ಫೋಟೋ ಶೇರ್ ಮಾಡಿದ ಸಲ್ಮಾನ್ ಖಾನ್; ಮೊಸಳೆ ಪಾತ್ರ ಸಿಕ್ಕಿದೆಯಾ ಎಂದು ಕಾಲೆಳೆದ ನೆಟ್ಟಿಗರು

Published : Mar 27, 2022, 02:03 PM ISTUpdated : Mar 27, 2022, 02:10 PM IST
ಫೋಟೋ ಶೇರ್ ಮಾಡಿದ ಸಲ್ಮಾನ್ ಖಾನ್; ಮೊಸಳೆ ಪಾತ್ರ ಸಿಕ್ಕಿದೆಯಾ ಎಂದು ಕಾಲೆಳೆದ ನೆಟ್ಟಿಗರು

ಸಾರಾಂಶ

ಸಲ್ಮಾನ್ ಖಾನ್ ಶೇರ್ ಮಾಡಿರುವ ಹೊಸ ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮುಂದಿನ ಸಿನಿಮಾದಲ್ಲಿ ಮೊಸಳೆ ಪಾತ್ರ ಸಿಕ್ಕಿದೆಯಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಸಲ್ಮಾನ್ ಖಾನ್ ಕಾಲೆಳೆಯುತ್ತಿದ್ದಾರೆ. 

ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಇತ್ತೀಚಿಗಷ್ಟೆ ತೆಲುಗಿನ ಗಾಡ್ ಫಾದರ್(Godfather) ಸಿನಿಮಾದ ಚಿತ್ರೀಕರಣ ಮುಗಿಸಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಸಲ್ಮಾನ್ ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಫೋಟೋ ಶೇರ್ ಮಾಡಿದ್ದು, ನೀರಿನಲ್ಲಿ ಆನಂದಿಸುತ್ತಿದ್ದಾರೆ. ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್ ಬೀಚ್ ಬೌಲ್ ಟೋಪಿ(Beige Bowl hat) ಧರಿಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಅನೇಕರು ಸಲ್ಮಾನ್ ಖಾನ್ ಬಗ್ಗೆ ತಮಾಷೆಯ ಕಾಮೆಂಟ್ ಮಾಡಿ ಸಲ್ಲು ಭಾಯ್ ಕಾಲೆಳೆಯುತ್ತಿದ್ದಾರೆ.

ಎರಡು ಫೋಟೋಗಳನ್ನು ಶೇರ್ ಮಾಡಿದ್ದು, ಮೊದಲನೇ ಫೋಟದಲ್ಲಿ ಸಲ್ಲು ಕ್ಯಾಮರಾ ಕಡೆ ನೋಡುತ್ತಾ ಕಿರುನಗೆ ಬೀರಿದ್ದಾರೆ. ಮತ್ತೊಂದು ಫೋಟೋದಲ್ಲಿ ಸಲ್ಮಾನ್ ಬೇರೆ ಕಡೆ ನೋಡುತ್ತಿದ್ದಾರೆ. ಸಲ್ಮಾನ್ ಶೇರ್ ಮಾಡಿರುವ ಫೋಟೋದಲ್ಲಿ ಕೇವಲ ಭುಜದವರೆಗೆ ಮಾತ್ರ ಕಾಣುತ್ತಿದೆ. ಈ ಫೋಟೋಗೆ ಅನೇಕ ಸೆಲೆಬ್ರಿಟಿಗಳು ಸಹ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಪ್ರೀತಿ ಜಿಂಟಾ(Preity Zinta) ಕಾಮೆಂಟ್ ಮಾಡಿ ಮಿಸ್ ಯು ಎಂದು ಹೇಳಿದ್ದಾರೆ. ಜೊತೆಗೆ ಹಾರ್ಟ್ ಇಮೋಜಿ ಹಾಕಿದ್ದಾರೆ.

