Kashmir Files ನೋಡಿ ಸಲ್ಮಾನ್ ಹೇಳಿದ್ದೇನು ಎಂದು ಬಹಿರಂಗ ಪಡಿಸಿದ ನಟ ಅನುಪಮ್ ಖೇರ್

By Shruiti G Krishna  |  First Published Mar 27, 2022, 1:30 PM IST

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ಸಲ್ಮಾನ್ ಖಾನ್ ಕರೆ ಮಾಡಿದ್ದರು ಎಂದು ಅನುಪಮ್ ಖೇರ್ ಬಹಿರಂಗ ಪಡಿಸಿದ್ದಾರೆ. ಚಿತ್ರದ ಬಗ್ಗೆ ಸಲ್ಮಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ. 


ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಹವಾ ಇನ್ನು ಕಡಿಮೆ ಆಗಿಲ್ಲ. ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದರು ಚಿತ್ರದ ಬಗ್ಗೆ ಚರ್ಚೆ ಇನ್ನು ನಿಂತಿಲ್ಲ. ಪ್ರೇಕ್ಷಕರು ಸಹ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಈಗಾಗಲೇ 200 ಕೋಟಿ ಕ್ಲಬ್ ಸೇರಿರುವ ಕಾಶ್ಮೀರ್ ಫೈಲ್ಸ್ ಈ ವೀಕೆಂಡ್ ನಲ್ಲಿ ಮತ್ತಷ್ಟು ಗಳಿಕೆ ಮಾಡುವ ನಿರೀಕ್ಷೆ ಇದೆ. ಅಂದಹಾಗೆ ಸಿನಿಮಾದ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ಗಣ್ಯರು ಮತ್ತು ರಾಜಕೀಯ ಗಣ್ಯರು ಸಹ ಮೆಚ್ಚಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ಸಿನಿಮಾದ ಬಗ್ಗೆ ಆಮೀರ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ಪ್ರತಿಕ್ರಿಯೆ ನೀಡಿ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಚಿತ್ರದ ಕಲೆಕ್ಷನ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಸಿನಿಮಾದ ಬಗ್ಗೆ ಸಲ್ಮಾನ್ ಖಾನ್ ಸಹ ಹಾಡಿ ಹೊಗಳಿಸಿದ್ದಾರೆ. ಈ ಬಗ್ಗೆ ಕಾಶ್ಮೀರ್ ಪೈಲ್ಸ್ ಚಿತ್ರದಲ್ಲಿ ನಟಿಸಿರುವ ಖ್ಯಾತ ನಟ ಅನುಪಮ್ ಖೇರ್ ಬಹಿರಂಗ ಪಡಿಸಿದ್ದಾರೆ. ಸಲ್ಮಾನ್ ಖಾನ್ ಕರೆ ಮಾಡಿ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

Tap to resize

Latest Videos

ಈ ಬಗ್ಗೆ ಆಂಗ್ಲ ಮಾಧ್ಯಮ ವರದಿ ಮಾಡಿದ್ದು, ಸಲ್ಮಾನ್ ಖಾನ್ ಸಿನಿಮಾ ವೀಕ್ಷಿಸಿದ ಬಳಿಕ ಅನುಪಮ್ ಖೇರ್ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು ಎಂದು ಹೇಳಿದರು ಎಂದು ವರದಿಮಾಡಲಾಗಿದೆ. ಈ ಬಗ್ಗೆ ಮಾತನಾಡಿದ್ದ ಅನುಪಮ್ ಖೇರ್, ವೈಯಕ್ತಿಕವಾಗಿ ನಾನು ಇದನ್ನು ಹೇಳಲೇ ಬೇಕು, ಸಲ್ಮಾನ್ ಖಾನ್ ಹಿಂದಿನ ದಿನ ನನಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು ಎಂದು ಬಹಿರಂಗ ಪಡಿಸಿದರು.

'ಕಾಶ್ಮೀರ್ ಫೈಲ್ಸ್' ಚಿತ್ರದಿಂದ 'ಬಚ್ಚನ್ ಪಾಂಡೆ'ಗೆ ದೊಡ್ಡ ಹೊಡೆತ- ಅಕ್ಷಯ್ ಕುಮಾರ್ ಹೇಳಿದ್ದೇನು?

ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ ಅನುಪಮ್ ಖೇರ್, ಚಿತ್ರದ ಗಳಿಕೆ ಬಾಲಿವುಡ್ ನಲ್ಲಿ ಎಲ್ಲರಿಗೂ ಅಚ್ಚರಿ ಗೊಳಿಸಿದೆ ಎಂದಿದ್ದಾರೆ. ಹಿಂದಿ ಚಿತ್ರರಂಗ ನಿಜಕ್ಕೂ ಆಘಾತಗೊಂಡಿದೆ ಎಂದಿದ್ದಾರೆ. ಅವರು ಇನ್ನು ಶಾಕ್ ನಲ್ಲಿದ್ದಾರೆ. ಆದರೆ ಈ ಸಣ್ಣ ಸಿನಿಮಾ ದುರಂತ ಘಟನೆ, ಕತ್ತಲೆ, ರಕ್ತ ಮತ್ತು ಕಣ್ಣೀರಿನಿಂದ ತುಂಬಿರುವ ಕಥೆ ಎಂದು ಅವರು ಎಂದಿಗೂ ಯೋಚಿಸಲಿಲ್ಲ ಎಂದಿದ್ದಾರೆ.

ಕಾಶ್ಮೀರ್ ಫೈಲ್ಸ್ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ 217.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಆರ್ ಆರ್ ಆರ್ ಸಿನಿಮಾದಿಂದ ಸ್ಪರ್ಧೆ ಎದುರಿಸುತ್ತಿದ್ದರೂ ಚಿತ್ರ ತನ್ನ ಮೂರನೆ ವಾರಾಂತ್ಯದಲ್ಲಿ 35 ಕೋಟಿ ರೂ. ಗಳಿಸಲಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ. ಈ ಮೂಲಕ 300 ಕೋಟಿ ರೂಪಾಯಿ ಗಳಿಕೆಯತ್ತಾ ಮುನ್ನುಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಚಿರಂಜೀವಿ 'ಗಾಡ್ ಫಾದರ್' ಚಿತ್ರೀಕರಣ ಮುಗಿಸಿದ ಸಲ್ಮಾನ್ ಖಾನ್; ಧನ್ಯವಾದ ತಿಳಿಸಿದ ನಿರ್ದೇಶಕ

ಅಕ್ಷಯ್ ಕುಮಾರ್ ಪ್ರತಿಕ್ರಿಯೆ

ಇತ್ತೀಚಗಷ್ಟೆ ಸಿನಿಮಾದ ಬಗ್ಗೆ ಮಾತನಾಡಿದ್ದ ಅಕ್ಷಯ್ ಕುಮಾರ್ 'ಮೊದಲನೆಯದಾಗಿ ನಾನು ಕಾಶ್ಮೀರ್ ಫೈಲ್ಸ್ ಕಂಡ ಯಶಸ್ಸಿನಿಂದ ಉತ್ಸುಕನಾಗಿದ್ದೇನೆ. ಇದು ನಮ್ಮ ಸಿನಿಮಾದ ಶಕ್ತಿಯನ್ನು ಹೇಳುತ್ತದೆ' ಎಂದಿದ್ದರು. ಜೊತೆಗೆ ಈ ಸಿನಿಮಾದಿಂದ ಅಕ್ಷಯ್ ನಟನೆಯ ಬಚ್ಚನ್ ಪಾಂಡೆ ಕಲೆಕ್ಷನ್ ಮೇಲೆ ಹೊಡೆತ ಬಿದ್ದಿದೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಕ್ಷಯ್, 'ಬಚ್ಚನ್ ಪಾಂಡೆ ಸಿನಿಮಾಗಿಂತ ಕಾಶ್ಮೀರ್ ಫೈಲ್ಸ್ ಉತ್ತಮವಾಗಿ ಹೋಗುತ್ತಿದೆ. ಹಾಗಂತ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ದೂಷಿಸುತ್ತಿಲ್ಲ. ಕಾಶ್ಮೀರ್ ಫೈಲ್ಸ್ ಬಿರುಗಾಳಿ ಎಬ್ಬಿಸಿದೆ, ಆದರೆ ನಾವು ಅದಕ್ಕೆ ಸಿಲುಕಿದೆವು' ಎಂದು ಹೇಳಿದರು.

click me!