valentine's day spl: ಪ್ರಿಯಾಮಣಿಯ ಫಸ್ಟ್​ ಲವ್​ ಆಗಿದ್ರಾ ತರುಣ್​? ನಟಿ ಹೇಳಿದ್ದೇನು?

By Suvarna News  |  First Published Feb 14, 2023, 9:16 PM IST

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸುತ್ತಿರುವ ಪ್ರಿಯಾಮಣಿ ಅವರು ನಟ ತರುಣ್​ ಅವರನ್ನು ಮದುವೆಯಾಗುತ್ತಾರೆ ಎಂದು ಭಾರಿ ಸುದ್ದಿ ಹರಡಿತ್ತು. ಪ್ರೇಮಿಗಳ ದಿನದ ಸಂದರ್ಭದಲ್ಲಿ ಈ ಬಗ್ಗೆ ನಟಿ ಹೇಳಿದ್ದೇನು?
 


ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿರುವ ನಟಿ ಪ್ರಿಯಾಮಣಿ. ಪ್ರಿಯಾಮಣಿ (Priyamani) ಅವರು 2003ರಲ್ಲಿ ತೆಲುಗು ಚಿತ್ರ ಇವರೇ ಆಟಗಾಡು ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ, ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ರಾಮ್ ಚಿತ್ರದಿಂದ ಸ್ಯಾಂಡಲ್​ವುಡ್​ ಸಿನಿಪಯಣ ಆರಂಭಿಸಿದವರು.  ತಮಿಳು ಚಿತ್ರ ರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾರಂಗಕ್ಕೆ ಕರೆ ತಂದವರು. 2007ರ ತಮಿಳು ರೋಮ್ಯಾಂಟಿಕ್ (Romantic) ಸಿನಿಮಾ ಪರುತಿವೀರನ್‌ನಲ್ಲಿ ಮುತ್ತಜಗು ಎಂಬ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕ ಮೆಚ್ಚುಗೆ ಪಡೆದರು. ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ವಿಭಿನ್ನ ಭಾಷೆಯ ಚಲನಚಿತ್ರಗಳಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2008ರಲ್ಲಿ  ಪ್ರಿಯಾಮಣಿ ಮಲಯಾಳಂ ಪ್ರಣಯ ತಿರಕ್ಕಾಥಾದಲ್ಲಿ ಮಾಳವಿಕಾ ಪಾತ್ರಕ್ಕಾಗಿ ಮತ್ತಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು ಮತ್ತು ಅತ್ಯುತ್ತಮ ನಟಿ ಮಲಯಾಳಂನಲ್ಲಿ ಫಿಲ್ಮ್‌ಫೇರ್ (Filmfare) ಪ್ರಶಸ್ತಿಯನ್ನು ಗೆದ್ದರು. 

ಸಾಮಾನ್ಯವಾಗಿ ಎಲ್ಲಾ  ನಟ, ನಟಿಯರ ಹೆಸರು ಒಬ್ಬರಲ್ಲೊಬ್ಬರು ತಾರೆಯರ ಜೊತೆ ಥಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಅದೇ ರೀತಿ ಪ್ರಿಯಾಮಣಿ ಹೆಸರು ಕೂಡ ಕೆಲವು ನಾಯಕ ನಟರ ಜೊತೆ ಕೇಳಿಬಂದಿತ್ತು. ಇವರು  ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ,  ತೆಲುಗು ಚಲನಚಿತ್ರ ನವ ವಸಂತಂ ಆಫರ್ ನೀಡಲಾಯಿತು. ಅದರಲ್ಲಿ ಅವರು ನಟ ತರುಣ್ (Tarun) ಜೊತೆಗೆ ಕಾಣಿಸಿಕೊಂಡರು. ಈ ಚಿತ್ರದ ಬಳಿಕ ತರುಣ್​ ಅವರ ಜೊತೆ ಇವರ ಹೆಸರು ಸೇರಿಕೊಂಡಿತು.  ಇಂಡಸ್ಟ್ರಿಯಲ್ಲಿ ಇವರ ಸಂಬಂಧದ ಕುರಿತು ದೊಡ್ಡ ಸುದ್ದಿಯಾಯಿತು. ಬಾಲ ಕಲಾವಿದನಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ತರುಣ್​, ಅಪಾರ ಅಭಿಮಾನಿಗಳನ್ನು ಪಡೆದವರು. ಇವರು  2005 ರಲ್ಲಿ 'ನವ ವಸಂತಂ' ಎಂಬ ಚಿತ್ರದಲ್ಲಿ ನಟಿಸಿದ್ದರು. ಅವರಿಗೆ ಇಲ್ಲಿ ಜೋಡಿಯಾಗಿದ್ದು ನಾಯಕಿ ಪ್ರಿಯಾಮಣಿ. ಮೊದಲ ಚಿತ್ರದಿಂದಲೇ ಇವರಿಬ್ಬರ ಅಫೇರ್ (Affair) ಬಗ್ಗೆ ಗುಸುಗುಸು ಶುರುವಾಗಿದ್ದು, ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು.

