಮಿರ್ಜಾ ಪುತ್ರ ಸಿನಿಮಾಗೆ ಎಂಟ್ರಿ? ಕಡಿಮೆ ಬೆಲೆಗೆ ಸಿಕ್ಕ ಹೀರೋ ಎಂದ ನಿರ್ದೇಶಕಿ ಫರಾ ಖಾನ್
ಅನಿಲ್ ಕಪೂರ್ ಹಾಗೂ ತಾನು ಪರಸ್ಪರ ಪಪಜ್ಜಿ ಎಂದು ಕರೆದುಕೊಳ್ಳುತ್ತಿರುವ ಬಗ್ಗೆ ಫರ್ಹಾ ಅವರಲ್ಲಿ ಕೇಳಿದಾಗ ನಮ್ಮಿಬ್ಬರಿಗೂ ಹುಚ್ಚು. ಅನಿಲ್‌ಗೆ ನನ್ನ ಕೊರಿಯೋಗ್ರಾಫಿ ಬೇಕಾಗಿರಲಿಲ್ಲ. ಅವರ ಪ್ರಕಾರ ನಾನು ಇನ್ನೂ ತುಂಬಾ ಚಿಕ್ಕವಳು ಹಾಗಾಗಿ ಅವರು ಸರೋಜ್ ಜಿ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದರು. ಅವರು ಹಾಡಿನ ಶೂಟ್ ಮಧ್ಯೆ ಬೇರೆಲ್ಲೂ ಹೋಗದೇ ಶೂಟ್‌ನ ಉದ್ದಕ್ಕೂ ಇರುವಂತಹ ವ್ಯಕ್ತಿಯನ್ನು ಬಯಸಿದ್ದರು. ಹೀಗಾಗಿ ನಾನು ಅನಿಲ್ ಕಪೂರ್ ಅವರಿಗೆ ಹಾಡಿನಲ್ಲಿ ಏನು ಮಾಡಬೇಕು ಎಂದು ವಿವರಿಸಿದಾಗಲೆಲ್ಲಾ ಅವರು ಪಪ್ಪಾಜಿ ಗ್ರೇಟ್ ಎನ್ನುತ್ತಿದ್ದರು. ಪ್ರತಿ ಶಾಟ್‌ನಲ್ಲೂ ಅವರು ನನ್ನನ್ನು ಪಪ್ಪಾಜಿ ಎಂದೇ ಕರೆಯಲು ಶುರು ಮಾಡಿದರು. ನಂತರ ನಾನೂ ಅವರನ್ನು ಹಾಗೆಯೇ ಕರೆಯಲು ಶುರು ಮಾಡಿದೆ ಎಂದರು. ನಂತರ ಅವರು ನನ್ನ ಪಾದಕ್ಕೆ ನಮಸ್ಕರಿಸಿದರು. ನಾನು ಅವರ ಪಾದಕ್ಕೆ ನಮಸ್ಕರಿಸಿದೆ ಅಲ್ಲಿಂದಾಚೆಗೆ ನಾವು ತುಂಬಾ ಆತ್ಮಿಯರಾದೆವು ಇವತ್ತಿಗೂ ಹಾಗೆ ಕರೆದುಕೊಳ್ಳುತ್ತೇವೆ ಎಂದು ಪರ್ಹಾ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.