ಮದುವೆಯಾದಾಗಿನಿಂದಲೂ ಟ್ರೋಲ್ ಆಗುತ್ತಿರುವ ಜೋಡಿ ಮಹಾಲಕ್ಷ್ಮಿ ಮತ್ತು ರವೀಂದರ್ ಅವರದ್ದು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರವೀಂದರ್ ಅವರು, ಪ್ರೇಮಿಗಳ ದಿನಕ್ಕೆ ಪತ್ನಿಗೆ ಲವ್ ಲೆಟರ್ ಬರೆದಿದ್ದಾರೆ. ಏನಿದೆ ಅದರಲ್ಲಿ?
ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ (Mahalakshmi) ಹಾಗೂ ನಿರ್ಮಾಪಕ ರವೀಂದರ್ (Raveender) ಕಳೆದ ಸೆಪ್ಟೆಂಬರ್ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ದಿನದಿಂದಲೂ ಈ ಜೋಡಿ ಟ್ರೋಲ್ ಆಗುತ್ತಲೇ ಇದೆ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದಿನದಿನಕ್ಕೂ ಟ್ರೋಲ್ಗಳು ಹೆಚ್ಚುತ್ತಲೇ ಇವೆ. ರವೀಂದರ್ ಅವರು ತೀರಾ ದಪ್ಪಗಿದ್ದು, ಸುಂದರಿ ಮಹಾಲಕ್ಷ್ಮಿ ಹೂವಿನ ಹಾಗೆ ಇರುವುದರಿಂದಲೇ ಈ ಜೋಡಿ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಮುದ್ದಾದ ಜೋಡಿ ಮದುವೆಯಾಗಿ ಆರು ತಿಂಗಳುಗಳನ್ನು ಕಳೆದಿವೆ. ಟ್ರೋಲ್ (Troll) ಆದಷ್ಟೂ ಹೆಚ್ಚೆಚ್ಚು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವ ಈ ದಂಪತಿ, ಟ್ರೋಲಿಗರನ್ನು ಸುಸ್ತು ಮಾಡಿಸುತ್ತಿದ್ದಾರೆ.
ರವೀಂದರ್ ಅವರು ಆಗರ್ಭ ಶ್ರೀಮಂತರೆಂದು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹಲವರು ಅಂದುಕೊಳ್ಳುತ್ತಲೇ ಇದ್ದಾರೆ. ಅದಕ್ಕೆ ತಡೆ ಕೆಡಿಸಿಕೊಳ್ಳದ ಮಹಾಲಕ್ಷ್ಮಿ, ಪತಿ ರವೀಂದರ್ ಅವರು ಕೊಡುವ ದುಬಾರಿ ಉಡುಗೊರೆಯಗಳ ಬಗ್ಗೆ ಸುದ್ದಿ ಮಾಡುತ್ತಲೇ ಇಲ್ಲ. ಚಿನ್ನದ ಮಂಚದಿಂದ (golden cot) ಹಿಡಿದು ಕೆಜಿಗಟ್ಟಲೆ ಚಿನ್ನ, ವಜ್ರ, ವೈಢೂರ್ಯಗಳ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇದ್ದು, ತಮ್ಮನ್ನು ಕಂಡು ಹೊಟ್ಟೆ ಉರಿದುಕೊಳ್ಳುವವರ ಹೊಟ್ಟೆಗೆ ಇನ್ನಷ್ಟು ಕಿಚ್ಚು ಹೊತ್ತಿಸುತ್ತಿದ್ದಾರೆ. ಪ್ರೀತಿಗೆ ಅಂದ ಮುಖ್ಯವಲ್ಲ, ನಿಷ್ಕಲ್ಮಶ ಹೃದಯ ಮುಖ್ಯ ಎಂಬುದು ಮಹಾಲಕ್ಷ್ಮಿ ಅವರ ಮಾತು.
undefined
Valentines Day: ಬೆಡ್ರೂಮಲ್ಲಿ ತಬ್ಬಿ ಮುದ್ದಾಡಿದ ವೀಡಿಯೋ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ!
ಇಂದು ಪ್ರೇಮಿಗಳ ಹಬ್ಬದ (Valentine's Day) ದಿನದ ಪ್ರಯುಕ್ತ ಪುನಃ ಮಹಾಲಕ್ಷ್ಮಿ ವಿಶೇಷವಾದ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಪತಿಗೆ ಪ್ರೇಮಿಗಳ ದಿನಕ್ಕೆ ವಿಶ್ ಮಾಡಿದ್ದಾರೆ. ರವೀಂದರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪತ್ನಿಯ ಜೊತೆ ರೆಡ್ ಔಟ್ಫಿಟ್ನಲ್ಲಿರುವ (putfit) ಫೋಟೋ ಶೇರ್ ಮಾಡಿಕೊಂಡು ವೆಲೈಂಟೈನ್ಸ್ ಡೇಗೆ ಶುಭ ಕೋರಿದ್ದಾರೆ. ನಿನ್ನ ನಗುವಿನಲ್ಲಿಯೇ ನಾನು ಸ್ವರ್ಗ ಕಾಣುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಹಾಲಕ್ಷ್ಮಿ ಅವರು ಪ್ರತಿಕ್ರಿಯೆ ನೀಡಿ, ‘ಧನ್ಯವಾದ ನನ್ನ ಪ್ರೀತಿಯೇ, ನನ್ನನ್ನು ಜಗತ್ತಿನ ಹೆಮ್ಮೆಯ ಪತ್ನಿಯನ್ನಾಗಿ ಮಾಡಿದಿರಿ’ ಎಂದಿದ್ದಾರೆ. ಅವರ ಈ ಮಾತನ್ನು ನೋಡಿದ ಅಭಿಮಾನಿಗಳು ಈ ಜೋಡಿಯನ್ನು ಟೀಕಿಸಿದವರಿಗೆ ಸರಿಯಾದ ಉತ್ತರ ಸಿಕ್ಕಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಕೆಲವರು ‘ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಆಗುತ್ತಿದೆ’ ಎಂದು ಕಮೆಂಟ್ ಹಾಕುತ್ತಿದ್ದಾರೆ.