Tap to resize

Latest Videos

Valentines day spl: ಗಾಳಿಸುದ್ದಿಗೆ ಬ್ರೇಕ್​- ಬಾಯ್​ಫ್ರೆಂಡ್​ ಜೊತೆ ಶ್ರುತಿ ಹಾಸನ್​ ಫೋಟೋ ಕ್ಲಿಕ್​​

ನಂತರ ಆ ಸುದ್ದಿ ತಣ್ಣಗಾಗಿತು. ಕೆಲವು ನಟರ ಜೊತೆ ಹೆಸರು ಆಗಿಂದಾಗ್ಗೆ ಕೇಳಿಬರುತ್ತಿರುತ್ತಿದ್ದರೂ ಅಂತಿಮವಾಗಿ 2017 ಅಗಸ್ಟ್ 23 ರಂದು ಎರಡು ಮಕ್ಕಳ ತಂದೆ ಉದ್ಯಮಿ ಮುಸ್ತಫಾ ರಾಜ್ (Mustafa Raj) ಅವರನ್ನು ಪ್ರಿಯಾಮಣಿ ವಿವಾಹವಾದರು. ಮದುವೆಯಾದ ಮೇಲೆ ಇವರ ಬಾಳಲ್ಲಿ ಬಿರುಗಾಳಿಯಾಗಿ ಬಂದದ್ದು ಮುಸ್ತಫಾ ಅವರ ಮೊದಲ ಪತ್ನಿ ಆಯೆಷಾ. ಉದ್ಯಮಿ ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ವಿರುದ್ಧ ಮುಸ್ತಫಾ ರಾಜ್ ಅವರ ಮೊದಲ ಪತ್ನಿ ಆಯೆಷಾ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದರು. 'ಮುಸ್ತಫಾ ರಾಜ್ ನನಗೆ ಈವರೆಗೂ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ. ಹೀಗಾಗಿ, ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಅಸಿಂಧು' ಎಂಬುದು ಆಯೆಷಾ (Ayesha) ಅವರ ವಾದವಾಗಿತ್ತು. ಮುಸ್ತಫಾ ರಾಜ್ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನೂ ಆಯೆಷಾ ದಾಖಲಿಸಿದ್ದರು. ನಂತರ ಖುದ್ದು ಪ್ರಿಯಾಮಣಿ ಸ್ಪಷ್ಟನೆ ಕೊಟ್ಟು ಹಣಕ್ಕಾಗಿ ಅವರು ಈ ರೀತಿ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದಿದ್ದರು. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

ಆದರೆ,  ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ  ತಮ್ಮ ಮತ್ತು ಮೊದಲ ಲವ್​ ಎಂದೇ ಬಿಂಬಿತವಾಗಿದ್ದ ತರುಣ್​ ಕುರಿತು ಪ್ರಿಯಾಮಣಿ ಮಾತನಾಡಿದ್ದಾರೆ. ನವ ವಸಂತಂ ಸಿನಿಮಾದ ಚಿತ್ರೀಕರಣದ ವೇಳೆ ನಾನು ಮತ್ತು ತರುಣ್ ಪ್ರೀತಿಸುತ್ತಿದ್ದೇವೆ. ಮದುವೆಯಾಗುತ್ತಿದ್ದೇವೆ ಎಂಬ ಮಾತುಗಳು ಕೇಳಿ ಬಂದಿದ್ದವು. ತರುಣ್ ಅವರ ತಾಯಿ ರೋಜಾ ರಮಣಿ ಶೂಟಿಂಗ್ (Shooting) ಸ್ಥಳಕ್ಕೆ ಬಂದು ಭೇಟಿಯಾದರು. ನೀವಿಬ್ಬರೂ ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುತ್ತೀರಾ ಎಂದು ಅವರು ಹೇಳಿದರು. ಇದು ನಿಜವಾಗಿದ್ದರೆ ನಿಮ್ಮ ಮದುವೆಗೆ ನನ್ನ ಅಭ್ಯಂತರವಿಲ್ಲ. ಏನಾದರೂ ಇದ್ದರೆ, ನನಗೆ ಧೈರ್ಯದಿಂದ ಹೇಳಿ ಎಂದಿದ್ದರು. ಆದರೆ ಇವೆಲ್ಲವೂ ಗಾಳಿ ಸುದ್ದಿ. ಪ್ರೀತಿ ಮಾಡುತ್ತಿದ್ದುದು ನಿಜವೇ ಆಗಿದ್ದರೆ ಹೌದು ಎಂದಿದ್ದರೆ ಸಾಕಿತ್ತು. ಮದುವೆ ಆಗುತ್ತಿತ್ತು. ಒಂದೇ ನಾಯಕನ ಜೊತೆ ಸತತ ಕೆಲ ಚಿತ್ರಗಳನ್ನು  ಮಾಡಿದರೆ  ಹೀಗೆ ಸುದ್ದಿಯಾಗುತ್ತದೆ. ಇವೆಲ್ಲವೂ ಸುಳ್ಳು. ನಾನು ಈಗ ಪತಿಯ ಜೊತೆ ನೆಮ್ಮದಿಯಿಂದ ಇದ್ದೇನೆ' ಎಂದಿದ್ದಾರೆ. 

No Kiss Please: ಕಿಸ್​ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್​ ನಟ-ನಟಿಯರು!

click me!