ಕಪ್ಪು-ಬಿಳುಪು ಪ್ರೆಗ್ನೆನ್ಸಿ ಫೋಟೋಶೂಟ್​ ಹಿಂದಿರೋ ಸತ್ಯನೇ ಬೇರೆನಾ? ದೀಪಿಕಾಗೆ ಇದೆಂಥ ಅಗ್ನಿ ಪರೀಕ್ಷೆ?

By Suchethana D  |  First Published Sep 3, 2024, 12:07 PM IST

ನಟಿ ದೀಪಿಕಾ ಪಡುಕೋಣೆ ಹೊಟ್ಟೆ ಬಿಟ್ಟುಕೊಂಡು ಫೋಟೋಶೂಟ್​ ಮಾಡಿಸಿಕೊಂಡರೂ, ಈಕೆಯ ಗರ್ಭಧಾರಣೆ ಕುರಿತು ಇನ್ನೂ ಇದೆಂಥ ಸಂದೇಹ?
 


ಯಾಕೋ ನಟಿ ದೀಪಿಕಾ ಪಡುಕೋಣೆ ನಸೀಬೇ ಚೆನ್ನಾಗಿದ್ದಂತೆ ಕಾಣುತ್ತಿಲ್ಲ. ನಟಿಗೆ  ಮಗುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ ಇವರ ಹೊಟ್ಟೆಯ ಬಗೆಗೆ ಮಾತ್ರ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಈ ಮೊದಲು ದಿನಕ್ಕೊಂದರಂತೆ ನಟಿಯ ಹೊಟ್ಟೆ ಕಾಣಿಸುತ್ತಿರುವ ಕಾರಣ, ನಟಿ ಗರ್ಭಿಣಿಯೇ ಅಲ್ಲ ಎಂದು ಹೇಳಲಾಗಿತ್ತು.  ಮುಂದಿನ ತಿಂಗಳು ಡೆಲವರಿ ಎಂದರೆ ಈಗ ದೀಪಿಕಾ ತುಂಬು ಗರ್ಭಿಣಿಯಾಗಿರಬೇಕು. ಆದರೆ ಇಲ್ಲಿಯವರೆಗೂ ಅವರ ಹೊಟ್ಟೆಯ ಸೈಜ್‌ನಲ್ಲಿ ವ್ಯತ್ಯಾಸ ಆಗ್ತಿಲ್ಲ, ಅದರ ಶೇಪ್‌ ಮಾತ್ರ ಅಡ್ಡಾದಿಡ್ಡಿ ಆಗುತ್ತಿದೆ ಎಂದೇ ದೊಡ್ಡ ಮಟ್ಟಿಗಿನ ಚರ್ಚೆಯಾಗಿತ್ತು.  ಆದರೆ ಇದೀಗ ಮತ್ತೆ ಅಗ್ನಿಪರೀಕ್ಷೆ! ತುಂಬು ಗರ್ಭಿಣಿ ದೀಪಿಕಾ ಎಲ್ಲರ ಇಂಥ ಕುಹಕ ಮಾತುಗಳಿಗೆ ಫುಲ್​ಸ್ಟಾಪ್​ ಇಡಲು ಹೊಟ್ಟೆ ಬಿಟ್ಟುಕೊಂಡು ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಆದರೂ ಈಗಲೂ ಈಕೆಯ ಗರ್ಭಧಾರಣೆ ಕುರಿತು ಏನೇನೋ ಸುದ್ದಿಗಳು ಹರಿದಾಡುತ್ತಲೇ ಇವೆ. 