ಇದೇ ವೇಳೆ ರವೀಂದರ್ ಅವರು ಮಹಾಲಕ್ಷ್ಮಿ ಅವರಿಗೆ ಲವ್ ಲೆಟರ್ (Love letter) ಬರೆದಿದ್ದಾರೆ. ಅದರಲ್ಲಿ ಅವರು, ನನ್ನ ಪ್ರೀತಿ ಆ ನಿಜವಾದ ಪ್ರೀತಿಯಾಗಿರಲಿಲ್ಲ. ಮಹಾಲಕ್ಷ್ಮಿಯನ್ನು ಪ್ರೀತಿಸಿದಾಗ ಇದ್ದ ಪ್ರೀತಿ ಅಷ್ಟು ನಿಜವಾಗಿರಲಿಲ್ಲ. ನಾನು ಶ್ರೀಮತಿ ಮಹಾಲಕ್ಷ್ಮಿ ರವೀಂದ್ರನನ್ನು ಪ್ರೀತಿಸಲು ಪ್ರಾರಂಭಿಸಿದಾಗ ಅದರಲ್ಲಿ 1% ಸುಳ್ಳಾಗಿರಲಿಲ್ಲ. ಸುಂದರವಾದ ಜೀವನ ತಿಳಿದಿದೆ ಮತ್ತು ನಾವು ಇತರರ ಬಗ್ಗೆ ಹೊಂದಿರುವ ಗೌರವ ಮತ್ತು ಪ್ರೀತಿಯಿಂದಾಗಿ ಸುಂದರವಾದ ಜೀವನವನ್ನು ನಡೆಸುತ್ತೇವೆ' ಎಂದಿದ್ದಾರೆ. 'ನಾವು ಇತರರ ಬಗ್ಗೆ ಹೊಂದಿರುವ ಗೌರವ ಮತ್ತು ಪ್ರೀತಿಯಿಂದಾಗಿ ಸುಂದರವಾದ ಜೀವನವು ಏನೆಂಬುದು ತಿಳಿದಿದೆ. ಸುಂದರವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಆ ಮೂಲಕ ನಮ್ಮಿಬ್ಬರ ಬಗ್ಗೆ ಗೌರವ, ಪ್ರೀತಿ ಹೆಚ್ಚುತ್ತದೆ' ಎಂದಿದ್ದಾರೆ ರವೀಂದರ್. ನಾವು ಪ್ರೀತಿಸುವ ಜನರಿಗಿಂತ ನಾವು ಪ್ರೀತಿಸುವ ಜನರು ನಮ್ಮನ್ನು ಹೆಚ್ಚು ಪ್ರೀತಿಸುವುದು ಜೀವನ. ಆ ಜೀವ ನನ್ನ ಹೆಂಡತಿ. Happy valentine's day dear mahalakshmi ಎಂದಿದ್ದಾರೆ ರವೀಂದರ್.
No Kiss Please: ಕಿಸ್ ಕೊಡಿ ಅಂದ್ರೂ ಕೊಡಲ್ಲ ಈ ಬಾಲಿವುಡ್ ನಟ-ನಟಿಯರು!
ನೋಡಲು ಸುಂದರವಾಗಿರಬೇಕು ಎಂದುಕೊಂಡು ಸುಂದರನನ್ನೋ, ಸುಂದರಿಯನ್ನೋ ಮದುವೆಯಾಗಿ ಪಡಬಾರದ ಕಷ್ಟಪಟ್ಟು ಆತ್ಮಹತ್ಯೆ (suicide) ಮಾಡಿಕೊಳ್ಳುವುದು ಹೆಚ್ಚುತ್ತಿರುವ ಈ ದಿನಗಳಲ್ಲಿ ಕೇವಲ ಸೌಂದರ್ಯವನ್ನೇ ಆಧಾರವಾಗಿಟ್ಟುಕೊಂಡು ರವೀಂದರ್, ಮಹಾಲಕ್ಷ್ಮಿ ಜೋಡಿಯನ್ನು ಟೀಕಿಸಿರುವವರಿಗೆ ಈ ಪ್ರೇಮಿಗಳ ದಿನವಾದರೂ ಇವರ ಪ್ರೀತಿ ನೋಡಿ ಬುದ್ಧಿ ಬರಲಿ ಎಂದು ಕೆಲ ಈ ಜೋಡಿಯ ಅಭಿಮಾನಿಗಳು ಹಾರೈಸುತ್ತಿದ್ದಾರೆ.