ರಾಖಿ ಸಾವಂತ್ ಕಾಮೆಂಟ್ ಮಾಡಿ ವಾವ್ ಸಹೋದರ ಎಂದಿದ್ದಾರೆ. ಟೀನಾ ದತ್ತಾ ಕಾಮೆಂಟ್ ಮಾಡಿ, ಈ ಫೋಟೋ ಎಷ್ಟು ಮುದ್ದಾಗಿದೆ ಎಂದಿದ್ದಾರೆ. ಸಾಕಷ್ಟು ಕಲಾವಿದರು ಸಲ್ಮಾನ್ ಹೊಸ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳು ಸಹ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಇನ್ನು ಕೆಲವರು ಸಲ್ಮಾನ್ ಅವರ ಕಾಲೆಳೆದಿದ್ದಾರೆ. 'ಮುಂದಿನ ಸಿನಿಮಾದಲ್ಲಿ ಮೊಸಳೆ ಪಾತ್ರ ಸಿಕ್ಕಿದಿಯಾ' ಎಂದು ಕೇಳಿದ್ದಾರೆ. 

ಚಿರಂಜೀವಿ 'ಗಾಡ್ ಫಾದರ್' ಚಿತ್ರೀಕರಣ ಮುಗಿಸಿದ ಸಲ್ಮಾನ್ ಖಾನ್; ಧನ್ಯವಾದ ತಿಳಿಸಿದ ನಿರ್ದೇಶಕ

ಇನ್ನು ಕೆಲವರು ಕಾಮೆಂಟ್ ಮಾಡಿ, 'ಒಮ್ಮೆ ನಾನು ನೀರಿಗೆ ಎಂಟ್ರಿ ಕೊಟ್ಟರೆ ನಾನು ಮೊಸಳೆ ಮಾತನ್ನೇ ಕೇಳಲ್ಲ' ಎಂದು ಡೈಲಾಗ್ ಹೊಡಿದ್ದಾರೆ. ಈ ಡೈಲಾಗ್ ಸಲ್ಮಾನ್ ಖಾನ್ ಅವರ ವಾಟೆಂಡ್ ಸಿನಿಮಾದ ಸಂಭಾಷಣೆಯಿಂದ ಸ್ಫೂರ್ತಿ ಪಡೆದಿದೆ. ಇನ್ನು ಕೆಲವು ಅಭಿಮಾನಿಗಳು 'ನೀರಿನಲ್ಲಿ ಹುಷಾರಾಗಿ ಇರಿ, ಹಾವು ಕೂಡ ಇವೆ' ಎಂದಿದ್ದಾರೆ. ಸಲ್ಮಾನ್ ಖಾನ್ ಯಾವಾಗಲು ಸುಂದರವಾಗಿರುತ್ತಾರೆ ಎಂದಿದ್ದಾರೆ. ಸಲ್ಮಾನ್ ಖಾನ್ ಅಪರೂಪಕ್ಕೊಂದು ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ. ಸಲ್ಮಾನ್ ಹಂಚಿಕೊಳ್ಳುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತೆ.

ಪತ್ರಕರ್ತನಿಗೆ ಬೆದರಿಕೆ; ನಟ ಸಲ್ಮಾನ್ ಖಾನ್ ಗೆ ಸಮನ್ಸ್ ಜಾರಿಮಾಡಿದ ಕೋರ್ಟ್

ಅಂದಹಾಗೆ ಸಲ್ಮಾನ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಸ್ಟಾರ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್ ಚಿತ್ರೀಕರಣ ಸಹ ಮುಗಿಸಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ತೆಲುಗು ಸಿನಿಮಾರಂಗದಲ್ಲಿ ಕಾಣಿಸಿಕೊಂಡಿದ್ದು. ಚಿರಂಜೀವಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಸಲ್ಮಾನ್ ಎಂಟ್ರಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಗಾಡ್ ಫಾದರ್, ಮಲಯಾಳಂನ ಲೂಸಿಫರ್ ಸಿನಿಮಾದ ರಿಮೇಕ್ ಆಗಿದೆ.

ಇನ್ನು ಟೈಗರ್ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ ನಲ್ಲಿ ತೆರೆಗೆ ಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!