Deepika Padukone: ಇದು ಬೆಂಕಿ! ಫೇಕ್ ಪ್ರೆಗ್ನೆನ್ಸಿ ಅಂದೋರಿಗೆ ಬೆತ್ತಲೆ ಹೊಟ್ಟೆ ಫೋಟೋ ಹೊಡೆದು ಉತ್ತರ ಕೊಟ್ರಾ ದೀಪಿಕಾ

By Bhavani Bhat  |  First Published Sep 2, 2024, 9:54 PM IST

 ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಫೋಟೋ ಶೂಟ್ ನೋಡಿ ಎಲ್ಲರೂ ಬೆಂಕಿ ಅಂತಿದ್ದಾರೆ. ಆ ಲೆವೆಲ್‌ಗಿದೆ ಈ ಫೋಟೋಶೂಟ್. ಇದರ ಹಿಂದಿರೋ ಸ್ಟೋರಿ ಏನ್ ಗೊತ್ತಾ?



ದೀಪಿಕಾ ಪಡುಕೋಣೆ ಬಾಲಿವುಡ್‌ನ ಹಾಟ್ ಆಂಡ್ ಸಕ್ಸಸ್‌ಫುಲ್ ನಟಿ. ಮದುವೆ, ಗಿದುವೆ ಅನ್ನೋದೆಲ್ಲ ಈಕೆಯ ಕೆರಿಯರ್‌ಗೆ ಅಡ್ಡಿ ಆಗಲೇ ಇಲ್ಲ. ಮದುವೆ ಆದ್ಮೇಲೆ ಇನ್ನಷ್ಟು ಹಾಟ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡ ಈ ನಟಿ ಸದ್ಯಕ್ಕಂತೂ ರೆಸ್ಟ್‌ನಲ್ಲಿದ್ದಾರೆ. ಕಾರಣ ತಿಂಗಳು ತುಂಬಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜ್ಯೂನಿಯರ್ ದೀಪಿಕಾನೋ ಅಥವಾ ಜ್ಯೂನಿಯರ್ ರಣವೀರೋ ಯಾರೋ ಒಬ್ರು ಧರೆಗಿಳಿದು ಬರೋದ್ರಲ್ಲಿದ್ದಾರೆ. ಆದರೆ ಮೊದಲಿಂದಲೂ ಒಂದಲ್ಲ ಒಂದು ಕಾರಣ ಸುದ್ದಿಯಲ್ಲಿರೋ ದೀಪಿಕಾ ಮದುವೆ ಆಗಿದ್ದೂ ಸಖತ್ ವೈರಲ್ ಆಗಿತ್ತು. ಕ್ರೇಜಿ ಮ್ಯಾನ್ ರಣವೀರ್‌ ಹಿಂದೆ ಈ ಸುಂದರಿ ಯಾಕೆ ಹೋದಳು ಅಂತ ಹಲವರು ಪ್ರಶ್ನೆ ಮಾಡಿದ್ರು. ಇ

ನ್ನೂ ಕೆಲವರು ಈಕೆಗೆ ಬೇಕಿದ್ದ ಸ್ವಾತಂತ್ರ್ಯ ಆತನಲ್ಲದೇ ಇನ್ಯಾರು ಕೊಡಲು ಸಾಧ್ಯ ಅಂದರು, ಮತ್ತೊಂದು ಕಡೆ ಮದುವೆ ಆದ್ಮೇಲೆ ತನಗೆ ಅಫೇರ್ ಇತ್ತು ಅಂದಿದ್ದು ಕೇಳಿ ಇವರಿಬ್ಬರ ರಿಲೇಶನ್‌ಶಿಪ್ಪೇ ಮುರಿದುಬಿತ್ತು ಅನ್ನೋ ಲೆವೆಲ್‌ಗೆ ಮಾತುಗಳು ಕೇಳಿಬಂದವು. ಆದರೆ ರಣವೀರ್ ಇದನ್ನೆಲ್ಲ ಕೇರೇ ಮಾಡದೇ ಹೆಂಡತಿ ಜೊತೆಗೆ ಆರಾಮಾವಾಗಿದ್ರು. ಇದೀಗ ಇವರ ಪ್ರೀತಿಗೆ ದ್ಯೋತಕದ ಹಾಗೆ ದೀಪಿಕಾ ಪ್ರೆಗ್ನೆಂಟ್ ಆಗಿದ್ದಾರೆ. 

Tap to resize

Latest Videos

ಮಲಗಿದ್ದ ಶಿಲ್ಪಾ ಶೆಟ್ಟಿ ಮೇಲೆ ಎರಗಿ ತಬ್ಬಿ, ಉರುಳಾಡಿದ ಅಮೆರಿಕನ್​ ನಟ! ಶಾಕಿಂಗ್​ ವಿಡಿಯೋ ವೈರಲ್​

