ಮಲಗಿದ್ದ ಶಿಲ್ಪಾ ಶೆಟ್ಟಿ ಮೇಲೆ ಎರಗಿ ತಬ್ಬಿ, ಕಿಸ್ ಮಾಡಿ ಆಕೆಯ ಸೊಂಟ ಮುಟ್ಟಿ ಉರುಳಾಡಿದ ಅಮೆರಿಕನ್ ನಟ! ಶಾಕಿಂಗ್ ವಿಡಿಯೋ ವೈರಲ್
ನಟಿ ಶಿಲ್ಪಾ ಶೆಟ್ಟಿ ಅವರಿಗೆ ಜಗತ್ತಿನಾದ್ಯಂತ ಫ್ಯಾನ್ಸ್ ಇದ್ದಾರೆ ಎನ್ನುವುದು ನಿಜವೇ. ಇವರು ಇಂದಿಗೂ ಹಲವರ ಕ್ರಷ್ ಕೂಡ ಹೌದು. ವಯಸ್ಸು 49 ಆದರೂ ಇಂದಿಗೂ ಅದೇ ಫಿಟ್ನೆಸ್, ಸ್ಮಾರ್ಟ್ನೆಸ್ ಉಳಿಸಿಕೊಂಡಿದ್ದಾರೆ. ಇನ್ನು ಇವರು ಯುವತಿ ಆಗಿರುವಾಗ ಅದೆಷ್ಟು ಮಂದಿ ಈಕೆಯ ಮೇಲೆ ಕ್ರಷ್ ಹೊಂದಿರಲಿಕ್ಕಿಲ್ಲ ಹೇಳಿ? ಎಷ್ಟೋ ಮಂದಿ ನಟಿಯ ಜೊತೆ ಡೇಟಿಂಗ್ ಮಾಡಲು ಕೂಡ ಇಷ್ಟಪಟ್ಟಿದ್ದರು ಎನ್ನುವುದು ಸುಳ್ಳಲ್ಲ. ಹಾಗೆಂದು ಶಿಲ್ಪಾ ಶೆಟ್ಟಿಯನ್ನು ತಬ್ಬಿಕೊಂಡು, ಆಕೆಯ ಮೇಲೆ ಉರುಳಿ ಹೋದರೆ ಹೇಗಿರುತ್ತೆ? ಹೌದು. ಶಾಕಿಂಗ್ ವಿಡಿಯೋ ಈಗ ವೈರಲ್ ಆಗಿದೆ. ಇದರಲ್ಲಿ ನಟಿ ಶಿಲ್ಪಾ ಶೆಟ್ಟಿ ಮಂಚದ ಮೇಲೆ ಮಲಗಿರುವುದನ್ನು ನೋಡಬಹುದು. ಆಗ ಅಮೆರಿಕನ್ ನಟ ಡಿರ್ಕ್ ಬೆನೆಡಿಕ್ಟ್ ಆಕೆಯನ್ನು ತಬ್ಬಿ, ಮೈಯೆಲ್ಲಾ ಮುಟ್ಟಿ, ಸೊಂಟವನ್ನು ಬಳಸಿ ಆಕೆಯ ಮೇಲೆ ಉರುಳಾಡಿದ್ದಾರೆ!
ಆದರೆ ವಿಡಿಯೋದ ಕೊನೆಯಲ್ಲಿ ಶಿಲ್ಪಾ ಶೆಟ್ಟಿ ಏನೂ ಆಗದವರಂತೆ ಜೋರಾಗಿ ನಗುವುದನ್ನು ನೋಡಬಹುದು. ಆದರೆ ಈ ಅಸಭ್ಯ, ಅಶ್ಲೀಲ ಎನ್ನುವಂಥ ಘಟನೆ ನಡೆದದ್ದು 2007ರಲ್ಲಿ. ಇದು ನಡೆದದ್ದು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬ್ರದರ್ 5 ನಲ್ಲಿ. ಇಲ್ಲಿಯ ವಿವಾದಾತ್ಮಕ, ಅಶ್ಲೀಲತೆಗೆ ಇನ್ನೊಂದು ಹೆಸರೇ ಎಂದು ಕುಖ್ಯಾತಿ ಪಡೆದಿರುವ ಬಿಗ್ಬಾಸ್ನಂತೆಯೇ ಅಮೆರಿಕದಲ್ಲಿ ನಡೆದ ಬಿಗ್ ಬ್ರದರ್ ಷೋನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇದರಲ್ಲಿ ಶಿಲ್ಪಾ ಶೆಟ್ಟಿ ಮತ್ತು ನಟ ಡಿರ್ಕ್ ಬೆನೆಡಿಕ್ಟ್ ಸ್ಪರ್ಧಿಗಳಾಗಿದ್ದರು. ಈ ಷೋ ಅನ್ನು ಶಿಲ್ಪಾ ಶೆಟ್ಟಿ ಗೆದ್ದಿದ್ದರು ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ. ಆದರೆ ಈ ವಿಡಿಯೋ ಇದೀಗ ವೈರಲ್ ಆಗಿದೆ.