ಹೌದು. ಟೂ ಪೀಸ್​ ಸೇರಿದಂತೆ ಹಲವಾರು ರೀತಿಯಲ್ಲಿ ವೇಷ ಮಾಡಿಕೊಂಡ ನಟಿ ದೀಪಿಕಾ ಹೊಟ್ಟೆ ತೋರಿಸಿ ಫೋಟೋಶೂಟ್​ ಮಾಡಿಸಿದ್ದು, ಅದರ ಫೋಟೋಗಳು ವೈರಲ್​ ಆಗುತ್ತಿವೆ. ಗರ್ಭಿಣಿಯೊಬ್ಬಳು ಈ ರೀತಿ ಅಸಹ್ಯ ಎನಿಸುವಂತೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾಳೆ ಎಂದು ಥಹರೇವಾರಿ ಕಮೆಂಟ್​ಗಳ ಸುರಿಮಳೆ ಒಂದು ಕಡೆ ಆಗುತ್ತಿದ್ದರೆ, ಅದಕ್ಕೂ ಕುತೂಹಲದ ಎನ್ನುವಂಥ ಕಮೆಂಟ್ಸ್​ ಬರುತ್ತಿದೆ. ಅದೇನೆಂದರೆ ದೀಪಿಕಾ ಗರ್ಭಿಣಿ ಅಲ್ಲವೇ ಅಲ್ಲ, ಇದು ಫೋಟೋಷಾಪ್​ನಲ್ಲಿ ಮಾಡಿರುವ ಎಡಿಟಿಂಗ್​ ಅಷ್ಟೇ. ಒಂದು ವೇಳೆ ಆಕೆ ರಿಯಲ್​ ಆಗಿ ಗರ್ಭಿಣಿಯಾಗಿದ್ದರೆ ಕಲರ್​ ಫೋಟೋಶೂಟ್​ ಮಾಡಿಸುತ್ತಿದ್ದರು ಎಂದೇ ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಇತ್ತೀಚೆಗೆ ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋಗ್ರಫಿ ಮತ್ತೆ ಟ್ರೆಂಡಿಂಗ್​ನಲ್ಲಿ ಇರುವುದು ನಿಜವಾದರೂ, ಒಂದೆರಡು ಫೋಟೋಗಳನ್ನಾದರೂ ಕಲರ್​ನಲ್ಲಿ ಮಾಡಿಸಿಕೊಳ್ಳುತ್ತಿದ್ದರು. ಆದರೆ ಕಲರ್​ ಫೋಟೋಗ್ರಫಿಯಾದರೆ ಎಡಿಟಿಂಗ್​ ಮಾಡಿರುವುದು ಸರಿಯಾಗಿ ಗೋಚರಿಸುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ.

Tap to resize

Latest Videos

ದೀಪಿಕಾ ಡೆಲಿವರಿ ಡೇಟ್‌ ರಿವೀಲ್‌! ಮಗುವಿಗೂ- ನಟಿಯ ಎಕ್ಸ್‌ ರಣಬೀರ್‌ ಕಪೂರ್‌ಗೂ ಇದೆಂಥ ನಂಟು!

ಒಟ್ಟಿನಲ್ಲಿ ಮಗುವಿನ ವಿಷಯದಲ್ಲಿ ದೀಪಿಕಾ ಮೇಲೆ ಯಾಕೋ ಹಲವರಿಗೆ ಇನ್ನೂ ಡೌಟೇ ಟೌಟು. ಅಂದಹಾಗೆ, ಈ ಚರ್ಚೆ ಮೊದಲಿಗೆ ಹುಟ್ಟುಹಾಕಿದ್ದು,  ವೈದ್ಯೆಯೊಬ್ಬರ ಮಾತಿನಿಂದ  IVF ಎಕ್ಸ್‌ಪರ್ಟ್ ಡಾ. ಗೌರಿ ಅಗರ್ವಾಲ್ ಅವರು ನೀಡಿದ್ದ ಹೇಳಿಕೆಯಿಂದ. ಇನ್‌ಸ್ಪೈಯರ್ ಅಪ್‌ಲಿಫ್ಟ್ ಎಂಬ ಪಾಡ್‌ಕಾಸ್ಟ್ ನಲ್ಲಿ ಇವರು ದೀಪಿಕಾ ಗರ್ಭಿಣಿ ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.  ಐವಿಎಫ್ ಮತ್ತು ಐಯುಐ ಬಗ್ಗೆ ಇದರಲ್ಲಿ ಮಾತನಾಡಿದ್ದು, ದೀಪಿಕಾ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಜೊತೆಗೆ ಬಾಲಿವುಡ್‌ನಲ್ಲಿ ಅನೇಕ ನಟಿಯರಿಗೆ ಲೇಟಾಗಿ ಮಕ್ಕಳು ಆಗುವುದು ಯಾಕೆ ಎಂಬ ಬಗ್ಗೆ ಮಾತನಾಡಿದ್ದರು. ಬಾಲಿವುಡ್‌ ನಲ್ಲಿ ಅನೇಕ ನಟಿಯರು ತುಂಬಾ ಯಂಗ್ ಆಗಿದ್ದರೆ ನಾರ್ಮಲ್‌ ಮಗು ಹೆರುತ್ತಾರೆ. ಆದರೆ ಕೆಲವು ನಟಿಯರು ವಯಸ್ಸಾಗಿದೆ ಎಂದರೆ ಅವರು ಐವಿಎಫ್ ಮೊರೆ ಹೋಗುತ್ತಾರೆ.  ದೀಪಿಕಾ ಪಡುಕೋಣೆ ಈಗ ಗರ್ಭಿಣಿ ಎಂಬುದು ವಿವಾದದಲ್ಲಿದೆ. ಬಾಲಿವುಡ್‌ ಅಂಗಳದಲ್ಲಿ ದೀಪಿಕಾ ಪ್ರಗ್ನೆಂಟ್‌ ಅಥವಾ ಸರೋಗಸಿ ಮೂಲಕ ಮಗು ಹೆಡೆಯುತ್ತಾರೆ ಎಂಬುದು  ಒಂದು ಚರ್ಚಿತ ವಿಷಯವಾಗಿದೆ ಎಂದಿದ್ದರು.