ಎಷ್ಟೋ ಜನ ನಟಿಯರು ಪ್ರೆಗ್ನೆನ್ಸಿಯ ಟೈಮಲ್ಲಿ ಕದ್ದು ಮುಚ್ಚಿ ಓಡಾಡ್ತಾರೆ. ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳಲ್ಲ. ಆದರೆ ಈಗ ಹಾಗಲ್ಲ. ಎಲ್ಲರೂ ಬಿಂದಾಸ್‌ ಆಗಿ ಹೊರಗೆ ಕಾಣಿಸಿಕೊಂಡು ಪ್ರೆಗ್ನೆನ್ಸಿಯನ್ನು ಸಂಭ್ರಮಿಸುತ್ತಾರೆ. ದೀಪಿಕಾ ಅಂತೂ ಮೊದಲಿಂದಲೇ ಪ್ರೆಗ್ನೆನ್ಸಿಯನ್ನು ಎನ್‌ಜಾಯ್ ಮಾಡ್ತನೇ ಬಂದ್ರು. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಈಕೆ ಮಗುವಿಗೆ ಜನ್ಮ ನೀಡಲಿದ್ದಾರೆ. ಅಂಥಾ ಟೈಮಲ್ಲಿ ಬೆಂಕಿಯಂಥಾ ಫೋಟೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಇವರ ಸಖತ್ ಬೋಲ್ಡ್‌ ಫೋಟೋಸ್‌ ಕಂಡವ್ರು ಬೆಂಕಿ ಇಮೋಜಿ ಬಿಟ್ಟು ಬೇರೇನೂ ಹಾಕಕ್ಕಾಗದೇ ಕಣ್ ಕಣ್ ಬಿಟ್ಟು ನೋಡ್ತಿದ್ದಾರೆ. ಆ ಲೆವೆಲ್‌ನಲ್ಲಿ ಈ ಫೋಟೋಶೂಟ್ ಇದೆ. 
ಪ್ರೆಗ್ನೆನ್ಸಿ ಫೋಟೋಶೂಟ್‌ ಅನ್ನೂ ಈ ಲೆವೆಲ್‌ಗೆ ಬೋಲ್ಡ್‌ ಆಗಿ ಮಾಡಬಹುದಾ ಅಂತ ಎಷ್ಟೋ ನಟಿಯರು ಕಣ್ ಕಣ್ ಬಿಡ್ತಿದ್ದಾರೆ. ಅಷ್ಟಕ್ಕೂ ದೀಪಿಕಾ ಈ ಲೆವೆಲ್‌ನಲ್ಲಿ ರೊಚ್ಚಿಗೆದ್ದು ಫೋಟೋಶೂಟ್ ಮಾಡಿಸಿರೋದಕ್ಕೆ ರೀಸನ್ನೂ ಇದೆ. ಈಕೆ ಪ್ರೆಗ್ನೆನ್ಸಿಯನ್ನು ಪ್ರಕಟಿಸಿದಾಗ ಒಂದಿಷ್ಟು ಜನ ಮಾಡೋಕೆ ಬೇರೇನೂ ಕೆಲ್ಸ ಇಲ್ಲದೋರು ಇದೊಂದು ಫೇಕ್ ಪ್ರೆಗ್ನೆನ್ಸಿ ಅಂದರು. ಆಕೆ ತನ್ನ ಫೋಟೋ ಪೋಸ್ಟ್ ಮಾಡಿದಾಗಲೆಲ್ಲ ಆಕೆ ಸುಮ್ ಸುಮ್ನೇ ಫೋಟೋ ಹಾಕ್ತಿದ್ದಾರೆ, ನಿಜಕ್ಕೂ ಆಕೆ ಪ್ರೆಗ್ನೆಂಟ್ ಅಲ್ವೇ ಅಲ್ಲ ಅನ್ನೋ ಹುರುಳಿಲ್ಲದ ವಾದ ಹರಿಯಬಿಟ್ಟರು. ಒಂದು ಹಂತದ ತನಕ ಸುಮ್ಮನೇ ಇದ್ದ ರಣವೀರ್ ಮತ್ತು ದೀಪಿಕಾ ಕರೆಕ್ಟ್ ಟೈಮಲ್ಲೇ ಇಂಥಾ ಅವಿವೇಕಿಗಳಿಗೆ ಉತ್ತರ ಕೊಟ್ಟಿದ್ದಾರೆ. 

ಕಮಲ್ ಹಾಸನ್ ಚಿತ್ರದಲ್ಲಿ ಲಿಪ್-ಲಾಕ್ ಮತ್ತು ಕಿಸ್ಸಿಂಗ್ ಸೀನ್‌ ಕಿರುಕುಳ: ಕರಾಳ ಕಥೆ ಬಿಚ್ಚಿಟ್ಟ ಖುಷ್ಬೂ, ರಾಧಿಕಾ!
ಹೌದು, ದೀಪಿಕಾ ಬೆತ್ತಲೆ ಹೊಟ್ಟೆಯ ಫೋಟೋ ಶೂಟ್ ಮಾಡಿಸಿದ್ದು ಇಂಥಾ ತಲೆ ಇಲ್ಲದ ಮಂದಿಗೆ ಕರೆಕ್ಟಾದ ಉತ್ತರ ಕೊಡೋದಕ್ಕೆ. ಮತ್ತು ಇಂಥವರ ಮಾತು ಕೇಳಿ ಇದ್ರೂ ಇರ್ಬಹುದೇನೋ ಅಂತ ತಲೆಗೆ ಹುಳ ಬಿಟ್ಟೋರಿಗೆ ಕ್ಲಾರಿಟಿ ಕೊಡೋದಕ್ಕೆ ಅನ್ನೋ ಮಾತು ಸದ್ಯ ಬಿಟೌನ್‌ನಿಂದ ಕೇಳಿ ಬರ್ತಿದೆ. 
 ರೀಸನ್ ಏನೇ ಇರಲಿ, ಸದ್ಯ ಈ ಬೆಂಕಿ ಫೋಟೋ ಶೂಟ್ ಮಾತ್ರ ದೀಪಿಕಾ ಪೋಸ್ಟ್ ಮಾಡಿದ ಕೆಲವೇ ಹೊತ್ತಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ನೋಡಿದವರೆಲ್ಲ, 'ಅಬ್ಬಾ, ಬೆಂಕಿ!' ಅಂತಲೇ ಉದ್ಗರಿಸ್ತಾ ಇದ್ದಾರೆ. 

 

click me!