ದುಡ್ಡಿಗಾಗಿ ಮದ್ವೆಯಾದ ಶಿಲ್ಪಾ ಶೆಟ್ಟಿ, ಅನಿಲ್ ಕಪೂರ್! ವೈರಲ್ ವಿಡಿಯೋದಿಂದ ರಟ್ಟಾಯ್ತು ಗುಟ್ಟು
ಅಂದಹಾಗೆ ಶಿಲ್ಪಾ ಶೆಟ್ಟಿ ಆ ಸಮಯದಲ್ಲಿ ಮದುವೆಯಾಗಿರಲಿಲ್ಲ. ಇದು ನಡೆದದ್ದು 2007ರಲ್ಲಿ. ಶಿಲ್ಪಾ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾದದ್ದು 2009ರಲ್ಲಿ. ಈ ಸಮಯದಲ್ಲಿ ಶಿಲ್ಪಾಳ ಸೌಂದರ್ಯಕ್ಕೆ ನಟ ಡಿರ್ಕ್ ಮಾರು ಹೋಗಿದ್ದರು. ಆಕೆಯನ್ನು ಬಿಗ್ ಬ್ರದರ್ ಮನೆಯಲ್ಲಿಯೇ ಇಷ್ಟಪಟ್ಟಿದ್ದರು. ಶಿಲ್ಪಾ ಶೆಟ್ಟಿ ಮಂಚದ ಮೇಲೆ ಮಲಗಿದ್ದ ಸಂದರ್ಭದಲ್ಲಿ ಆಕೆಯ ಮೈಮೇಲೆ ಬಿದ್ದು, ಸೊಂಟವನ್ನು ಮುಟ್ಟಿ ಕಿಸ್ ಮಾಡಿ ತಬ್ಬಿಕೊಂಡಿರುವುದನ್ನು ಈ ವಿಡಿಯೋನಲ್ಲಿ ನೋಡಬಹುದು. ಕ್ಯಾಮೆರಾ ಕಣ್ಣುಗಳ ತಮ್ಮ ಮೇಲೆ ಇದೆ ಎನ್ನುವುದನ್ನೂ ಮರೆತು ಈ ರೀತಿ ಅಸಭ್ಯವಾಗಿ ವರ್ತಿಸಿದ್ದರು. ಶಿಲ್ಪಾ ಆರಂಭದಲ್ಲಿ ವಿಚಲಿತರಾದಂತೆ ಕಂಡುಬಂದರೂ ಆಮೇಲೆ ಇದನ್ನು ಅವರೂ ತಮಾಷೆಯಾಗಿಯೇ ತೆಗೆದುಕೊಂಡರು! ಷಾನಲ್ಲಿ ಭಾಗವಹಿಸಿದ 11 ಹೌಸ್‌ಮೇಟ್‌ಗಳಲ್ಲಿ ಶಿಲ್ಪಾ ಒಬ್ಬರು. ಇವರೇ ವಿನ್ ಆದರು ಕೂಡ.
ಇನ್ನು ಶಿಲ್ಪಾ ಮತ್ತು ರಾಜ್ ಕುಂದ್ರಾ ಕುರಿತು ಹೇಳುವುದಾದರೆ, 2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಇವರ ಪತಿ, ರಾಜ್ ಕುಂದ್ರಾ ನೀಲಿ ಚಿತ್ರ (porn film) ಕೇಸ್ನಲ್ಲಿ ಸಿಲುಕಿ ಬಿದ್ದಿದ್ದರು. ಜೈಲು ವಾಸವನ್ನೂ ಅನುಭವಿಸಿದರು. ಆದರೆ ಸದ್ಯ ದಂಪತಿ ನಿರಾಳರಾಗಿದ್ದಾರೆ. ಇದರ ನಡುವೆಯೇ ಶಿಲ್ಪಾ ರಾಜ್ ಅವರನ್ನು ಹಣಕ್ಕಾಗಿ ಮದ್ವೆಯಾದ್ರು ಎನ್ನುವ ಸುದ್ದಿ ಬಿ-ಟೌನ್ನಲ್ಲಿ ಹರಿದಾಡಿತ್ತು. ಇದಕ್ಕೆ ಕೆಂಡಾಮಂಡಲವಾಗಿದ್ದ ನಟಿ, ನಾನು ರಾಜ್ ಕುಂದ್ರಾರನ್ನು ಮದುವೆಯಾದಾಗ ಅವರು ಶ್ರೀಮಂತರಾಗಿದ್ದರು ಎನ್ನುವುದು ನಿಜವೇ. ಆದರೆ ಆ ಸಮಯದಲ್ಲಿ ನಾನೆಷ್ಟು ಶ್ರೀಮಂತ ಆಗಿದ್ದೆ ಎನ್ನುವುದನ್ನು ಜನ ಗೂಗಲ್ ಮಾಡಿದಂತೆ ಕಾಣುತ್ತಿಲ್ಲ. ನಾನು ಆಗಲೂ ಆಗರ್ಭ ಶ್ರೀಮಂತೆನೇ ಆಗಿದ್ದೆ. ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಆಗ ಮತ್ತು ಈಗ ನನ್ನ ಎಲ್ಲ ತೆರಿಗೆಗಳನ್ನು ನಾನೇ ಕಟ್ಟುತ್ತೇನೆ ಎಂದಿದ್ದರು.
ಕರೀನಾ ಜೊತೆನೂ ಸೈಫ್ಗೆ ಬೋರ್ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