ಇದಾದ ಬಳಿಕ ದೀಪಿಕಾ ಗರ್ಭಿಣಿಯಾಗಿರುವ ಕುರಿತು ಪರ-ವಿರೋಧಗಳ ಚರ್ಚೆ ಆಗುತ್ತಲೇ ಇದೆ. ಆರಂಭದಲ್ಲಿ ಮಗುವಿನ ಬಗ್ಗೆ ದೀಪಿಕಾ ಘೋಷಿಸಿದಾಗಲೂ ತಾವು ಗರ್ಭಿಣಿ ಎಂದು ಹೇಳಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ಮಗುವಿನ ನಿರೀಕ್ಷೆ ಅಂದಷ್ಟೇ ಹೇಳಿದ್ದರು. ಅದನ್ನೆಲ್ಲಾ ಕೆದಕಿ, ನಟಿ ಗರ್ಭಿಣಿ ಅಲ್ಲ, ಕಲ್ಕಿಯ ಫೇಕ್‌ ಬೇಬಿಬಂಪ್‌ ಅನ್ನೇ ತೋರಿಸ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಏಕೆಂದರೆ,  ನಟಿಯ  ಕಲ್ಕಿ 2898 ಎಡಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಫೈಟಿಂಗ್‌ ದೃಶ್ಯವಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ನಟಿ ಗರ್ಭಿಣಿಯಾಗಿರುವ ರೋಲ್‌ ಮಾಡಿದ್ದಾರೆ. ಆಗ ದೀಪಿಕಾ ನಿಜವಾಗಿಯೂ ಗರ್ಭಿಣಿಯಾಗಿದ್ದಳು ಎಂದು ಪತಿ ರಣವೀರ್‌ ಸಿಂಗ್‌ ಹೇಳಿದ್ದಾರೆ. ಆದರೆ 2-3 ತಿಂಗಳ ಗರ್ಭಿಣಿ ಅಂಥ ಸಾಹಸಮಯ ದೃಶ್ಯ ಮಾಡಲು ಸಾಧ್ಯವೇ ಇಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ನಕಲಿ ಬೇಬಿ ಬಂಪ್‌ ತೋರಿಸಲಾಗಿದೆ. ಅದನ್ನೇ ಈಗಲೂ ನಟಿ ತೋರಿಸುತ್ತಿದ್ದಾರೆ ಎನ್ನುವುದು ಎಲ್ಲರ ವಾದ. 

ಮಲಗಿದ್ದ ಶಿಲ್ಪಾ ಶೆಟ್ಟಿ ಮೇಲೆ ಎರಗಿ ತಬ್ಬಿ, ಉರುಳಾಡಿದ ಅಮೆರಿಕನ್​ ನಟ! ಶಾಕಿಂಗ್​ ವಿಡಿಯೋ ವೈರಲ್​

click me!